ವಿಷಯಕ್ಕೆ ಹೋಗಿ

ಡ್ರಾಮಾಕ್ರಸಿ-1

 (ಮೊದಲನೇ ಅಂಕ- ರಸ್ತಾ ಸೀನ್)

ಗಿಡ್ಡ: ಪರ್ ಪರ್...
ಎಡ್ಡ: ಏನಲೇ ಅದ ಮುಂಜ ಮುಂಜಾಲೆ ಹೊರಕಾಡಿಗರೇ ಹೋಗಿದ್ಯೋ ಇಲ್ಲೋ.
ಗಿಡ್ಡ: ಪರ್ ಪರ್...
ಎಡ್ಡ: ಥೂ ಇವನೌನ್, ಹೊಲಸ ವಾಸನಿ ಬರತೈತಲೇ. ಹೊಂಡ ಲಗೂನ.. ಹ್ಞೂಂ ಹೊಂಡ ಇನ್ನ.
ಗಿಡ್ಡ: ಅದನ್ನರೀ ನಾ ಹೇಳಾಕ ಹೊಂಟಿದ್ದು. ಸಾಹೇಬ್ರ ಮನ್ಯಾಗ ಟಿವಿ ಹಾಕಿದ್ರ ಸಾಕ್ ಪರ್ ಪರ್.
ಎಡ್ಡ: ಗಿಡ್ಡಾ ಏನರೇ ಹೇಳಬೇಕಂತೀ, ಟಿವಿ ಅಂತೀ. ಪರ್ ಪರ್ ಅಂತೀ... ಒಂದೂ ತಿಳಿವಲ್ದು. ಸರಿ ಬೊಗಳ.
ಗಿಡ್ಡ: ಸಾಹೇಬ್ರ ನಮ್ಮ ಉತ್ತರ ಕರ್ನಾಟಕದಾಗ ಅದರಾಗೂ ಲಿಂಗಾತರೊಳಗ ಇದೇನು ಹೊಸಾದೇನ್ರಿ? ನಾವು ದಿನಾ ಮುಂಜಾಲೆ ಎದ್ದು ನಮ್ಮ ನಮ್ಮ ಮನೀ ಮುಂದಿನ ಅಂಗಳ ಪರಾ ಪರಾಂತ ಗುಡಸಂಗಿಲೇನ್ರಿ.
ಎಡ್ಡ: ಗುಡುಸೂದು ಅಷ್ಟ ಅಲ್ಲ, ಬಕೀಟ್ ನೀರಾ ಒಂದು ಚಂಬೂ.... ಚಂಬೂ ನೀರಾಗ ಎದ್ದೋದು ಫಸಲ್ ಫಸಲ್ ಅಂತ ದೂರ ದೂರಕ್ಕ ನೀರ ಹೊಡಿಯೋದು. ಮುಂಜೇಲೊಮ್ಮೆ ಸಂಜೀಕೊಮ್ಮೆ ಇದನ್ನ ಮಾಡಿಕೋತ ಬಂದೀವು.
ಗಿಡ್ಡ: ಅದನ್ನರೀ ನಾನು ಹೇಳೋದು.
ಎಡ್ಡ: ಅದ್ಸರಿ ಕಸ ಗುಡಸೂದು, ನೀರ ಚುಮುಕಿಸೋದು, ಪರ್ ಪರ್... ಏನೇನೋ ಮಾತಾಡಾಕಹತ್ತಿ. ನಿಮ್ಮನ್ನ ನಂಬಕೊಂಡ ನಾಂವ ಉದ್ಧಾರ ಆಗಿಲ್ಲ. ಇನ್ನ ದೇಶಾ ಏನ್ ಉದ್ಧಾರ ಆದೀತು? ಲೇ ಗಿಡ್ಡಾ, ಮೋದಿ ಕಸಾ ಗುಡಸೋದು ನೋಡಾಕ ಆಗಲ್ದಕ್ಕ ಸುತ್ತೂ ಬಳಸಿ ಹಿಂಗ್ ಮಾತಾಡಕ್ಹತ್ತಿ ಹೌಂದಿಲ್ಲೋ.
