ವಿಷಯಕ್ಕೆ ಹೋಗಿ

ಕಾಲದ ಅನಂತತೆಯ ಸ್ಲೇಟಿನ ಮೇಲೆ...

ಮಂಜಿನ ಮಳೆ ಸುರಿಯುತ್ತಿದೆ. ಏರ್ ಫ್ಲಾರಿಡಾ- 90  ವಿಮಾನ ರನ್ ವೇ ಮೇಲೆ ಸಾಗುತ್ತಿದೆ. ಅದರ ರೆಕ್ಕೆಗಳ ಮೇಲೆ ಭಾರಿ ಪ್ರಮಾಣದ ಮಂಜು ಬಿದ್ದಿದೆ. ಯಾವ ಎಚ್ಚರಿಕೆಯನ್ನೂ ಲೆಕ್ಕಿಸದ ಪೈಲಟ್ ಟೇಕಾಫ್ ಗೆ ಮುಂದಾಗುತ್ತಾನೆ. ಮಂಜಿನ ಭಾರಿ ಮಳೆಯ ನಡುವೆ ವಿಮಾನ ನೆಲ ಬಿಟ್ಟು ಮೇಲಕ್ಕೇಳುತ್ತದೆ.
ಟೇಕಾಫ್ ಗೆ ಸ್ವಲ್ಪವೇ ಮುಂಚಿನ ಸಮಯದಲ್ಲಿ ಕೋ ಪೈಲಟ್ ಗೆ ಏನೋ ಸಂಶಯ. ಅವನು ಪೈಲಟ್ ಗೆ ಎಚ್ಚರಿಸುತ್ತಾನೆ.
ಕೋ ಪೈಲಟ್: ಏನೋ ತೊಂದರೆ ಕಾಣಿಸ್ತಿದೆ.
ಪೈಲಟ್: ರೀಡಿಂಗ್ಸ್ ಸರಿಯಾಗೇ ತೋರಿಸ್ತಿದೆ.
ಕೋ ಪೈಲಟ್:  ಆ ರೀಡಿಂಗ್ ಫಾಲ್ಸ್ ಸೆಕ್ಯುರಿಟಿ ಫೀಲಿಂಗ್ ತರಿಸ್ತಿರಬಹುದೇನೋ.
(ಪೈಲಟ್ ಮತ್ತಷ್ಟು ಗುಂಡಿಗಳನ್ನು ಒತ್ತುತ್ತಾನೆ. ರೆಕ್ಕೆಯ ಮೇಲಿನ ಮಂಜು ತೆರವಿಗೆ ಯತ್ನಿಸುತ್ತಾನೆ. ಕೀ ಎಂಜಿನ್ ಸೆನ್ಸರೀಸ್ ಫ್ರೋಜನ್ ಆಗಿರುತ್ತದೆ. ವಿಂಗ್ ಆಂಟಿ ಐಸ್  ಸಿಸ್ಟಂ (anti ice system)  ಆಫ್ ಆಗಿದ್ದನ್ನು ಮತ್ತೆ ಕೋ ಪೈಲಟ್ ಎಚ್ಚರಿಸುತ್ತಾನೆ).
ಕೋ ಪೈಲಟ್: ಓ ಗಾಡ್! ಏನೋ ತೊಂದರೆ ಇದೆ. ನೋಡಿಲ್ಲಿ ಇದ್ಯಾಕೊ ಸರಿ ಕಾಣಿಸ್ತಿಲ್ಲ. ಇಲ್ಲ ಇದೇನೋ ಸರಿ ಇಲ್ಲ... (ಕೋ ಪೈಲಟ್ ಚಡಪಡಿಸುತ್ತಲೇ ಇರುತ್ತಾನೆ)
ಪೈಲಟ್: ಹೌದು ಸರಿ ಇದೆ. ನೋಡಿಲ್ಲಿ ಎಕ್ಸಿಲರೇಷನ್ 80 ನಾಟ್ಸ್ ರೀಡಿಂಗ್ ತೋರಿಸ್ತಿದೆ.
ಕೋ ಪೈಲಟ್: ಇಲ್ಲ ಖಂಡಿತ ಇದೇನೋ ಸರಿ ಇಲ್ಲ...
(ಬ್ಲ್ಯಾಕ್ ಬಾಕ್ಸ್ ಪ್ರಕಾರ ಕಾಕ್ಪಿಟ್ ರೀಡಿಂಗ್ ಸೂಕ್ತ ಅಂಕಿಯನ್ನೇ ತೋರಿಸ್ತಿತ್ತು. ಎಂಜಿನ್ ಬೇಕಾದ ಪಾವರ್ ಕೊಡ್ತಿರಲೇ ಇಲ್ಲ. ಅದು ತಪ್ಪು ರೀಡಿಂಗ್ಸ್ ತೋರಿಸ್ತಿತ್ತು... ಕ್ಯಾಪ್ಟನ್ ಗೆ ಅನಿಸ್ತಿತ್ತು ಎಂಜಿನ್ ನಿಂದ ಅಗತ್ಯ ಪಾವರ್ ಲಭ್ಯವಾಗ್ತಿದೆ. ಟೇಕಾಫ್ ಮುಂದುವರಿಸಬಹುದು ಎಂದು...)
ಪೈಲಟ್:  ಕಮಾನ್ ಫಾರ್ವರ್ಡ್, ಫಾರ್ವರ್ಡ್... ಓಹ್  ಮೇಲಕ್ಕೇರುತ್ತಲೇ ಇಲ್ಲ... ಎಂಜಿನ್ ಸ್ಥಗಿತಗೊಳ್ಳುತ್ತಿದೆ.. ನಾವು ಕೆಳಕ್ಕೆ ಬೀಳುತ್ತಿದ್ದೇವೆ...
ಕೋ ಪೈಲಟ್: ನಾವು ಕೆಳಕ್ಕೆ ಹೋಗುತ್ತಿದ್ದೇವೆ..
ಪೈಲಟ್: ನಂಗೊತ್ತು...
ವಿಮಾನ ಕ್ಷಣಾರ್ಧದಲ್ಲೇ ಒಂದು ಸೇತುವೆಗೆ ಅಪ್ಪಳಿಸಿ, ತುಂಡು ತುಂಡಾಗಿ ಬೆಂಕಿಯುಂಡೆಯಂತಾಗಿ ಮಂಜುಗಡ್ಡೆಯಿಂದ ತುಂಬಿದ ನೀರಲ್ಲಿ ಬೀಳುತ್ತದೆ..

