ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಭಾರತೀಯ ರಂಗಭೂಮಿಯ ವಿಭಿನ್ನ ರಂಗಸಾಹಸಿ ಹುಸೇನ್

ರಾಮಾಯಣ ವಿಶ್ವದ ಒಂದು ದೊಡ್ಡ ಕಥೆ . ಅಂಥ ಕಥೆಯನ್ನು ರಂಗದ ಮೇಲೆ ಭವ್ಯವಾಗಿ ಹೇಳುವುದು ಒಂದು ರಂಗಸಾಹಸ. ನಾಟಕ ಎಂದರೆ ಕಥೆಯನ್ನೇ ಹೇಳಬೇಕಿಲ್ಲ. ಯಥಾವತ್ ಆಗಿ ಕಥೆಯನ್ನು ರಂಗದ ಮೇಲಿಡುವುದೂ ಅಲ್ಲ. ಒಂದು ವಸ್ತು ಪ್ರತಿ ಸಾರಿ ರಂಗದ ಮೇಲೆ ಬಂದಾಗ ಅದು ಹೊಸದೇ ಆಗಬೇಕು. ಹಾಗೆ ಹೊಸದಾಗಿಸುವುದಕ್ಕೆ ರಂಗಭೂಮಿಗೆ ಸಾಧ್ಯವಿದೆ. ಮತ್ತೆ ಇಡೀ ಇತಿಹಾಸ, ಪುರಾಣ ಅಥವಾ ಕಾದಂಬರಿಯ ಕಥೆಯನ್ನು ಅದರ ಪರಿಸರ ಸಮೇತ ಮರುಸೃಷ್ಟಿ ಮಾಡೋದು ಕೂಡ ಒಂದು ದೊಡ್ಡ ಸಾಹಸ. ಒಟ್ಟಿನಲ್ಲಿ ವಿಭಿನ್ನ ರಂಗಾನುಭವ ನೀಡುವ ಯತ್ನ ಪ್ರಶಂಸೆಗೆ ಪಾತ್ರವಾಗುತ್ತದೆ. 'ದಿ ಲೆಜೆಂಡ್ ಆಫ್ ರಾಮ' ಟಿವಿಯಲ್ಲಿ ರಾಮಾಯಣ ಕಥಾಮಂಜರಿ ಪುಸ್ತಕಗಳಲ್ಲಿ ಬರುತ್ತಿದ್ದ ರಾಮಾಯಣ ಕಥಾನಕದ ಯಥಾವತ್ ಸೃಷ್ಟಿಯಂತೇ ಕಾಣಿಸಿತು. ಚಿಕ್ಕಂದಿನಿಂದ ಕಂಡ ಪ್ರಿಂಟೆಡ್ ರಾಮನ ಚಿತ್ರವೇ ಪರದೆ ಮೇಲೆ ಮಾತಾಡುತ್ತಿದೆ ಎನಿಸಿತು. ರಾಮಾಯಣ ಚಿತ್ರಗಳಲ್ಲಿ ಜೀವಂತವಾಗಿ ಇದ್ದಂತೆ ತೆರೆಯ ಮೇಲೆ ಇರಲಿಲ್ಲ. ಪ್ರಿಂಟೆಡ್ ಚಿತ್ರಣದ ತಾಜಾತನ ತೆರೆಯ ಮೇಲಿನ ದೃಶ್ಯಗಳಲ್ಲಿ ಕಾಣೆಯಾಗಿತ್ತು. ಆದರೂ ಜನ ಅದನ್ನು ಸಾಕ್ಷಾತ್ ಶ್ರೀರಾಮಚಂದ್ರನ ದರುಶನದಂತೇ ಭಾವಿಸಿದರು. ಭ್ರಮಿಸಿದರು. ಪೂಜಿಸಿದರು. ಮುದೇನೂರು ಸಂಗಣ್ಣ ಅವರ 'ಚಿತ್ರಪಟ' ನಾಟಕದಂಥ ರಾಮಾಯಣದ ವಿಭಿನ್ನ ನೋಟವಾಗಿ ರಮಾನಂದ ಸಾಗರ್ ಅವರ ರಾಮಾಯಣ ಡಿಡಿಯಲ್ಲಿ ಕಾಣಿಸಲಿಲ್ಲ. ಯಥಾವತ್ ಚಿತ್ರಣದ ಉದ್ದೇಶವಾಗಿದ್ದರಿಂದ ಅದು ಸಾಧ್ಯವೂ ಇರಲಿಲ್ಲ. ಆದರೆ, ಅ...

