ವಿಷಯಕ್ಕೆ ಹೋಗಿ

'ನಾರ್ವೆ ರಾಜಕುಮಾರ' ಬೆಂಗಳೂರಿಗೆ ಬಂದ ಹೊತ್ತು!


ಹೊಕ್ಕಳುಹುರಿ ಕತ್ತರಿಸ ಹೊರಟ ಡಾಕ್ಟರ್ ಕತ್ತರಿಯನ್ನೇ ಗಟ್ಟಿಯಾಗಿ ಹಿಡಿದುಕೊಂಡ ಕೈಗಳಿವು! ಈ ಪೋರ ಜಗತ್ತಿಗೆ ಕಣ್ಬಿಟ್ಟು ಮೂರೇ ಮೂರು ತಾಸಾಗಿತ್ತು. ಆಗಲೇ ಇವನ ದರ್ಶನ ಮಾಡಿದ್ದೆ. ಇದೇ ಕೈಗಳನ್ನು ಅಭಿಮಾನದಿಂದ ಹಿಡಿದಿದ್ದೆ. ಇವು ಅಂತಿಂಥ ಕೈಗಳಲ್ಲ. ಹೊಕ್ಕಳುಹುರಿ ಕತ್ತರಿಸ ಹೊರಟಿದ್ದ ವೈದ್ಯರ ಕತ್ತರಿಯನ್ನೇ ಬಿಗಿಯಾಗಿ ಹಿಡಿದು ತನ್ನ ತಾಯ ಒಡಲಿನ ಪ್ರೀತಿ, ಬೆಚ್ಚಗಿನ ಭಾವಕ್ಕೆ ತನ್ನ ಜೀವನಿಷ್ಠೆಯನ್ನು ಸಾರಿ ಕಣ್ತೆರೆದ ಭೂಪನ ಕೈಗಳಿವು. 

 ಬೆಂಗಳೂರು ಇಂಟರನ್ಯಾಷನ್ ಏರಪೋರ್ಟಿನಲ್ಲಿ ಮೊನ್ನೆ ಬಂದಿಳಿದ ಈ ನಾರ್ವೆ ರಾಜಕುಮಾರ ನನ್ನ ಕುತೂಹಲದಿಂದ ದುರುಗುಟ್ಟುತ್ತಲೇ ಇದ್ದ. ಯಾಕೋ, ಅದೇನು ಹಂಗೆ ನೋಡ್ತಿಯಾ ಅಂದೆ. ನೀನೇ ಅಲ್ವಾ ನನ್ನ ಅಮ್ಮನ ಮಡಿಲಿಂದ ಹೊರಬಂದ ದಿನ ನೋಡಿ ಕೈ ಹಿಡಿದು ಅಮ್ಮನಿಗೊಂದು ಸೆಲ್ಯುಟ್ ಹೊಡಿಯೊ ನನ್ನ ಪರವಾಗಿ ಅಂದಿದ್ದು... ಎನ್ನುವಂತೆ ದುರುಗುಟ್ಟಿ ಹಂಗೇ ತುಟಿಯರಳಿಸಿದ. ಏರ್ ಪೋರ್ಟಿನಲ್ಲಿ  ಮೊನ್ನೆ ಇವನ ರಿಸೀವ್ ಮಾಡಲು ಅದೆಷ್ಟು ತಾಸಿನಿಂದ ಕಾದಿದ್ದೆವು.  ನಮ್ಮೆಲ್ಲರನ್ನು ನೋಡಿ ಒಮ್ಮೆ ನಕ್ಕ. ನನ್ನ ನೋಡಿದವನೇ ದುರುಗುಟ್ಟುತ್ತಲೇ ಇದ್ದ. ಒಂದಷ್ಟು ನಗು, ಅಳು...



