ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಲೆಗಳಲ್ಲಿ ಮದುಮಗಳು: ಅದ್ಭುತ ರಂಗಾನುಭವ! ಆದರೆ.....

ಕನ್ನಡದ ಮಹಾಕಾದಂಬರಿ  "ಮಲೆಗಳಲ್ಲಿ ಮದುಮಗಳು" (ರಚನೆ: ಕುವೆಂಪು)  ಅಕ್ಷರಶಃ ಜೀವಪಡಕೊಂಡು ರಾತ್ರಿಯಿಡೀ ಬದುಕುವ ರಂಗಭಾಗ್ಯ ಪಡಕೊಂಡಿದೆ. ಮೊದಲಿಗೆ ಮೈಸೂರು ಮತ್ತೀಗ ಬೆಂಗಳೂರು ರಂಗಾಸಕ್ತರಿಗೆ ಈ ಮದುಮಗಳು ಹಲವಾರು ರಾತ್ರಿಗಳನ್ನೂ ಕರುಣಿಸಿದ್ದಾಳೆ. ಭಾರತೀಯ ರಂಗಭೂಮಿ ಇತಿಹಾಸದಲ್ಲಿ ಕಾದಂಬರಿಯೊಂದು ಇಷ್ಟು ಅದ್ದೂರಿ ರಂಗರೂಪ ಕಂಡಿದ್ದು ಬಹುಶಃ ಇದೇ ಮೊದಲಿರಬೇಕು. "ಮಲೆಗಳಲ್ಲಿ ಮದುಮಗಳು" ಹೆಸರಾಂತ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರ ಮಹತ್ವಾಕಾಂಕ್ಷೆಯ ರಂಗಸಾಹಸ. ಗಮನಾರ್ಹ ರಂಗಪ್ರಯೋಗ. ಪ್ರಯೋಗದಲ್ಲಿ ಬಹುವಾಗಿ ಸೆಳೆಯುವುದು ರಂಗವಿನ್ಯಾಸ (ವಿನ್ಯಾಸ: ದ್ವಾರ್ಕಿ). ಮಲೆನಾಡಿನ ಒಂದು ಭಾಗವನ್ನೇ ಪುನರ್ ಸೃಷ್ಟಿ ಮಾಡಿದ್ದು ವಿನ್ಯಾಸದ ವಿಶೇಷತೆ. ನಾಟಕದ ಜೀವಾಳವೇ ಈ ರಂಗವಿನ್ಯಾಸ ಎಂದರೆ ತಪ್ಪಲ್ಲ. ಒಟ್ಟಾರೆ ಕಥೆಯ ಮೂಡ್ ಸೃಷ್ಟಿಯಾಗೋದೇ ಮಲೆನಾಡಿನ ಪರಿಸರದಿಂದ. ಪಾತ್ರಗಳನ್ನು ಇದರಿಂದ ಹೊರಕ್ಕಿಟ್ಟರೆ ಕಥೆಯೇ ನೀರಸ. ಹೀಗಾಗಿ ರಂಗದ ಮೇಲೆ ಕಾದಂಬರಿ ತರಲು ಇಂಥ ಪರಿಸರದ ಮರುಸೃಷ್ಟಿಯ ಸಾಹಸ ಅನಿವಾರ್ಯ. ಕಥೆಯ ಓಘ ಮತ್ತು ಅದು ಬಯಸುವ ಪರಿಸರ, ಆಯಾ ಮೂಡ್ ಗೆ ತಕ್ಕಂಥ ರಂಗಸಜ್ಜಿಕೆ ಅದ್ಭುತವೇ ಸರಿ.  ಒಟ್ಟು ರಂಗವನ್ನು ನಾಲ್ಕು ಸ್ಥಳಗಳಲ್ಲಿ ವಿಂಗಡಿಸಿಕೊಳ್ಳಲಾಗಿದೆ.  ಕಥೆಯ ಒಂದು ಭಾಗ ಮೊದಲ ರಂಗಸಜ್ಜಿಕೆಯಲ್ಲಿ ಕೊನೆಗೊಂಡರೆ ಮುಂದಿನದು ಮಿಕ್ಕ ರಂಗಸಜ್ಜಿಕೆ...

ನನ್ನನ್ನು ಹೀಗೆ ಕಾಡಿತ್ತು "ಲೈಫ್ ಆಫ್ ಪೈ" ಮಾಯೆ...