Vishnus vision

From S Vishnukumars mail...

ಜರ್ನಲಿಸಂ ಅಧ್ಯಯನ- ಅಲುಮ್ನಿ ಮೀಟ್., ತೋಬತೇಕ ಸಿಂಗ್ ನಾಟಕ. ಮಧುರ ನೆನಪುಗಳು ಮತ್ತು ಮಡುಗಟ್ಟಿರುವ ನೋವು

ವಿಶ್ವವಿದ್ಯಾಲಯ... ಅರಿವಿನ (ಜ್ಞಾನ) ದೊಡ್ಡ ವಿಶ್ವವೇ ತೆರಕೊಳ್ಳುವ ತಾಣ. ನಾವು ಆಯ್ದುಕೊಂಡ ವಿಷಯದ ಸಮಗ್ರ ವಿಶ್ವವೇ ಅಲ್ಲಿ ದರ್ಶನವಾಗಬೇಕು. ಹೀಗಾಗುವುದುಂಟೆ!(?) ಪತ್ರಿಕೋದ್ಯಮ ಎಂದರೆ ಪತ್ರಿಕೆಗೆ ಕೆಲಸ ಮಾಡುವುದು... ಅದನ್ನು ಹೇಗೆ ಮಾಡಬೇಕು? ಇದನ್ನು ಕಲಿಸುವುದೇ ವಿಶ್ವವಿದ್ಯಾಲಯ! ಹೀಗೆಂದುಬಿಟ್ಟರೆ... ಬರವಣಿಗೆ, ವರದಿ, ಎಡಿಟಿಂಗ್... ಬಗ್ಗೆ ಟಿಪ್ಸ್ ಕೊಡುವ ಕೆಲಸ ಮಾತ್ರ ವಿವಿಗಳದ್ದಾಗಿಬಿಡುತ್ತದೆ. ಸುಮಾರು ವರ್ಷಗಳ ಹಿಂದೆ ವಿವಿಗಳ ಸ್ಥಿತಿ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನಕ್ಕೆ ಸಂಬಂಧಿಸಿ) ಇದಕ್ಕೂ ಭಿನ್ನವೇನಿರಲಿಲ್ಲ. ಇದೇ ಸ್ಥಿತಿ ಈಗಲೂ ಇರಬಹುದು. ಕಾಲೇಜುಗಳಲ್ಲೂ... ಆದರೆ, ಇದೆಲ್ಲ ಮಿತಿಗಳನ್ನು ಮೀರಿ ಎಂಎ ಮಾಸ್ ಕಮ್ಯುನಿಕೇಷನ್ ಅಂಡ್ ಜರ್ನಲಿಸಂ ಅನ್ನು ತುಂಬ ಆಸ್ಥೆಯಿಂದ, ಆಸಕ್ತಿಯಿಂದ ಮತ್ತು ಅರ್ಥಪೂರ್ಣವಾಗಿ ಅಧ್ಯಯನ ಮಾಡುವ ಉಮೇದಿಯ ನನ್ನಂಥ ಹುಡುಗರು ಅನೇಕರಿದ್ದರು. ಸಮೂಹ ಮಾದ್ಯಮ ಅಥವಾ ಒಟ್ಟಾರೆ ಮಾಧ್ಯಮ ಪರಿಕಲ್ಪನೆಯ ಬಗ್ಗೆ ನನಗಂತೂ ಚೆನ್ನಾಗಿ ತಿಳಿದಿತ್ತು. ಥಿಯೇಟರ್, ಸಿನಿಮಾ, ಟಿವಿ, ಡಾಕ್ಯುಮೆಂಟರಿ, ಬೀದಿನಾಟಕ, ಸಾಕ್ಷರತಾ ಚಳವಳಿ, ಜಾಥಾ, ಶಿಬಿರ... ಹೀಗೆ ಮಾಧ್ಯಮದ ಹಲವು ಆಯಾಮಗಳಲ್ಲಿ ನಾನಾಗಲೇ ಸಕ್ರಿಯನಾಗಿ ತೊಡಗಿಕೊಂಡಿದ್ದವ. ಸಮೂಹ ಮಾದ್ಯಮದ ಕೆಲಸ, ಪಾತ್ರ ಮತ್ತು ಅದರ ಪರಿಣಾಮ, ಫಲಿತಾಂಶಗಳ ಬಗ್ಗೆಯೂ ಚೆನ್ನಾಗಿ ಅರಿವಿಟ್ಟುಕೊಂಡೇ ವಿವಿ ಶಿಕ್ಷಣದ ಹೊಸ್ತಿಲು ತುಳಿದಿದ್ದೆ (ಈ ವಿಭಾಗಕ್ಕೆ...

