ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆ ಕನಸಿನ ಬಣ್ಣಗಳು... ಹಾಲ್ಕುರಿಕೆ ಥಿಯೇಟರ್ ಮೂಡಿಸಿದ ಅದ್ಭುತ ರಂಗಹಾದಿ

ಥಿಯೇಟರ್ ಆಫ್ ಎಮೋಷನ್ಸ್... ಬದುಕು ತುಂಬ ಸಂಕೀರ್ಣತೆಗಳಿಂದ ಕೂಡಿರುವಂಥದು. ಯಾವುದೂ ಅಷ್ಟು ಸರಳವಲ್ಲ. ಹಾಗೆ ನೋಡಿದರೆ ಮನುಷ್ಯ ಪ್ರೀತಿ ಮತ್ತು ಒಟ್ಟಾರೆಯಾಗಿ ಬದುಕು ಅತ್ಯಂತ ಸರಳ ಹಾಗೂ ಸಹಜತೆಯಿಂದ ಕೂಡಿರಬೇಕಿತ್ತು. ಹಾಗಾಗುತ್ತಿಲ್ಲ. ಬದುಕು ಇತ್ತೀಚೆಗಂತೂ ತುಂಬ ಸಂಕೀರ್ಣಗೊಳ್ಳುತ್ತ ಸಾಗಿದೆ. ಅದು ಮುಂಚಿನ ಸಹಜ ಸಂಭ್ರಮಗಳಿಂದ ದೂರವಾಗಿ, ಮೈಗೂಡಿಸಿಕೊಂಡ ಚಟ ಮತ್ತು ಖಯಾಲಿಗಳಿಂದ ನರಳುತ್ತಿದೆ.  ಮಟಿರಿಯಲಿಸ್ಟಿಕ್ ಜಗತ್ತು ವಸ್ತುಗಳಲ್ಲಿ ಸುಖವನ್ನು ತೋರಿಸುತ್ತಿದೆ. ಅದನ್ನು ಕೊಂಡುಕೊಳ್ಳುವುದಕ್ಕೇ ನಾವೆಲ್ಲ ಇಷ್ಟು ದುಡಿಯೋದು ಮತ್ತು ಸಂಪಾದಿಸೋದು ಎಂದು ಜಾಹಿರಾತುವಿನ ಮೂಲಕ, ಸೀರಿಯಲ್, ಸಿನಿಮಾ ಮೂಲಕ ಹೇಳುತ್ತಿದೆ. ನಾವದನ್ನು ನಂಬಿ ಕೂತಿದ್ದೇವೆ. ಹೆಚ್ಚು ಸಂಪಾದನೆ ಅಂದರೆ ಹೆಚ್ಚೆಚ್ಚು ಚಾಯ್ಸ್! ವಸ್ತು ಹೊಂದುವುದಕ್ಕೆ ಚಾಯ್ಸ್ ಹೇಗೋ ಸುಖಕ್ಕೂ ವಿವಿಧ ನಮೂನೆಗಳು... ಹಣ ಎಲ್ಲವನ್ನು ತಂದುಕೊಡಲ್ಲ ಎಂದು ನಾವೆಲ್ಲ ಹೇಳಿಕೊಳ್ಳುತ್ತಿದ್ದೆವು. ಆದರೆ, ಇಂದು ಹಣ ಎಲ್ಲವನ್ನು ಸಾಧ್ಯವಾಗಿಸುತ್ತಿದೆಯಲ್ಲ! ಸೆಕ್ಸ್ ಕೂಡ ಎರಡು ಆರ್ಗನ್ ನಡುವಿನ ಸಂಬಂಧ, ಎರಡೂ ಲಿಂಗಗಳಿಗೆ ಪರಸ್ಪರ ಕೊಡುಕೊಳ್ಳುವಿಕೆ ಮಾತ್ರ ಮುಖ್ಯವಾಗಿದೆ. ಅದು  ವಿಜಾತಿ ಮತ್ತು ಸಜಾತಿ ಎರಡೂ ಆದೀತು. ಅದೂ ಸಿಕ್ಕದಿದ್ದರೆ ನೇರವಾಗಿ ನಿಮ್ಮದೇ ಒಂದನ್ನು ಸಿದ್ಧಪಡಿಸಿಕೊಂಡರಾಯ್ತು! ಇಷ್ಟು ಸಿಂಪಲ್ ಆಗಿದೆ ಸುಖದ ಕಲ್ಪನೆ! ದೇಹ ಸಂಬಂಧ ಮತ್ತು...