ಗಿಡ್ಡ:  ಅಲ್ರೀ ನಾನೂ ಅದನ್ನ ಹೇಳಾಕತ್ತೀನಿ. ಕಸಾ ಗುಡಸೂದೇನ್ ದೊಡ್ಡ ಸಾಧನಾ ಅಂತ ಹೇಳತೀರಿ. ಕಸ ಗುಡಸೋದು ನಮ್ಮ ಹಳ್ಳಿಯೊಳಗ ಮೊದಲಿಂದ ಬಂದ ಪದ್ಧತೀನ ಐತಿ. ಮನೀ ಅಂಗಳ ಗುಡಸಲ್ದ, ಹೊರಸಲಿಗೆ ನೀರ ಹಾಕ್ದ ನಮ್ಮ ಮನಿಗೋಳಾಗ ಹನಿ ನೀರ್ ಸಹಿತ ಕುಡಿಯಾಂಗಿಲ್ಲ. ಇದೇನ್ ಹೊಸಾದು ಅಂತ ಹೇಳತಾರರೀ ಇವ್ರು?
ಎಡ್ಡ: ಕಸಾ ಗುಡುಸೂದು ದೊಡ್ಡ ಮಾತಲ್ಲ, ಹೊಸಾದೂ ಅಲ್ಲ. ಗುಡಿಸಿದ ಕಸಾ ಒಗ್ಯಾವ್ರೆಲ್ಲಿ? ಕೂಡಿಸಿದ ಕಸಾ ಮಾಡಾವ್ರೇನ್ ನೀವು? ಅದನ್ನ ಯೋಚನಾ ಮಾಡಬೇಕಲಾ...
ಗಿಡ್ಡ: ಅಲ್ರೀ ನಾವು ಅಜ್ಜ ಮುತ್ತಜ್ಜರ ಕಾಲದಿಂದ ಕಸಾ, ಮುಸರಿ ತಗೊಂಡ್ಹೋಗಿ ತಿಪ್ಪಿ ಮತ್ ಕೆರಿಯೊಳಗ ಚೆಲಕೋತ ಬಂದೀವು.
ಎಡ್ಡ: ಭಲೇ ಲೌಡಿ ಮಗಾ ನೋಡಲೇ ನೀ. ಅಲ್ಲಲೇ ಕಸಾ, ಮುಸರಿ ಕೆರಿ ನೀರಾಗ ಹಾಕಿದ್ರ ನೀರು ಹೊಲಸಾಕ್ಕೈತಿ, ಗಲೀಜಾಕ್ಕೈತಿ, ಗಬ್ಬ ನಾರತೈತಿ, ಕೆಸರ ತುಂಬತೈತಿ ಅನ್ನೂ ಪರಿಜ್ಞಾನ ಬ್ಯಾಡೇನ್ಲೇ.
ಗಿಡ್ಡ: ಕೆಸರಾಗ ಅಲ್ಲೇನ್ರಿ ಕಮಲ ಅರಳೋದು...
ಎಡ್ಡ: ಅದಕ್ಕ ಮಗನಾ ಹಳ್ಳಿ ಹಳ್ಳಿಯೊಳಗ ಕಮಲ ಅರಳಿದ್ವು. ದೇಶಕ್ಕ ದೇಶಾನ ಕಮಲಾ ಕಮಲಾ...
ಗಿಡ್ಡ: ಈಗ ಎಲ್ಲಾರೂ ಅಕಿನ್ನ ಹಿಂಬಾಲೇ ಬಿದ್ದಾರ ನೋಡ್ರಿ.
ಎಡ್ಡ: ದೇಶ ಒಂದ ಮನೀ ಅಂತ ತಿಳದ್ರ ಮನೀಗ ಒಬ್ಬಾಕಿ ಕೆಲಸದಾಕಿ ಬೇಕಾಕ್ಕೈತಿ. ನಮ್ಮ ಮನ್ಯಾಗ ಅದಾಳಲಾ ಕಮಲಾಬಾಯಿ. ಅಕೀಗ ಕೆಲಸಾ ಅಂದ್ರ ಗುಡಸೂದು ಮತ್ ಒರಸೂದು...
ಗಿಡ್ಡ: ಅದನ್ನರೀ ನಾ ಹೇಳೂದು. ದೇಶಕ್ಕೊಬ್ಬ ಸರದಾರ ಇರಲಿ ಅಂತ ನಾವು ಅನಕೊಂಡ್ವಿ. ಇದ ನೋಡ್ರಿ ಕಥೀ ಕಮಲಾಬಾಯಿ.
