ವಿಷಯಕ್ಕೆ ಹೋಗಿ

ಯಾವುದು ಮುಖ್ಯ?

ಸಾಮೂಹಿಕ ವಿವಾಹ, ಸುಷ್ಮಾರಿಂದ ವರಮಹಾಲಕ್ಷ್ಮಿ ವೃತ, ವರಸಿದ್ಧಿ ವಿನಾಯಕ ಪೂಜೆ, ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆ ಉದ್ಘಾಟನೆ... ಇವನ್ನೇ ಅಭಿವೃದ್ಧಿ ಅನ್ನುವವರಿಗೆ ಏನು ಹೇಳಬೇಕು?
'ಬಳ್ಳಾರಿ ಕೆ ಶೋಲೆ' ಬರಹಕ್ಕೆ ಬಂದ ಒಂದು ಪ್ರತಿಕ್ರಿಯೆ ನೋಡಿದೆ. ಅದರಲ್ಲಿ ಮೇಲಿನ ಮೂರ್ನಾಲ್ಕು ಕಾರ್ಯಗಳನ್ನು ಅಭಿವೃದ್ಧಿ ಎಂದು ಗ್ರಹಿಸಿ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತು ಸಿದ್ದರಾಮಯ್ಯ ನಡೆಸಿದ ನಾಡರಕ್ಷಣೆ ನಡಿಗೆಯಲ್ಲಿ ಸೇರಿದ ಜನತೆಯನ್ನು 'ಬಾಡಿಗೆ ಜನಸಂಪತ್ತು' ಎಂದೆಲ್ಲ ಅರ್ಥೈಸಿದ್ದಾರೆ... ಬಳ್ಳಾರಿ ಜನಕ್ಕೆ ಸುಷ್ಮಾ  ಮುಖ್ಯವೋ, ಸಿದ್ದರಾಮಯ್ಯ ಬಾಡಿಗೆ ಜನಸಂಪತ್ತು ಪ್ರದರ್ಶನ ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ... ತುಂಬ ಹತಾಶ ಮನೋಭಾವನೆ ಇದು.

ಸಹಮಾನವರನ್ನು ತಾರತಮ್ಯದಿಂದ ಕಾಣುವವರೆಲ್ಲ ದೈವದ ಮುಂದೆ ಕೂರುವ ಅರ್ಹತೆ ನಮಗಷ್ಟೇ ಎನ್ನುವಂತೆ ಕೂತು ಭಜನೆ, ಪೂಜೆ ಮಾಡುವುದು ದೊಡ್ಡ ಭಕ್ತಿ ಏನಲ್ಲ. ಅದು ಸಾಮೂಹಿಕ ಭಕ್ತಿ ಮಾರ್ಗವೂ ಅಲ್ಲ. ಹಿಂದೆ ಗಾಂಧೀಜಿ ಮಾಡುತ್ತಿದ್ದ ರಘುಪತಿ ರಾಘವ ರಾಜಾರಾಂ... ಭಜನೆಗೂ ಅವರಿಗಿಂತ ಭಿನ್ನ ಮಾರ್ಗದಲ್ಲಿ ಸ್ವಾತಂತ್ರ್ಯ ಚಳವಳಿ ಕಟ್ಟಬೇಕೆಂದುಕೊಂಡಿದ್ದವರು 'ಬರಿಯ ಭಜನೆಯಿಂದ ದೇಶ ಕಟ್ಟೋದಕ್ಕಾಗಲ್ಲ...' ಎಂದು ಟೀಕಿಸುತ್ತಿದ್ದರೆನ್ನುವ ವಿಷಯ  ನೆನಪಾಗುತ್ತಿದೆ. ದೇಶಪ್ರೇಮ/ಭಕ್ತಿ ಎಂದರೆ ಭಜನೆ ಅಲ್ಲ... (ಪುರೋಹಿತಷಾಹಿಗಳು ಎಲ್ಲದರ ಭಜನೆ ಮಾಡುತ್ತಾರೆ. ದೇಶಕ್ಕಾಗಿ ಗನ್ ಹಿಡಿದು ಗಡಿ ಕಾಯಲಿ ನೋಡೋಣ. ಕಾರ್ಗಿಲ್, ಭಾರತ-ಪಾಕ್... ಯುದ್ಧಗಳಲ್ಲಿ ಸಾಯುವವರೆಲ್ಲ ಯಾರು? ಹೆಣಗಳ ಲೆಕ್ಕ ಇದ್ದರೆ ಯಾರ ಪಾಲೆಷ್ಟಿದೆ ಚೆಕ್ ಮಾಡಿ ನೋಡಿ.)