ಯಡಿಯೂರಪ್ಪ ಮತ್ತು 'ಮ್ಯಾಕ್ ಬೆತ್'

ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಕಥೆ ಮ್ಯಾಕ್ ಬೆತ್ ದುರಂತ ನಾಟಕದಂತೆ ಸಾಗುತ್ತಿದೆ। ಶೇಕಸ್ಪಿಯರ್ ರಾಜಕೀಯ ದುರಂತ ನಾಟಕಗಳಲ್ಲಿ ತುಂಬ ಮಹತ್ವದ ನಾಟಕ ಮ್ಯಾಕ್ ಬೆತ್। ಶೂರ, ಧೀರ, ದಿಟ್ಟನೂ ಆದ ಮ್ಯಾಕ್ ಬೆತ್ ಹೇಗೆ ದುರಾಸೆಗೆ ಬಿದ್ದು ರಾಜಕಾರಣದ ಅಹಮಿಕೆಯಿಂದ ಪತನವಾಗುತ್ತಾನೆ ಎನ್ನುವುದು ಕಥಾ ಹಂದರ. ಅದರ ಒಳಸುಳಿಗಳೆಲ್ಲ ಮನುಷ್ಯ ದುರಂತವನ್ನು ಹೇಳುತ್ತವೆ। ಅದು ರಾಜಕೀಯ ಅಧಿಕಾರ, ಶಕ್ತಿ, ಯುಕ್ತಿಯ ದುರಂತ। ಒಟ್ಟು ದುರಾಸೆಯ ವ್ಯಕ್ತಿಗಳ ದುರಂತ ... ಮ್ಯಾಕ್ ಬೆತ್ ನಾಟಕ ಸಂಕ್ಷಿಪ್ತವಾಗಿ ಹೀಗಿದೆ: ಸ್ಕಾಟ್ಲೆಂಡಿನ ರಾಜ ಡಂಕಣನನ್ನು ಕೊಲೆ ಮಾಡಿ ಮ್ಯಾಕ್ ಬೆತ್ ರಾಜನಾಗುತ್ತಾನೆ। ವೀರ, ಸಾಹಸಿ ಮತ್ತು ಅತ್ಯಂತ ಸ್ವಾಮಿನಿಷ್ಠನೂ ಆದ ಮ್ಯಾಕ್ ಬೆತ್ ಅತಿಮಾನುಷ ಶಕ್ತಿಗಳ ದುರಾಸೆಗೆ ಬಲಿಯಾಗುತ್ತಾನೆ। ಧೀರ, ದಿಟ್ಟತನ ಬಿಟ್ಟು ಸಂಚು, ವಂಚನೆ, ಕ್ರೌರ್ಯಗಳಿಗೆ ಮನಸ್ಸುಕೊಟ್ಟು ನೀಚನಾಗುತ್ತಾನೆ। ಅವನ ಹೆಂಡತಿ ಇವನನ್ನು ಅತಿವ ಪ್ರೀತಿಸುವವಳು। ರಾಜರ ರಾಜನಾಗಲೆಂಬ ಸಹಜ ಬಯಕೆ ಹೊಂದಿದವಳು। ತಮ್ಮಿಬ್ಬರ ಸಂಚಿನಿಂದ ನಡೆದ ಕೊಲೆಗಳ ಸರಮಾಲೆಯಿಂದ ಕಂಗಾಲಾಗಿ ಮನೋರೋಗಿಯಾಗಿ ಮ್ಯಾಕ್ ಬೆತ್ ಹೆಂಡತಿ ಸಾಯುತ್ತಾಳೆ। ಮ್ಯಾಕ್ ಬೆತ್ ಯಕ್ಷಿಣಿಯರ ಚೆಲ್ಲಾಟ ಅರ್ಥಮಾಡಿಕೊಳ್ಳದೇ ಹೋಗುತ್ತಾನೆ। ಅದು ಅರ್ಥವಾಗುವಷ್ಟೊತ್ತಿಗೆ ಎಲ್ಲ ಕೈಮೀರಿರುತ್ತದೆ। ಮ್ಯಾಕ್ ಡೆಫ್ ನಿಂದ ಮ್ಯಾಕ್ ಬೆತ್ ಕೊಲೆ ನಡೆಯುತ್ತದೆ। ಡಂಕಣನ ಮಗ ಮಾಲ್ಕಂ ರಾಜನಾಗುತ್ತಾನೆ। ಮ್ಯಾಕ್ ಬೆತ್ ಕಥೆ...