 ನಾರ್ವೆಯಿಂದ ನಾನು ಮರಳಿ ಬರುವ ದಿನವೇ ಇವನ ಜನನವಾಗಿತ್ತು. ಆಸ್ಪತ್ರೆಯಲ್ಲಿ ಕಾದು ಇವನ ದರ್ಶನ ಮಾಡಿಕೊಂಡು ಬಂದಿದ್ದೆ. ಇವನ ತಾಯಿ ಅಂದರೆ ನನ್ನ ತಂಗಿಯನ್ನು ಭೇಟಿ ಮಾಡಿ ಶುಭಾಶಯ ಹೇಳುವುದಕ್ಕೆ ಅವತ್ತು ಅವಕಾಶವಿರಲಿಲ್ಲ. ರಾತ್ರಿಯಾಗಿತ್ತು. ಬೆಳಿಗಿನ ಜಾವ ನನ್ನ ರಿಟರ್ನ್ ಫ್ಲೈಟ್ ಇತ್ತು. ಅವಳನ್ನು ಭೇಟಿ ಮಾಡದೇ ಹೊರಡುವ ಒಂಚೂರೂ ಇರಾದೆ ನನಗಿರಲಿಲ್ಲ. ಟಿಕೆಟ್ ಕ್ಯಾನ್ಸಲ್ ಮಾಡಿ ಮುಂದಿನ ದಿನಾಂಕಕ್ಕೆ ನಿಗದಿ ಮಾಡಲೆತ್ನಿಸಿದ್ದೆ. ಕೊನೆಯ ಕ್ಷಣದವರೆಗೂ ಟ್ರೈ ಮಾಡಿದ್ದೆ, ಆಗಿರಲಿಲ್ಲ. ಅಲ್ಲಿಯತನಕ ಬಂದು ಒಂದೂವರೆ ತಿಂಗಳು ಜತೆಯಲ್ಲಿದ್ದು ಅವಳು ತಾಯಿಯಾಗುವ ಸಂಭ್ರಮದ ಕ್ಷಣವನ್ನು ಕಣ್ಣಾರೆ ನೋಡಿ ಆನಂದಿಸುವ ಅವಕಾಶವೊಂದು ತಪ್ಪಿದ್ದಕ್ಕೆ ಅದೆಷ್ಟು ಬೇಸರಪಟ್ಟುಕೊಂಡಿದ್ದೆ. ಆದರೆ ಈ ಪೋರನ ಮುಖ ನೋಡಿದ ಮೇಲೆ ನನಗೊಂದು ಸಮಾಧಾನವಾಗಿತ್ತು. ಆಕೆ ಅದೆಷ್ಟು ಸಂಭ್ರಮಪಟ್ಟಿರಬಹುದೆನ್ನುವುದಕ್ಕೆ ಇವನ ಮುಖಕಾಂತಿಯಲ್ಲಿ ಅದೆಷ್ಟು ಸಾಕ್ಷಿಗಳಿದ್ದವು...

 ಸಿಜೇರಿಯನ್ ಆದ ಮೇಲೆ ಅವಳಿಗೆ ಪ್ರಜ್ಞೆ ಬರುವಷ್ಟೊತ್ತಿಗೆ ಮಗುವನ್ನು ಇತರ ವೈದ್ಯಕೀಯ ಪರೀಕ್ಷೆಗಳಿಗೆಂದು ನರ್ಸ್ ತಮ್ಮ ತಹಬಂದಿಗೆ ತೆಗೆದುಕೊಂಡುಬಿಟ್ಟಿದ್ದರು. ಹೀಗಾಗಿ ಅವಳು ಇವನನ್ನ ಇನ್ನೂ ನೋಡಿರಲೇ ಇಲ್ಲ. ಅವಳಿಗೂ ಮುನ್ನ ಇವನ ತಂದೆಯೇ ಮೊದಲು ನೋಡಿದ್ದು. ಆನಂತರ ನೋಡಿದ್ದೇ ನಾನು... ನನಗೋಸ್ಕರ ಇವನ ತಂದೆ ದರ್ಶನದ ಏರ್ಪಾಡು ಮಾಡಿದ್ದರು.

 

 ಹ್ಯಾಗೆ ದುರುಗುಟ್ಟುತ್ತಿದ್ದಾನೆ ನೋಡಿ!

