ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೈಕಲ್ ಜಾಕಸನ್: ಕರಿಯ ಕುಣಿದ ದಮನಿತರ ಕಾವ್ಯ

ಶನಿವಾರದ ಸೂರ್ಯ ಮುಳುಗುತ್ತಿದ್ದ ಹೊತ್ತು ನನ್ನ ಮಗುವಿನೊಂದಿಗೆ ಹೊರಟು ನಿಂತಿರುವೆ ಹೊಸ ಸೂರ್ಯ ಮೂಡುವ ದಿಕ್ಕಿನೆಡೆಗೆ. ಮಗು ಗಂಡೊ ಹೆಣ್ಣೊ? ಯಾವುದಾದರೇನು ಸ್ವಾಮಿ, ಎಲ್ಲ ಒಂದೇ.. ಎರಡೂ ಅಂದುಕೊಳ್ಳಿ.. ನಾನು ಪವಾಡಗಳ ನಂಬುವೆ. ಈ ರಾತ್ರಿಯೇ ಆ ಪವಾಡ ನಡೆದುಹೋಗಿದೆ. ನೀವು ನನ್ನ ಕಂದನ ಬಗ್ಗೆ ಯೋಚಿಸುತ್ತೀರಿ ಎಂದಾದರೆ, ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ. ನನ್ನ ಮಕ್ಕಳು ಶನಿವಾರದ ಸೂರ್ಯನ ಕುಂಡೆ ಮೇಲೆ ಬರೆ ಎಳೆದು ನಾಳಿನ ಸೂರ್ಯನ ಹಣೆಯ ಮೇಲೆ ನನ್ನ ಸಂದೇಶ ಬರೀತಾರೆ. ನಾನ್ಯಾರಿಗೂ ಕಮ್ಮಿ ಅಲ್ಲ ಎಂದು. ಮತ್ತು ನಾನವರಿಗೆ ಹೇಳಿದ್ದೇನೆ, ಸಮಾನತೆಯ ಬಗ್ಗೆ. ನೀವು ಒಪ್ಪುತ್ತೀರೊ, ಬಿಡುತ್ತೀರೋ ಸಮಾನತೆಯೊಂದೇ ಸತ್ಯ. ನೀವು ನನ್ನ ಕಂದನ ಬಗ್ಗೆ ಯೋಚಿಸುತ್ತೀರಿ ಎಂದಾದರೆ, ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ. ನಾನೀ ರಕ್ಕಸನ (ರೇಸಿಸಂ) ಜತೆ ಸೆಣಸಿ ಹೈರಾಣಾಗಿರುವೆ. ಗುದಮುರಗಿ ಹಾಕುತ್ತ ದಣಿದಿರುವೆ, ಈ ಉಸಾಬರಿಯಿಂದ ಸುಸ್ತಾಗಿರುವೆ ಉಪಟಳ ಹೆಚ್ಚಾದಾಗೆಲ್ಲ ಅದರ ಕುಂಡೆ ಮೇಲೆ ಒದ್ದಿರುವೆ ಹೋರಾಟಕೆ ನಾನ್ಯಾರಿಗೂ ಅಂಜೆನು, ನಿಮ್ಮ ಶೈತಾನನ ಸಂತಾನಕೂ.. ಗುಂಪುಗಾರಿಕೆ, ಕ್ಲಬ್, ರಾಷ್ಟ್ರಗಳಿಗೇ ಎಲ್ಲಾ ರಕ್ಷಣೆ... ಇಲ್ಲಿ ಕೇಳುವವರೇ ಇಲ್ಲ ಮನುಷ್ಯ ಕುಲದ ಬವಣೆ? ಇದೆಲ್ಲ ಬೊಗಳೆ ವ್ಯವಹಾರ ಜಗದ ತುಂಬ. ಇದೆಲ್ಲ ಸುಮ್ಮನೇ ಯುದ್ಧ! ಪರ ವಿರೋಧದ ಕಥೆ ಕೇಳಿ ಏನಾಗಬೇ...

ಕಾಲದ ಅನಂತತೆಯ ಸ್ಲೇಟಿನ ಮೇಲೆ...