ಹೇಗಾಯ್ತು? : ಎಂಜಿನ್ ಗೆ ಮಂಜು ಹೊಕ್ಕು ಅಲ್ಲಿ ಗಾಳಿ ಚಲನೆಗೆ ಅಡ್ಡಿ ಮಾಡಿತ್ತು. ಅಲ್ಲಿನ ಸೆನ್ಸರಿಗೆ ಗರಬಡಿದಿತ್ತು.  ಎಂಜಿನ್ ರೀಡಿಂಗ್ ಮೋಸ ಮಾಡಿತ್ತು. ಕೀ ಎಂಜಿನ್ ಸೆನ್ಸರೀಸ್ ಫ್ರೋಜನ್ ಆಗಿತ್ತು.. ಅಂಥ ಸಂದರ್ಭದಲ್ಲಿ ಟೇಕಾಫ್ ಮಾಡಲೇಬಾರದಾಗಿತ್ತು. ಆದರೂ ಕಡೆ ಘಳಿಗೆಯಲ್ಲಿ ಪೈಲಟ್ ಟೇಕಾಫ್ ಮಾಡಿಬಿಟ್ಟ. ವಿಮಾನ ಒಂದು ನಿರ್ಧಿಷ್ಟ ಎತ್ತರ ಬಿಟ್ಟು ಮೇಲಕ್ಕೆ ಹಾರುತ್ತಿಲ್ಲ. ಕೇವಲ 24 ಸೆಕೆಂಡುಗಳಲ್ಲಿ ಎಂಜಿನ್ ಫೇಲ್ ಆಯ್ತು. ವಿಮಾನ  ಸೇತುವೆಯೊಂದಕ್ಕೆ ಅಪ್ಪಳಿಸಿತು.

ಪರಿಣಾಮ: ಸೇತುವೆಯ ಮೇಲೆ ಕಾರಿನಲ್ಲಿ ಪಯಣಿಸುತ್ತಿದ್ದವರು ಸೇರಿದಂತೆ ಎಷ್ಟೊ ಜನ ಸತ್ತೇ ಹೋದರು. ಕೆಲವರು ಪವಾಡಸದೃಶ ಪಾರಾದರು. ಘಟನೆ ಸಂಭವಿಸಿದ ಕೆಲವೇ ಸಮಯದಲ್ಲಿ ರಕ್ಷಣಾ ಹೆಲಿಕಾಪ್ಟರ್ ಸ್ಥಳಕ್ಕೆ ಧಾವಿಸಿತು. ಮಂಜಿನಿಂದಾವೃತವಾದ ನೀರಿನಲ್ಲಿ ಕೆಲವರಿಗೆ ಕೈಕಾಲೇ ಆಡುತ್ತಿಲ್ಲ. ಒಬ್ಬ ಹೆಣ್ಣುಮಗಳಂತೂ ನಿತ್ರಾಣಳಾಗಿ ಮಂಜುಗಡ್ಡೆಗಳ ನಡುವೆ ಸಿಕ್ಹಾಕಿಕೊಂಡು ಅಂತಿಮ ಕ್ಷಣಗಳನ್ನು ಎದುರಿಸುತ್ತಿದ್ದಳು. ಅವಳನ್ನು ರಕ್ಷಣಾ ಸಿಬ್ಬಂದಿ ಅನಾಮತ್ತಾಗಿ ಎತ್ತಿಕೊಂಡಿತು. ಜೀವ ಉಳಿಸಿತು.

ಕಲಿತ ಪಾಠ: ವಿಮಾನದ ಥ್ರಸ್ಟ್ ಸೆನ್ಸರ್ಸ ಮಂಜಿನಿಂದ ಬ್ಲಾಕ್ ಆಗದಂತೆ ನೋಡಿಕೊಳ್ಳುವುದು ಮೊದಲ ಆದ್ಯತೆಯಾಗಬೇಕೆಂದು ಎವಿಯೇಷನ್ ಅಥಾರಿಟಿ ತಾಕೀತು ಮಾಡಿತು.