ಚರ್ಚ್ ದಾಳಿಯಂಥ ಬೂಟಾಟಿಕೆ ತಡೆಗೆ ಗಣರಾಜ್ಯೋತ್ಸವ ಆಚರಣೆ ಅಗತ್ಯ

ಮೈಸೂರಿನ ಹಿನಕಲ್ ಹೋಲಿ ಚರ್ಚ್ ಮತ್ತು ಮುರುಡೇಶ್ವರ ಸಮೀಪದ ಪೆರ್ನಮಕ್ಕಿ ಗ್ರಾಮದ ಚರ್ಚ್ ಮೇಲೆ ದಾಳಿ ನಡೆದಿದೆ. ದೇಶದ ಗಣರಾಜ್ಯೋತ್ಸವಕ್ಕೆ 60 ವರ್ಷಗಳೇ ಸಂದಿವೆ. ಗಣರಾಜ್ಯೋತ್ಸವವನ್ನು ಸ್ವಾತಂತ್ರ್ಯೋತ್ಸವಕ್ಕಿಂತ ಸಂಭ್ರಮದಿಂದ ಮತ್ತು ತುಂಬ ಹೆಮ್ಮೆಯಿಂದ ಆಚರಿಸಬೇಕಾದ ಅಗತ್ಯವಿದೆ. ಏಕೆಂದರೆ ಇದು ಹಕ್ಕುಗಳ ಬಗ್ಗೆ ಹೇಳುವ ಆಚರಣೆ. ಆಗಸ್ಟ್ 15  ಸಾಧನೆ. ಗಣರಾಜ್ಯೋತ್ಸವ ನಿತ್ಯದ ಬದುಕಿನ ಸಂಭ್ರಮಕ್ಕೆ ಭದ್ರ ಅಡಿಪಾಯ. ಹಕ್ಕುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಧಾರ್ಮಿಕ ಹಕ್ಕು. ನಂಬಿಕೆಗಳ ಹಕ್ಕು, ಆಚರಣೆ, ಸಂಪ್ರದಾಯ ಪಾಲನೆ, ಪೂಜಿಸುವ, ಪ್ರಾರ್ಥಿಸುವ ಹಕ್ಕು. ಇದಕ್ಕೆ ಲಿಖಿತ ಸಂವಿಧಾನದ ಹಕ್ಕುಪತ್ರವಿದೆ. ಇದಕ್ಕಾಗಿ ಯಾರಪ್ಪನ ಅನುಮತಿಯೂ ಬೇಕಿಲ್ಲ. ಮತ್ತು ಇದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಅಥವಾ ಬಲಪ್ರಯೋಗದ ಮೂಲಕ, ಪುಂಡಾಟಿಕೆ, ಬೂಟಾಟಿಕೆ ಮೂಲಕ ಹತ್ತಿಕ್ಕಲೂ ಸಾಧ್ಯವಿಲ್ಲ. ಭಾರತದಂಥ ಬಹುಮುಖಿ ಸಂಸ್ಕೃತಿಯ ದೇಶಕ್ಕೆ ಇದೆಲ್ಲ ಬಹುದೊಡ್ಡ ಸವಾಲೇನಲ್ಲ. ಒಂದು ಪ್ರಭುತ್ವ ಮೂಲದಲ್ಲಿ ನೆಲದ ಆಶಯಗಳನ್ನು, ಪರಂಪರೆಯ ಮೌಲ್ಯಗಳನ್ನು ಅಡಿಪಾಯಾಗಿಟ್ಟುಕೊಂಡು ತನ್ನ ಕಾರ್ಯಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆದರೆ ನಮ್ಮ ರಾಜ್ಯದ ಕಥೆಯೇ ಬೇರೆಯಾಗಿದೆ. ದೇಶದ ಯಾವುದೋ ಒಂದು ರಾಜ್ಯದಲ್ಲಿ ಯಶಸ್ವಿಯಾದ ಕೇಸರಿ ಪ್ರಾಜೆಕ್ಟ್ ಅನ್ನು ಅದೇ ಸ್ವರೂಪದಲ್ಲಿ ಇಲ್ಲಿಯೂ ತುರುಕುವ ಯತ್ನ ಇಲ್ಲೀಗ ನಡೆಯುತ್ತಿದೆ. ಈಗೀಗ ಹೆಚ್ಚುತ್...