ಪರ್ಯಾಯ: ಗೌಡರತ್ತ ಎಲ್ಲರ ಚಿತ್ತ!

ಹಣ ಮತ್ತು ಜಾತಿ, ಇವೆರಡಕ್ಕೇ ರಾಜ್ಯದ ಹಣೆಬರಹ ಬರೆಯುವ ಶಕ್ತಿ ಇದೆ! ಎಂಥಾ ದುರವಸ್ಥೆ ಪ್ರಜಾತಂತ್ರದ್ದು? ಹಣ ಬಲದಿಂದ ಗಣಿಧಣಿಗಳು ಏನು ಬೇಕಾದರೂ ಮಾಡಬಲ್ಲ ತಾಕತ್ತು ಹೊಂದಿದ್ದಾರೆ। ಜಾತಿ ಬಲ ಒಂದರಿಂದಲೇ ರಾಜ್ಯ ನಿಯಂತ್ರಿಸಬಲ್ಲೆ ಎಂದು ಯಡಿಯೂರಪ್ಪ ಕೂತಂತಿದೆ। ಎರಡೂ ಅತಿರೇಕಕ್ಕೆ ಏನು ಹೇಳುವುದು? ಪಕ್ಷಗಳಲ್ಲಿ ಅಥವಾ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಸಹಜವೇ। ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ರಚನಾತ್ಮಕ ಕಾರ್ಯಕ್ಕೆ ಸಂಘಟಿತರಾಗುವುದು ಯಾವುದೇ ಸಂಘಟನೆಗೆ ಅನಿವಾರ್ಯದ ಸೌಹಾರ್ದತೆ। ಕನಿಷ್ಠ ಮಟ್ಟದ ಸೌಹಾರ್ದತೆ ಸಾಧ್ಯವಾಗದಂಥ ಸ್ಥಿತಿಗೆ ಬಂದಾಗ ಸಂಧಾನ, ರಾಜಿ ಮಾರ್ಗ ಹಿಡಿಯುವುದು ಹಾಸ್ಯಾಸ್ಪದವಾಗುತ್ತದೆ। ಪರಸ್ಪರ ಆತಂಕ ಮತ್ತು ಅಭದ್ರತೆಯ ನಡುವೆ ಕೂಡಿ ಬಾಳೋದು ದುಸ್ತರವೇ। ಹಾಗೆ ಅಸಮಾಧಾನಗಳ ನಿಗಿ ನಿಗಿ ಕೆಂಡಗಳನ್ನು ಸೆರಗಿನಲ್ಲಿಟ್ಟಕೊಂಡು ಬಹುದೂರ ಸಾಗಲು ಸಾಧ್ಯವೇ ಆಗುವುದಿಲ್ಲ। ಎಲ್ಲಿ ಲಾಭವಿದೆಯೋ ಅಲ್ಲಿ ಸಂಘರ್ಷ ಇದ್ದದ್ದೇ। ಆರಂಭದಿಂದಲೂ ಕೇವಲ ವಸೀಲಿಬಾಜಿ, ಸಂಖ್ಯೆ ಹೊಂದಾಣಿಕೆಗೆ ಖರೀದಿ ತಂತ್ರ ಬಳಕೆ, ಕಡೆಗೆ ಸ್ಥಾನ ಭದ್ರ ಮಾಡಿಕೊಳ್ಳಲು ಆಪರೇಷನ್ ಕಮಲ್ ಎನ್ನುವ ಕೆಟ್ಟ ರಾಜಕೀಯ ಸಂಪ್ರದಾಯಕ್ಕೆ ಶರಣು... ಇಂಥ ಅತಿರೇಕದ ವರ್ತನೆಯಿಂದ ಸುದ್ದಿಯಲ್ಲೇ ಇದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇದೆಲ್ಲ ನಿರೀಕ್ಷಿತ ಬೆಳವಣಿಗೆಯೇ। ಆಪರೇಷನ್ ಕಮಲ್ ಯಶಸ್ಸಿನ ಅಮಲಿನಲ್ಲಿ ಯಡಿಯೂರಪ್ಪ ಪಾವರ್ ಫುಲ್ ನಾಯಕರಾಗಲು ಯತ್ನಿಸಿದ...