ಇದಷ್ಟನ್ನು ಯುಟ್ಯುಬ್ ವಿಡಿಯೊ ಹೇಳುತ್ತಿದುದನ್ನು ನೋಡಿ ತಂತ್ರಜ್ಞಾನದ ಕಣ್ಣಾಮುಚ್ಚಾಲೆ ಆಟ ದಂಗುಬಡಿಸಿತು. ವಿಮಾನ ಟೇಕಾಫ್ ಆಗುವ ಚಿತ್ರಣ... ಕಾಕ್ ಪಿಟ್ ನಲ್ಲಿ ಪೈಲಟ್, ಕೋ ಪೈಲಟ್ ಮಾತನಾಡುವುದು, ವಿಮಾನ ಚಾಲನೆಗೆ ಏನೆಲ್ಲ ಸಿಸ್ಟಂ ಇದೆ, ರೀಡಿಂಗ್ ಹೇಗೆ ತೋರಿಸುತ್ತದೆ, ಯಾವ ನಾಬ್ ಒತ್ತಿದರೆ ಯಾವ ಕೆಲಸ ಶುರುವಾಗುತ್ತೆ, ಮತ್ತು ಎಂಜಿನ್ ಫೇಲ್ ಆದಾಗ ಏನೆಲ್ಲ ಕಾಕ್ ಪಿಟ್ ನಲ್ಲಿ ನಡೆಯುತ್ತೆ ಎನ್ನುವುದನ್ನೆಲ್ಲಾ ವಿವರಿಸಿತು ವಿಡಿಯೊ...
ಬ್ಲ್ಯಾಕ್ ಬಾಕ್ಸ್ ನಲ್ಲಿ ದಾಖಲಾಗುವ ಪ್ರತಿಯೊಂದು ಮಾಹಿತಿ, ವಾಯ್ಸ್ ರೆಕಾರ್ಡಿಂಗ್ ನಲ್ಲಿ ರೆಕಾರ್ಡ್ ಆದ ಪೈಲಟ್/ಕೊ ಪೈಲಟ್ ಸಂಭಾಷಣೆ, ಅಪಘಾತ ನಡೆದಿದ್ದಕ್ಕೆ ಎಲ್ಲ ಸಾಕ್ಷ್ಯಗಳನ್ನು ಹೇಗೆ ಉಪಕರಣ ಬಚ್ಚಿಟ್ಟುಕೊಳ್ಳುತ್ತೆ! ಅದರ ಆಧಾರದಲ್ಲಿ ಮತ್ತು ಏರೋನಾಟಿಕ್ಸ್ ತಂತ್ರಜ್ಞಾನದ ನೆರವಿನಿಂದ ಅಪಘಾತಕ್ಕೆ ಸ್ಪಷ್ಟವಾದ ತಾಂತ್ರಿಕ ದೋಷಗಳನ್ನು ತಜ್ಞರು ಏನೆಲ್ಲ ಜ್ಞಾನ ಬಳಸಿ ಕಂಡುಕೊಳ್ಳುತ್ತಾರೆ? ಎನ್ನುವ ಎಲ್ಲ ಕುತೂಹಲಗಳನ್ನು ಎಳೆ ಎಳೆಯಾಗಿ ವಿಡಿಯೊ ತೋರಿಸಿತು.
ಇದು ಮುದ್ರಣ ಮಾಧ್ಯಮದಲ್ಲಿ ಸಾಧ್ಯವಾ?
ಮುದ್ರಣ ಮಾಧ್ಯಮಕ್ಕೆ ಕೆಲ ಸಾಧ್ಯತೆಗಳ ಜತೆ ಮಿತಿಗಳೂ ಇವೆ. ತಂತ್ರಜ್ಞಾನದ ಹೊಸ ಆವಿಷ್ಕಾರಗಳೆಲ್ಲ ಮೀಡಿಯಾ ಜಮಾನಾದಲ್ಲಿ ಸಾಕಷ್ಟು ಸವಾಲುಗಳನ್ನು ಸೃಷ್ಟಿಸಿವೆ. ಮುದ್ರಣ ಮಾಧ್ಯಮಕ್ಕೆ ಹಿಂದೆಂದಿಗಿಂತ ಈಗ ತುಂಬ ಪೈಪೋಟಿ. ಬ್ರೇಕಿಂಗ್ ನ್ಯೂಸ್ ಎನ್ನುವ ಅದರ ಶಕ್ತಿಯನ್ನು ಚಾನೆಲ್, ವೆಬ್ ಜಮಾನಾ ಅನಾಮತ್ತಾಗಿ ಎತ್ತಿಕೊಂಡಿದೆ. ಮುದ್ರಣ ಮಾಧ್ಯಮದ ಪಾಲಿಗೆ ಇನ್ನೇನಿದ್ದರೂ ಘಟನೆಯ ವಿವರ ಅಥವಾ ಸುದ್ದಿ/ಘಟನೆಯ ಪೋಸ್ಟ್ ಮಾರ್ಟಂ ರಿಪೋರ್ಟ್ ನೀಡುವ ಕೆಲಸ. ಚಾನೆಲ್ ಗಳು ಪ್ಯಾನೆಲ್ ಡಿಸ್ಕಷನ್ ಮೂಲಕ ಇನ್ನೂ ಪೈಪೋಟಿ ನೀಡಲಾರಂಭಿಸಿವೆ. ಇನ್ನು ಇಂಥ ಅವಘಡಗಳ ತನಿಖೆಯ ವಿವರಗಳೂ ಕೂಡ ಚಾನೆಲ್ ಮತ್ತು ವೆಬ್ ಜಮಾನಾದಲ್ಲಿ ಆಗಲೇ ಬಂದುಬಿಡುತ್ತವೆ. ಯುಟ್ಯೂಬ್, ಮೆಟಾಕೆಫೆಯಂಥ ಹಲವಾರು ಪೊರ್ಟಲ್ ಗಳು ಫ್ರೀ ಆಗಿ ತನಿಖೆಯ ವಿವರಗಳನ್ನು ಗ್ರಾಫಿಕ್ಸ್ ಸಮೇತ ಇಲ್ಲವೇ ಅಂಥ ಕೆಲ ಮರುಸೃಷ್ಟಿಯ ವಿಡಿಯೋಗಳ ಮೂಲಕ ಅದರ ರೋಚಕತೆ, ಕುತೂಹಲದ ಮಾರ್ಕೆಟ್ ಮಾಡಿಬಿಡುತ್ತವೆ.
ಏರ್ ಪೋರ್ಟ್ ಟಾವರ್ ಗಳ ಮೇಲೆ ಭಾರಿ ಫಿಕ್ಸೆಲ್ ನ ಕ್ಯಾಮೆರಾಗಳನ್ನು ಅಳವಡಿಸಿದಲ್ಲಿ (ಅದೂ ಎಲ್ಲಾ ಎಂಗಲ್ ಗಳಲ್ಲಿ), ಅಥವಾ ವಿಡಿಯೋಗ್ರಾಫಿ ಮಾಡುವ ಒಂದು ವಿಂಗ್ ಅನ್ನೇ ನಿಯೋಜಿಸಿದಲ್ಲಿ, ಪ್ರತಿ ವಿಮಾನ ಇಳಿಯುವ ಮತ್ತು ಹಾರುವ ಪ್ರತಿ ಹಂತದ ವಿಡಿಯೊ ಲಭ್ಯವಾಗಿ ಬಿಡುತ್ತದೆ. ರನ್ ವೇ ಗೆ ತುಂಬ ಕ್ಲೋಸ್ ಆಗಿ ಅಲ್ಲಲ್ಲಿ ಕ್ಯಾಮೆರಾಗಳನ್ನಿಟ್ಟಲ್ಲಿ ಅದರ ಒಟ್ಟಾರೆ ಸರಿ ತಪ್ಪು ಚಲನವಲನಗಳ ಮಾಹಿತಿಯನ್ನೆಲ್ಲ ಕ್ಯಾಮೆರಾ ಸೆರೆಹಿಡಿದುಕೊಳ್ಳಲು ಅನುಕೂಲವಾಗುತ್ತದೆ. ಇದು ಕೂಡ ತನಿಖೆಯ ಸಂದರ್ಭ ನೆರವಿಗೆ ಬರಬಹುದು. ಹೀಗೆ ಇಂಥದೊಂದು ವ್ಯವಸ್ಥೆ ಮಾರುಕಟ್ಟೆಯ ದೃಷ್ಟಿಯಿಂದಲೂ ಇಲ್ಲಿ ಸೃಷ್ಟಿಯಾಗುವ ಕಾಲ ದೂರವೇನಿಲ್ಲ...
ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಚಲನವಲನಗಳ ಮೇಲೆ ನಿಗಾ ಇಡುವ ತಂತ್ರಜ್ಞಾನ ಶೇಖರಣೆ ಮತ್ತು ಅಳವಡಿಕೆಯಲ್ಲಿ ಮುಳುಗಿಹೋಗಿರುವ ಏವಿಯೇಷನ್ ಮಿನಿಸ್ಟ್ರಿಗಳೆಲ್ಲ, ವಿಮಾನಗಳ ಸುರಕ್ಷತೆ, ಪೈಲಟ್, ಮತ್ತಿತರ ಸಿಬ್ಬಂದಿಯ ಮನೋದೈಹಿಕ ಸ್ಥಿತಿ ಮತ್ತು ಕೆಲಸದ ಒತ್ತಡಗಳ ಬಗ್ಗೆ ಹಾಗೂ ಒಟ್ಟಾರೆ ಸುರಕ್ಷಿತ ಹಾರಾಟದ ಬಗ್ಗೆಯೂ ಯೋಚಿಸಬೇಕಲ್ಲ?