ಗೂಡು ಕಳಕೊಂಡ ಗುಬ್ಬಚ್ಚಿಗಳು...!

ಈ ಚಿತ್ರ ನೋಡಿ ನಿಮಗೇನನ್ನಿಸಿತು? ಯಾವುದೋ ಕಟ್ಟಡದೊಳಗೆ ಗುಬ್ಬಚ್ಚಿಗಳು  ಕೂತಿದ್ದನ್ನು ಮೊಬೈಲ್ ಫೋನಿನಲ್ಲಿ ಸೆರೆಹಿಡಿದಿದ್ದು ಅಂತನ್ನಿಸಿರಬೇಕು. ಹೌದು ಇದು ಮೋಬೈಲ್ ಫೋನಿನ ಕ್ಯಾಮೆರಾದಿಂದ ನಾನೇ ಸೆರೆಹಿಡಿದಿದ್ದು. ಈ ಕಟ್ಟಡ ನಮ್ಮ ಬೆಂಗಳೂರು ಇಂಟರ್ ನ್ಯಾಷನಲ್  ಏರ್ ಪೋರ್ಟ್...  ಅದರೊಳಗಿನ ಕ್ಯಾಂಟಿನ್ ನಲ್ಲಿ ತೆಗೆದ ಚಿತ್ರಗಳಿವು. ಅಲ್ಲಿ ಗುಬ್ಬಚ್ಚಿಗಳದ್ದೇ ಸದ್ದು, ಪಿಸುಮಾತು, ಚಿನಕುರಳಿ ಮಾತು... ನೋವಿನ ದನಿ...  ಕೇಳಿಸುತ್ತಿತ್ತು...!                                                                                                     ...

ಪೊನ್ನಪ್ಪ ಅವರ ಪ್ರಗತಿಪರ ಧೋರಣೆಗೆ ದಿಲ್ ಸೇ ಸಲಾಂ...

Whoso loveth father or mother more than me is not worthy of me.... Conflicts between conscience and law, in which the true Christian will feel bound to honour the man who follows his own conscience rather than the dictates of the law... ಹೀಗೆ ಒಂದಷ್ಟು ಕ್ರೈಸ್ತ ನಂಬಿಕೆಗಳನ್ನಿಟ್ಟುಕೊಂಡು ಬರ್ಟ್ರಂಡ್ ರಸೆಲ್ ಕುಟುಂಬ ಕಲ್ಪನೆಯ ಬಗ್ಗೆ ಪುಸ್ತಕವೊಂದರಲ್ಲಿ ಚರ್ಚಿಸಿದ್ದಾನೆ. ಮದುವೆ ಮತ್ತು ಆದರ್ಶ ಕಲ್ಪನೆಯ ಬಗ್ಗೆ  ಅರ್ಥಪೂರ್ಣ ಪ್ರಸ್ತಾಪ ಮಾಡಿದ್ದಾನೆ. ಅವನ ಒಟ್ಟು ಉದ್ದೇಶ ಹೇಗೆ ಕುಟುಂಬ ಕಲ್ಪನೆಗಳು ಮತ್ತು ಅದರ ಮೇಲೆ ಧರ್ಮದ ಹಿಡಿತಗಳು ಆದರ್ಶದ ಹೆಸರಲ್ಲಿ ಕಟ್ಟಲ್ಪಡುತ್ತವೆ, ಪುರಾತನ ನಂಬಿಕೆಗಳು ಮತ್ತು ಆಧುನಿಕ ಧೋರಣೆಗಳ ನಡುವಿನ ಸಂಘರ್ಷಗಳು ಹೇಗೆ ಒಂದಕ್ಕೊಂದು ತಿಕ್ಕಾಟ ನಡೆಸುತ್ತವೆ... ಎಂದು ಅದರಲ್ಲಿ ವಿವರಿಸುವ ಯತ್ನ ಮಾಡಿದ್ದಾನೆ. ಧರ್ಮ ಮತ್ತು ಸಂಪ್ರದಾಯಗಳ ಸೀಮಿತ ಕಟ್ಟಳೆಗಳನ್ನು ಮೀರಿ ಮನುಷ್ಯ ತನ್ನ ಅಂತಃಪ್ರೇರಣೆಗೆ ಹೆಚ್ಚು ಮಹತ್ವ ಕೊಡುವುದರ ಮೂಲಕ ಅವನ ವ್ಯಕ್ತಿತ್ವ ಪ್ರಖರಗೊಳ್ಳುತ್ತಾ ಸಾಗುತ್ತದೆ ಎನ್ನುವುದು ಮಾತ್ರ ಸ್ಪಷ್ಟ. ಪುರಾತನ ಕಾಲದ ಕ್ರೈಸ್ತರು ಧರ್ಮದ ಕಟ್ಟಳೆಗಳಿಗೆ ಮಹತ್ವ ಕೊಡುತ್ತ ಬಂದಿದ್ದರು. ಅದಕ್ಕೂ ಹಿಂದೆ ಯಾವ ಮಿತಿಗಳೂ ಇರಲಿಲ್ಲ. ಆಗಿನ ಭೀಕರ ಸ್ಥಿತಿಯಿಂದ ಒಂದಷ್ಟು ಪ್ರಗತಿ ಸಾಧನೆಗೆ ಆ ಥರದ ಧರ್ಮ ಬಳಕೆಯಾಯ್ತಾದರೂ ಕಾಲಾ...