 ಈ ರಾಜಕುಮಾರನ ಸ್ವಾಗತಕ್ಕೆ ಹೊಚ್ಚ ಹೊಸ ಕಾರು ಕಾದು ನಿಂತಿತ್ತು. ಹೊಸ ಕಾರು! ಹೀಗಾಗಿ ಇವರಪ್ಪನ ಅಪ್ಪ ಮತ್ತು ತಂಗಿಯ ಬಳಗ ಹೊಸ ಕಾರು ಸಮೇತ ಕಾದಿದ್ದರು. ನಾನು ಸದಾ ನನ್ನ ತಂಗಿ-ಭಾವನನ್ನು ರಿಸೀವ್ ಮಾಡಲು ಒಯ್ಯುತ್ತಿದ್ದ ಬಾಡಿಗೆ ಕಾರನ್ನೇಕೆ ಅವ ಹತ್ತಿಯಾನು? ಮಗ ಹುಟ್ಟಿದ ಸಂಭ್ರಮಕ್ಕೆ ಇವನಪ್ಪ ಅಲ್ಲಿಂದಲೇ ಹೊಸ ಕಾರೊಂದನ್ನು ಬುಕ್ ಮಾಡಿಸಿಟ್ಟಿದ್ದರು. ಇಂಡಿಯಾಗೆ ಕಾಲಿಡುವಷ್ಟೊತ್ತಿಗೆ ಅದು ಬಾಗಿಲು ತೆರೆದುಕೊಂಡು ಮುಂದೆ ನಳನಳಿಸುತ್ತಿರಬೇಕು ಎಂದುಕೊಂಡಿದ್ದರು. ಅಂದುಕೊಂಡಂತೆ ಆಯ್ತು ಅನ್ನಿ. ಬೆಳಗಿನ ಜಾವದ ತುಸು ಚಳಿಯ ಹೊತ್ತಲ್ಲಿ ಚಳಿಯನ್ನೇ ಹೊತ್ತು ಬಂದವನಂತಿದ್ದ ಈ ಪೋರ ಮೊದಲ ಪಾದವನ್ನಿಟ್ಟಿದ್ದು ಹೊಸ ಕಾರಿನಲ್ಲೇ. ನೆಲಕ್ಕೆ ಕಾಲಿಟ್ಟಿದ್ದು ಮನೆ ಸೇರಿದಾಗಲೇ. ಅಲ್ಲೂ ಟೈಲ್ಸ್! ದಾದನಟ್ಟಿ ಎನ್ನುವ ಕುಗ್ರಾಮದ ಮಣ್ಣ ಮೇಲೆ ಕಾಲಿಟ್ಟನೆಂದು ಕೇಳಿದೆ...
 ಹೊಸ ತಲೆಮಾರಿಗೊಂದು ಹೊಸ ಬದುಕಿನ ಮಾರ್ಗವೇ ತೆರಕೊಂಡಂತಿದೆ. ನಾವೆಲ್ಲ ಚಿಕ್ಕವರಿದ್ದಾಗ ನಮ್ಮ ಪಾದ ನೆಲದ ಮೇಲೇ ಇಡಬೇಕಾಗಿತ್ತಲ್ಲವೇ? ಅಮ್ಮನ ತೋಳಿನಲ್ಲಿ ಬದುಕಿನ ಮೊದಲ ಜೋಕಾಲಿ ಆಡಬೇಕಿತ್ತಲ್ಲವೇ? ಅವಳ ಬೆನ್ನು ನಮಗದೇ ಬೈಕು, ಅವಳ ಜಡೆ ಹಿಡಿದು ಕುಳಿತರೆ ಅದೇ ಕಾರು... ದೊಡ್ಡವರಾಗುವುದು ಎಂದರೆ ಕತ್ತೆಗಳಾಗುವುದೆಂದೇ ಅರ್ಥವೇನೋ? ನಾವೀಗ ಕತ್ತೆಗಳು... ಹಾಗೆ ನೋಡಿದರೆ ಈಗ ನಮಗವರೇ ಮಕ್ಕಳಾಗಬೇಕಾದ್ದು. ಆದರೆ ತಾಯಿಯಾಗುವ ಅರ್ಹತೆ ನಾವು ಪಡಕೊಳ್ಳಬೇಕಷ್ಟೇ. ಏಯ್ ಪೋರ, ನಾಳೆ ನೀನು ಕತ್ತೆಯಾಗುತ್ತಿಯಲ್ಲಾ! ಎಂದರೆ ಇವ ಮುಖ ದುರುಗುಟ್ಟಿ ನೋಡಿ ಸ್ಮೈಲ್ ಕೊಟ್ಟ. ನಿನಗಿಂತ ಚೆನ್ನಾಗಿ ನಾನು ನನ್ನಮ್ಮನ ನೋಡ್ಕೋತೀನೋ ಎನ್ನುವ ಹಾಗೆ ಪಾ ಪಾ ಮಾ ಮಾ... ಎಂದು ಉಲಿದಾಡುತ್ತಲೇ ಇದ್ದ. ಇವನಮ್ಮ ಮುಂಚೆ ನಮ್ಮನ್ನೆಲ್ಲ ನೋಡಿದರೆ ಮಕ್ಕಳನ್ನು ನೋಡಿ ಖುಷಿಪಡುವ ಅವ್ವನಂತಾಗುತ್ತಿದ್ದ ಜೀವ. ಇನ್ನವಳ ಮಡಿಲು ತುಂಬ ಇವನದೇ ಕಿಲ ಕಿಲ... ಅವಳ ದುನಿಯಾ ತುಂಬ ಈಗ ಇವನದೇ ಜಗತ್ತು.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