ಪೈಲಟ್ ಗಳ ಇಂಟಿಗ್ರಿಟಿ:
9/11 ಸಂದರ್ಭದಲ್ಲಿ ಪೈಲಟ್ ಗಳು ನೇರ ಟಾವರ್ ಗೆಂದೇ ವಿಮಾನವನ್ನು ಡಿಕ್ಕಿ ಹೊಡೆಸಿದರು. ಆ ಸಾಹಸ ಪಕ್ಕಾ ಡಿಟರ್ಮೈನ್ಡ್ ಅಟ್ಯಾಕ್. ಸಾವಿಗೆಂದೇ ಹುಟ್ಟಿದ ಡಿಟರ್ಮೈನ್ಡ್ ಟೆರರಿಸ್ಟಗಳಿಂದ ಅದಾಗಿದ್ದು.  ಅವರಿಗೆ ಸಾವಿನ ಜತೆಯಲ್ಲೇ ವ್ಯವಹಾರ. ಅದಕ್ಕೆ ಅವರ ಮನಸ್ಥಿತಿ ಸೀಮಿತಗೊಂಡಿರುತ್ತದೆ. ಮಾನಸಿಕ ಸಿದ್ಧತೆಯೇ ಆ ಮಟ್ಟಿನದ್ದಾಗಿರುತ್ತದೆ. ಜೀವಕೊಡುವುದು ಎಂದರೆ ಅವರಿಗೊಂದು ಭಾಗ್ಯ!
ಆದರೆ, ಇಲ್ಲಿ ಪ್ರಯಾಣಿಕರ ಸಾಗಿಸುವ ಬೋಯಿಂಗ್, ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನಗಳಂಥ ಪೈಲಟ್ ಗಳ ಸ್ಥಿತಿ ಬೇರೆ. ಅವರು ತಾವು ಎಂಥದೇ ಸಾವಿನ ಸ್ಥಿತಿ ಎದುರಿಸುತ್ತಿದ್ದರೂ, ವಿಮಾನ ನೆಲಕ್ಕುರುಳದಂತೆ ತಡೆಯುವ ಮತ್ತು ತಮ್ಮನ್ನು ನಂಬಿದ ಅಷ್ಟು ಪ್ರಯಾಣಿಕರ ಜೀವ ಉಳಿಸುವ, ಜವಾಬ್ದಾರಿಯುತ ಕೆಲಸ ಮಾಡುತ್ತಿರುತ್ತಾರೆ. ಅವಘಡದ ಅಥವಾ ಅಪಾಯದ ಸಂದರ್ಭಗಳಲ್ಲಿ ಪೈಲಟ್ ಗಳು ಎಲ್ಲರಿಗಿಂತ ಸ್ವತಃ ತಾವೇ ಸಾವಿಗೆ ಹತ್ತಿರದಲ್ಲಿರುತ್ತಾರೆ. ಮನಸ್ಸು ಮಾಡಿದರೆ ಕಡೇ ಘಳಿಗೆಯಲ್ಲಿ  ತಮ್ಮ ಸೀಟಿನ ಕೆಳಗುಂಡಿ ಒತ್ತಿ ಹೊರಕ್ಕೆ ನೆಗೆದು, ಪ್ಯಾರಾಚೂಟ್ ಮೂಲಕ ಜೀವ ಉಳಿಸಿಕೊಳ್ಳಬಹುದು... ಆದರೆ ಈತನಕದ ಬಹುತೇಕ ವಿಮಾನ ಅವಘಡಗಳಲ್ಲಿ ಪೈಲಟ್ ಗಳು ತಮ್ಮ ಜೀವ ಒತ್ತೆಯಿಟ್ಟು ಕೊನೆ ಕ್ಷಣದವರೆಗೂ ಹೋರಾಡಿದ ದೃಷ್ಟಾಂತಗಳೇ ಸಿಗುತ್ತವೆ. ಪೈಲಟ್ ಗಳ ಈ ಇಂಟಿಗ್ರಿಟಿ, ಸಮಷ್ಠಿ ಪ್ರಜ್ಞೆಯನ್ನು ನಾವು ಮರೆಯುವಂತಿಲ್ಲ.