ಮಂಜಿನ ಮಳೆ ಸುರಿಯುತ್ತಿದೆ. ಏರ್ ಫ್ಲಾರಿಡಾ- 90  ವಿಮಾನ ರನ್ ವೇ ಮೇಲೆ ಸಾಗುತ್ತಿದೆ. ಅದರ ರೆಕ್ಕೆಗಳ ಮೇಲೆ ಭಾರಿ ಪ್ರಮಾಣದ ಮಂಜು ಬಿದ್ದಿದೆ. ಯಾವ ಎಚ್ಚರಿಕೆಯನ್ನೂ ಲೆಕ್ಕಿಸದ ಪೈಲಟ್ ಟೇಕಾಫ್ ಗೆ ಮುಂದಾಗುತ್ತಾನೆ. ಮಂಜಿನ ಭಾರಿ ಮಳೆಯ ನಡುವೆ ವಿಮಾನ ನೆಲ ಬಿಟ್ಟು ಮೇಲಕ್ಕೇಳುತ್ತದೆ. ಟೇಕಾಫ್ ಗೆ ಸ್ವಲ್ಪವೇ ಮುಂಚಿನ ಸಮಯದಲ್ಲಿ ಕೋ ಪೈಲಟ್ ಗೆ ಏನೋ ಸಂಶಯ. ಅವನು ಪೈಲಟ್ ಗೆ ಎಚ್ಚರಿಸುತ್ತಾನೆ. ಕೋ ಪೈಲಟ್: ಏನೋ ತೊಂದರೆ ಕಾಣಿಸ್ತಿದೆ. ಪೈಲಟ್: ರೀಡಿಂಗ್ಸ್ ಸರಿಯಾಗೇ ತೋರಿಸ್ತಿದೆ. ಕೋ ಪೈಲಟ್:   ಆ ರೀಡಿಂಗ್ ಫಾಲ್ಸ್ ಸೆಕ್ಯುರಿಟಿ ಫೀಲಿಂಗ್ ತರಿಸ್ತಿರಬಹುದೇನೋ. (ಪೈಲಟ್ ಮತ್ತಷ್ಟು ಗುಂಡಿಗಳನ್ನು ಒತ್ತುತ್ತಾನೆ. ರೆಕ್ಕೆಯ ಮೇಲಿನ ಮಂಜು ತೆರವಿಗೆ ಯತ್ನಿಸುತ್ತಾನೆ. ಕೀ ಎಂಜಿನ್ ಸೆನ್ಸರೀಸ್ ಫ್ರೋಜನ್ ಆಗಿರುತ್ತದೆ. ವಿಂಗ್ ಆಂಟಿ ಐಸ್  ಸಿಸ್ಟಂ (anti ice system)  ಆಫ್ ಆಗಿದ್ದನ್ನು ಮತ್ತೆ ಕೋ ಪೈಲಟ್ ಎಚ್ಚರಿಸುತ್ತಾನೆ). ಕೋ ಪೈಲಟ್ : ಓ ಗಾಡ್! ಏನೋ ತೊಂದರೆ ಇದೆ. ನೋಡಿಲ್ಲಿ ಇದ್ಯಾಕೊ ಸರಿ ಕಾಣಿಸ್ತಿಲ್ಲ. ಇಲ್ಲ ಇದೇನೋ ಸರಿ ಇಲ್ಲ... (ಕೋ ಪೈಲಟ್ ಚಡಪಡಿಸುತ್ತಲೇ ಇರುತ್ತಾನೆ) ಪೈಲಟ್: ಹೌದು ಸರಿ ಇದೆ. ನೋಡಿಲ್ಲಿ ಎಕ್ಸಿಲರೇಷನ್ 80 ನಾಟ್ಸ್ ರೀಡಿಂಗ್ ತೋರಿಸ್ತಿದೆ. ಕೋ ಪೈಲಟ್: ಇಲ್ಲ ಖಂಡಿತ ಇದೇನೋ ಸರಿ ಇಲ್ಲ... (ಬ್ಲ್ಯಾಕ್ ಬಾಕ್ಸ್ ಪ್ರಕಾರ ಕಾಕ್ಪಿಟ್ ರೀಡಿಂಗ್ ...

ಮಲೆಗಳಲ್ಲಿ ಮದುಮಗಳು: ಅದ್ಭುತ ರಂಗಾನುಭವ! ಆದರೆ...