ಸಹಮಾನವರನ್ನು ಹರಿಜನ, ಗಿರಿಜನ, ದಲಿತ ಎಂದೆಲ್ಲ ವರ್ಗೀಕರಿಸಿ ಇಟ್ಟೋರು ಯಾರು? ಬರಿಯ ಸಾಂತ್ವನದ ಮಾತು, ಸಹಾಯಗಳಿಂದ ಆ ಜನಸಮುದಾಯದಲ್ಲಿ ಕನಿಷ್ಠ ರಿಲೀಫ್ ಚಟ ರೂಢಿಸಿ ಅದನ್ನೇ ರೋಗವಾಗಿ ಬೆಳೆಸಿದ್ದು ಯಾರು? (ವಾಜಪೇಯಿ, ಸುಷ್ಮಾ, ಅನಂತಕುಮಾರ್... ಅವರಂಥ ಪರಿವಾರ ಅಲ್ಲವೇನು?) ಹೀಗೆ ಇಡೀ ಸಮಾಜವನ್ನು ಖಾಯಂ ರೋಗಗ್ರಸ್ಥವಾಗಿಸಿಟ್ಟು ಎಲ್ಲೆಂದರಲ್ಲಿ ಮಾಮೂಲಿ ದೈಹಿಕ ರೋಗಗಳಿಗೆ ಆಸ್ಪತ್ರೆಗಳನ್ನು ತೆರೆದಿಡುತ್ತ ಅದನ್ನೇ ಅಭಿವೃದ್ಧಿ ಅನ್ನೋದು ಎಂಥ ವಿಪರ್ಯಾಸ! ಮಲೇರಿಯಾ, ಫೈಲೇರಿಯಾ, ಬ್ಯಾಕ್ಟೀರಿಯಾ, ಹೃದ್ರೋಗ... ಗಳಿಗೆ ಮದ್ದು ಕೊಡಬಲ್ಲ ಆಸ್ಪತ್ರೆಗಳು ಸಮಾಜದಲ್ಲಿನ ತಾರತಮ್ಯ ರೋಗಕ್ಕೆ ಮದ್ದು ಕೊಡುತ್ತವೇನು?

ಆರೋಗ್ಯಕರ ಸಮಾಜ, ನಾಡು ಊರ ತುಂಬ ಆಸ್ಪತ್ರೆಗಳನ್ನು ಕಟ್ಟೋದರಿಂದ ರೂಪುಗೊಳ್ಳುತ್ತವೇನು?