ಸೊಳ್ಳೆ ಮತ್ತು ಹಿಂಸೆ

ರಾತ್ರಿಯೆಲ್ಲ ಕಿವಿಯ ಬಳಿ ಗುಂಯ್ ಎನ್ನುತ್ತ, ನನ್ನ ನಿದ್ರೆ ಮತ್ತು ನೆಮ್ಮದಿಗೆ ಭಂಗ ತರುವ ಸೊಳ್ಳೆಯೊಂದು ತುಂಬ ಕಿರಿ ಕಿರಿ ನೀಡುತ್ತಿತ್ತು. ಮೂಗಿನ ತುಂದಿ ಕಚ್ಚುತ್ತ, ಕಿವಿಯ ಮೆದುತೊಗಲು ಚುಚ್ಚಿ ಹಿಂಸೆ ಕೊಡುತ್ತ ನನ್ನ ಆಟ ಆಡಿಸುತ್ತಿತ್ತು. ಅದನ್ನು ಮುಗಿಸುವುದು ಸೂಕ್ತ ಎಂದು ಪ್ರತಿಹಿಂಸೆಗೆ ಸಿದ್ದವಾದರೆ ಸೊಳ್ಳೆ ಗಾಂಧಿ ತಾತನ ಮೂಗಿನ ಮೇಲೆ ಕೂತುಬಿಡೋದಾ...!

