ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಹೊರ ನೋಟಕ್ಕೆ ಕಾಣುವ ಬದಲಾವಣೆ ಒಳನೋಟದಲ್ಲೂ ಕಾಣುವುದು ಯಾವಾಗ?

"ನಮ್ಮ ಮೆಟ್ರೊ" ಜನ ಒಪ್ಪಿದರೋ ಬಿಟ್ಟರೋ ಅಂತೂ ಹೊಸದೊಂದು ಅತ್ಯಾಧುನಿಕ (ನಮ್ಮ ಮಟ್ಟಿಗೆ) ಸಂಚಾರ ವ್ಯವಸ್ಥೆಗೆ ಇದೇ ಹೆಸರು ಬಂದುಬಿಟ್ಟಿತು. ಇದಕ್ಕೆ ಮೊದಲ ದಿನವೇ ದಕ್ಕಿದ ಸ್ಪಂದನೆ ನೋಡಿದರೆ ಈ ಹೆಸರು ನಿಜವಾದ ಅರ್ಥದಲ್ಲಿ ಅತ್ಯಂತ ಸೂಕ್ತವೆನಿಸಿತು. ಯುರೋಪ್ ಮತ್ತಿತರ ಮುಂದುವರಿದ ದೇಶದ ಜನರ ಹಾಗೆ ನಾವಿದನ್ನು ಎಷ್ಟರಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ, ನಮ್ಮದಾಗಿಸಿಕೊಳ್ಳುತ್ತೇವೆ ಅನ್ನೋದು ನಮ್ಮ ಮುಂದಿರುವ ಪ್ರಶ್ನೆ. ಎಂಜಿ ರಸ್ತೆಯುದ್ದಕ್ಕೂ ಅವತ್ತು ಸೇರಿದ ಜನ ಅಬ್ಬಾ! ಟಿಕೆಟ್ ಗಾಗಿ ನಿಂತ ಕ್ಯೂ ಹನುಮಂತನ ಬಾಲದಂತೆ ಬೆಳೆದಿತ್ತು. ಅವತ್ತು ರಾಜಕೀಯ ಮೈಕ್ ಗಳ ಭರಾಟೆ, ಮಾರುಕಟ್ಟೆ ಶಕ್ತಿಗಳಿಗೆಲ್ಲ ಹಬ್ಬ! ಬಹುತೇಕ ಅಂಗಡಿಗಳು ತಮ್ಮನ್ನು ತಾವು ಸಿಂಗರಿಸಿಕೊಂಡು ಹರೆಯದ ಹುಡುಗಿ ಕಾಮದೇವನ ಕಾದುನಿಂತಂತೆ ಕಾಣಿಸುತ್ತಿದ್ದವು. ಅರ್ಧ ಕುಂಡೆ ಕಾಣಿಸುವಂತೆ ಜೀನ್ಸ್ ತೊಟ್ಟ ಲಟಪಟ ಸುತ್ತುತ್ತಿದ್ದ ಸುಂದರಿಯರಂತೆ ಕಾಣಿಸುವ ಹೆಣ್ಣುಗಳು, ಮತ್ತವರ ಹಿಂದೆ ಕಣ್ಣು ಮಿಟುಕಿಸದೇ ಸುತ್ತುವ ಹಪಾಹಪಿ ಹರೆಯದ ಗಂಡುಗಳು... ಏನ್ ಮಜಾ ಅವರದು. ಮತ್ತೆ, ಇದ್ದಬಿದ್ದ ಕೋಟು, ಸೂಟು ಹಾಕಿಕೊಂಡು ಎಂಜಿ ರಸ್ತೆಗಿಳಿದ ರಿಟೈರಮೆಂಟ್ ಹೊಸ್ತಿಲಲ್ಲಿರುವವರು , ಯೌವ್ವನದ ಬಿಡುಬೀಸನ್ನೆಲ್ಲ ಕಳಕೊಂಡರೂ ಚಮಕ್ ಬಿಟ್ಟುಕೊಡದ 40 ಪ್ಲಸ್ ಆಂಟಿಯರು ಮಗಳಿಗೂ ಕಾಂಪಿಟಿಷನ್ ಕೊಡುವವರಂತೆ ಸಿಂಗರಿಸಿಕೊಂಡು ಮೆಟ್ರೋ ರೈಲು ಟಿಕೆಟ್ ಗಾಗಿ ಕಾದಿದ್ದೇ ಕಾದಿದ್ದು. ಇನ್...