ಒಂದು ಕೈವಾರ ತೆಗೆದುಕೊಂಡು ಒಂದು ವರ್ತುಳ ಮೂಡಿಸುತ್ತೇನೆ. ಕೈವಾರದ ಕೇಂದ್ರ ಬಿಂದುವಿನಿಂದ ಎಳೆದ ವೃತ್ತಾಕಾರ ಗೆರೆಯ ಒಂದು ಬದಿವರೆಗೆ ಸರಳ ರೇಖೆ ಎಳೆದೆನೆಂದರೆ ಅದು ಅರ್ಧ ವ್ಯಾಸ. ಪೂರ್ತಿ ಅಂದರೆ ಎರಡೂ ಬದಿ ಎಳೆದರೆ ಅಡ್ಡಳತೆ. ಅದನ್ನು ವ್ಯಾಸ ಅಂತಲೂ ಕರೆಯುತ್ತಾರೆ. ಅರ್ಥಾತ್ ವರ್ತುಲವನ್ನು ಅಡ್ಡ ಸೀಳಿದಂತೆ.  ಈಗ ಈ ಅಡ್ಡಳತೆ ಅಂದರೆ ವರ್ತುಳದ ವ್ಯಾಸವಿದೆಯಲ್ಲ ಇದರ ಮೂರು ಪಟ್ಟಿಗಿಂತ ತುಸು ಹೆಚ್ಚು ಇಡೀ ವರ್ತುಳದ ಪರಿಧಿ ಇರುತ್ತದೆ ಎನ್ನುತ್ತದೆ ಗಣಿತ. ಇದರ ಒಂದು ಅನುಪಾತವೇ 'ಪೈ' ಅಥವಾ 'ಪಾಯ್'. ಇದೊಂದು ಮ್ಯಾಥೆಮ್ಯಾಟಿಕಲ್ ಕಾನಸ್ಟಂಟ್.  | | ಹೀಗೆರಡು ಗೀಟೆಳೆದು ಇವೆರಡರ ಮೇಲೊಂದು __ ಇಂಥ ಗೀಟೆಳೆದರೆ ಅದೇ ಪೈ ಅಥವಾ ಪಾಯ್ ಸಿಂಬಲ್ ಆಗುತ್ತದೆ. * * *   ತಲೆ ತಿಂದೆ ಅಲ್ಲವೇ?. ಇಂಥ ತರ್ಕಬದ್ಧ ನಾಲೇಡ್ಜ್ ಅಥವಾ ಇದನ್ನು ಮೀರಿದ ಇತರ ಲೆಕ್ಕಾಚಾರಗಳು, ಕೌತುಕಗಳು ಮತ್ತು ಕುತೂಹಲಗಳತ್ತ ಗಮನವಹಿಸುವ ಶಾಲಾ ಬಾಲಕನ (ಪೈಸಿನ್ ಮಾಲಿಟಾರ್ ಪಟೇಲ್ ಅರ್ಥಾತ್ ಶಾರ್ಟ್ ಆಗಿ 'ಪೈ' ಎಂದು ಹೆಸರಿಟ್ಟುಕೊಂಡವ) ಮೂಲಕ ಇಡೀ ಬದುಕಿನ ಅಸಲು ಪರಿಧಿಯನ್ನು ತನ್ನ ಮಿತಿಯಲ್ಲಿ ಕಟ್ಟಿಕೊಡಲು ಯತ್ನಿಸಿದ ಚಲನಚಿತ್ರ 'ಲೈಫ್ ಆಫ್ ಪೈ'.   ಅಮೆರಿಕ ನಿವಾಸಿ ಆ್ಯಂಗ್ ಲೀ ಚಿತ್ರದ ನಿರ್ದೇಶಕ. ಈಚೆಗೆ ಚಿತ್ರ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಚಿತ್ರ ನೋಡಿದ ತಕ್ಷಣಕ್ಕೆ ಇದು...

ಅತ್ಯಾಚಾರವೂ ಒಂದು ಅಸ್ತ್ರ!

ಯುದ್ಧ, ಆಂತರಿಕ ಕಲಹಗಳಿಗೆ ಅಂತಿಮ ಗುರಿ ಗೆಲುವೊಂದೇ. ಎಂಥ ಮತ್ತು ಯಾವ ಗೆಲುವು ಎನ್ನುವುದು ಅವುಗಳಿಗೆ ಮುಖ್ಯವಾಗಲ್ಲ. ಅದು ಎಂಥದೇ ಆಂತರಿಕ ಕಲಹ/ಯುದ್ಧವೇ ಆಗಿರಲಿ ಆಗೆಲ್ಲ ಹಿಂಸೆ, ಅತ್ಯಾಚಾರಗಳು ಯಥೇಛ್ಛವಾಗಿ ನಡೆಯುವುದು ಮುಗ್ಧರ ಮೇಲೆಯೇ. ಅದು ಬಹುತೇಕವಾಗಿ ಅಮಾಯಕ ಹೆಣ್ಣುಗಳ ಮೇಲೆ. ಇದು ಒಂದು ರೆಗ್ಯುಲರ್ ಫೆನಾಮಿನಾ. ಆದರೆ...  "1998ರಲ್ಲಿ ಪುನರ್ ರೂಪಿಸಿದ ನನ್ನ ಆಸ್ಪತ್ರೆಗೆ ಅತ್ಯಾಚಾರಕ್ಕೊಳಗಾದ ಒಂದು ಹೆಣ್ಣನ್ನು ಕರೆತಂದರು. ಅವಳೇ ಆಸ್ಪತ್ರೆಯ ಮೊತ್ತಮೊದಲ ಹೊರರೋಗಿ. ಅತ್ಯಾಚಾರಿಗಳು ಆ ಹೆಣ್ಣು ದೇಹವನ್ನು ತಿಂದು ಮುಗಿಸಿ ಅದರ ಯೋನಿಯೊಳಕ್ಕೆ ಮತ್ತು ತೊಡೆಗಳ ಮೇಲೆ ಹಲ್ಲಿನ ಗಾಯದ ಜತೆಗೆ ಬುಲೆಟ್ ಗಳನ್ನು ಹಾರಿಸಿದ್ದರು. ಅಂಥ ಬರ್ಬರ ಅತ್ಯಾಚಾರದ ಪ್ರಕರಣವನ್ನು ನಾನು ಹಿಂದೆಂದೂ ಕೇಳಿಲ್ಲ. ನೋಡಿಲ್ಲ.. * * *  ಈ ಪ್ರದೇಶದಲ್ಲಿ ಆಗಾಗ ಆಂತರಿಕ ಕಲಹಗಳು, ಜನಾಂಗಿಕ ಸಂಘರ್ಷಗಳು ನಡೆಯುತ್ತಲೇ ಇದ್ದವು. ಇವುಗಳಿಂದ ಹೆಚ್ಚುತ್ತಿದ್ದ ಹಿಂಸೆ, ಅತ್ಯಾಚಾರದ ಪ್ರಕರಣಗಳಲ್ಲಿ ನಲುಗುವ ಹೆಣ್ಣುಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದಲೇ ಟೆಂಟುಗಳನ್ನು ಬಳಸಿ ಒಂದು ಆಸ್ಪತ್ರೆ ರೂಪಿಸಿದ್ದೆ. 1998ರಲ್ಲಿ ನಡೆದ ಒಂದು ದಾಳಿ ಆಸ್ಪತ್ರೆಯ ಜತೆಗೆ 35 ರೋಗಿಗಳನ್ನೂ ಮುಗಿಸಿಹಾಕಿತ್ತು. ಆದರೂ ಕೆಲವೇ ತಿಂಗಳಲ್ಲಿ ಆಸ್ಪತ್ರೆಯನ್ನು ಪುನರ್ ರೂಪಿಸಿದೆ. ಆಗ ಬಂದ ಮೊದಲ ಪ್ರಕರಣವೇ ಈ ಮೇಲಿನ ಹೆಣ್ಣುಮಗಳದ್ದು. * * * ...