ಎಡ್ಡ: ಇದ್ರಲ್ಲೋ ಸರ್ದಾರ್‌ಜೀ. ಅಂವಾ ಫುಡ್ ಸೆಕ್ಯುರಿಟಿ, ರೈಟ್ ಟು ಇನಫರ್ಮೇಷನ್ ಆ್ಯಕ್ಟ್, ಶೆಲ್ಟರ್ ಟು ಆಲ್ ಅಂದ. ಲಿಬರಲ್, ಸೆಕ್ಯುಲರ್ ಸ್ಟೇಟ್ ಅಂದ. ಬ್ಯಾಡಾ ಅಂದಬಿಟ್ರಿ. ಎಲ್ರ ಜತೆ ನಡೆಯೋಣ ಅಂದ ಯುವರಾಜನೂ ಬ್ಯಾಡಾ ಅಂದ್ರಿ. ಅವರವ್ವನೂ ಬ್ಯಾಡಾ ಅಂದ್ರಿ. ಅಂವಾ ಒಬ್ಬ ಮುದುಕಾ ಗಾಂಧಿಗಿರಿ ಅಂತ ಉಪವಾಸ ಕುಂತಾ, ಬ್ಲ್ಯಾಕ್‌ಮನಿ ಅಂತ ಆ ಲಗಾಟೀ ಸ್ವಾಮಿ ಟಿವಿಯೊಳಗ ಕೂಗ್ಯಾಡಿದಾ. ಮುಗೀತ. ಮುಗಿಬಿದ್ರಿ. ಇವರಿಬ್ಬರ ನಡೂ ಪೇಪರ್, ಡಾಕ್ಯುಮೆಂಟ್ ಹಿಡಕೊಂಡು ಟುಜಿ, ಥ್ರೀಜಿ... ಭ್ರಷ್ಟಾಚಾರ ಭ್ರಷ್ಟಾಚಾರ ಅಂತ ಬೊಂಬಡಾ ಬಜಾಯಿಸ್ಕೋತ ಒಬ್ಬ ಬಂದ, ಟಿವಿ ತುಂಬ ತುಂಬಕೊಂಡಾ. ಪುಡಿ ಐಟಿ ಪುಢಾರಿಗಳು ಉಘೇ ಉಘೇ ಅಂದ್ರು. ಬೆಳಕ ಹರೀತ್ಲೆ ಪಾಪ್ಯುಲರ್ ಸ್ಟಾರ್ ಆದಾ. ಅಂವಾ ಕಸಬರಗಿ ಹಿಡಕೊಂಡ ಬಂದಾ. ನೀವು ಅವನ ಹಿಂದ ಹೊಂಟ್ರಿ. ಅಂವಾ ಗಾದಿ ಏರಿದಾ. ಕಸಬರಗಿ ಬಿಸಾಕಿ ಗಾಂಧಿ ಟೋಪಿ ನಮ್ಮ ತಲೆಗಿಟ್ಟ ಹ್ವಾದಾ ಹುಚಗೆಂಡಿಗತ್ಲೆ.
ಗಿಡ್ಡ: ಅಂವ ಬಿಟ್ಟ ಕಸಬರಗಿ ಇವ್ರ ಹಿಡಕೊಂಡ್ರು. ಏನ ಅಂದ್ರೂ ಪರ್‌ದಾನಿ ಕೈಯಾಗ ಕಸಬರಗಿ ಚಲೋ ಕಾಣ್ಸಂಗಿಲ್ಲ ಬಿಡ್ರಿ.
ಎಡ್ಡ: ಅಲ್ಲಲೇ ಗಿಡ್ಡಾ, ನಾ ಕಾಲೇಜಿನ್ಯಾಗ ಓದುವಾಗ ಎನ್‌ಎಸ್‌ಎಸ್‌ ಅಂತ ಒಂದಿತ್ತು.