ಯುರೋಪಿನಲ್ಲಿ ಮೊದಲ ಮೆಟ್ರೊ ಪಯಣ...

ಬೆಂಗಳೂರಿನಿಂದ ಪ್ರಯಾಣ ಹೊರಟ ಹೊತ್ತಲ್ಲಿ ನಗರಕ್ಕೆ ಮೆಟ್ರೊ ದಾಂಗುಡಿ ಇಟ್ಟಿತ್ತು. ಅದಕ್ಕೆ ದಕ್ಕಿದ ಅದ್ದೂರಿ ಸ್ವಾಗತಕ್ಕೆ ಎಲ್ಲರೂ ದಂಗಾಗಿದ್ದೆವು. ಇಲ್ಲಿ ಯುರೋಪಿನಲ್ಲಿ ಅದು ಆಗಲೇ ಜನಜೀವನದ ಒಂದು ಭಾಗವೇ ಆಗಿಹೋಗಿದೆ. ಅವರು ಇನ್ನೇನೋ ಹೊಸದು ಯೋಚಿಸುತ್ತಿರುವ ಹೊತ್ತು ಇದು. ಒಸ್ಲೊವಿನ ಮೂಲಕ ಮೊದಲ ಯುರೋಪ್ ಮೆಟ್ರೊ ಪಯಣ (ಅಕ್ಟೋಬರ್ 29, 2011) ಮಜವಾಗಿತ್ತು.

ಒಸ್ಲೊ ಶಹರಿನ ಮೊದಲ 'ಸೊಳ್ಳಿ' ಮುಂಜಾವು....

ನನ್ನ ತಂಗಿಯ ಮನೆಯಿಂದ ಹೊರಕ್ಕೆ ಕಾಲಿಟ್ಟರೆ ಸಾಕು ಒಂದು ಹೊಸ ಲೋಕವೇ ತೆರೆದುಕೊಳ್ಳುತ್ತದೆ. ನಗರದ ಹೃದಯ ಭಾಗವಾಗಿರುವ ಈ ಪ್ರದೇಶದಲ್ಲೇ ಅರಮನೆ ಇದೆ. ಕೂಗಳತೆ ದೂರದಲ್ಲೇ ನೊಬೆಲ್ ಇನಸ್ಟಿಟ್ಯೂಟ್, ಇಬ್ಸೆನ್ ಬಾಳಿ ಬದುಕಿದ ಮನೆ, ನ್ಯಾಷನಲ್ ಥಿಯೇಟರ್ ಇದೆ. ತಂಗಿ ನೆಲೆಸಿರುವ ಅಪಾರ್ಟಮೆಂಟಿನ ಹಿಂದೆ ಬೃಹತ್ ನ್ಯಾಷನಲ್ ಲೈಬ್ರರಿ ಇದೆ. ನಡೆದುಕೊಂಡೇ ಸೆಂಟ್ರಲ್ ಸ್ಟೇಷನ್ ಹೋಗಬಹುದು. ಹಾರ್ಬರ್ ಹತ್ತಿರದಲ್ಲೇ ಇದೆ. ನಡೆದಷ್ಟು ದೂರ ಕಾಣುವುದೆಲ್ಲ ರಮ್ಯ. ಕಣ್ಣಿಗೆ ಬೀಳುವವರೆಲ್ಲ ಬಿಳಿಯ ಚೆಲುವೆಯರು, ಬಿಳಿ ಮೂತಿಗಳು... ಇದಕ್ಕೆ ಸೊಳ್ಳಿ ಎಂದು ಹೆಸರು. ಎಸ್ ಒ ಎಲ್ ಎಲ್ ಐ... ಇಲ್ಲಿನವರು ಸೋಳ್ಳಿ ಎಂದು ಉಲಿದಾಗ ಬಲು ಮಜವೆನಿಸುತ್ತದೆ.

ಭಾವನೆಗಳ ಅಲೆಯಲ್ಲಿ ದಡ ಸೇರುವ ಹೊತ್ತು...