ನಾವು ನಿತ್ಯ ಬಳಸುವ ಎಷ್ಟೊ ಎಲೆಕ್ಟ್ರಾನಿಕ್ ಉಪಕರಣಗಳು ಯಾವಾಗ ಕೈಕೊಡುತ್ತವೆ ಎಂದು ಹೇಳೋದಕ್ಕೆ ಆಗಲ್ಲ. ನಮ್ಮ ಕಂಪ್ಯೂಟರ್ ಸಿಸ್ಟಂ ಉತ್ತಮವಾಗಿ ಕೆಲಸ ಮಾಡುತ್ತಲೇ ಏನೋ ಒಂದು ವಕ್ಕರಿಸಿ ಸಿಸ್ಟಂ ಹ್ಯಾಂಗ್ ಆಗಿಬಿಡುತ್ತದೆ. ಅದು ಒಮ್ಮೆ ಆಪರೇಷನಲ್ ಎರರ್ ನಿಂದ ಮತ್ತೆ ಕೆಲವೊಮ್ಮೆ ಅನ್ ಐಡೆಂಟಿಫೈಡ್ ಅಥವಾ ಅನ್ನೋನ್ ರೀಸನ್ ನಿಂದಾಗಿ  ಸಿಸ್ಟಂ ಕೈಕೊಟ್ಟುಬಿಡುತ್ತದೆ. ಅದೂ ಕೆಲಸದ ಎಂಡ್ ರಿಸಲ್ಟ್ ನಿರೀಕ್ಷಿಸುವ ಅಂತಿಮ ಹಂತದಲ್ಲಿ. ಆಗ ಯಾವುದನ್ನು ದೂರೋದು?
ಇವಕ್ಕೆಲ್ಲ ಹಣೆಬರಹ ಅನ್ನೋಕಾಗುತ್ತಾ? ಇಂಥ ಸಂದರ್ಭದಲ್ಲೇ ಈ ಹಣೆಬರಹ ಅನ್ನೋದಕ್ಕೆ ರೆಕ್ಕೆ ಪುಕ್ಕ ಬಂದುಬಿಡುತ್ತೆ. ಮನುಷ್ಯ ಯತ್ನಗಳು ಇದರ ಮುಂದೆ ಶರಣಾಗಿ ನಿಂತಂತೆ ಅನಿಸುತ್ತದೆ. ದೈವ, ದೇವತ್ವದ ಮೇಲೆ ನಂಬಿಕೆಗಳು ಇಲ್ಲಿಂದಲೇ ಶುರುವಾಗುತ್ತವೆ. ಭಯಂಕರ ಭಯವಾಗಿ ಅವು ನಮ್ಮೊಳಗೆ ನೆಲೆಗೊಂಡುಬಿಡುತ್ತವೆ.

ಮಂಗಳೂರಿನ ದುರಂತದ ಬಗ್ಗೆ ನಾವು ರನ್ ವೇ ದೂರುವುದು, ಪೈಲಟ್ ಗಳ ತಪ್ಪು ನಿರ್ಧಾರ ಎಂದು ಹೇಳುವುದು ಶುರುವಾಗಿದೆ. ಇವೆರಡನ್ನೂ ಮೀರಿದ ಎಡವಟ್ಟು ಯಂತ್ರಗಳ ಮೂಲಕವೂ ಆಗಿರುತ್ತದೆ. ಅನ್ನೋನ್ ರೀಸನ್ ಅಲ್ಲೂ ಕೆಲಸ ಮಾಡಿರುತ್ತದೆ. ನಿತ್ಯ ತನಗೆ ಸೂಕ್ತ ಮತ್ತು ಸುರಕ್ಷಾತ್ಮಕ ಮಾಹಿತಿಯನ್ನೇ ನೀಡುತ್ತಿದ್ದ ರೀಡಿಂಗ್ ಆ ಕ್ಷಣದಲ್ಲೇ ಕೈಕೊಟ್ಟುಬಿಟ್ಟಿರುತ್ತದೆ. ಏನೋ ಒಂದು ಗುಂಡಿ ಆನ್ ಅಥವಾ ಆಫ್ ಮಾಡುವಾಗ ಮಾಡಬೇಕಾದ ಪರಿಣಾಮ  ಆ ಕ್ಷಣದಲ್ಲಿ ಯಶಸ್ವಿಯಾಗೋದಿಲ್ಲ.  ತಡಬಡಾಯಿಸುವಷ್ಟೊತ್ತಿ ಗೆ ಸೆಕೆಂಡುಗಳ ಲೆಕ್ಕ ಮೈಕ್ರೊ ಸೆಕೆಂಡ್ ಗೆ ಇಳಿದಿರುತ್ತದೆ. ಸಾವಿನ ಕೂಪದಲ್ಲೇ ಮನುಷ್ಯನ ಬದುಕುವ ಹಂಬಲದ ಯತ್ನಗಳು ಬಹುಶಃ ದೇವರ ಕಣ್ಣಲ್ಲೂ ನೀರು ಬರಿಸುತ್ತವೇನೋ! ಸಾವಿಗೆ ಹತ್ತಿರದಲ್ಲಿದ್ದ  ಆ ಕ್ಷಣಗಳನ್ನು ನಾವು ಊಹಿಸಿಕೊಳ್ಳುವುದಕ್ಕೂ ಆಗಲ್ಲವಲ್ಲಾ...!