ಗಿಡ್ಡ: ಗೊತ್ತಿಲ್ಲೇನ್ರಿ, ರಾಷ್ಟ್ರೀಯ ಸೇವಾ ಯೋಜನೆ. ಸಂಡೇಕ್ಕೊಮ್ಮೆ. ಊರು ಸ್ವಚ್ಛ ಮಾಡೋದು, ಕಸ ಕಡ್ಡಿ ತಗಿಯೋದು, ಸ್ವಚ್ಛತಾ ಬಗ್ಗೆ ಜಾಗೃತಿ ಮೂಡಿಸೋದು. ಆಮ್ಯಾಲೆ ಕ್ಯಾಂಟೀನ್ ಕೂಪನ್ ಕೊಡ್ತಿದ್ರು. ಮತ್ ವರ್ಷದಾಗೊಮ್ಮೆ ಒಂದು ತಿಂಗಳು ಸಮೀಪದ ಯಾವುದಾರೆ ಹಳ್ಳಿಗೆ ಕ್ಯಾಂಪ್ ಮಾಡ್ತಿದ್ವಿ. ಇಡೀ ಊರ ಸ್ವಚ್ಛ ಮಾಡಿ, ಸ್ವಚ್ಛತಾ ಬಗ್ಗೆ ಜನರೊಳಗ ಅರಿವು ಮೂಡಿಸತಿದ್ವಿ. ಶ್ರಮದಾನ ಅಂತ ಮಾಡತಿದ್ವಿ.
ಎಡ್ಡ: ಅದನ್ನ ಈ ಕಾರ್ಪೊರೇಟ್ ಲೌಡಿ ಮಕ್ಳು ಹೊಸಾದೇನೋ ಕಂಡ ಹಿಡದ್ಹಂಗ ಗಲ್ಲಿ ಗಲ್ಲಿಯೊಳಗ ಕಸಬರಗಿ ಹಿಡಕೊಂಡ ಸೋಗ ಹಾಕಾಕತ್ಯಾರು. ಕಾಪಿ ಕ್ಯಾಟ್ಸ್.
ಗಿಡ್ಡ: ಎಲ್ಲಾರೂ ಒಂದ ನಮೂನಿ ಟ್ರ್ಯಾಕ್ ಸೂಟ್, ಟೀ ಶರ್ಟ್, ಕ್ಯಾಪ್ ಮತ್ ಗ್ಲೌಸ್ ಹಾಕ್ಕೊಂಡು ಅಗದೀ ಪಥಸಂಚಲನದ ಗತ್ತು, ಶಿಸ್ತಿನೊಳಗ ಊರ ತುಂಬ ಕಸಬರಗಿ ಹಿಡಕೊಂಡ ನಿಲ್ತಾರು. ಹುಡುಗ್ಯಾರೂ ಇರ್ತಾರಿ. ಬಾಗಿ, ಬಳುಕಿ ಅಗದೀ ನಾಜೂಕಿಲೇ ಕಸಾ ಕಡ್ಡಿ ಮುಟ್ಟಿ, ತಟ್ಟಿ ನೋಡ್ತಾರ್ರಿ. ಇದನ್ನ ನೋಡಾಕ ಚಾನೆಲ್‌ನವರು, ಊರ್ ಮಂದಿ ಸೇರ್ತಾರೀ. ಮಂದಿ ಏನ್ ಸ್ವಚ್ಛತಾ ನೋಡ್ತಾರೊ, ಫಿಗರ್ ನೋಡಕೋತ ನಿಲ್ತಾರೊ... ಕನ್ಫ್ಯೂಷನ್.
ಎಡ್ಡ: ದೇಶಕ್ಕ ಇಂಥ ಶೋನ ಬೇಕಲೇ ಗಿಡ್ಡಾ. ನಿಜವಾದ ಶಿಸ್ತು, ಕಾಯಕಾ ಅಂದ್ರ ಏನು ಅಂತ ಗೊತ್ತೈತೇನ ಇವ್ರಿಗೆ. ಎಂಟನೂರು ವರ್ಷಗಳ ಹಿಂದ ಕೆಲ ಲೌಡೀ ಮಕ್ಳು ಸಮಾಜದೊಳಗ ಜಾತಿ ಅಂಬೋ ಕಸಾ ತುಂಬಿಸಿಟ್ಟಿದ್ರು. ಅದನ್ನ ಗುಡಸಾಕ ಬಸವಣ್ಣ ಅಂತ ಒಬ್ಬ ಬರಬೇಕಾತು.