ಪರದೇಶದಲ್ಲಿ ಕಂಡ ಪಾಕಿ... ಒಸ್ಲೊ ವಿಮಾನ ನಿಲ್ದಾಣದಿಂದ ನಮ್ಮನ್ನು ನಗರಕ್ಕೆ ತಲುಪಿಸಿದ ಟ್ಯಾಕ್ಸಿ ಚಾಲಕ ಪಾಕಿಸ್ತಾನದವ! ಆರಂಭದಲ್ಲಿ ಆತ ನಾರ್ಗಿ ಭಾಷೆಯಲ್ಲೇ ಮಾತನಾಡಿದ. ನನ್ನ ತಂಗಿಯ ಗಂಡ ಖಾನ್ ಗೂ ಆ ಭಾಷೆ ಕೊಂಚ ಗೊತ್ತು. ಇಬ್ಬರೂ ಮಾತನಾಡುವುದನ್ನು ಕಂಡಾಗ ಈತ ಪಾಕಿ ಅನ್ನೋದು ಗೆಸ್ ಮಾಡಲೂ ಸಾಧ್ಯವಾಗಿರಲಿಲ್ಲ. ನನ್ನವ್ವ, |ಭಾವ, ಅವರ ತಾಯಿ ಹಿಂದಿನ ಸೀಟಿನಲ್ಲಿ ಕುಳಿತರೆ, ನಾನು ಚಾಲಕನ ಪಕ್ಕದ ಸೀಟಿನಲ್ಲಿ ಕೂತೆ. ಟ್ಯಾಕ್ಸಿ ಸ್ವಲ್ಪ ದೂರ ಸಾಗುತ್ತಿದ್ದಂತೆ, ಆಪ್ ಪಂಜಾಬ್ ಸೆ ಹೋ... ಎಂದನಾತ. ಅರೇ! ಆಪ್ ಹಿಂದೂಸ್ತಾನೀ ಅಂದೆ. ಹ್ಞಾ ... ಬಗಲ್ ಮೈ ಹೈ ನಾ ಪಾಕಿಸ್ತಾನ್ ವಹಾ ಕಾ ಹ್ಞೂ ಅಂದ. ತೋ ಯಾರ್ ಏ ಹೋ ಗಯೀ ನಾ ಬಾತ್... ಜಿಂದಗೀ ಮೇ ಪೆಹಲೀ ಬಾರ್ ಕೊಯಿ ಪಾಕಿಸ್ತಾನಿ ಸೇ ಮಿಲ್ ರಹಾ ಹ್ಞೂ... ಪಡೋಸಿ... ಎಂದು ನಕ್ಕೆ. ಆತನೂ ಯುರೋಪ್ ಸ್ಟೈಲಿನಲ್ಲಿ ದೊಡ್ಡದಾಗಿ ನಕ್ಕ. ಕಿತನೇ ಸಾಲ್ ಸೇ ಯಹಾ ಹೋ... ಎಂದೆ. ವೈಸೆ ಭಿ ಮೈ ಅಪನೀ ಆಧೀ ಜಿಂದಗೀ ಯುರೋಪ್ ಮೆ ಹೀ ಕಾಟಾ... ಪೆಹಲೆ ಹಾಲಂಡ್ ಮೆ ಥಾ, ಫಿರ್ ಲಂಡನ್, ಪ್ಯಾರಿಸ್ ಫಿರ್ ಯಹ್ಞಾ ಅಂದ... ಅರೇ ಲಂಡನ್ ಛೋಡ್ ಕೆ ಇಧರ್ ಕ್ಯುಂವ್ ಭಾಯ್...  ಅಂದೆ ನಾನು. ಅರೇ ಯಾರ್ ವಹ್ಞಾ ಇತನಾ ಶೋರ್ ಶರಾಬಾ ಹೈ, ಲೋಗ್ ಹಯ್ಯಾಶೀ ಕರತೆ ಹೈ, ಬಹುತ್ ಮಸ್ತಿ ಕರತೇ ಹೈ... ಮುಝೆ ಪಸಂದ್ ನಹೀ ಆಯಾ, ಇಸಿಲಿಯೇ ಇಧರ್ ಆಯಾ. ಯಹ್ಞಾ ಬಹುತ್ ಡೀಸೆನ್ಸಿ ಹೈ, ಪೀಸ್ ಹೈ... ಹ್ಞಾ ಲೋಗ್ ಜ...