ರನ್ ವೇ ಮೇಲೆ ಸಾವೇ ಮಲಗಿತ್ತು... ಆ ವ್ಯಾಲಿಯಲ್ಲಿ ಸಾವು ಕಾಯ್ದು ಕುಳಿತಿತ್ತು... ಡಲ್ ವೆದರ್... ವಿಮಾನ ಹಾರುವ ಮುಂಚೆಯೇ ಸಾವು ಅದರ ಗಾಲಿ ಹತ್ತಿಯಾಗಿತ್ತು... ಎಂದೆಲ್ಲ ಹಲುಬುವುದು ನಮ್ಮ ಸಮಾಧಾನಕ್ಕಷ್ಟೇ. ಪೈಲಟ್ ಗಳನ್ನು ಶಪಿಸುವುದು, ವಿಮಾನಗಳನ್ನು ದೂರೋದು, ತಂತ್ರಜ್ಞಾನವನ್ನೇ ಪ್ರಶ್ನಿಸುವುದು, ಹಣೆಬರಹ ಎಂದುಕೊಳ್ಳೋದು... ಆಗಿ ಹೋದ ಘಟನೆಯನ್ನು ಅಳಿಸಿಹಾಕಲ್ಲ ಅಥವಾ ಅದರ ಹಾನಿಯನ್ನು ತುಂಬಿಕೊಡುವುದಿಲ್ಲ... ವಿಮಾನಯಾನಕ್ಕೆ ಸಂಬಂಧಿಸಿದ ಪ್ರತಿ ಸಾವು ಮತ್ತು ಇಂಥ ಘಟನೆಗಳು ಹೆಚ್ಚು ಹೆಚ್ಚು ಹೊಸ ತಂತ್ರಜ್ಞಾನ ಆವಿಷ್ಕಾರಕ್ಕೆ ಪ್ರೇರಣೆ ನೀಡುತ್ತದೆ. ಆ ಮೂಲಕ ಮತ್ತೊಂದು ತಂತ್ರಜ್ಞಾನ ಆಳುವುದಕ್ಕೆ ದಾರಿಯಾಗುತ್ತದೆ. ಮತ್ತೆ ಅದರದೇ ಅವಘಡಗಳು ದುರಂತಗಳಿಗೆ ಕಾರಣವಾಗುತ್ತದೆ... ಮತ್ತೆ ಅದನ್ನು ಸರಿಪಡಿಸುವ ವಿಜ್ಞಾನ, ತಂತ್ರಜ್ಞಾನ... ಹೀಗೆ ಇಷ್ಟೇ ಆಗೋದು. ಇದು ನಿರಂತರ ಪ್ರಕ್ರಿಯೆ... ಮನುಷ್ಯನ ಹುಟ್ಟು ಸಾವಿನಂತೆ...