ಗಿಡ್ಡ: ಹೌದಲ್ರೀ ನಮ್ಮೂರ ಕತ್ರ್ಯಾಗ ಬಸವಣ್ಣನ ಪ್ರತಿಮೆ ನಿಲಸ್ಯಾರಲ್ರೀ. ಅವರ ಬಗ್ಗೆ ಗೊತ್ರಿ.
ಎಡ್ಡ: ಏನ್ ಗೊತ್ತೋ ಮಗನಾ? ಅಂಥಾ ದೊಡ್ಡ ಮನಷ್ಯಾನ್ನ ತಗೊಂಡ್ಹೋಗಿ ಕುದುರಿ ಮ್ಯಾಲ ಕೂರಿಸಿ, ಕೈಯಾಗ ಕತ್ತಿ ಕೊಟ್ಟ ನಿಲಸಿದ್ರಿ. ಮುಂದ? ಅಂವ ಹೇಳಿದ್ದ ಕೇಳಿದ್ರೇನು? ಅಂವಾ ಏನ್ ಹೇಳಿದಾ ಅಂತಂದ್ರ, ಎಲ್ರೂ ಏನಾರೂ ಕಾಯಕದೊಳಗ ನಿರತರಾಗ್ರಿ. ಮಾಡೋ ಕಾಯಕ ನೀಯತ್ಲೆ ಮಾಡ್ರಿ ಅಷ್ಟ ಸಾಕು, ರಾಜ್ಯ ಕಲ್ಯಾಣರಾಜ್ಯ ಆಕ್ಕೈತಿ ಅಂದ. ವ್ಹೇರಿ ಸಿಂಪಲ್. ಚೀನಾದವರು ಅದನ್ನ ಮಾಡಿದ್ರು. ಮುಂದ ಬಂದ್ರು. ನಾವು? ಇದ್ದಲ್ಲೇ ಅದೀವು. ಬಸವಣ್ಣ ಹೇಳಿದ್ಹಂಗ ಕಾಯಕ ಇದ್ರ ಕೈಲಾಸಾನೂ ಸಿಗತೈತಿ. ಕಾಯಕ ಇಲ್ಲಾ ಅಂದ್ರ ‘ಕೈ‘ಲಾಸ್. ಅಷ್ಟ. ಕೆಲಸಾ ಮಾಡೀನೂ ‘ಕೈ’ಲಾಸ್ ಆಕ್ಕೈತಿ ಒಮ್ಮೊಮ್ಮೆ. ಇರ್ಲಿ. ನೋಡಲೇ ಗಿಡ್ಡಾ ದೇಶದ ತುಂಬ ಮತ್ ಮುಖ್ಯವಾಗಿ ‘ಪವಿತ್ರ’ ಗಂಗೆಯ ತುಂಬ ಗಬ್ಬ ವಾಸನಿ ಬರುವಷ್ಟ ಕಸಾ ತುಂಬೈತಿ. ಅದೂ ಇಂಥವ್ರದ. ಸಧ್ಯಕ್ಕ ದಾರ್ಪುರ ಕೇಂದ್ರ ಶಾಖೆಯವ್ರು ನೇಮಿಸಿದ ಕಮಲಾಬಾಯಿ ಕಸಾ ಗುಡಸ್ತಿರ್ಲಿ.
ಗಿಡ್ಡ: ಅಗದಿ ಬರೋಬ್ಬರಿ ಹೇಳಿದ್ರಿ.
ಎಡ್ಡ: ಪರ್ ಪರ್ ಅಂದ್ಯಲಾ ಇದನ್ನ ಏನ್ ಹೇಳಿದ್ದು?
ಗಿಡ್ಡ: ಹ ಹ .. ನೋ. ನೋಡ್ತಾ ಇರೀ ಅಲ್ಲಲ್ಲಾ ಕೇಳ್ತಾ ಇರೀ ನಾ ಇನ ಏನೇನ್ ಹೇಳ್ತನಿ.
__________________________________________
‍ನೆನಪಿರಲಿ: ಇಲ್ಲಿನ ಪಾತ್ರಗಳು ಕಾಲ್ಪನಿಕ. ಇತಿಹಾಸ, ಚರಿತ್ರೆ, ವರ್ತಮಾನ ಎಲ್ಲವೂ... ಒಂದು ವಿಡಂಬನೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