ಸೇವಾಮನೋಭಾವ, ಕಾಯಕ ಮತ್ತು ನಾವು-ಅವರು

ಯಾವುದೇ ಕೆಲಸವಾಗಿರಲಿ, ಅದಕ್ಕೆ ಡಿಗ್ನಿಟಿ ಆಫ್ ಲೇಬರ್ ಮನೋಧರ್ಮ ಮುಖ್ಯ. ಕಾಯಕ ಸಂಸ್ಕೃತಿಯ ಧರ್ಮವೆಂದರೆ ಅಲ್ಲಿ ಯಾವುದೂ ದೊಡ್ಡದಿರುವುದಿಲ್ಲ ಮತ್ತು ಯಾವುದೂ ಚಿಕ್ಕದಿರುವುದಿಲ್ಲ. ಇಲ್ಲಿ ಯಾರೂ ಅಮುಖ್ಯರಲ್ಲ... ಕುವೆಂಪು ಹೇಳಿದ್ದೂ ಅದನ್ನೇ ಅಲ್ಲವೇ. ಜನಜೀವನದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಮತ್ತು ಯುರೋಪಿಯನ್ನರ ನಡುವೆ ಕೆಲವು ಬಹುಮುಖ್ಯವಾದ ಭಿನ್ನತೆಗಳಿವೆ. ಯುರೋಪಿಯನ್ನರು ಅದರಲ್ಲೂ ನಾರ್ವೆಜಿಯನ್ನರು ಯಾವ ಕೆಲಸವನ್ನು ಲಘುವೆಂದು ಪರಿಗಣಿಸುವುದಿಲ್ಲ. ಅದರಲ್ಲೇ ಬಹುದೊಡ್ಡ ಸಮಾಧಾನ ಮತ್ತು ಸಾರ್ಥ್ಯಕ್ಯವನ್ನು ಕಾಣಲೆತ್ನಿಸುತ್ತಾರೆ. ಅವರಿಗದು ಒಂದು ಕಾಯಕವೂ ಹೌದು ಧ್ಯಾನವೂ ಹೌದು. ಅವರಿಗದು ಸ್ಪಿರಿಚುಯಾಲಿಟಿ ಮನೋಧರ್ಮದಿಂದ ಸಾಧ್ಯವಾಗಿದೆ ಎಂದು ನನಗನ್ನಿಸುತ್ತದೆ. ಮಾತು ಮಾತಿಗೂ ಅವರು ಗಾಡ್ ಬ್ಲೆಸ್ ಯು ಎನ್ನುವುದು ಸುಮ್ಮನೇ ಒಂದು ತೋರಿಕೆಯಲ್ಲ ಅನಿಸುತ್ತದೆ. ರಿಲಿಜಿಯಸ್ ಲೈಫಿನಿಂದ ಅವರ ಸ್ಪಿರಿಚುಯಲ್ ಲೈಫ್ ಕೂಡ ರೂಪುಗೊಂಡಿದ್ದರೂ ಅದನ್ನವರು ನಿಜ ಜೀವನದಲ್ಲಿ ಸಿವಿಕ್ ಸೆನ್ಸ್ ಮನೋಧರ್ಮದಲ್ಲಿ ತರಲು ಯತ್ನಿಸುತ್ತಾರೆ. ಇದಕ್ಕೆ ಅಪವಾದಗಳೂ ಇರಬಹುದು. ನಮ್ಮ ದೇಶದ ಅತಿ ಅಮಾನುಷವಾದ ಜಾತಿ ಪದ್ಧತಿಯಿಂದಾಗಿ ಕಾಯಕ ಎನ್ನುವುದು ಒಂದು ಕೆಲಸವಾಗಷ್ಟೇ ಕಾಣುತ್ತದೆ. ಮೇಲು, ಕೀಳು ಎನ್ನುವುದನ್ನು ಕೆಲಸಕ್ಕೆ ಸಂಬಂಧಿಸಿಯೂ ಕಾಣುವಂಥ ಬಹು ಕೆಟ್ಟದಾದ ಚಾಳಿ ನಮ್ಮದಾಗಿದೆ. ಇದರಿಂದ ನಾವು ಹೊರಬರುವುದು ಯಾವಾಗ? ಇನ್ನೆಷ್ಟು ಅಂಬೇಡ್ಕರ್ ಹೋ...

ನಾರ್ವೆ ರಾಜಧಾನಿ ಒಸ್ಲೊ ನೆಲಕ್ಕಿಳಿದಾಗ...

