ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಜನತಾ ಪರಿವಾರದ ಸಿದ್ದರಾಮಯ್ಯ ಈಗ ಕಾಂಗ್ರೆಸ್ ಸಿಎಂ...

ಸಿದ್ದರಾಮಯ್ಯ ಈಗ ಕಾಂಗ್ರೆಸ್ ಸಿಎಂ. ಹಿಂದುಳಿದ ವರ್ಗಕ್ಕೆ ಸೇರುವ ಗೌಡಕುರುಬ ಜನಾಂಗದಿಂದ ಉದಯಿಸಿದ ನಾಯಕ. ಜನತಾ ಪರಿವಾರ ಇವರ ರಾಜಕೀಯ ತಾಯಿ ಬೇರು. 1983ರಿಂದ 2006ರವರೆಗೆ  23 ವರ್ಷಗಳ ಕಾಲ ಪ್ರಭಲ ಕಾಂಗ್ರೆಸ್ ವಿರೋಧಿ ನೆಲೆಯಿಂದಲೇ ರಾಜಕೀಯದ ಕೆರಿಯರ್ ರೂಪಿಸಿಕೊಂಡು ಬಂದವರು.   ಪಕ್ಷದ ಉನ್ನತ ಪದಾಧಿಕಾರಿಯಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ (ಎರಡು ಬಾರಿ) ಅಧಿಕಾರದ ಎಲ್ಲ ಮೇಲ್ ಸ್ತರಗಳನ್ನು ಏರಿದ್ದು ಜನತಾ ಪರಿವಾರದಲ್ಲಿದ್ದಾಗಲೇ. ಆಗ ಬಾಕಿ ಉಳಿದದ್ದು ಮುಖ್ಯಮಂತ್ರಿ ಪಟ್ಟ. ಅದನ್ನು ಕಾಂಗ್ರೆಸ್ ನಲ್ಲಿದ್ದುಕೊಂಡು ಸಾಧ್ಯವಾಗಿಸಿಕೊಂಡಿದ್ದಾರೆ. ಸತ್ಯದ ಹೆಸರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ.  ಸತ್ಯವೆಂದರೆ ಮುಖ್ಯಮಂತ್ರಿ ಆಗುವ ಒಂದಂಶದ ಕಾರ್ಯಕ್ರಮ ಇಟ್ಟುಕೊಂಡೇ ಅವರು ಕಾಂಗ್ರೆಸ್ ಸೇರಿದ್ದು. ಅಲ್ಪ ಅವಧಿಯಲ್ಲೇ (7ವರ್ಷ) ಅದು ಸಾಕಾರಗೊಂಡಿದ್ದು ಗಮನಾರ್ಹ ಅಂಶ. ಇದನ್ನು ರಾಜಕೀಯ ಚತುರತೆ ಅನ್ನಬೇಕೋ, ಅದೃಷ್ಟ ಅನ್ನಬೇಕೋ, ಪಟ್ಟದ ಹೋರಾಟಗಾರನೊಬ್ಬನಿಗೆ (ಮುಖ್ಯಮಂತ್ರಿ ಪಟ್ಟಕ್ಕೆ) ಸಂದ ಜಯ ಅನ್ನಬೇಕೋ?... ಏನೇ ಭಾವಿಸಿಕೊಂಡರೂ ಸಿದ್ದರಾಮಯ್ಯ ದಕ್ಷ ಆಡಳಿತಗಾರ, ಮುಖ್ಯಮಂತ್ರಿ ಪಟ್ಟಕ್ಕೆ ಈ ಸಂದರ್ಭದ ಸೂಕ್ತ ಅಭ್ಯರ್ಥಿ ಎನ್ನುವುದು ಸತ್ಯ.  ಸಿದ್ದರಾಮಯ್ಯ 2006ರಿಂದ ಈಚೆಗಷ್ಟೇ ಪಕ್ಷ ಸೇರಿಕೊಂಡು, ಅತ್ಯಂತ ಕಡಿಮೆ ಅವಧಿಯಲ್ಲಿ ಕಾಂಗ್ರೆಸ್ ನಿಂದ ಸಿಎಂ ಪಟ್ಟ ಏರಿದ...