ಕನ್ನಡ ಸಾಹಿತ್ಯ ಸಮ್ಮೇಳನ ಬಿಜಾಪುರ: ಜವಾರಿ ಜನರ ದಿಲ್ ದಾರಿ ನಾಡಿಗೆ ಖುಶ್ ಆಮದೀದ್...

ಮನುಷ್ಯ ರೂಪಿಸುವ ಸಾಮ್ರಾಜ್ಯ, ಅಧಿಕಾರ, ಕ್ರೌರ್ಯ, ಹಿಂಸೆ... ಕಡೆಗೆ ಕಾಣುವ ಅಂತ್ಯ ಬರಿಯ ಮಣ್ಣು.  ಅದೇ ಪ್ರೀತಿ, ಮಾನವೀಯ ಅಂತಃಕರಣದ  ಗೋಲಗುಂಬಜ್ ಕಲೆಯಾಗಿ, ಸಂವೇದನೆಯಾಗರಳುವುದು ತೆರೆದಂತೆ ಒಳಗಣ್ಣು... ಖುಷ್ ಆಮದೀದ್/ಸ್ವಾಗತ. ಜವಾರಿ ಸೀಮೆಯ ಜನ ಬದುಕು ಅಂದ್ರ ಸ್ವಚ್ಛ ಆಕಾಶ, ಮಳೆ ತರುವ ಮೋಡಗಳ ಅರ್ಬಾಟು, ಸಿಡಿಲು ಮಿಂಚಿನ ಲಕ ಲಕ ಹೊಳಪು, ಸೂರ್ಯನ ಬೆಳಕಿನಂಥ ಹರವು, ನೆಲದೊಡಲಿಂದ ಕುಡಿಯೊಡೆದು ಮುಗಿಲಕಡೆ ಮಾರಿ ಮಾಡಿ ನಿಲ್ಲುವ ಸೂರ್ಯನಿಗೇ ನಿಷ್ಠ ಸೂರೆಪಾನ! ಮಾತು ಮನಂಗಳಲ್ಲಿ ಚಂದಪ್ಪನ ಬೆಳ್ಳಂಬೆಳದಿಂಗಳ ತಂಪು, ಮಲ್ಲಿಗೆಯ ಕಂಪು… ಮನಸು ಅನ್ನೋದು ಮಳೆ ಬರಲಿ, ಬಿರುಗಾಳಿ ಬರಲಿ ಅರಳಬೇಕೆಂದರೆ ಅರಳೇ ಬಿಡುವ ಕಾಡುಮಲ್ಲಿಗೆ! ಮೃದುವಾದರೂ ಅದರ ಅರಳುವ ಸೊಕ್ಕು ಅಬ್ಬಾ!… ಅಂಥ ಸೊಕ್ಕಿನ ಮನೋಧರ್ಮ ಮತ್ತು ಮೃದು ಮನದ ಜನಸಂಸ್ಕೃತಿ ವಿಜಾಪುರಿಗಳದು. * * * ಖ್ವಾಜಾ ಬಂದಾನವಾಜ್ ರಂಥ ಸೂಫಿ ಗಳು,  ಬಸವ ನಂಥ, ಹರಳಯ್ಯ , ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ ನಂಥ ಶರಣರು , ಪುರಂದರ, ಸರ್ವಜ್ಞನಂಥ ದಾಸರು, ಇಬ್ರಾಹಿಂ, ಆದಿಲ್ ಶಾಹಿಯಂಥ ದೊರೆಗಳು ನಡದಾಡಿದ ನೆಲದ ಮಣ್ಣ ತುಂಬ ಜೀವಪ್ರೀತಿ ಉಕ್ಕಿಸುವ ಮನುಷ್ಯ ಅಂತಃಕರಣ. ಕತ್ತಿ, ಗುರಾಣಿ ಹಿಡಕೊಂಡು ಈ ನೆಲದ ಮ್ಯಾಲ ಸಾಮ್ರಾಜ್ಯ ಕಟ್ಟ ಬಂದ ಬಹಮನಿ ಸುಲ್ತಾನರು, ಆದಿಲ್ ಶಾಹಿಗಳು ಇಲ್ಲಿನ ನೆಲದ ಮಣ್ಣಿಗೆ ಕರಗಿಹೋಗಿ ನಿಷ್ಠರಾಗಿಬಿಟ್ರು. ಜ...