ನಾರ್ವೆ ರಾಜಧಾನಿ ಒಸ್ಲೊಗೆ ಪ್ಯಾರಿಸ್ ನಿಂದ ಪಯಣ ಶುರುವಾಯ್ತು. ಈ ಸಲ ನನ್ನವ್ವನಿಗೆ ಕಿಟಕಿ ಇರುವ ಸೀಟು ಸಿಕ್ಕಿತು. ಫ್ಲೈಟ್ ಟೇಕಾಫ್ ಆಗುವ ಮಜಾ ಅವಳಿಗೆ ಮೊದಲ ಸಲ ಸಿಕ್ಕಿರಲಿಲ್ಲ. ಈ ಸಲ ಅವಳು ಥ್ರಿಲ್ ಆದಳು. ಭೂಮಿಯಿಂದ ಮೇಲಕ್ಕೆ ಹಾರುವ ಹಕ್ಕಿಯಂಥ ಅನುಭವ ಆಕೆಗೆ ಆಗಿರಲೇಬೇಕು. ಅಮ್ಮಾ! ಜಮೀನ್, ರಸ್ತಾ, ಘರ್ ಕಿತನೆ ಛೋಟೆ ಲಗ ರಹೇ ಹೈ, ವೋ ದೇಖೋ ಆಸ್ಮಾನ್, ಬಾದಲ್, ಸೂರಜ್... ಗಾಂವ್ ಮೇ ಉಡತಾ ಹುವಾ ಹವಾಯಿಜಹಾಜ್ ಸಿರ್ಫ್ ದೇಖತೆ ಥೇ, ಆಜ್ ಅಸಲಿ ಎಹಸಾಸ್ ಹುವಾ, ಹಮಾರಿ ಬೇಟಿ ಸಪನಾ ಸಚ್ ಕರ್ ದೀ...  ನನ್ನವ್ವನ ಮಾತುಗಳಿವು. ಭೂಮಿ, ಆಕಾಶ, ರಸ್ತೆ, ಮನೆ... ಎಲ್ಲ ಎಷ್ಟು ಸಣ್ಣ ಜಗತ್ತು! ಎಲ್ಲ ಅದೆಷ್ಟು ಹತ್ತಿರ! ನಮ್ಮೂರ ಆಕಾಶದಲ್ಲಿ ಹಾರುತ್ತಿದ್ದ ವಿಮಾನವನ್ನು ದೂರದಿಂದಲೇ ನೋಡಿ ದಂಗಾಗುತ್ತಿದ್ದೆವು... ಅದರಲ್ಲಿ ಹತ್ತುವ ಕನಸು ಮೂಡುತ್ತಿತ್ತು...  ಆ ಕನಸನ್ನು ಮಗಳು ಈಗ ನನಸು ಮಾಡಿಬಿಟ್ಟಳು... ಅವಳ ಕೈಗೆ ಕ್ಯಾಮೆರಾ ಕೊಟ್ಟೆ. ಸಂಕೋಚದಿಂದಲೇ ಕ್ಲಿಕ್ ಮಾಡಲೆತ್ನಿಸಿದಳು. ಅವಳು ತಡಕಾಡುತ್ತಿರುವುದನ್ನೆಲ್ಲ ಅವಳ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುರೋಪ್ ಹುಡುಗಿ ಗಮನಿಸಿ ನಗುತ್ತಿದ್ದಳು. ನನ್ನತ್ತ ನೋಡಿ ದೊಡ್ಡದಾಗಿ ನಕ್ಕಳು. ಮೈ ಮಾಮ್ ಎಂದೆ, ಯಾ ಐ ಕ್ಯಾನ್ ಅಂಡರಸ್ಟ್ಯಾಂಡ್ ಎಂದು ನಕ್ಕಳು. ನನ್ನವ್ವನನ್ನೇ ನೋಡುತ್ತಿದ್ದಳು, ಕಡೆಗೂ ಆಕೆ ಒಂದಷ್ಟು ಕ್ಲಿಕ್ಕಿಸಿದಳು... ಯಾ ಸೀ...

ಪ್ಯಾರಿಸ್ ತಲುಪಿದಾಗ...