ಜೋಗುಳ ೨೦೦; ತಾಯ್ತನದ ಸಂಭ್ರಮ ಮತ್ತು ಇತರ ನೆನಪುಗಳು

ಜೋಗುಳ... ತಾಯ ಎದೆ ಹಾಡು. ಪ್ರತಿಯೊಬ್ಬನ ಮೊತ್ತ ಮೊದಲ ಮಹಾಕಾವ್ಯ. ಈ ಜಗಕ್ಕೆ ಕಣ್ಣು ತೆರಕೊಳ್ಳುವ ಮುನ್ನ, ಕಿವಿಗೆ ಎಲ್ಲ ಶಬುದಗಳ ಅರ್ಥ ಹೊಳೆಯುವ ಮುನ್ನ ಕೇಳಿಸಿಕೊಳ್ಳುವ ಜೀವಸಂಗೀತವದು. ಅವಳೆದೆಯಾಳದ ಪ್ರೀತಿ ಹಾಡುಗಳಾಗಿ ಕಂದನ ಭಾವಕೋಶದ ಪ್ರತಿ ಜೀವಕಣಕ್ಕೂ ತಾಗುವ ಪರಿಯೇ ಅನನ್ಯ. ನಾವು ಮನುಷ್ಯ ಜೀವವಾಗುವ ಪ್ರಕ್ರಿಯೆಯ ಮೊದಲ ಹಂತವದು. ತಾಯಿಯಾಗುವ ಬಹುದೊಡ್ಡ ಸೌಭಾಗ್ಯ ಹೆಣ್ಣಿಗೆ ಮಾತ್ರ! ಮತ್ತೊಂದು ಜೀವಕ್ಕೆ ಜನ್ಮ ಕೊಡುವ ಸೃಷ್ಟಿಯ ಲೀಲೆಗೆ ಹೆಣ್ಣಿನ ಒಡಲೇ ಬೇಕು! ಪುರುಷಸಿಂಹ ಎನಿಸಿಕೊಳ್ಳುವ ಗಂಡು ಅಪಾರ ಹಣ, ಐಶ್ವರ್ಯ, ಸಂಪತ್ತನ್ನು ಗಳಿಸಬಹುದು... ತನ್ನ ಅಧಿಕಾರದ ಧಿಮಾಕಿನಲ್ಲಿ ಹೂಂಕರಿಸಬಹುದು, ಜಗತ್ತನ್ನು ಗೆಲ್ಲುವ ಸಾಹಸಕ್ಕೂ ಇಳಿಯಬಹುದು, ಪರಾಕ್ರಮಿಯಂತೆ ಮೀಸೆ ತಿರುವಿ, ಸೆಡ್ಡು ಹೊಡೆದು ಈ ಭೂಮಂಡಲವನ್ನೇ ತಿರುಗಿಸಿಡಲೂಬಹುದೇನೋ! (?) ಆದರೆ, ಬಡ್ಡೀಮಗ ತಿಪ್ಪರಲಾಗ ಹಾಕಿದರೂ ತನ್ನೊಡಲಲ್ಲಿ ಒಂದೇ ಒಂದು ಜೀವಕುಡಿಯನ್ನು ಬೆಳೆಸಲಾರ... ಅದೇನಿದ್ದರೂ ಹೆಣ್ಣಿಗೆ ಮಾತ್ರ ಈ ಸೌಭಾಗ್ಯ! ಅದಕ್ಕೇ ತಾಯಿ ಎಂದರೆ ದೈವ. ಮಾ ತುಝೇ ಸಲಾಂ... ಒಡಲೂ ಕೂಡ ಬಾಡಿಗೆ ಕೊಡಬಹುದಂತೆ! ಮೊದಲ ಸಲ ಕೇಳಿದಾಗ ಮೈ ಉರಿದುಹೋಗಿತ್ತು. ಮನೆ, ಜಾಗ, ವಸ್ತು... ಹೀಗೆ ಏನೆಲ್ಲ ಬಾಡಿಗೆ ಕೊಡಬಹುದು. ಆದರೆ, ಒಂದು ಜೀವಕ್ಕೆ ಜನ್ಮ ಕೊಡುವ ಹೆಣ್ಣಿನ ಒಡಲು ಕೂಡ ಬಾಡಿಗೆಗೆ ಕೊಡಬಹುದೇ!... ಮೊದಲ ಬಾರಿಗೆ ಇದನ್ನು ಕೇಳಿದಾಗ ಕ್ಷಣ ಹೊತ್ತು ದಂಗಾದೆ. ಇದರ ಆಳ, ಹರವು ಹ...

ಜಾತಿ ಆಧಾರಿತ ತಾರತಮ್ಯ: ಭಾರತಕ್ಕೆ ಸಮ್ಮತ ಸಿದ್ಧಾಂತ?