ಮೈಸೂರು ರಂಗಾಯಣದಂಗಳದಲ್ಲಿ  ಸೃಷ್ಟಿಯಾಗಿದ್ದ 'ಮಲೆಗಳಲ್ಲಿ' ಮದುಮಗಳು  ಸಂಭ್ರಮಿಸಿದ ಪರಿಗೆ ರಂಗಪ್ರೇಕ್ಷಕರೆಲ್ಲ ಮೂಕವಿಸ್ಮಿತ! ಕನ್ನಡದ ಮಹಾಕಾದಂಬರಿ  "ಮಲೆಗಳಲ್ಲಿ ಮದುಮಗಳು" (ರಚನೆ: ಕುವೆಂಪು)  ಹೀಗೆ ಅಕ್ಷರಶಃ ಜೀವಪಡಕೊಂಡು ಒಂದಿಡೀ ರಾತ್ರಿ ಬದುಕಿತು! (ಮದುಮಗಳು ಈಗ ಹಲವು ರಾತ್ರಿಗಳನ್ನೂ ಕಾಣುತ್ತಿದ್ದಾಳೆ) ಭಾರತೀಯ ರಂಗಭೂಮಿ ಇತಿಹಾಸದಲ್ಲಿ ಕಾದಬಂಬರಿಯೊಂದು ಹೀಗೆ ರಂಗರೂಪ ಕಂಡಿದ್ದು ಬಹುಶಃ ಇದೇ ಮೊದಲಿರಬೇಕು. "ಮಲೆಗಳಲ್ಲಿ ಮದುಮಗಳು" ಹೆಸರಾಂತ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರ ಮಹತ್ವಾಕಾಂಕ್ಷೆಯ ರಂಗಸಾಹಸ. ಪ್ರಯೋಗದಲ್ಲಿ ಬಹುವಾಗಿ ಸೆಳೆದಿದ್ದು ರಂಗವಿನ್ಯಾಸ (ವಿನ್ಯಾಸ: ದ್ವಾರ್ಕಿ). ಮಲೆನಾಡಿನ ಒಂದು ಭಾಗವನ್ನೇ ಕತ್ತರಿಸಿ ತಂದು ರಂಗಾಯಣದ ಆವರಣದಲ್ಲಿಟ್ಟಂತಿತ್ತು. ನಾಟಕದ ಜೀವಾಳವೇ ಈ ವಿನ್ಯಾಸ ಎಂದರೆ ತಪ್ಪಲ್ಲ. ಒಟ್ಟಾರೆಯ ಕಥೆಯ ಮೂಡ್ ಸೃಷ್ಟಿಯಾಗೋದೇ ಮಲೆನಾಡಿನ ಪರಿಸರದಿಂದ. ಪಾತ್ರಗಳನ್ನು ಇದರಿಂದ ಹೊರಕ್ಕಿಟ್ಟರೆ ಕಥೆಯೇ ನೀರಸ. ಹೀಗಾಗಿ ರಂಗದ ಮೇಲೆ ಕಾದಂಬರಿ ತರಲು ಇಂಥ ಪರಿಸರದ ಮರುಸೃಷ್ಟಿಯ ಸಾಹಸ ಅನಿವಾರ್ಯ. ಒಟ್ಟು ರಂಗವನ್ನು ನಾಲ್ಕು ಸ್ಥಳಗಳಲ್ಲಿ ವಿಂಗಡಿಸಿಕೊಳ್ಳಲಾಗಿತ್ತು. ಕಥೆಯ ಓಘ ಮತ್ತು ಅದು ಬಯಸುವ ಪರಿಸರ, ಮೂಡ್ ಗೆ ತಕ್ಕಂತೆ ರಂಗಸಜ್ಜಿಕೆ ಮಾಡಲಾಗಿತ್ತು. ಕಥೆಯ ಒಂದು ಭಾಗ ಮೊದಲ ರಂಗಸಜ್ಜಿಕೆಯಲ್ಲಿ ಕೊನೆಗೊಂಡರೆ ಮುಂದಿ...