ನಮ್ಮ ನೆಲದಿಂದ ಮತ್ತೊಂದು ನೆಲಕ್ಕೆ ನಮ್ಮೆಲ್ಲರನ್ನು ಸುರಕ್ಷಿತವಾಗಿ ತಂದಿಳಿಸಿದ ಏರ್ ಫ್ರಾನ್ಸ್ ವಿಮಾನ ಪ್ಯಾರಿಸ್ ನಿಲ್ದಾಣದಲ್ಲಿ... ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ನನ್ನಮ್ಮನನ್ನು ವ್ಹೀಲ್ ಚೇರಿನಲ್ಲಿ ಕರೆತಂದು, ಅವಳ ಜತೆ ನಮ್ಮನ್ನೂ ಕನೆಕ್ಟಿಂಗ್ ಫ್ಲೈಟಿಗೆ ಸಾಗಿಸುತ್ತಿರುವ ಆಫ್ರಿಕನ್ ಯುವಕ ಮತ್ತು ಕಾರು ಓಡಿಸುತ್ತಿರುವ ಬಿಳಿ ಚೆಲುವೆ. ನನ್ನ ಅವ್ವ ಮತ್ತು ತಂಗಿಯ ಅತ್ತೆ, ಇಲ್ಲಿನ ಹೆಣ್ಣುಮಕ್ಕಳು ಭರ್ರನೇ ಕಾರು ಓಡಿಸುವದ ಕಂಡು ದಂಗಾಗಿದ್ದರು. ಆಕೆ ಭರ್ತಿ ಸ್ಪೀಡಿನಲ್ಲಿ ನಮ್ಮನ್ನು ಮುಂದಿನ ವಿಮಾನವಿರುವ ಟರ್ಮಿನಲ್ ಗೆ ಕರೆತಂದಳು. ಅಲ್ಲಿಗೆ ತಲುಪುತ್ತಿದ್ದಂತೆ ಆಕೆ ಹ್ಯಾಪಿ ಜರ್ನಿ ಎಂದಳು. ನಾನೊಂದು ಹೆಮ್ಮೆಯ ಸೆಲ್ಯುಟ್ ಹೇಳಿದೆ. ಆಕೆ ಸುಂದರ ಸ್ಮೈಲ್ ಕೊಟ್ಟಳು... ಪ್ಯಾರಿಸ್ ವಿಮಾನ ನಿಲ್ದಾಣದ ಸೊಬಗನ್ನು ಸವಿಯುತ್ತಿರುವ ನನ್ನವ್ವ ಮತ್ತು ತಂಗಿಯ ಅತ್ತೆ... ನಮ್ಮ ಮೆಜೆಸ್ಟಿಕ್ ನಲ್ಲಿ ಸಿಬಿಟಿ ಬಸ್ ಗಳ ಹಾಗೆ ಸಾಲಂಕೃತವಾಗಿ ನಿಂತ ಡೊಮೆಸ್ಟಿಕ್ ಫ್ಲೈಟ್ ಗಳು. ಪ್ಯಾರಿಸ್ ವಿಮಾನ ನಿಲ್ದಾಣದ ಡೊಮೆಸ್ಟಿಕ್ ಟರ್ಮಿನಲ್ ಗಳಲ್ಲಿ ಒಂದು ಟರ್ಮಿನಲ್ ಇದು. ಇಲ್ಲಿಂದಲೇ ನಾವು ಒಸ್ಲೊ ಗೆ ಪ್ರಯಾಣ ಬೆಳೆಸಿದ್ದು. ಇಲ್ಲೂ ನಾವು ಸರಿ ನಾಲ್ಕು ಗಂಟೆ ಕಾಯಬೇಕಾಗಿ ಬಂತು. ಇಡೀ ಟರ್ಮಿನಲ್ ಸುತ್ತು ಹಾಕಿ ಬಂದೆ. ಕೆಲವೆಡೆ ಫೊಟೊಗ್ರಾಫ್ ತೆಗೆದುಕೊಳ್ಳಲು ಅನುಮತಿ ಇರಲಿಲ್ಲ. ಇಲ್ಲಿನ ಶಾಪ್ ಗಳಲ್ಲೂ ಒಂದು ಸುತ್ತುಹಾಕಿ ಬಂದೆ. ಎಲ್ಲವೂ ...

ಸ್ಕಾಯಲಾರ್ಕ್ ಹಕ್ಕಿಯಂತಾಗಿದ್ದಳು ನನ್ನಮ್ಮಾ...

