ಸಿದ್ದರಾಮಯ್ಯ ಈಗ ಕಾಂಗ್ರೆಸ್ ಸಿಎಂ. ಹಿಂದುಳಿದ ವರ್ಗಕ್ಕೆ ಸೇರುವ ಗೌಡಕುರುಬ ಜನಾಂಗದಿಂದ ಉದಯಿಸಿದ ನಾಯಕ. ಜನತಾ ಪರಿವಾರ ಇವರ ರಾಜಕೀಯ ತಾಯಿ ಬೇರು. 1983ರಿಂದ 2006ರವರೆಗೆ 23 ವರ್ಷಗಳ ಕಾಲ ಪ್ರಭಲ ಕಾಂಗ್ರೆಸ್ ವಿರೋಧಿ ನೆಲೆಯಿಂದಲೇ ರಾಜಕೀಯದ ಕೆರಿಯರ್ ರೂಪಿಸಿಕೊಂಡು ಬಂದವರು. ಪಕ್ಷದ ಉನ್ನತ ಪದಾಧಿಕಾರಿಯಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ (ಎರಡು ಬಾರಿ) ಅಧಿಕಾರದ ಎಲ್ಲ ಮೇಲ್ ಸ್ತರಗಳನ್ನು ಏರಿದ್ದು ಜನತಾ ಪರಿವಾರದಲ್ಲಿದ್ದಾಗಲೇ. ಆಗ ಬಾಕಿ ಉಳಿದದ್ದು ಮುಖ್ಯಮಂತ್ರಿ ಪಟ್ಟ. ಅದನ್ನು ಕಾಂಗ್ರೆಸ್ ನಲ್ಲಿದ್ದುಕೊಂಡು ಸಾಧ್ಯವಾಗಿಸಿಕೊಂಡಿದ್ದಾರೆ. ಸತ್ಯದ ಹೆಸರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ. ಸತ್ಯವೆಂದರೆ ಮುಖ್ಯಮಂತ್ರಿ ಆಗುವ ಒಂದಂಶದ ಕಾರ್ಯಕ್ರಮ ಇಟ್ಟುಕೊಂಡೇ ಅವರು ಕಾಂಗ್ರೆಸ್ ಸೇರಿದ್ದು. ಅಲ್ಪ ಅವಧಿಯಲ್ಲೇ (7ವರ್ಷ) ಅದು ಸಾಕಾರಗೊಂಡಿದ್ದು ಗಮನಾರ್ಹ ಅಂಶ. ಇದನ್ನು ರಾಜಕೀಯ ಚತುರತೆ ಅನ್ನಬೇಕೋ, ಅದೃಷ್ಟ ಅನ್ನಬೇಕೋ, ಪಟ್ಟದ ಹೋರಾಟಗಾರನೊಬ್ಬನಿಗೆ (ಮುಖ್ಯಮಂತ್ರಿ ಪಟ್ಟಕ್ಕೆ) ಸಂದ ಜಯ ಅನ್ನಬೇಕೋ?... ಏನೇ ಭಾವಿಸಿಕೊಂಡರೂ ಸಿದ್ದರಾಮಯ್ಯ ದಕ್ಷ ಆಡಳಿತಗಾರ, ಮುಖ್ಯಮಂತ್ರಿ ಪಟ್ಟಕ್ಕೆ ಈ ಸಂದರ್ಭದ ಸೂಕ್ತ ಅಭ್ಯರ್ಥಿ ಎನ್ನುವುದು ಸತ್ಯ. ಸಿದ್ದರಾಮಯ್ಯ 2006ರಿಂದ ಈಚೆಗಷ್ಟೇ ಪಕ್ಷ ಸೇರಿಕೊಂಡು, ಅತ್ಯಂತ ಕಡಿಮೆ ಅವಧಿಯಲ್ಲಿ ಕಾಂಗ್ರೆಸ್ ನಿಂದ ಸಿಎಂ ಪಟ್ಟ ಏರಿದ...