ಜಪಾನ್ 123:
ಜಪಾನ್ 123 ಅಪಘಾತ ನೆನಪಿರಬಹುದು. ವಿಮಾನ ತುಂಬ ಎತ್ತರದಲ್ಲಿದ್ದಾಗ ಅವಘಡಕ್ಕೆ ಈಡಾಗುತ್ತದೆ. ಅದು ದಿಕ್ಕುಗಾಣದೆ ಆಕಾಶದಲ್ಲೇ ಸುತ್ತಾಟ ನಡೆಸುತ್ತದೆ. ಏನೇನೋ ಎಡವಟ್ಟಾಗಿ ದೊಡ್ಡ ದೊಡ್ಡ ಪರ್ವತ ಮಾಲೆಗಳ ಮತ್ತು ಕಂದಕಗಳ ಪ್ರದೇಶಕ್ಕೆ ವಿಮಾನ ಪ್ರವೇಶ ಮಾಡುತ್ತದೆ. ಪೈಲಟ್ ಕಣ್ಣೆದುರಿಗೆ ಧುತ್ತನೇ ಭಾರಿ ಪರ್ವತ!... ವಿಮಾನ ಪರ್ವತಕ್ಕೆ ಅಪ್ಪಳಿಸುವುದನ್ನು ತಪ್ಪಿಸಲು ಪೈಲಟ್ ಗಳು ಆ ಕಡೆ ಈ ಕಡೆ ವಿಡಿಯೊ ಗೇಮ್ ಥರ ಏನೇನೋ ಗುಂಡಿಗಳನ್ನು ಒತ್ತುತ್ತಾ,  ಸ್ಪೀಡ್ ಹೆಚ್ಚಿಸುತ್ತಲೇ ಹೋಗುತ್ತಾರೆ. ಭಾರೀ ಸ್ಪೀಡ್ ನಿಂದಾಗಿ ವಿಮಾನ ನಿಯಂತ್ರ ಣ ಕಳೆದುಕೊಂಡು ಅತ್ತ ಇತ್ತ,  ಓಲಾಡತೊಡಗುತ್ತದೆ. ಕಂಟ್ರೋಲ್ ರೂಂನಿಂದ ಜಪಾನ್ ಮತ್ತು ಅಮೆರಿಕದ ತಜ್ಞರು ಮಾಹಿತಿ ನೀಡುತ್ತಾರೆ...  ರೇಡಿಯೋ ಸಂಪರ್ಕ ಕಳೆದುಹೋಗುತ್ತದೆ. ಶತಪ್ರಯತ್ನದ ನಂತರ ದಕ್ಕುತ್ತದೆ.. ಆಕಾಶದಲ್ಲಿ ಹೀಗೆ ಮೇಲಕ್ಕು ಕೆಳಕ್ಕು ಹೊಯ್ದಾಡುತ್ತ ವಿಮಾನ ಕನಿಷ್ಠ 40 ನಿಮಿಷಗಳನ್ನು ಕಳೆದಿದೆ... ಕಂಟ್ರೋಲ್ ರೂಮಿನಿಂದ ಹತ್ತಿರದ ಒಂದು ವಿಮಾನ ನಿಲ್ದಾಣದ ಬಗ್ಗೆ ಮಾಹಿತಿ ಬರುತ್ತದೆ... ನಾರ್ತವೆಸ್ಟ್ ಆಫ್ ಮಹಾನದಾಗೆ 45 ಮೈಲ್ಸ್ ದೂರದಲ್ಲಿದೆ ಎಂದು ಮಾಹಿತಿ ರವಾನೆಯಾಗುತ್ತದೆ.... ಕಂಟ್ರೋಲರ್ ಟೆನ್ಷನ್ ನಲ್ಲಿ 55 ಮೈಲು ಎಂದು ಮೊದಲು ಹೇಳಿ ನಂತರ 45 ಮೈಲು ಎಂದು ಹೇಳುತ್ತಾನೆ... ಪೈಲಟ್ ಮತ್ತೆ ಕಂಟ್ರೋಲ್ ರೂಂ ಸಂಪರ್ಕಿಸುತ್ತಾನ... ಅದು ಸಾಧ್ಯವಾಗುವುದಿಲ್ಲ.  45 ಅಥವಾ 55 ಅನ್ನೋದು ಅವನಿಗೆ ಗೊಂದಲ... ಆಗಲೇ   5500 ಮೀಟರ್ ಪರ್ ಮಿನಿಟ್ ವೇಗದಲ್ಲಿ ವಿಮಾನ ಸೀ ಡೈವ್ ಮಾಡುತ್ತ ನೆಲ ನೋಡುತ್ತಿದೆ...  ಪವರ್ ಪವರ್  ಎಂದು ಪೈಲಟ್ ಕೂಗುತ್ತಾನೆ... ಕೋ ಪೈಲಟ್ ಹೋ ಹೋ ಎಂದು ಗಾಬರಿಯಿಂದ ಏನೆಲ್ಲ ಮಾಡುತ್ತಾನೆ... ಮತ್ತೆ ಕಂಟ್ರೋಲ್ ರೂಂ ಸಂಪರ್ಕ ಮಾಡುತ್ತಾರೆ... ಅಷ್ಟೊತ್ತಿಗೆ ಪ್ಲೇನ್ ಹೈಡ್ರಾಲಿಕ್ ಸಿಸ್ಟಂ ಸಂಪೂರ್ಣ ವಿಫಲಗೊಂಡು ನಿಯಂತ್ರಣಕ್ಕೆ ಬರೋದೇ ಇಲ್ಲ...  ಕೊನೆಯ ಎಲ್ಲ ಕಸರತ್ತುಗಳ ನಂತರ ವಿಮಾನ ಭಾರಿ ವೇಗದಲ್ಲಿ ಪರ್ವತಗಳ ನಡುವಿನ ದೊಡ್ಡ ಕಂದಕದ ನಡುವೆ ಒಂದು ಬಂಡೆಗಲ್ಲಿಗೆ ಅಪ್ಪಳಿಸುತ್ತದೆ.... ಆ ನಲವತ್ತು ನಿಮಿಷಗಳ ಕಾಲ ಸಾವಿನೊಂದಿಗೆ ಸೆಣಸಾಡಿದ ಆ ಎಲ್ಲ ಪ್ರಯಾಣಿಕರ ಗತಿ ಅಬ್ಬಾ!... ಅವರನ್ನೆಲ್ಲ ಉಳಿಸಲು ಕಡೆತನಕ ಯತ್ನಿಸಿದ ಆ ಪೈಲಟ್ ಗಳ ಎದೆ ಗುಂಡಿಗೆ!...

ಜಪಾನ್ ಡಿಫೆನ್ಸ್ ಹೆಲಿಕಾಪ್ಟರ್ ಅಪಘಾತಕ್ಕೀಡಾದ ವಿಮಾನವನ್ನು ಪತ್ತೆ ಮಾಡೇ ಬಿಡುತ್ತದೆ. ಕ್ಯಾಪ್ಟನ್ ಸುಜುವೊಮೋರಿಯಾ ರಾತ್ರಿ ಇಡೀ ಸರ್ಚ್ ಮಾಡಿ ಕಡೆಗೂ ವಿಮಾನ ಪತ್ತೆ ಮಾಡುತ್ತಾರೆ. "ಸಿಕ್ಕಾಪಟ್ಟೆ ಹೊಗೆ, ಬೆಂಕಿಯ ಕೆನ್ನಾಲಗೆ ಎಲ್ಲೆಡೆ.. ಯಾರೂ ಬದುಕುಳಿಯುವ ಸಾಧ್ಯತೆಯೇ ಇಲ್ಲ" ಎಂದು ಮೆಸೇಜ್ ಕೊಡುತ್ತಾರೆ... 68 ಕಿಮೀ ದೂರದಲ್ಲಿದ್ದ  ಘಟನಾ ಸ್ಥಳಕ್ಕೆ ಲಗುಬಗೆಯಿಂದ ರಕ್ಷಣಾ ಸಿಬ್ಬಂದಿ ತಲುಪುವಷ್ಟೊತ್ತಿಗೆ 14 ಗಂಟೆಯಾಗಿತ್ತು ಅಪಘಾತ ಸಂಭವಿಸಿ...  ಧಗ ಧಗ ಉರಿಯುತ್ತಿದ್ದ ಅವಶೇಷಗಳ ನಡುವೆ ಎಲ್ಲೋ ಒಂದಷ್ಟು ಜೀವಗಳು ಇನ್ನೂ ಮಿಸುಕಾಡುತ್ತಲೇ ಇದ್ದವು. ಸ್ಟ್ಯಾಫ್ ಅಟೆಂಡೆಂಟ್  ಯುಮಿ ಒಚಿಯಾ ಇನ್ನೂ ಜೀವ ಹಿಡಕೊಂಡು ಅವಶೇಷಗಳ ಸಮೀಪ ಮಲಗಿದ್ದಾಳೆ. ಅನ್ ಕಾನ್ಶಿಯಸ್ ಆಗಿ.  ಹಾಗೇ ಹುಡುಕುತ್ತ ಹೊರಟಂತೆ 12 ವರ್ಷದ ಬಾಲಕಿಯೊಬ್ಬಳೂ ಜೀವಂತ ಸಿಗುತ್ತಾಳೆ. ಒಬ್ಬ ಹೆಂಗಸು ಮತ್ತು ಆಕೆಯ ಎಂಟು ವರ್ಷದ ಮಗಳು ಕೂಡ ಬದುಕುಳಿದಿದ್ದಾರೆ!.. ಹೀಗೆ  ಒಟ್ಟು ಬದುಕುಳಿದವರು ನಾಲ್ಕೇ ಮಂದಿ... ಅದೂ ಹೆಣ್ಣು ಜೀವಗಳು!...