ಚೌಗಲೆಯವರ 'ಕಸುವಿನ ಕಸ್ತೂರಬಾ'

ಗಾಂಧೀಜಿಯವರ ಮೊಮ್ಮಗಳು (ರಾಮದಾಸ್ ಗಾಂಧಿ ಮಗಳು) ಸುಮಿತ್ರಾ ಕುಲಕರ್ಣಿ ತಮ್ಮ "ಮಹಾತ್ಮಾ ಗಾಂಧಿ- ಮೇರೆ ಪಿತಾಮಹ" ಪುಸ್ತಕದಲ್ಲಿ  ಋಷಿಪತ್ನಿ ಅರುಂಧತಿಯ ಪ್ರಸ್ತಾಪ ಮಾಡಿದ್ದಾರೆ. ಅರುಂಧತಿ ಬ್ರಹ್ಮರ್ಷಿ ವಸಿಷ್ಠರ (ರಾಮನ ತಂದೆ ದಶರಥನಿಗೆ ಇವರು ರಾಜಗುರುವಾಗಿದ್ದರಂತೆ) ಸಹಧರ್ಮಿಣಿ.  ಋಷಿಯ ಶ್ರೇಷ್ಠ ಪತ್ನಿ. ತ್ರಿಕಾಲಜ್ಞಾನಿ ವಶಿಷ್ಠರದು ನ್ಯಾಯನೀತಿಯ ಬದುಕು. ಹೀಗಾಗಿ ಸಪ್ತಋಷಿ ಮಂಡಲದಲ್ಲಿ ವಶಿಷ್ಠರಿಗೆ ಸ್ಥಾನ ಕಲ್ಪಿಸಲಾಗಿದೆಯಂತೆ. ರಾತ್ರಿ ಆಕಾಶದಲ್ಲಿ ಏಳು ಚುಕ್ಕೆಗಳ ಒಂದು ಆಕೃತಿ ಥೇಟು ಸುಂದರ ಸ್ತ್ರೀಯ ಮೂಗುನತ್ತಿನಂತೆ ಹೊಳೆಯುತ್ತಿರುವುದನ್ನು ಗಮನಿಸಿರಬಹುದು. ಅದಕ್ಕೆ ಸಪ್ತರ್ಷಿ ಮಂಡಲ (ಹೀಗೊಂದು ನಂಬಿಕೆಯಷ್ಟೇ)  ಎಂದು ಕರೆಯುತ್ತಾರೆ. ಅದರ ಜತೆಗೊಂದು ಪುಟಾಣಿ ನಕ್ಷತ್ರ ಫಳ ಫಳಂತ ಹೊಳೆಯುತ್ತಿರುತ್ತದೆ. ತಾರಾಮಂಡಲದಲ್ಲಿ ಅದೆಷ್ಟೊ ನಕ್ಷತ್ರಗಳ ರಾಶಿಯಲ್ಲಿ ಸಪ್ತರ್ಷಿ ಮಂಡಲದ ಜತೆ ಹೊಳೆಯುವ ಸೌಭಾಗ್ಯ ಈ ಪುಟಾಣಿ ನಕ್ಷತ್ರಕ್ಕೆ ಮಾತ್ರವಿದೆ ಎನ್ನುವುದು ವಿಶೇಷ. ಅದಕ್ಕೆ ಅರುಂಧತಿ ಎಂದು ಹೆಸರು. ಗಾಂಧೀಜಿ ಎನ್ನುವ ಮಹಾಸಂತ, ಋಷಿಗುಣದ ವ್ಯಕ್ತಿಗೆ ಸೂಕ್ತ ಪತ್ನಿಯಾಗಿ ಅವರೆಲ್ಲ ನ್ಯಾಯನೀತಿಯ ಹೋರಾಟಕ್ಕೆ ಸಾಥ್ ಕೊಟ್ಟವರು ಕಸ್ತೂರಬಾ. ಹೀಗಾಗಿ ಕಸ್ತೂರಬಾ ನಿಸ್ಸಂದೇಹವಾಗಿ ಅರುಂಧತಿಯ ಸ್ಥಾನಕ್ಕೇರುವಂಥ ಹೆಣ್ಣು ಎನ್ನುವುದು ಸುಮಿತ್ರಾ ಕುಲಕರ್ಣಿಯವರ ವರ್ಣನೆ, ಮತ್ತು ಹೋಲಿಕೆ. ಕಸ್ತೂರಬಾ ಗಾಂ...

ಈ ಕವಿ ಜತೆ ಅದೆಷ್ಟು ಕಾವ್ಯ-ನೋವು ಮಣ್ಣಾಯಿತೋ!