ಜಾತಿ ಆಧಾರಿತ ತಾರತಮ್ಯವನ್ನು ಮಾನವ ಹಕ್ಕು ಉಲ್ಲಂಘನೆ ಎಂದು ಪರಿಗಣಿಸುವ ಮಹತ್ವದ ಚಿಂತನೆ ಈಗ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವುದು ಮಹತ್ವದ ಬೆಳವಣಿಗೆ. ಮಾನವೀಯ ಮೌಲ್ಯಗಳ ದೃಷ್ಟಿಯಿಂದ ಇದೊಂದು ಅತ್ಯಂತ ಶ್ರೇಷ್ಠ ಹೆಜ್ಜೆ. ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಸಮ್ಮೇಳನ ಇಂಥದೊಂದು ದಿಟ್ಟ ಕ್ರಮಕ್ಕೆ ಯೋಚಿಸುತ್ತಿರುವುದು ಇಡೀ ವಿಶ್ವವನ್ನು ಆರೋಗ್ಯಕರ ಬದುಕಿನತ್ತ ಕೊಂಡೊಯ್ಯುವಂಥದು. ಹಿಂದೂ ರಾಷ್ಟ್ರವೆಂದು ಗುರುತಿಸಲಾಗುತ್ತಿರುವ ನೇಪಾಳ ಇದನ್ನು ಸ್ವಾಗತಿಸಿದೆ. ಸೆಪ್ಟೆಂಬರ್ 16ರಂದು ನಡೆದ ಸಮ್ಮೇಳನದ ಕಲಾಪದಲ್ಲಿ ನೇಪಾಳದ ಸಚಿವ ಜೀತ್ ಬಹಾದ್ದೂರ್ ದಾರ್ಜಿ ಗೌತಂ ಅವರು 'ಜಾತಿ ತಾರತಮ್ಯದ ವಿರುದ್ಧ ಹೋರಾಡಲು ವಿಶ್ವಸಂಸ್ಥೆ ಹಾಗೂ ಅಂಗ ಸಂಸ್ಥೆಗಳು ಮುಂದಿಟ್ಟಿರುವ ಇಂಥದೊಂದು ಮಹತ್ವದ ಕ್ರಮಕ್ಕೆ ನೇಪಾಳ ಸ್ವಾಗತಿಸುತ್ತದೆ' ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ತಮಿಳು ಮೂಲದ ನವನೀತಾ ಪಿಳ್ಳೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿಯಾಗಿ ನೇಪಾಳದ ಕ್ರಮವನ್ನು ಸ್ವಾಗತಿಸಿದ್ದಾರೆ. ಜಾತೀಯತೆಯಿಂದ ಜರ್ಜರಿತಗೊಂಡ ದೇಶವೊಂದರ ದಿಟ್ಟ ಹೆಜ್ಜೆ ಇದಾಗಿದೆ, ಉಳಿದ ದೇಶಗಳೂ ಇದನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ. ಇದಕ್ಕೆ ಮತ್ತಷ್ಟು ಬಲ ಬಂದಿದ್ದು ಸ್ವಿಡನ್ ವ್ಯಕ್ತಪಡಿಸಿದ ಬೆಂಬಲದಿಂದ. ಐರೋಪ್ಯ ರಾಷ್ಟ್ರಗಳು ಇದನ್ನು ಆದ್ಯತೆ ನೆಲೆಯಲ್ಲಿ ಪರಿಗಣಿಸಲಿವೆ ಎನ್ನುವ ಮೂಲಕ ಅದು ಯುರೋಪ್ ಬದಲಾವಣೆ...

ನಾವೆಷ್ಟು ನಾಮರ್ದಗಳಾಗಿದ್ದೇವೆ?