ಸಾವಿನ ಬಗ್ಗೆ ಗಿಬ್ರಾನ್ ಸಾಲುಗಳು...

ನೀವು ಸಾವಿನ ರಹಸ್ಯ ತಿಳಿಯಲು ಶೋಧನೆ ನಡೆಸಬಹುದು. ಆದರೆ, ಆತ್ಮಶೋಧನೆ ಇಲ್ಲದೇ ಮೃತ್ಯುವಿನ ದರುಶನ ಹೇಗಾದೀತು? ಇರುಳಿಗೆ ಬದ್ಧ ಗೂಬೆ ಕಣ್ಣುಗಳು ಹಗಲು ತೆರಕೊಳ್ಳುವುದೇ ಇಲ್ಲ,  ಬೆಳಕಿನ ಬಣ್ಣಗಳ ರಹಸ್ಯವ  ಅದು ಹೇಗೆ ಪ್ರಕಟಿಸೀತು...! ನಿಮಗೆ ಮೃತ್ಯುವಿನ ನಿಜಸ್ವರೂಪದ ದರುಶನವಾಗಬೇಕೆ? ಹಾಗಿದ್ದರೆ ತೆರೆದುಕೊಳ್ಳಲಿ ನಿಮ್ಮ ಹೃದಯ ಅನಂತದವರೆಗೆ,  ಅದು ಲೀನವಾಗಲಿ ಬದುಕಿನ ಶರೀರದೊಳಗೆ... ಏಕೆಂದರೆ ನದಿ ಮತ್ತು ಸಾಗರದಂತೆ, ಬದುಕು ಮತ್ತು ಮೃತ್ಯುವೂ ಅಭಿನ್ನ. ನಿಮ್ಮ ಆಸೆ, ಆಕಾಂಕ್ಷೆಗಳ ಆಳದಲ್ಲೇ ಪರಲೋಕದ ಮೌನ ಚೇತನ ಮಿಸುಕಾಡುತ್ತಿರುತ್ತದೆ. ಮತ್ತು ನಿಮ್ಮ ಹೃದಯ, ಮಂಜಿನೊಳಗೆ ಹೂತ ಬೀಜದಂತೆ ವಸಂತದ ಕನಸು ಕಾಣುತ್ತಿರುತ್ತದೆ. ಇಂಥ ಕನಸುಗಳ ಮೇಲೆ ನಂಬಿಕೆಯಿಡಿ; ಏಕೆಂದರೆ, ಇಲ್ಲೇ ಅಡಗಿದೆ ದ್ವಾರ, ಅನಂತದೆಡೆಗೆ ತೆರಕೊಳ್ಳುವ ಹಾದಿಗೆ! ಸಾಯುವುದರರ್ಥ, ಗಾಳಿಯಲ್ಲಿ ಲೀನವಾಗುವುದು, ಬಿಸಿಲಲ್ಲಿ ಕರಗುವುದು ಎಂದೇ ಅಲ್ಲವೇ? ನಿಮ್ಮ ಪ್ರಾಣವಾಯುವಿಗೆ ಅಶಾಂತ ಬಿರುಗಾಳಿಯಿಂದ ಮುಕ್ತಿ ಸಿಗುವುದು, ಮತ್ತು ಎತ್ತರೆತ್ತರಕ್ಕೆ ಏರಿ ವಿಸ್ತಾರ ಪಡಕೊಳ್ಳುತ್ತ ಮುಕ್ತಿಮಾರ್ಗ ಹಿಡಿದು ಸೃಷ್ಟಿಕರ್ತನ ಸೇರಿಕೊಳ್ಳುವುದು... ಇಷ್ಟೇ ಅಲ್ಲವೇ ಉಸಿರು ಸ್ತಬ್ದವಾಗುವುದರರ್ಥ? ಪ್ರಶಾಂತ ನದಿಯ ಜಲ ಕುಡಿದಾಗಲೇ ನೀವು ನಿಜವಾಗಲೂ ಹಾಡೋದು! ಶಿಖರ-ಪರ್ವತಗಳ ತುದಿ ತಲುಪಿದ ಮೇ...

