ವಿಷಯಕ್ಕೆ ಹೋಗಿ

ಹೀಗೊಂದು ಸೌಹಾರ್ದತೆ!

ಅಡಿಗಡಿಗೆ ಭಾಷೆ-ಗಡಿ ಸಮಸ್ಯೆ ಭುಗಿಲೇಳಲೇಬೇಕು! ಮಹಾರಾಷ್ಟ್ರ ಗಡಿ ಸಮಸ್ಯೆಗಂತೂ ಚಾಲನೆ ದಕ್ಕುತ್ತಲೇ ಇರುತ್ತದೆ. ರಾಜಕೀಯದ ಜತೆ ಸಾಹಿತ್ಯಿಕ-ಸಾಂಸ್ಕೃತಿಕ ಲಾಭಕ್ಕೂ! ವಿಪರ್ಯಾಸವಲ್ಲವೇ?


ಮತ್ತು ಸೌಹಾರ್ದತೆಯ ಘೋಷವೂ ಮೊಳಗಬೇಕಲ್ಲ! ರಾಜಧಾನಿಯಲ್ಲಿಂದು ಭಾಷಾ ಸೌಹಾರ್ದತಾ ಸಮಾವೇಶ ನಡೆಯಿತು. ಅದಕ್ಕೆಂದು ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೇಶದ ವಿವಿಧ ಭಾಷೆಯ ಹಾಗೂ ವಿಶೇಷವಾಗಿ ರಾಜ್ಯದ ಬಹುತೇಕ ಜಿಲ್ಲೆ ಮತ್ತು ಗಡಿ ಸಾಹಿತಿಮಣಿಗಳನ್ನು ರಾಜಧಾನಿಗೆ ಆಹ್ವಾನಿಸಿತ್ತು. ಆಹ್ವಾನಕ್ಕೆ ಓಗೊಟ್ಟು, ಸಾಹಿತಿಗಳು ತಮ್ಮ ಎಲ್ಲಾ ಬದುಕಿನ ಬಹುಮುಖ್ಯ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು "ದೇಶ-ಭಾಷೆ-ನಾಡ ರಕ್ಷಣೆ" ಮತ್ತು "ಗಡಿ- ಸೌಹಾರ್ದತೆ" ಬಗ್ಗೆ ಒಟ್ಟೊಟ್ಟಿಗೆ ಕಾಳಜಿ ವ್ಯಕ್ತಪಡಿಸಲು, ಸಲಹೆಯನ್ನಿತ್ತಲು ರಾಜಧಾನಿಗೆ ಧಾವಿಸಿದ್ದರು. 

 ಹಾಗೆ ಸಮಾರಂಭ/ಸೌಹಾರ್ದತೆ ಸಮಾವೇಶಕ್ಕೆಂದೇ ಬಂದ ಗಡಿ ಭಾಗದ ಸಾಹಿತಿ ಮಿತ್ರರೊಬ್ಬರನ್ನು ನಾನು ಬೆಳ್ಳಂ ಬೆಳಿಗ್ಗೆ ಕಾಣಬೇಕಾಗಿ ಬಂದಿತ್ತು. ಇಳಿದುಕೊಳ್ಳಲು ಅವರಿಗೆಂದೇ ಗೊತ್ತು ಮಾಡಿದ್ದ ಲಾಡ್ಜ್ ನ ಒಂದು ರೂಮಿಗೆ ನಾವು ಒಟ್ಟಿಗೇ ಕಾಲಿಟ್ಟೆವು. ಅಲ್ಲಿ  ಅದೇ ಭಾಗದ ಮತ್ತೋರ್ವ ಸಾಹಿತಿ ಆಗಲೇ ವಿರಾಜಮಾನರಾಗಿದ್ದರು. ಥೇಟು 'ಶಿವಾಜಿ ಮಹಾರಾಜ'ರ ಹಾಗೆ! (ಇಬ್ಬರೂ ಮರಾಠಿಯಿಂದ ಕನ್ನಡಕ್ಕೆ ಸಾಕಷ್ಟು ಸಾಹಿತ್ಯ ಕೊಟ್ಟವರು)
ಅವರೊಂದು ಪ್ರಸಂಗ ಹೇಳಿದರು. ಬೆಳಿಗ್ಗೆ ಅವರು ಲಾಡ್ಜ್ ಬಂದಾಗ ತಮಗೆ ಗೊತ್ತು ಮಾಡಿದ ಕೋಣೆಗೆ ತೆರಳಿದರಂತೆ. ಅಲ್ಲಿ ಮರಾಠಿ ಸಾಹಿತಿ ಆಗಲೇ ವಿರಾಜಮಾನರಾಗಿದ್ದರಂತೆ. ಜತೆಗುಳಿಯಲು ಅವಕಾಶ ನೀಡಲಿಲ್ಲವಂತೆ. ಹೀಗಾಗಿ ಈ ರೂಮಿಗೆ ಬಂದೆ ಎಂದರು.

ಆ ಪ್ರಸಂಗ ಅವರೇ ಹೇಳಿದ್ದು ಹೀಗಿತ್ತು..
( ಸಂಭಾಷಣೆ ಹೀಗೆ ನಡೆಯಿತಂತೆ)

ಮಸಾ (ಮರಾಠಿ ಸಾಹಿತಿ) : ಬನ್ನಿ ಬನ್ನಿ... ನನ್ನ ಭೇಟಿ ಮಾಡಲೆಂದು ಬಂದಿರಾ?
ಗಭಾಸಾ (ಗಡಿ ಭಾಗದ ಸಾಹಿತಿ) : ಹಾ ಹಾ.. ನಿಮ್ಮ ಜತೆ ನನಗೂ ಇಲ್ಲೇ ಇಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.
ಮಸಾ: ನೋ ನೋ
ಗಭಾಸಾ: ಅರೇ, ಯಾಕೆ?
ಮಸಾ: ಇಲ್ಲ ಹಾಗಾಗಲ್ಲ. ನಾನಾಗಲೇ ರಿಸೆಪ್ಷನ್ ಕೌಂಟರಿಗೆ ಹೇಳಿದ್ದೇನೆ. ನಾನ್ಯಾರ ಜತೆಗೂ ರೂಂ ಶೇರ್ ಮಾಡಲ್ಲ ಅಂತ.
ಗಭಾಸಾ: ಮತ್ತೆ ನಾನೆಲ್ಲಿ ಹೋಗೋದು?
ಮಸಾ:  ನೀವು ಬೇರೇನಾದರೂ ವ್ಯವಸ್ಥೆ ಮಾಡಿಕೊಳ್ಳಿ.
ಗಭಾಸಾ: ಅರೇ, ಸಂಜೆಯವರೆಗೆ ಅಷ್ಟೇ ತಾನೆ ನಾವಿಲ್ಲಿರೋದು?
ಮಸಾ: ನೋ ನೋ ಏನೇ ಆಗಲಿ ಸಾಧ್ಯವಿಲ್ಲ.
.... ಗಭಾಸಾ  ಎಷ್ಟೇ ಹೇಳಿದರೂ ಮಸಾ  ಒಪ್ಪಲೇ ಇಲ್ಲವಂತೆ.

ಭಾಷಾ ಸೌಹಾರ್ದತೆಗೆಂದು ಬಂದವರೇ ಒಂದು ಸಂಜೆಯವರೆಗೆ ಒಟ್ಟಾಗಿ ಇರೋಕಾಗಲ್ಲ. ಇನ್ನು  ಸಾಮಾನ್ಯ ಜನತೆ........ ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...