ಇಷ್ಟೆಲ್ಲವನ್ನು ರೀಅರೇಂಜ್ ಮಾಡಿದ ವಿಡಿಯೊ ಮತ್ತು  ತಜ್ಞರ ಕಾಮೆಂಟ್ರಿ, ತಾಂತ್ರಿಕ ಮಾಹಿತಿಗಳು ಎಲ್ಲ ಘಟನೆ ಕಣ್ಮುಂದೆ ನಡೆದಂತೆ!..
ಸಾವನ್ನು ಕೂಡ ದೊಡ್ಡ ಸರಕಾಗಿಸುವ ಇಂಥ ತಂತ್ರಜ್ಞಾನ ಮಾರುಕಟ್ಟೆ ಮತ್ತು ಅದನ್ನು ಮಾಸ್ ಗೆ ತಲುಪಿಸುವ ಈ ಪರಿಯ ಮಾಧ್ಯಮ... ಓಹ್ ಗಾಡ್!
ಈ ಬದುಕು ಅದೆಷ್ಟು .ಸರಳವೂ, ಸಹಜವೂ ಆಗಿದೆ... ನಾವ್ಯಾಕೆ ಹೀಗೆ ಹಾರಾಟದಲ್ಲೇ ಸುಖವನ್ನರಸುತ್ತ ಹೊರಟಿದ್ದೇವೋ? ಭೂಮಿಯೂ ಅಲ್ಲದ, ಆಕಾಶವೂ ಅಲ್ಲದ ನಡುವೆಲ್ಲೋ ಅಂತರಪಿಶಾಚಿಯಂತೆ ಹೀಗೆ ಕ್ಷಣಾರ್ಧದ ಅವಘಡಕ್ಕೆ ಸುಟ್ಟು ಹೋಗುತ್ತೇವೋ!...

ಫಯಾಜ್ ಅಹ್ಮದ್ ಫಯಾಜ್ ಸಾಲುಗಳು ನೆನಪಾಗುತ್ತವೆ...
ಕಾಲದ ಅನಂತತೆಯ ಸ್ಲೇಟಿನ ಮೇಲೆ
ಬರೆದ ಶಾಶ್ವತ ಸತ್ಯ ಶಾಸನ..
ನಿಜವಾಗುವುದನ್ನು ನಾವು ಕಾಣುತ್ತಲೇ ಇರುತ್ತೇವೆ...

ಅಪಘಾತಕ್ಕೀಡಾಗುಮ ಮುನ್ನ ಕಾಕ್ಪಿಟ್ ನಿಂದ ಬಂದ ಕೆಲ ಕೊನೆಯ ನುಡಿಗಳ ಸಂಗ್ರಹವಿದು:
airomexico- oh! this cant be
Vnokovo Airlines- Mountains!!!
American Airlines- Where are we?
USair- Hang on, what the hell is this?...
American Int Airlines- There it goes, there it goes, oh no!!!
United Airlines- Oh, God... flip!!!
USair/Skywest- Okay, we just had a seven thirty-seven land and blow up
United Airlines- What the hell was that?- I dont know
Airfrance- Watsh out for these pylons ahead, eh, see them?-Yah, yeah, dont worry
Atlantic Airlines- Amy, I love you
Alaska Airlines- Ah, here we go
Flash Air- See what the aircraft did!
British Air- I have nothing in front of me
American Airlines- What the hell are we into, we're stuck in it!

Vladistokavia- Thats all guys! Fuck!
China Airlines- Oh my God!!! Oh my God!!!
Valujet- Uh, smoke in the cockpit... Smoke in the cabin
United Airlines- Are you guys ready?
Vasp- what? There's what? Some hills, isn't there?
Air Florida- Larry, we're going down, Larry...- I know!!
Air New Zealand- Actually, these conditions dont lokk very good at all, do they?
Alatalia- So he gave us indications, we thought we were to the left

Pacific Soutwest- Ma I love you
Southern Airways- We're going to do right here

Pan Am/KLM- There he is... Look at him! God damn that son-of-bitch is coing! Get off!
Eastern airlines- Hey, whats happening here?
Air Canada- Pete, sorry...
Ariana Afghan Airlines- We're finished

Pacific Airlines- Skippe's shot! We've been shot, I was trying to help...
Aloha airlines- We cannot communicate with the flight attendants
Indonesia Airlines- Aaaa Allah akbar

http://www.metacafe.com/w/68951/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. *

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್ದಾನೆ. ಸಹಜ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