ದಿಲ್ ಏಕ್ ಮಂದಿರ್ ಹೈ...

'ದಿಲ್' ಪುಟ್ಟ ಗೂಡಿಗೆ ಎರಡು ಪ್ರೇಮ ಹಕ್ಕಿಗಳು ಹಾರಿ ಬಂದಿದ್ದವು. ನಿನ್ನೆ (26/12/2009)  ಒಂದು ಹಗಲು ಮತ್ತು ಒಂದಿಡೀ ರಾತ್ರಿ ಈ ಗೂಡಲ್ಲೇ ತಂಗಿದ್ದವು. ಏನವುಗಳ ಕಲರವ!. ತಮ್ಮ ಪ್ರೇಮ ಪಯಣದ ಹಾದಿಯಲ್ಲಿ ಒಂದಷ್ಟು ಕಾಲ ಈ ಗೂಡಲ್ಲಿ ತಂಗಿದ್ದಕ್ಕೆ ಅದೆಷ್ಟು ಕೃತಜ್ಞತೆ ಹೇಳಲಿ.. ನೋಡಿ ಇಂಟರ್ ನೆಟ್ ಎನ್ನುವ ಮಾಯಾಂಗನೆ ಅದೆಂಥ ಮಾಟ ಮಾಡಿದಳು! ಯಾವುದೋ ಒಂದು ಖಾಲಿ ಭಾವದ ಹೊತ್ತಲ್ಲಿ ಆರ್ಕುಟ್, ಟ್ವಿಟರ್ ಎನ್ನುವ ಸೋಶಿಯಲ್ ತಾಣಗಳಲ್ಲಿ ಹರಿದಾಡಿದ ಮನಸುಗಳಿಗೆ ಎಂಥ ಅದೃಷ್ಟು ಖುಲಾಯಿಸಿತು! ತನ್ನ ಗೆಳತಿಯೊಬ್ಬಳು ನೀಡಿದ ಸಲಹೆಗೆ ಈ ಹುಡಗಿ ಒಂದು ಚಾನ್ಸ್ ನೋಡೋಣ ಎಂದು ಸಂದೇಶ ರವಾನಿಸಲು ಶುರುವಿಟ್ಟುಕೊಂಡಳು. ಆ ಕಡೆಯಿಂದ ಹುಡುಗ ಒಳ್ಳೆಯ ಸ್ಪಂದನೆ ನೀಡಿದ. ಪ್ರೇಮ ಲೋಕ ತೆರಕೊಳ್ಳಲು ಅದೆಷ್ಟು ಸಮಯ ಬೇಕು? ಆನ್ ಲೈನ್ ಪ್ರಣಯದ ಕ್ಷಣಗಳು ಹಾಗೇ ಗರಿಬಿಚ್ಚಿ ನಲಿದಾಡಲು ಆರಂಭಿಸಿದವು. ಆ ಕ್ಷಣಗಳಿಗೆ ಅದೆಂಥ ಮೋಡಿ ಇತ್ತೊ ಅಂತೂ ಒಂದು ಬಂಧ ಗಟ್ಟಿ ಬುನಾದಿ ಪಡಕೊಂಡಿತು. ಹುಡುಗ ಮುಂಬೈನಲ್ಲಿ ಕಂಪೆನಿಯೊಂದರ ಕಾಲ್ ಸೆಂಟರ್ ಉದ್ಯೋಗಿ. ಹುಡುಗಿ ನಾಡಿನ ಹೆಸರಾಂತ ಇಂಗ್ಲಿಷ್ ದೈನಿಕದ ಪತ್ರಕರ್ತೆ. ದೂರದ ಪಶ್ಚಿಮ ಬಂಗಾಳದವಳು. ಒಂದು ದಿನ ಹುಡುಗಿಯನ್ನು ಕಾಣಲು ಹುಡುಗ ಮುಂಬೈನಿಂದ ಬೆಂಗಳೂರಿಗೆ ಬಂದ. ಹುಡುಗಿಗೆ ಏನು ಮಾಡಬೇಕೊ ತೋಚದಾಯಿತು. ಬಂಧ ಗಟ್ಟಿಗೊಳ್ಳುವ ಈ ಪರಿಯ ಸ್ಪೀಡ್ ...