ಈ ಇರುವೆಯ ಮೇಲೆ ನನ್ನ ಭಾರದ ಹೆಜ್ಜೆಯನಿಟ್ಟೆ ತುಸು ಕಾಲದ ನಂತರ ತೆಗೆದೆ ಇರುವೆ ಮತ್ತೆ ಚಲಿಸುತ್ತಿದೆ ಏ ಸೂಜಿಯ ಗಾತ್ರದ ಜೀವವೇ ನನ್ನ ಭಾರ ಹೊರುವ ನಿನ್ನ ಬೆನ್ನಿಗೆ ಶರಣು... ... ಆ ಬೇಲಿಯ ದಡದಿ ನಿಧಾನಕ್ಕೆ ತೆವಳುತ್ತಿರುವ ಬಸವನ ಹುಳುವೇ ನನ್ನ ಭಾರ ಹೊರಲಾರದ ನಿನ್ನ ಮೃದುತ್ವಕ್ಕೂ ಶರಣು... ನಾಗತಿಹಳ್ಳಿ ರಮೇಶ್ ಒಂದೆರಡು ಪೆಗ್ ಏರಿಸಿ ಹೀಗೆ ಹಾಡುತ್ತಿದ್ದುದನ್ನು ಕೇಳಿದಾಗ, ಎನ್ಕೆ ಕಾವ್ಯದ ಈ ಪರಿಯ ಕಸುವಿಗೆ, ಮುಗ್ಧತೆಗೆ ಮನಸೋತಿದ್ದೆ. ರಮೇಶ್ ಭೇಟಿ ಮಾಡಿದಾಗೆಲ್ಲ ಮತ್ತೆ ಮತ್ತೆ ಈ ಹಾಡನ್ನು ಹೇಳುತ್ತಿದ್ದ. ತಾನೇ ಬರೆದಷ್ಟು ಖುಷಿಯಿಂದ ಅದನ್ನು ರಮೇಶ್ ಹಾಡುತ್ತಿದ್ದ.  ಹೀಗೆ ಕಾವ್ಯದ ಮೂಲಕವೇ ಎನ್. ಕೆ. ಹನುಮಂತಯ್ಯ ಪರಿಚಯವಾಯಿತು.  ಆ ನಂತರದ ಕೆಲ ಭೇಟಿಗಳಲ್ಲಿ ಕೆಲ ವಿಷಯಗಳ ಮೇಲೆ ಹರಟಿದ್ದೆವು.   ಎಸ್.ವಿಷ್ಣುಕುಮಾರ್ ಮೂಲಕವೇ ಹನುಮಂತಯ್ಯ ಹೆಚ್ಚು ಆಪ್ತವಾಗಿ ಪರಿಚಯವಾಗಿದ್ದು. ಎಂಜಿ ರಸ್ತೆಗೆ ಒಂದೆರಡು ಬಾರಿ ಹನುಮಂತಯ್ಯ ಬಂದಿದ್ದರು. ಟೆಂಪ್ಟೇಷನ್ ಬಾರ್ ನಲ್ಲಿ (ವಿಷ್ಣೂವಿನ ಕಾಯಂ ಶೆಡ್ ಆಗಿತ್ತು) ಹನುಮಂತಯ್ಯ ಜತೆ ಕೆಲ ವಿಚಾರಗಳ ಬಗ್ಗೆ ಉತ್ತಮ ಚರ್ಚೆ ಕೂಡ ನಡೀತು. ಎಂಜಿ ರಸ್ತೆಯ ಹುಡುಗಿಯರು ಮತ್ತು ಅವರ ಬಿಂದಾಸ್ ಅಟಿಟ್ಯೂಡ್ ಅನ್ನು ನೋಡಿ ಹನುಮಂತಯ್ಯ ದಂಗಾಗುತ್ತಿದ್ದರು. ಪದೇ ಪದೇ  'ಇವರೆಲ್ಲ ಅದೆಷ್ಟು ಖುಷಿ ಖುಷಿಯಾಗಿ, ಸಲೀಸಾಗಿ ಪ್ರೀತಿ, ಪ್ರೇಮ, ಪ್ರ...