ನಂದಬೂಪತಿ (ಲೇಖಕ: ಗೋಪಾಲ್ ವಾಜಪೇಯಿ) ರಂಗಕೃತಿ ಪರಿಚಯ ಮತ್ತು ನನ್ನ ಮಾತು

 20-01-2013 ರಂದು ಭಾನುವಾರ ಬೆಂಗಳೂರಿನ ಸಾಹಿತ್ಯ ಪರಿಷತ್ನ ಮೂರನೇ ಮಹಡಿ  ಸಭಾಂಗಣದಲ್ಲಿ ಗೋಪಾಲ ವಾಜಪೇಯಿ ಅವರ "ನಂದಬೂಪತಿ" ನಾಟಕ ಬಿಡುಗಡೆಯಾಯ್ತು. ಅವತ್ತು ಪುಸ್ತಕದ ಪರಿಚಯ ಮಾಡಿಕೊಡುವ ಜವಾಬ್ದಾರಿ ನನ್ನ ಮೇಲಿತ್ತು. ವಾಜಪೇಯಿ ಪ್ರೀತಿ, ಅಭಿಮಾನದಿಂದ ನನಗ ಈ ಜವಾಬ್ದಾರಿ ವಹಿಸಿದ್ರು.  . * * * ಪುಸ್ತಕಾ ಮಾಡೂ ಮುಂಚೆ ನಂದಬೂಪತಿನ್ನ ಕಳೆದ ಮೂವತ್ತು ವರ್ಷದ ಹಿಂದನ ರಂಗದ ಮ್ಯಾಲೆ ನಿಲ್ಲಿಸಿದ್ರು ಗೋಪಾಲ್ ಸರ್. ಅದರೊಳಗ ಪಾರ್ಟ್ ಮಾಡಿದ ಹಲವರು ಅವತ್ತ ಸೇರಿದ್ರು. ಡಾ. ಜಮಾದಾರ್, ಪ್ರಮೋದ ಶಿಗ್ಗಾಂವ್ ಮತ್ತಿತರ ಅವರ ರಂಗಾಪ್ತರೂ ಸೇರಿದ್ರು. ಅವರ ತಾಯಿನೂ ಕಾರ್ಯಕ್ರಮಕ್ಕ ಬಂದಿದ್ರು. ಪ್ರಕಾಶಕರ ಇತರ ಎರಡು ಕೃತಿಗಳ ಬಿಡುಗಡೆನೂ ಇದರ ಜತೀಗೇ ಇತ್ತು. ಹೊಟ್ಯಾಗಿನ ಮಾತು, ಎದಿಯಾಗಿನ ಪ್ರೀತಿ ಮಾತಿನ್ಯಾಗ ಹರಿದಾಡಿದ್ವು. ಕಣ್ಣುಗಳು ತುಂಬಿ ಬಂದ್ವು. ಕಾರ್ಯಕ್ರಮಾ ಭಾವಪೂರ್ಣಾಗಿತ್ತು. * * * ಪೈಲಾಕ್ಕ ನನ್ನ ಮಾತಿಗೆ ಕರದ್ರು. ಮಾತು ಆರಂಭಿಸುವ ಮುಂಚೆ ವಿನಮ್ರವಾಗಿ ಹೇಳಿದೆ. ನಾನು ಭಾಷಣಕಾರನಲ್ಲ. ಮಾತು ನನ್ನ ಮಾಧ್ಯಮ ಅಲ್ಲಾ. ಬರವಣಿಗೆ, ಸಂವಹನ ನನ್ನ ಮಾಧ್ಯಮ. ಮಾತಿಗೆ ನಾಲಗೀನ ಮುಖ್ಯ ಆಗಿರೋದ್ರಿಂದ ನನಗದು ಕಷ್ಟಾ. ಮತ್ತ ಬೆಂಗಳೂರಿನ ದೋಸಾ, ಇಡ್ಲಿ ತಿಂದ ನನ್ನ ನಾಲಗಿ ದಪ್ಪನೂ ಆಗಿಬಿಟ್ಟೈತಿ. ಹೆಂಗ ಬೇಕೋ ಹಂಗ್ ಹೊಳ್ಳಾಡಂಗಿಲ...

'ನಾರ್ವೆ ರಾಜಕುಮಾರ' ಬೆಂಗಳೂರಿಗೆ ಬಂದ ಹೊತ್ತು!

ಹೊಕ್ಕಳುಹುರಿ ಕತ್ತರಿಸ ಹೊರಟ ಡಾಕ್ಟರ್ ಕತ್ತರಿಯನ್ನೇ ಗಟ್ಟಿಯಾಗಿ ಹಿಡಿದುಕೊಂಡ ಕೈಗಳಿವು! ಈ ಪೋರ ಜಗತ್ತಿಗೆ ಕಣ್ಬಿಟ್ಟು ಮೂರೇ ಮೂರು ತಾಸಾಗಿತ್ತು. ಆಗಲೇ ಇವನ ದರ್ಶನ ಮಾಡಿದ್ದೆ. ಇದೇ ಕೈಗಳನ್ನು ಅಭಿಮಾನದಿಂದ ಹಿಡಿದಿದ್ದೆ. ಇವು ಅಂತಿಂಥ ಕೈಗಳಲ್ಲ. ಹೊಕ್ಕಳುಹುರಿ ಕತ್ತರಿಸ ಹೊರಟಿದ್ದ ವೈದ್ಯರ ಕತ್ತರಿಯನ್ನೇ ಬಿಗಿಯಾಗಿ ಹಿಡಿದು ತನ್ನ ತಾಯ ಒಡಲಿನ ಪ್ರೀತಿ, ಬೆಚ್ಚಗಿನ ಭಾವಕ್ಕೆ ತನ್ನ ಜೀವನಿಷ್ಠೆಯನ್ನು ಸಾರಿ ಕಣ್ತೆರೆದ ಭೂಪನ ಕೈಗಳಿವು.   ಬೆಂಗಳೂರು ಇಂಟರನ್ಯಾಷನ್ ಏರಪೋರ್ಟಿನಲ್ಲಿ ಮೊನ್ನೆ ಬಂದಿಳಿದ ಈ ನಾರ್ವೆ ರಾಜಕುಮಾರ ನನ್ನ ಕುತೂಹಲದಿಂದ ದುರುಗುಟ್ಟುತ್ತಲೇ ಇದ್ದ. ಯಾಕೋ, ಅದೇನು ಹಂಗೆ ನೋಡ್ತಿಯಾ ಅಂದೆ. ನೀನೇ ಅಲ್ವಾ ನನ್ನ ಅಮ್ಮನ ಮಡಿಲಿಂದ ಹೊರಬಂದ ದಿನ ನೋಡಿ ಕೈ ಹಿಡಿದು ಅಮ್ಮನಿಗೊಂದು ಸೆಲ್ಯುಟ್ ಹೊಡಿಯೊ ನನ್ನ ಪರವಾಗಿ ಅಂದಿದ್ದು... ಎನ್ನುವಂತೆ ದುರುಗುಟ್ಟಿ ಹಂಗೇ ತುಟಿಯರಳಿಸಿದ. ಏರ್ ಪೋರ್ಟಿನಲ್ಲಿ  ಮೊನ್ನೆ ಇವನ ರಿಸೀವ್ ಮಾಡಲು ಅದೆಷ್ಟು ತಾಸಿನಿಂದ ಕಾದಿದ್ದೆವು.  ನಮ್ಮೆಲ್ಲರನ್ನು ನೋಡಿ ಒಮ್ಮೆ ನಕ್ಕ. ನನ್ನ ನೋಡಿದವನೇ ದುರುಗುಟ್ಟುತ್ತಲೇ ಇದ್ದ. ಒಂದಷ್ಟು ನಗು, ಅಳು...  ನಾರ್ವೆಯಿಂದ ನಾನು ಮರಳಿ ಬರುವ ದಿನವೇ ಇವನ ಜನನವಾಗಿತ್ತು. ಆಸ್ಪತ್ರೆಯಲ್ಲಿ ಕಾದು ಇವನ ದರ್ಶನ ಮಾಡಿಕೊಂಡು ಬಂದಿದ್ದೆ. ಇವನ ತಾಯಿ ಅಂದರೆ ನನ್ನ ತಂಗಿಯನ್ನು ಭೇಟಿ ಮಾಡ...