ಮಲೆಗಳಲ್ಲಿ ಮದುಮಗಳು: ಅದ್ಭುತ ರಂಗಾನುಭವ! ಆದರೆ.....

ಕನ್ನಡದ ಮಹಾಕಾದಂಬರಿ  "ಮಲೆಗಳಲ್ಲಿ ಮದುಮಗಳು" (ರಚನೆ: ಕುವೆಂಪು)  ಅಕ್ಷರಶಃ ಜೀವಪಡಕೊಂಡು ರಾತ್ರಿಯಿಡೀ ಬದುಕುವ ರಂಗಭಾಗ್ಯ ಪಡಕೊಂಡಿದೆ. ಮೊದಲಿಗೆ ಮೈಸೂರು ಮತ್ತೀಗ ಬೆಂಗಳೂರು ರಂಗಾಸಕ್ತರಿಗೆ ಈ ಮದುಮಗಳು ಹಲವಾರು ರಾತ್ರಿಗಳನ್ನೂ ಕರುಣಿಸಿದ್ದಾಳೆ. ಭಾರತೀಯ ರಂಗಭೂಮಿ ಇತಿಹಾಸದಲ್ಲಿ ಕಾದಂಬರಿಯೊಂದು ಇಷ್ಟು ಅದ್ದೂರಿ ರಂಗರೂಪ ಕಂಡಿದ್ದು ಬಹುಶಃ ಇದೇ ಮೊದಲಿರಬೇಕು. "ಮಲೆಗಳಲ್ಲಿ ಮದುಮಗಳು" ಹೆಸರಾಂತ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರ ಮಹತ್ವಾಕಾಂಕ್ಷೆಯ ರಂಗಸಾಹಸ. ಗಮನಾರ್ಹ ರಂಗಪ್ರಯೋಗ. ಪ್ರಯೋಗದಲ್ಲಿ ಬಹುವಾಗಿ ಸೆಳೆಯುವುದು ರಂಗವಿನ್ಯಾಸ (ವಿನ್ಯಾಸ: ದ್ವಾರ್ಕಿ). ಮಲೆನಾಡಿನ ಒಂದು ಭಾಗವನ್ನೇ ಪುನರ್ ಸೃಷ್ಟಿ ಮಾಡಿದ್ದು ವಿನ್ಯಾಸದ ವಿಶೇಷತೆ. ನಾಟಕದ ಜೀವಾಳವೇ ಈ ರಂಗವಿನ್ಯಾಸ ಎಂದರೆ ತಪ್ಪಲ್ಲ. ಒಟ್ಟಾರೆ ಕಥೆಯ ಮೂಡ್ ಸೃಷ್ಟಿಯಾಗೋದೇ ಮಲೆನಾಡಿನ ಪರಿಸರದಿಂದ. ಪಾತ್ರಗಳನ್ನು ಇದರಿಂದ ಹೊರಕ್ಕಿಟ್ಟರೆ ಕಥೆಯೇ ನೀರಸ. ಹೀಗಾಗಿ ರಂಗದ ಮೇಲೆ ಕಾದಂಬರಿ ತರಲು ಇಂಥ ಪರಿಸರದ ಮರುಸೃಷ್ಟಿಯ ಸಾಹಸ ಅನಿವಾರ್ಯ. ಕಥೆಯ ಓಘ ಮತ್ತು ಅದು ಬಯಸುವ ಪರಿಸರ, ಆಯಾ ಮೂಡ್ ಗೆ ತಕ್ಕಂಥ ರಂಗಸಜ್ಜಿಕೆ ಅದ್ಭುತವೇ ಸರಿ.  ಒಟ್ಟು ರಂಗವನ್ನು ನಾಲ್ಕು ಸ್ಥಳಗಳಲ್ಲಿ ವಿಂಗಡಿಸಿಕೊಳ್ಳಲಾಗಿದೆ.  ಕಥೆಯ ಒಂದು ಭಾಗ ಮೊದಲ ರಂಗಸಜ್ಜಿಕೆಯಲ್ಲಿ ಕೊನೆಗೊಂಡರೆ ಮುಂದಿನದು ಮಿಕ್ಕ ರಂಗಸಜ್ಜಿಕೆ...