ಭಾರತೀಯ ರಂಗಭೂಮಿಯ ವಿಭಿನ್ನ ರಂಗಸಾಹಸಿ ಹುಸೇನ್

ರಾಮಾಯಣ ವಿಶ್ವದ ಒಂದು ದೊಡ್ಡ ಕಥೆ . ಅಂಥ ಕಥೆಯನ್ನು ರಂಗದ ಮೇಲೆ ಭವ್ಯವಾಗಿ ಹೇಳುವುದು ಒಂದು ರಂಗಸಾಹಸ. ನಾಟಕ ಎಂದರೆ ಕಥೆಯನ್ನೇ ಹೇಳಬೇಕಿಲ್ಲ. ಯಥಾವತ್ ಆಗಿ ಕಥೆಯನ್ನು ರಂಗದ ಮೇಲಿಡುವುದೂ ಅಲ್ಲ. ಒಂದು ವಸ್ತು ಪ್ರತಿ ಸಾರಿ ರಂಗದ ಮೇಲೆ ಬಂದಾಗ ಅದು ಹೊಸದೇ ಆಗಬೇಕು. ಹಾಗೆ ಹೊಸದಾಗಿಸುವುದಕ್ಕೆ ರಂಗಭೂಮಿಗೆ ಸಾಧ್ಯವಿದೆ. ಮತ್ತೆ ಇಡೀ ಇತಿಹಾಸ, ಪುರಾಣ ಅಥವಾ ಕಾದಂಬರಿಯ ಕಥೆಯನ್ನು ಅದರ ಪರಿಸರ ಸಮೇತ ಮರುಸೃಷ್ಟಿ ಮಾಡೋದು ಕೂಡ ಒಂದು ದೊಡ್ಡ ಸಾಹಸ. ಒಟ್ಟಿನಲ್ಲಿ ವಿಭಿನ್ನ ರಂಗಾನುಭವ ನೀಡುವ ಯತ್ನ ಪ್ರಶಂಸೆಗೆ ಪಾತ್ರವಾಗುತ್ತದೆ. 'ದಿ ಲೆಜೆಂಡ್ ಆಫ್ ರಾಮ' ಟಿವಿಯಲ್ಲಿ ರಾಮಾಯಣ ಕಥಾಮಂಜರಿ ಪುಸ್ತಕಗಳಲ್ಲಿ ಬರುತ್ತಿದ್ದ ರಾಮಾಯಣ ಕಥಾನಕದ ಯಥಾವತ್ ಸೃಷ್ಟಿಯಂತೇ ಕಾಣಿಸಿತು. ಚಿಕ್ಕಂದಿನಿಂದ ಕಂಡ ಪ್ರಿಂಟೆಡ್ ರಾಮನ ಚಿತ್ರವೇ ಪರದೆ ಮೇಲೆ ಮಾತಾಡುತ್ತಿದೆ ಎನಿಸಿತು. ರಾಮಾಯಣ ಚಿತ್ರಗಳಲ್ಲಿ ಜೀವಂತವಾಗಿ ಇದ್ದಂತೆ ತೆರೆಯ ಮೇಲೆ ಇರಲಿಲ್ಲ. ಪ್ರಿಂಟೆಡ್ ಚಿತ್ರಣದ ತಾಜಾತನ ತೆರೆಯ ಮೇಲಿನ ದೃಶ್ಯಗಳಲ್ಲಿ ಕಾಣೆಯಾಗಿತ್ತು. ಆದರೂ ಜನ ಅದನ್ನು ಸಾಕ್ಷಾತ್ ಶ್ರೀರಾಮಚಂದ್ರನ ದರುಶನದಂತೇ ಭಾವಿಸಿದರು. ಭ್ರಮಿಸಿದರು. ಪೂಜಿಸಿದರು. ಮುದೇನೂರು ಸಂಗಣ್ಣ ಅವರ 'ಚಿತ್ರಪಟ' ನಾಟಕದಂಥ ರಾಮಾಯಣದ ವಿಭಿನ್ನ ನೋಟವಾಗಿ ರಮಾನಂದ ಸಾಗರ್ ಅವರ ರಾಮಾಯಣ ಡಿಡಿಯಲ್ಲಿ ಕಾಣಿಸಲಿಲ್ಲ. ಯಥಾವತ್ ಚಿತ್ರಣದ ಉದ್ದೇಶವಾಗಿದ್ದರಿಂದ ಅದು ಸಾಧ್ಯವೂ ಇರಲಿಲ್ಲ. ಆದರೆ, ಅ...

Vishnus vision

From S Vishnukumars mail...