ವಾಚ್ ಕೊಟ್ಟ ಮಾಮನ ಸಮಯ ನಿಂತುಹೋದ ಹೊತ್ತು...

ನಾನಿನ್ನೂ ಸ್ಕೂಲ್ ನಲ್ಲಿ ಓದುತ್ತಿದ್ದೆ. ಕೈಗೆ ಇಂಪೋರ್ಟೆಡ್ ಕ್ಯಾಸಿಯೊ ವಾಚ್ ಕಟ್ಟುತ್ತಿದ್ದೆ. ಅದರಲ್ಲಿ ಏಳು ಬಗೆಯ ಮ್ಯುಜಿಕಲ್ ಅಲಾರಾಂ ಇತ್ತು. ನನ್ನ ಜನ್ಮದಿನದಂದು ಅದು ಹ್ಯಾಪಿ ಬರ್ತಡೇ ಸಂಗೀತ ಹೇಳುತ್ತಿತ್ತು. ಬರ್ತಡೇ ದಿನ ತಾಸಿಗೊಂದು ಬಾರಿ ಇಡೀ ದಿನ ಅಲಾರಾಂ ಮೊಳಗುವಂತೆ ಮಾಡಬಲ್ಲ ವ್ಯವಸ್ಥೆ ಅದರಲ್ಲಿತ್ತು. ನನ್ನ ಓರಿಗೆಯ ಹುಡುಗರಲ್ಲಿ ಅದು ಮೂಡಿಸಿದ ಕುತೂಹಲ ಅಷ್ಟಿಷ್ಟಲ್ಲ. ಓದುತ್ತಿದ್ದ ಸ್ಕೂಲಿನಿಂದ ಹಿಡಿದು ಇಡೀ ಸುತ್ತಮುತ್ತಲಿನ ಜನಕ್ಕೂ ನಾನೊಂದು ಸ್ಪೆಶಲ್ ಪರ್ಸನ್ ಆಗಿಬಿಟ್ಟಿದ್ದೆ. ಬಟನ್ ಒತ್ತಿದರೆ ಒಂದು ಸಣ್ಣ ಟಾರ್ಚಿನಷ್ಟು ಬೆಳಕು ಮೂಡುತ್ತಿತ್ತು. ರಾತ್ರಿ ಕರೆಂಟ್ ಹೋದಾಗ ಒಳ್ಳೆ ಓದುವ ಧಿಮಾಕು ತೋರಿಸುವಂತೆ ವಾಚ್ ಹಿಡಿದುಕೊಂಡು ಓದುವ ಸಾಹಸ ಮಾಡುತ್ತಿದ್ದೆ.   ಆ ವಾಚು ನನ್ನ ಕಾಲೇಜು ದಿನಗಳವರೆಗೂ ಇತ್ತು. ಕೆಲ ಗೆಳೆಯರು ಎಲ್ಲಾದರೂ ಊರಿಗೆ ಹೋಗುವುದಿದ್ದರೆ ನನ್ನ ವಾಚ್ ಕಟ್ಟಿಕೊಂಡೇ ಹೋಗುತ್ತಿದ್ದರು. ಅದೆಷ್ಟು ಜನರ ಮುಂದೆ ಮ್ಯುಜಿಕಲ್ ಖುಷಿ ಮೂಡಿಸಿತೋ! ಅದರ ಸೆಲ್ ಒಮ್ಮೆ ಖಾಲಿಯಾಯ್ತು. ಅದಕ್ಕಾಗಿ ನಾನು ಪರಿದಾಡಿದ್ದು ಅಷ್ಟಿಷ್ಟಲ್ಲ. ಆಗಷ್ಟೇ ಕ್ವಾರ್ಟ್ಜ ವಾಚುಗಳು ದೇಶಕ್ಕೆ ದಾಂಗುಡಿ ಇಡುತ್ತಿದ್ದವು. ಕಡೆಗೆ ಅದರ ಸೆಲ್ ಬೆಳಗಾವಿಯಲ್ಲಿ ಸಿಕ್ಕಿತು. ಆಗ ಅದು ದುಬಾರಿಯಾಗಿತ್ತು. ಆರಂಭದ ಕೆಲ ವರ್ಷಗಳತನಕ ಸೆಲ್ ಡೌನ್ ಆಗೇ ಇರಲಿಲ್ಲ. ಆನಂತರದಲ್ಲಿ ಹತ್ತಾರು ಬಾರಿ ಸೆಲ್ ಚೇಂಜ್ ಮಾಡಿದೆ. ಮ...