ನನ್ನನ್ನು ಹೀಗೆ ಕಾಡಿತ್ತು "ಲೈಫ್ ಆಫ್ ಪೈ" ಮಾಯೆ...

ಒಂದು ಕೈವಾರ ತೆಗೆದುಕೊಂಡು ಒಂದು ವರ್ತುಳ ಮೂಡಿಸುತ್ತೇನೆ. ಕೈವಾರದ ಕೇಂದ್ರ ಬಿಂದುವಿನಿಂದ ಎಳೆದ ವೃತ್ತಾಕಾರ ಗೆರೆಯ ಒಂದು ಬದಿವರೆಗೆ ಸರಳ ರೇಖೆ ಎಳೆದೆನೆಂದರೆ ಅದು ಅರ್ಧ ವ್ಯಾಸ. ಪೂರ್ತಿ ಅಂದರೆ ಎರಡೂ ಬದಿ ಎಳೆದರೆ ಅಡ್ಡಳತೆ. ಅದನ್ನು ವ್ಯಾಸ ಅಂತಲೂ ಕರೆಯುತ್ತಾರೆ. ಅರ್ಥಾತ್ ವರ್ತುಲವನ್ನು ಅಡ್ಡ ಸೀಳಿದಂತೆ.  ಈಗ ಈ ಅಡ್ಡಳತೆ ಅಂದರೆ ವರ್ತುಳದ ವ್ಯಾಸವಿದೆಯಲ್ಲ ಇದರ ಮೂರು ಪಟ್ಟಿಗಿಂತ ತುಸು ಹೆಚ್ಚು ಇಡೀ ವರ್ತುಳದ ಪರಿಧಿ ಇರುತ್ತದೆ ಎನ್ನುತ್ತದೆ ಗಣಿತ. ಇದರ ಒಂದು ಅನುಪಾತವೇ 'ಪೈ' ಅಥವಾ 'ಪಾಯ್'. ಇದೊಂದು ಮ್ಯಾಥೆಮ್ಯಾಟಿಕಲ್ ಕಾನಸ್ಟಂಟ್.  | | ಹೀಗೆರಡು ಗೀಟೆಳೆದು ಇವೆರಡರ ಮೇಲೊಂದು __ ಇಂಥ ಗೀಟೆಳೆದರೆ ಅದೇ ಪೈ ಅಥವಾ ಪಾಯ್ ಸಿಂಬಲ್ ಆಗುತ್ತದೆ. * * *   ತಲೆ ತಿಂದೆ ಅಲ್ಲವೇ?. ಇಂಥ ತರ್ಕಬದ್ಧ ನಾಲೇಡ್ಜ್ ಅಥವಾ ಇದನ್ನು ಮೀರಿದ ಇತರ ಲೆಕ್ಕಾಚಾರಗಳು, ಕೌತುಕಗಳು ಮತ್ತು ಕುತೂಹಲಗಳತ್ತ ಗಮನವಹಿಸುವ ಶಾಲಾ ಬಾಲಕನ (ಪೈಸಿನ್ ಮಾಲಿಟಾರ್ ಪಟೇಲ್ ಅರ್ಥಾತ್ ಶಾರ್ಟ್ ಆಗಿ 'ಪೈ' ಎಂದು ಹೆಸರಿಟ್ಟುಕೊಂಡವ) ಮೂಲಕ ಇಡೀ ಬದುಕಿನ ಅಸಲು ಪರಿಧಿಯನ್ನು ತನ್ನ ಮಿತಿಯಲ್ಲಿ ಕಟ್ಟಿಕೊಡಲು ಯತ್ನಿಸಿದ ಚಲನಚಿತ್ರ 'ಲೈಫ್ ಆಫ್ ಪೈ'.   ಅಮೆರಿಕ ನಿವಾಸಿ ಆ್ಯಂಗ್ ಲೀ ಚಿತ್ರದ ನಿರ್ದೇಶಕ. ಈಚೆಗೆ ಚಿತ್ರ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಚಿತ್ರ ನೋಡಿದ ತಕ್ಷಣಕ್ಕೆ ಇದು...