ಜರ್ನಲಿಸಂ ಅಧ್ಯಯನ- ಅಲುಮ್ನಿ ಮೀಟ್., ತೋಬತೇಕ ಸಿಂಗ್ ನಾಟಕ. ಮಧುರ ನೆನಪುಗಳು ಮತ್ತು ಮಡುಗಟ್ಟಿರುವ ನೋವು

ವಿಶ್ವವಿದ್ಯಾಲಯ... ಅರಿವಿನ (ಜ್ಞಾನ) ದೊಡ್ಡ ವಿಶ್ವವೇ ತೆರಕೊಳ್ಳುವ ತಾಣ. ನಾವು ಆಯ್ದುಕೊಂಡ ವಿಷಯದ ಸಮಗ್ರ ವಿಶ್ವವೇ ಅಲ್ಲಿ ದರ್ಶನವಾಗಬೇಕು. ಹೀಗಾಗುವುದುಂಟೆ!(?) ಪತ್ರಿಕೋದ್ಯಮ ಎಂದರೆ ಪತ್ರಿಕೆಗೆ ಕೆಲಸ ಮಾಡುವುದು... ಅದನ್ನು ಹೇಗೆ ಮಾಡಬೇಕು? ಇದನ್ನು ಕಲಿಸುವುದೇ ವಿಶ್ವವಿದ್ಯಾಲಯ! ಹೀಗೆಂದುಬಿಟ್ಟರೆ... ಬರವಣಿಗೆ, ವರದಿ, ಎಡಿಟಿಂಗ್... ಬಗ್ಗೆ ಟಿಪ್ಸ್ ಕೊಡುವ ಕೆಲಸ ಮಾತ್ರ ವಿವಿಗಳದ್ದಾಗಿಬಿಡುತ್ತದೆ. ಸುಮಾರು ವರ್ಷಗಳ ಹಿಂದೆ ವಿವಿಗಳ ಸ್ಥಿತಿ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನಕ್ಕೆ ಸಂಬಂಧಿಸಿ) ಇದಕ್ಕೂ ಭಿನ್ನವೇನಿರಲಿಲ್ಲ. ಇದೇ ಸ್ಥಿತಿ ಈಗಲೂ ಇರಬಹುದು. ಕಾಲೇಜುಗಳಲ್ಲೂ... ಆದರೆ, ಇದೆಲ್ಲ ಮಿತಿಗಳನ್ನು ಮೀರಿ ಎಂಎ ಮಾಸ್ ಕಮ್ಯುನಿಕೇಷನ್ ಅಂಡ್ ಜರ್ನಲಿಸಂ ಅನ್ನು ತುಂಬ ಆಸ್ಥೆಯಿಂದ, ಆಸಕ್ತಿಯಿಂದ ಮತ್ತು ಅರ್ಥಪೂರ್ಣವಾಗಿ ಅಧ್ಯಯನ ಮಾಡುವ ಉಮೇದಿಯ ನನ್ನಂಥ ಹುಡುಗರು ಅನೇಕರಿದ್ದರು. ಸಮೂಹ ಮಾದ್ಯಮ ಅಥವಾ ಒಟ್ಟಾರೆ ಮಾಧ್ಯಮ ಪರಿಕಲ್ಪನೆಯ ಬಗ್ಗೆ ನನಗಂತೂ ಚೆನ್ನಾಗಿ ತಿಳಿದಿತ್ತು. ಥಿಯೇಟರ್, ಸಿನಿಮಾ, ಟಿವಿ, ಡಾಕ್ಯುಮೆಂಟರಿ, ಬೀದಿನಾಟಕ, ಸಾಕ್ಷರತಾ ಚಳವಳಿ, ಜಾಥಾ, ಶಿಬಿರ... ಹೀಗೆ ಮಾಧ್ಯಮದ ಹಲವು ಆಯಾಮಗಳಲ್ಲಿ ನಾನಾಗಲೇ ಸಕ್ರಿಯನಾಗಿ ತೊಡಗಿಕೊಂಡಿದ್ದವ. ಸಮೂಹ ಮಾದ್ಯಮದ ಕೆಲಸ, ಪಾತ್ರ ಮತ್ತು ಅದರ ಪರಿಣಾಮ, ಫಲಿತಾಂಶಗಳ ಬಗ್ಗೆಯೂ ಚೆನ್ನಾಗಿ ಅರಿವಿಟ್ಟುಕೊಂಡೇ ವಿವಿ ಶಿಕ್ಷಣದ ಹೊಸ್ತಿಲು ತುಳಿದಿದ್ದೆ (ಈ ವಿಭಾಗಕ್ಕೆ...