ಗಡಿಯಾರ!

ಅದೊಂದು ಛೋಟೆಖಾನ್ ಸಾಹೇಬರ ಖಾನದಾನಿ ದುಕಾನು. ಅದರ ದರವಾಜಾದ ಮೇಲೆ ಅಜ್ಜನ ಕಾಲದ ದೊಡ್ಡದೊಂದು ಗಡಿಯಾರ. ಖಾನ್ ಸಾಹೇಬರು ಮುಂಜಾವಿನ ನಮಾಜಿಗೆ ಹೊರಡುವ ಹೊತ್ತಿಗೆ ಸರಿಯಾಗಿ,  ತನ್ನ ಪ್ರೇಯರ್ ಗೆಂದು ತೆರಳುತ್ತಿರುವ ಮತ್ತೊಬ್ಬ ವ್ಯಕ್ತಿ ಎದುರಾಗುತ್ತಿದ್ದ. ನಿತ್ಯ ದುಕಾನು ಮುಂದೆಯೇ ಹಾದುಹೋಗುತ್ತಿದ್ದ. ದುಕಾನಿನ ದೊಡ್ಡ ಗಡಿಯಾರ ನೋಡಿಕೊಂಡು ತನ್ನ ಕೈಗಡಿಯಾರ ಸೆಟ್ ಮಾಡಿಕೊಳ್ಳುತ್ತಿದ್ದ. ನಿತ್ಯವೂ ಇದನ್ನು ತಪ್ಪದೇ ಮಾಡುತ್ತಿದ್ದನಾತ. ಛೋಟೆಖಾನ್ ಸಾಹೇಬರು ಇದನ್ನು ತುಂಬ ದಿನಗಳಿಂದ ಗಮನಿಸುತ್ತಲೇ ಇದ್ದರು. ವಿಚಿತ್ರ ಕುತೂಹಲ ಇವರ ತಲೆ ತಿನ್ನತೊಡಗಿತ್ತು. ಇವನ್ನ ತಡೆದು ಒಮ್ಮೆ ವಿಚಾರಿಸಿಕೊಳ್ಳಲೇಬೇಕು ಎಂದು ತೀರ್ಮಾನಕ್ಕೆ ಬಂದುಬಿಟ್ಟರು.  ಎಂದಿನಂತೆ ಆ ವ್ಯಕ್ತಿ ದುಕಾನಿನೆದುರು ನಿಂತ. ಗಡಿಯಾರ ನೋಡಿ, ತನ್ನ ಕೈಗಡಿಯಾರ ಸೆಟ್ ಮಾಡಿಕೊಳ್ಳತೊಡಗಿದ. ಛೋಟೆಖಾನ್ ಸಾಹೇಬರು ಚಂಗನೆ ಆ ವ್ಯಕ್ತಿಯತ್ತ ನೆಗೆದು ಗಬಕ್ಕನೆ ಹಿಡಿದುಕೊಂಡುಬಿಟ್ಟರು. ಆತ ಗಾಬರಿಗೊಳ್ಳಲಿಲ್ಲ. ಸುಮ್ಮನೇ ನಿಂತುಬಿಟ್ಟ. ಅವನ ಸ್ಥಿತಪ್ರಜ್ಞೆಗೆ ಛೋಟೆಖಾನ್ ಸಾಹೇಬರು ದಂಗಾದರು.  ಅಲ್ಲ ಮೀಯಾ, ನಿತ್ಯ ನಮ್ಮ ದುಕಾನಿನ ಗಡಿಯಾರ ನೋಡಿಕೊಂಡೇ ನಿನ್ನ ಕೈಗಡಿಯಾರ ಸೆಟ್ ಮಾಡಿಕೊಳ್ಳುತ್ತಿಯಲ್ಲಾ ಯಾಕೆ? 'ಖಾನ್ ಸಾಹೇಬರೆ ನಾನು ಮಿಲ್ ನಲ್ಲಿ ಫೋರಮನ್ ಆಗಿದ್ದೆ. ನಿತ್ಯ ಇದೇ ಸಮಯಕ್ಕೆ ಸೈರನ್ ಮೊಳಗುವಂತೆ ನೋಡಿಕೊಳ್ಳುವುದು ನನ್ನ ಜವಾಬುದಾರಿಯಾಗಿತ...

ಈ ಬಂಧ, ಸಂಬಂಧ...