ನಿರಾಶ್ರಿತರು, ಭಿಕ್ಷುಕರು ಸತ್ತ ಏಟಿಗೆ ಸುಧಾಕರ್ ಅವರಂಥವರು ಖಾತೆ ಕಳಕೊಳ್ಳುತ್ತಾರೆ. ಇಡೀ ರಾಜ್ಯದಲ್ಲಿ ಡೆಂಗ್ಯು, ಚಿಕುನ್ ಗುನ್ಯಾ, ಎಚ್ 1 ಎನ್ 1... ಹೀಗೆ ಹಲವಾರು ರೋಗಗಳಿಂದ ಸಾಮಾನ್ಯ ಜನರೂ ಸಾಯುತ್ತಲೇ ಇದ್ದಾರೆ. ಆರೋಗ್ಯ ಸಚಿವರ ಖಾತೆಯನ್ನು ಬದಲಾಯಿಸುವ ತಾಕತ್ತು ಸಿಎಂ ಅವರಿಗಿದೆಯಾ?
ಸಿದ್ದರಾಮಯ್ಯ ನಾಡಿನ ಜನತೆಯ ಆಕ್ರೋಶ ಪ್ರತಿನಿಧಿಸಿದ್ದರಿಂದಲೇ ಅಷ್ಟೊಂದು ಲಕ್ಷ ಜನ ಸ್ಪಂದಿಸಿದರು.  ಅದನ್ನು ಬಾಡಿಗೆ ಜನಸಂಪತ್ತು ಅನ್ನೋದು ಸರ್ಕಾರಕ್ಕೆ ಸ್ವಾಮಿನಿಷ್ಠ ಬುದ್ಧಿಯನ್ನಷ್ಟೇ ಪ್ರದರ್ಶಿಸುವ ಜನರಿಗೆ ಶೋಭಿಸುವಂಥ ಮಾತಾಗುತ್ತದೆ. ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ಇದೆಲ್ಲ ಇತ್ಯರ್ಥ ಮಾಡಿಕೊಳ್ಳಬೇಕಾಗಿತ್ತು ಹೀಗೆ ಬೀದಿಗೇ ಬರಬೇಕಾಗಿರಲಿಲ್ಲ ಎನ್ನಬಹುದೇನೋ. ಆದರೆ, ಹಾಗೆ ಜನರ ಆಕ್ರೋಶವನ್ನು ಸಾರ್ವಜನಿಕವಾಗಿ ಸಂಘಟಿಸುವುದು ಒಂದು ನೈತಿಕ ರಾಜಕೀಯ ಚಟುವಟಿಕೆಯೇ.

ಸುಷ್ಮಾ ಈ ಬಹುಸಂಸ್ಕೃತಿ ದೇಶದ ಸಂಸತ್ತಿನ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕಿ. ಆಕೆ ಬರಿಯ ಹಿಂದೂಗಳ ನಾಯಕಿಯಾಗಿ ವರ್ತಿಸೋದಲ್ಲ. ವರಮಹಾಲಕ್ಷ್ಮಿ ವೃತ ಮಾಡುವುದು ಏನನ್ನು ಸೂಚಿಸುತ್ತದೆ?
ಅದೇ ಸುಷ್ಮಾ ಕ್ರಿಸ್ ಮಸ್ ಆಚರಿಸ್ತಾರಾ? ಮಾರಮ್ಮ, ಮಾರಿಯಮ್ಮ, ಕರಗ ಮಹೋತ್ಸವದಂಥ ಹಿಂದುಳಿದವರ ಜಾತ್ರೆ, ಕುರಿ, ಕೋಣ ಬಲಿಯಂಥ ಆಚರಣೆಗಳಲ್ಲಿ ಸಾಮೂಹಿಕವಾಗಿ ಪಾಲ್ಗೊಳ್ತಾರಾ? ಇವರೂ ಇಂಡಿಯನ್ನರೇ ಅಲ್ಲವೇನು?ಇಂಡಿಯಾ ದೇಶದ ಈ ಜನರ ನಂಬಿಕೆ, ಆಚರಣೆಗಳೂ ವಿರೋಧ ಪಕ್ಷದ ನಾಯಕರಾದವರಿಗೆ ಮುಖ್ಯವಾಗಬೇಕು.
ಸುಷ್ಮಾ ವರಮಹಾಲಕ್ಷ್ಮಿ ಪೂಜೆ ಮುಖ್ಯವೋ, ಬಳ್ಳಾರಿ ಗಣಿ ಮುಖ್ಯವೋ, ಸಿದ್ದರಾಮಯ್ಯ ಆಶಯ ಮುಖ್ಯವೋ ಇದನ್ನು ಬಳ್ಳಾರಿ ಜನತೆ ಅಷ್ಟೇ ಅಲ್ಲ ಇಡೀ ರಾಜ್ಯದ ಜನತೆ ನಿರ್ಧರಿಸಬೇಕು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...