ಅತ್ಯಾಚಾರವೂ ಒಂದು ಅಸ್ತ್ರ!

ಯುದ್ಧ, ಆಂತರಿಕ ಕಲಹಗಳಿಗೆ ಅಂತಿಮ ಗುರಿ ಗೆಲುವೊಂದೇ. ಎಂಥ ಮತ್ತು ಯಾವ ಗೆಲುವು ಎನ್ನುವುದು ಅವುಗಳಿಗೆ ಮುಖ್ಯವಾಗಲ್ಲ. ಅದು ಎಂಥದೇ ಆಂತರಿಕ ಕಲಹ/ಯುದ್ಧವೇ ಆಗಿರಲಿ ಆಗೆಲ್ಲ ಹಿಂಸೆ, ಅತ್ಯಾಚಾರಗಳು ಯಥೇಛ್ಛವಾಗಿ ನಡೆಯುವುದು ಮುಗ್ಧರ ಮೇಲೆಯೇ. ಅದು ಬಹುತೇಕವಾಗಿ ಅಮಾಯಕ ಹೆಣ್ಣುಗಳ ಮೇಲೆ. ಇದು ಒಂದು ರೆಗ್ಯುಲರ್ ಫೆನಾಮಿನಾ. ಆದರೆ...  "1998ರಲ್ಲಿ ಪುನರ್ ರೂಪಿಸಿದ ನನ್ನ ಆಸ್ಪತ್ರೆಗೆ ಅತ್ಯಾಚಾರಕ್ಕೊಳಗಾದ ಒಂದು ಹೆಣ್ಣನ್ನು ಕರೆತಂದರು. ಅವಳೇ ಆಸ್ಪತ್ರೆಯ ಮೊತ್ತಮೊದಲ ಹೊರರೋಗಿ. ಅತ್ಯಾಚಾರಿಗಳು ಆ ಹೆಣ್ಣು ದೇಹವನ್ನು ತಿಂದು ಮುಗಿಸಿ ಅದರ ಯೋನಿಯೊಳಕ್ಕೆ ಮತ್ತು ತೊಡೆಗಳ ಮೇಲೆ ಹಲ್ಲಿನ ಗಾಯದ ಜತೆಗೆ ಬುಲೆಟ್ ಗಳನ್ನು ಹಾರಿಸಿದ್ದರು. ಅಂಥ ಬರ್ಬರ ಅತ್ಯಾಚಾರದ ಪ್ರಕರಣವನ್ನು ನಾನು ಹಿಂದೆಂದೂ ಕೇಳಿಲ್ಲ. ನೋಡಿಲ್ಲ.. * * *  ಈ ಪ್ರದೇಶದಲ್ಲಿ ಆಗಾಗ ಆಂತರಿಕ ಕಲಹಗಳು, ಜನಾಂಗಿಕ ಸಂಘರ್ಷಗಳು ನಡೆಯುತ್ತಲೇ ಇದ್ದವು. ಇವುಗಳಿಂದ ಹೆಚ್ಚುತ್ತಿದ್ದ ಹಿಂಸೆ, ಅತ್ಯಾಚಾರದ ಪ್ರಕರಣಗಳಲ್ಲಿ ನಲುಗುವ ಹೆಣ್ಣುಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದಲೇ ಟೆಂಟುಗಳನ್ನು ಬಳಸಿ ಒಂದು ಆಸ್ಪತ್ರೆ ರೂಪಿಸಿದ್ದೆ. 1998ರಲ್ಲಿ ನಡೆದ ಒಂದು ದಾಳಿ ಆಸ್ಪತ್ರೆಯ ಜತೆಗೆ 35 ರೋಗಿಗಳನ್ನೂ ಮುಗಿಸಿಹಾಕಿತ್ತು. ಆದರೂ ಕೆಲವೇ ತಿಂಗಳಲ್ಲಿ ಆಸ್ಪತ್ರೆಯನ್ನು ಪುನರ್ ರೂಪಿಸಿದೆ. ಆಗ ಬಂದ ಮೊದಲ ಪ್ರಕರಣವೇ ಈ ಮೇಲಿನ ಹೆಣ್ಣುಮಗಳದ್ದು. * * * ...