ಈಗ ಗಡಿಗಳೇ ಇಲ್ಲ. ಭಾವಸಮುದ್ರ ಎಲ್ಲೆಂದರಲ್ಲಿ ಆವರಿಸಿಕೊಂಡುಬಿಡುತ್ತದೆ. ಮಾಹಿತಿ ತಂತ್ರಜ್ಞಾನ ಇಡೀ ಜಗತ್ತನ್ನು ಒಂದು ಹಳ್ಳಿಯಂತಾಗಿಸಿದ್ದು ಹೌದು. ಆದರೆ, ಮನುಷ್ಯನ ಆಳದಲ್ಲೇ ಅಂತಃಕರಣ, ಬಂಧ, ಸಂಬಂಧ, ಸೆಳೆತಗಳ ಅಗಾಧ ಶಕ್ತಿ ಇದೆಯಲ್ಲ ಅದು ಎಂದಿನಿಂದ ಎಲ್ಲ ಮಿತಿ, ಬೇಲಿಗಳನ್ನು ಕಿತ್ತು ಬಿಸಾಕುತ್ತ ಸಾಗುತ್ತಿಲ್ಲವೇನು... ಭಾಷೆ, ಜಾತಿ, ಬಣ್ಣಗಳ ಮಿತಿಯಲ್ಲಿ ಅಷ್ಟು ಸುಲಭಕ್ಕೆ ಕರಗಿ ಹೋಗುವಂಥದಲ್ಲ ಮನುಷ್ಯ ಪ್ರೀತಿ. ಕರಗುವುದಾದರೂ ಯಾಕೆ? ಮಲೆಗಳಲ್ಲಿ, ಮರದ ಕೊಂಬೆಗಳಲ್ಲಿ ಅಲೆದಾಡಿ, ನಲಿದಾಡಿ ಬೆಳೆದುಬಂದ ಮನುಷ್ಯ ಜೀವ ಹೊಸ ಹೊಸ ನಾಗರಿಕತೆಯ ಹೊಳೆಯಲ್ಲಿ ಈಜುತ್ತಲೇ ಇದೆ. ಕಾಡಿಂದ ನೆಲ, ನೆಲದಿಂದ ನೀರು, ಆಕಾಶ, ಬಾಹ್ಯಾಕಾಶ, ಚಂದ್ರ, ಮಂಗಳ... ಮಿತಿಯುಂಟೇ ಈ ನೆಗೆತಕ್ಕೆ! ಸ್ವಿಜರಲ್ಯಾಂಡ್ ನ ಜ್ಯುರಿಚ್ ಗೆ ಪಯಣಿಸುತ್ತಿದ್ದೆ. ಸಹ ಪಯಣಿಗರಾಗಿ ನನ್ನ ಪಕ್ಕದ ಸೀಟ್ ನಲ್ಲಿ ನಾರ್ವೆ ದಂಪತಿ ಇದ್ದರು. ನಾನು ಆಕಾಶ ನೋಡುತ್ತಿದ್ದೆ. ಅಪರೂಪಕ್ಕೆ ಸೂರ್ಯ ಇಣುಕುತ್ತಿದ್ದ. ಕ್ಯಾಮೆರಾ ಕೊರಳಲ್ಲೇ ನೇತಾಡುತ್ತಿತ್ತು. ಎತ್ತಿಕೊಂಡು ಕ್ಲಿಕ್ಕಿಸುತ್ತಲೇ ಇದ್ದೆ. ಚಳಿ ಎನ್ನುವ ಛಿನಾಲಿಯಿಂದ ಬೇಸತ್ತ ದಿಲ್  ಸೂರ್ಯನ ಬಿಸಿಲಿಗೆ ಗುಲ್ ಮೊಹರಿನಂತೆ ಅರಳುತ್ತಿತ್ತು. ಆಕಾಶ ನಮ್ಮ ಮನಸುಗಳಂತೆ ತೆರಕೊಳ್ಳುತ್ತಲಿತ್ತು. ನಾನು ಮೋಡಗಳ ಜತೆ ಮೋಡವಾಗಿದ್ದೆ ಚಣ ಕಾಲ... ಪಕ್ಕದ ಸೀಟ್ ನಲ್ಲಿ ಕುಳಿತ ಮಹಿಳೆ ನನ್ನ ಭುಜದ ಮೇಲೆ ಕೈ ಇಟ...

ಏಯ್ ಧೀರ ಅಮ್ಮನಿಗೊಂದು ಸೆಲ್ಯೂಟ್ ಹೊಡಿಯೋ, ನನ್ನ ಪರವಾಗಿ...

ಕಳೆದೆರಡು ದಿನ ಇಲ್ಲಿ ಜೀವ ಸಣ್ಣಗೆ ನಡುಗುತ್ತಿತ್ತು. ಹೆರಿಗೆಯ ನೋವುಗಳಲ್ಲಿ ಹೆಣ್ಣುಜೀವವೊಂದು ಚಡಪಡಿಸುತ್ತಿತ್ತು, ಬಿಕ್ಕುತ್ತಿತ್ತು, ಹೊಸ ಜೀವಕ್ಕೊಂದು ಜನ್ಮ ಕೊಡುವುದು ತಮಾಷೆಯಾ... ಮನೆ ತುಂಬ ನಂಬುಗೆಯ ದೀಪಗಳನ್ನಿಟ್ಟು ಹಾರೈಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೆವು. ಕಾತರದಿಂದ ಕಾಯುತ್ತಿದ್ದ ಕ್ಷಣ ಬರುತ್ತಿದ್ದಂತೆ ಅವಕ್ಕೂ ಜೀವ ಬಂತು. ದೀಪಗಳು ಬೆಳಗತೊಡಗಿದವು. ನನ್ನವ್ವ ಮಾಡಿದ ಸಿಹಿ ಘಮ ಘಮಸತೊಡಗಿತು. ಅಮ್ಮನ ಒಡಲಿಂದ ಹೊರ ಬರುವ ಮುನ್ನ ಅವಳ ಲೋಕದಲ್ಲಿ ಬೆಚ್ಚಗಿದ್ದವ, ಈಗ ನಾರ್ವೆ ಚಳಿಗೆ ತೆರಕೊಂಡುಬಿಟ್ಟ. ಒಂಬತ್ತು ತಿಂಗಳು ಒಂಬತ್ತು ದಿನ ಒಡಲಲ್ಲೇ ಅದಾವ ಲೋಕ ಕಂಡನೋ, ಅದೆಷ್ಟು ಪ್ರೀತಿ ಉಂಡನೋ ಹೊರಕ್ಕೆ ಬರಲು ಒಲ್ಲೆ ಎನ್ನುವಂತೆ ವರ್ತಿಸಿದ. ವೈದ್ಯರು ಕೊಟ್ಟ ತಾರೀಕು ನವೆಂಬರ್ 24, 30... ಎಲ್ಲ ಕಳೆದುಹೋದವು. ವರ್ಷದ ಕ್ಯಾಲೆಂಡರ್  ಕಡೆಯ ತಿಂಗಳ ಹಾಳೆ ಬದಲಿಸುವುದಕ್ಕೆ ಇವನೇ ಬೇಕಿದ್ದನೆನ್ನುವಂತೆ ಹೊಸ ಜಗತ್ತಿಗೆ ದುತ್ತನೇ ಬಂದು ನಿಂತ. ಎಲಾ ಕಿಲಾಡಿ! ಆಗಲೇ ಹೊಕ್ಕಳುಹುರಿ ಕತ್ತರಿಸ ಹೊರಟ ವೈದ್ಯರ ಕತ್ತರಿ ಹಿಡಿಯನ್ನೆ ಗಟ್ಟಿ ಹಿಡಿದುಕೊಂಡಿದ್ದನಂತೆ! ಆ ಸಂದರ್ಭದಲ್ಲಿ ಅವರಪ್ಪ ಅಲ್ಲೇ ಇದ್ದರು. ವೈದ್ಯರ ತಂಡವೆಲ್ಲ ನಕ್ಕಿದ್ದೇ ನಕ್ಕಿದ್ದಂತೆ. ಆಸ್ಪತ್ರೆಯೊಳಗೆ ನನ್ನ ತಂಗಿಯನ್ನು ಕಾಣಲಾಗಲಿಲ್ಲ. ಒಳಕ್ಕೆ ಬಿಡಲಿಲ್ಲ. ಗಂಡನ ಬಿಟ್ಟರೆ ಅವಳ ಬಳಿ ಯಾರೂ ಇರುವಂತಿಲ್ಲ ಇಲ್ಲಿ. ಇಷ್ಟು ದಿನ ಇಲ್ಲಿ ಇದ್ದು ಅವಳ ಹೆರಿಗ...