ಮೊದಲ ಬಾರಿಗೆ ಸ್ಕಾಯಲಾರ್ಕ್ ಹಕ್ಕಿಯಾಗಿದ್ದಳು ನನ್ನಮ್ಮಾ... ವಿಮಾನದ ಗುಂಯ್ ಗುಡುವ ಸದ್ದಿಗೆ, ಒಳಗಿನ ಚಳಿಗೆ, ತಣ್ಣನೆಯ ಟೀಗೆ, ಸಪ್ಪೆ ಊಟಕ್ಕೆ ಸುಸ್ತಾಗಿ ಹೋಗಿದ್ದಳು... ಮೊದಲ ಸಲ ಆಕಾಶಕ್ಕೆ ನೆಗೆದಾಗ ಅಮ್ಮಾ ಎಂದು ದಂಗಾದವಳು... ಮಗಳ ಕಾಣುವ ತವಕದಲ್ಲಿ ವಿಮಾನದ ಸಂಭ್ರಮವನ್ನೂ ಲೆಕ್ಕಿಸದವಳು.. ಮಗಳ ಮಡಿಲಲ್ಲಿ ಹೊಸ ಜೀವವೊಂದು ನಲಿದಾಡುವುದನ್ನು ಕಾಣುವ ಕನಸಲ್ಲಿ ಮುಳುಗಿಹೋದಾಕೆ... ಅಮ್ಮನನ್ನು ನೋಡಿದಾಗೆಲ್ಲ ಒಂದು ಮುಗ್ಧ ಮಗುವನ್ನು ನೋಡಿದ ಹಾಗೆನಿಸುತ್ತಿತ್ತು... ನಾನದರ ತಾಯಿ ಅನಿಸುತ್ತಿತ್ತು... ಇಬ್ಬರೂ ಮಕ್ಕಳಂತಾಗಿದ್ದರು. ಯಾವುದನ್ನೂ ತಿನ್ನದ ಮತ್ತು ಕುಡಿಯದ ಇಬ್ಬರಿಗೂ ಬರಿಯ ಬಿಸಿನೀರು ಮಾತ್ರ ಆಹಾರವಾಗಿತ್ತು. ಅದನ್ನು ನೀಡುತ್ತಿದ್ದ ಪರಂಗಿ ಹೆಣ್ಣುಗಳು ಮಾತ್ರ ಇವರಿಗೆ ಅಚ್ಚುಮೆಚ್ಚಾಗಿದ್ದರು. ಇವರನ್ನು ಕಂಡರೆ ಅವರಿಗೂ ಬಲು ಅಕ್ಕರೆ... ಅವರ ನಗೆ, ನಯ, ವಿನಯ, ವೈಯ್ಯಾರ ಇಬ್ಬರಿಗೂ ಇಷ್ಟವಾಗಿತ್ತು. ಇವರ ವೇಷಭೂಷಣ, ಮುಗ್ಧತೆ ಅವರಿಗೂ ಅಚ್ಚುಮೆಚ್ಚಾಗಿತ್ತು. ಕಂಡಾಗೆಲ್ಲ ತಲೆಬಾಗಿ ನಮಸ್ತೆ ಎನ್ನುತ್ತಿದ್ದುದು ಅಪ್ಯಾಯಮಾನವೆನಿಸುತ್ತಿತ್ತು.. ಕಿಟಕಿಯಿಂದ ತೂರಿ ಬಂದ ಬೆಳಕು ಇಬ್ಬರನ್ನು ಸುಸ್ತು ಮಾಡಿಹಾಕಿತ್ತು. ಪ್ಯಾರಿಸ್ ಬಂದಾಗಲೇ ಕಣ್ಣು ತೆರೆದದ್ದು... ಏರ್ ಫ್ರಾನ್ಸ್ ವಿಮಾನದ ಒಳನೋಟ... ವಿಮಾನದ ಕ್ಯಾಮೆರಾ ಭೂಮಿಯ ಚಿತ್ರಣ ಕಟ್ಟಿಕೊಡುತ್ತಿತ್ತು ... ವಿಮಾನ ಹಾರುವ ಸ್ಥಿತಿ ಗತಿ ಮುಂದಿನ ಸೀಟಿಗಂಟಿಸಿದ ಪರದೆ...