ನಮ್ಮೆಲ್ಲ ಕನಸು, ಆಶಯಗಳ ಪ್ರತೀಕವಾಗಬೇಕಿದ್ದ ನಾವೇ ಆಯ್ಕೆ ಮಾಡಿದ ಸರ್ಕಾರಗಳು 'ಸೆಟ್-ಅಪ್' ಕಲ್ಚರಿಗೆ ಸರಿದು ನಿಂತಿವೆ. ಒಂದು ನಿರ್ಧಿಷ್ಟ ಕೋಮು, ಕಲ್ಟ್, ಜಾತಿ, ಧರ್ಮಕ್ಕೆ ಸೇರಿದವರು ಒಂದು ಗ್ಯಾಂಗ್ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಹೆಸರಲ್ಲಿ ಬಲಿಷ್ಠ ಕೋಮುಗಳ ಸ್ವಯಂಘೋಷಿತ ರಾಜ್ಯ-ರಾಷ್ಟ್ರೀಯ ಲೀಡರ್ ಗಳು ಪವರ್ ಡೀಲರ್ ಗಳಾಗಿದ್ದಾರೆ. ಅವರನ್ನೆಲ್ಲಾ ನಾವು ಜನನಾಯಕರೆಂದು ನಂಬುತ್ತೇವೆ. ಬಾಟಾ ಬಾಟಿಯ ವ್ಯಾಪಾರಿ ಬುದ್ಧಿ ಇಂದಿನ ಪಾಲಿಟಿಕಲ್ ಕ್ವಾಲಿಫಿಕೇಷನ್ ಆಗಿಹೋಗಿದೆ. ಜಾತಿವಾರು ಲೆಕ್ಕಾಚಾರ, ಸಂಖ್ಯಾಬಲದ ಜೋಡಣೆಗೆ ಫ್ರಂಟ್ ಲೈನ್ ಲೀಡರ್ ಗಳು ಬ್ರೋಕರ್ ಕೆಲಸದಲ್ಲಿ ತೊಡಗಿದ್ದಾರೆ. ಧರ್ಮ ಎನ್ನುವುದು ಇವರು ತೊಡುವ ಹವಾಯಿ ಚಪ್ಪಲಿಗಿಂತ ಕಡೆಯಾಗಿ ಹೋಗಿದೆ. ಯೂಸ್ ಅಂಡ್ ಥ್ರೋ ವಸ್ತುವಾಗಿದೆ. ಧಾರ್ಮಿಕ ನಾಯಕರೆಲ್ಲ ತಮ್ಮ ಅನುಯಾಯಿಗಳನ್ನು ರಾಜಕಾರಣಿಗಳ ಗುಲಾಮರನ್ನಾಗಿ ಪರಿವರ್ತಿಸತೊಡಗಿದ್ದಾರೆ. ಹೀಗೆ ರಾಜಕಾರಣಿಗಳು ಮತ್ತು ಧಾರ್ಮಿಕ ನಾಯಕರ ನಡುವೆ ಒಡಂಬಡಿಕೆಗಳು ಯಾವ ಎಗ್ಗಿಲ್ಲದೆ ನಡೆಯುತ್ತಿವೆ. ಯಾವ ಆಶಾಭಾವದಿಂದ ಇದನ್ನೆಲ್ಲ ಸಹಿಸಿಕೊಂಡಿರಬೇಕೋ... ಇಂಥದೊಂದು ಸಾತ್ವಿಕ ಆಕ್ರೋಶ ಬಹುತೇಕ ಪ್ರಜ್ಞಾವಂತರಲ್ಲಿಯೂ ಮೂಡುತ್ತಿದೆ. ಮತಾಂತರ ವಿರೋಧಿಸುವ ಪಕ್ಷದ ಸರ್ಕಾರ ಪಕ್ಷಾಂತರವನ್ನು ಆಪರೇಷನ್ ಕಮಲ್ ಎನ್ನುವ ಸೋಗಿನಲ್ಲಿ ನಡೆಸುತ್ತಿದೆ. ಯಾವ ನೈತಿಕ ನೆಲೆಯಲ್ಲಿ ಇದನ್ನು ಸಮರ್ಥಿಸಿಕೊಳ್ಳುತ್ತೊ......

obama