ಹೊಸ ಬೆಳಕು ಹಬ್ಬಿಸಲು ಕಾದು ಕೂತ ದೀಪಗಳು...

ಈ ಜೀವಜಗತ್ತಿನ ಬಂಡಿ ಸಾಗಿಸುವ ಭಾರವೆಲ್ಲ ಹೆಣ್ಣಿಗೇ ಏಕೆ? ಹಟಕ್ಕೆ ಹೆಸರಾದ ಹೆಣ್ಣು ತಾಯಿಯಾಗುವಾಗ ನಮ್ಮನ್ನೆಲ್ಲ ಸಣ್ಣಗೆ ಅಲುಗಾಡಿಸಿಬಿಡುತ್ತಾಳೆ. ಅದಕ್ಕೇ ಜನಪದ ಮತ್ತು ಎಲ್ಲ ಧರ್ಮ ಗ್ರಂಥಗಳಲ್ಲೂ ತಾಯಿಗೆ ದೊಡ್ಡ ಸ್ಥಾನವಿದೆ. ಖುರಾನ್ ನಲ್ಲೂ. ಒಂದು ಉರ್ದು ಕವಿತೆ ಹೀಗೆ ಬಣ್ಣಿಸಿದೆ. ಈ ಜಗವ ರೂಪಿಸಿದವ ತಾಯಿಗೆಂಥಾ ಶ್ರೇಷ್ಠ ದರ್ಜೆ ಕೊಟ್ಟ ಅವಳ ಒಂದು ಪ್ರಾರ್ಥನೆಯಲ್ಲಿ ಎರಗಿದ ಕಂಟಕ ಪರಿಹರಿಸುವ ಶಕ್ತಿಯನಿತ್ತ! ಖುರಾನ್ ಇವಳ ಮಮತೆಯ ಹೀಗೆ ಬಣ್ಣಿಸಿದೆಯಲ್ಲಾ ದೇವರು ಸ್ವರ್ಗವನ್ನೇ ತಾಯ ಪಾದಕ್ಕೆಸೆದುಬಿಟ್ಟ!  ಅದೆಷ್ಟು ಬರಹಗಾರರು ಹೆಣ್ಣಿನ ತಾಯಿಗುಣ ಬಣ್ಣಿಸಿದ್ದು ಸುಮ್ಮನೇ ಅಲ್ಲ. ಈ ಉಪಖಂಡ ಕಂಡ ಅದ್ಭುತ ಕವಿ ಅಲ್ಲಾಮಾ ಇಕ್ಬಾಲ್ ತಮ್ಮ "ಮಾ ಕಾ ಖ್ವಾಬ್" ಕವಿತೆಯಲ್ಲಿ ತಾಯಿಯ ಕನಸು ಜೀವದ ಒಂದಿಡೀ ಪಯಣವನ್ನೇ ಬಿಚ್ಚಿಡುತ್ತದೆ. ಅಲ್ಲಿ ಜನ್ಮಭೂಮಿ, ದೇಶ, ಜಗತ್ತು ತಾಯಿಪಾದದ ಧೂಳಿನ ಕಣದಂತೆನಿಸಿಬಿಡುತ್ತದೆ. ಇದೇ ಜಾಡಿನಲ್ಲಿ ನಮ್ಮ ಲಂಕೇಶ್ ಕೂಡ... "ಅವ್ವ ನನ್ನವ್ವ ಫಲವತ್ತಾದ ಕಪ್ಪು ನೆಲ..." ಎಂದರಲ್ಲವೇ. ನೆಲವೆಂದರೆ ತಾಯ್ನೆಲವೂ ಹೌದು, ಜಗತ್ತೂ ಹೌದು. ಕೆಲವರಿಗದು ಭಾರತಮಾತೆ, ಕರ್ನಾಟಕಮಾತೆ....  ತಾಯಿ ಒಂದು ಸೀಮಿತ ವ್ಯಾಪ್ತಿಯಲ್ಲ. ಎಲ್ಲದರ ಮೂಲ. ಅದರ ಹರವು ಕ್ಷಿತಿಜದಾಚೆಗೂ....  ಆರ್ಕಿಮಿಡಿಸ್ ಹೇಳುತ್ತಿದ್ದನಂತೆ, ನಿಲ್ಲಲು ಜಾಗ ...