An Important Issue: MUST READ

Politics is not a SERVICE anymore but a PROFESSION!!! An Important Issue! Salary & Govt. Concessions for a Member of Parliament (MP) Monthly Salary : Rs. 12,000/- Expense for Constitution per month : Rs. 10,000/- Office expenditure per month : Rs. 14,000/-   Traveling concession (Rs. 8 per km) : Rs. 48,000/- (eg. For a visit from South India to Delhi & return : 6000 km) Daily DA TA during parliament meets : Rs. 500/day Charge for 1 class (A/C) in train : Free (For any number of times) (All over India )   Charge for Business Class in flights : Free for 40 trips / year (With wife or P...A.) Rent for MP hostel at Delhi : Free. Electricity costs at home : Free up to 50,000 units. Local phone call charge : Free up to 1, 70,000 calls.. TOTAL expense for a MP [having no qualification] per year : Rs.32, 00,000/- [i.e.. 2.66 lakh/month] TOTAL expense for 5 years : Rs. 1, 60, 00,000/- For 534 MPs, the expense for 5 years : Rs. 8,...

ಪ್ರೀತಿ ಎನ್ನುವ ದೊಡ್ಡ ಬಾಂಬ್!

ಸ್ಕೂಲ್ ಮಕ್ಕಳ ಸಮಾರಂಭದಲ್ಲಿ ಏನು ಮಾತಾಡಬೇಕು? ಅದೂ ವಾರ್ಷಿಕೋತ್ಸವದಂಥ, ಉತ್ಸವದಂಥ ಸಂದರ್ಭದಲ್ಲಿ?... ಗುಬ್ಬಚ್ಚಿ ಗೂಡುಗಳ ಸುತ್ತ ಸಂಜೆ ಹೊತ್ತಲ್ಲಿ ಕೊಂಚ ಜೋರಾಗೇ ಚಿಲಿ ಪಿಲಿಗುಟ್ಟುವಂತೆ ಮಕ್ಕಳು ಮಾತಾಡ್ತಾನೇ ಇರ್ತಾರೆ. ಹಾಕಿದ ದಿರಿಸು, ಮೇಕಪ್ ಸಮೇತ ತಮ್ಮ ಡಾನ್ಸ್ ಪಾಳಿ ಯಾವಾಗ ಬರುತ್ತೊ ಎನ್ನುವ ಧಾವಂತದಲ್ಲಿರ್ತಾರೆ. ಮಕ್ಕಳು ಬಣ್ಣ ಹಚ್ಕೊಂಡು, ತಮ್ಮ ಜೇಬುಗಳಿಗೆ, ಪರ್ಸ್ ಗಳಿಗೆಲ್ಲ ಅಷ್ಟು ದೊಡ್ಡ ಕತ್ತರಿ ಹಾಕಿ ಖರೀದಿಸಿದ ದಿರಿಸು ಹಾಕ್ಕೊಂಡು ಸ್ಟೇಜ್ ಮೇಲೆ ಹೇಗೆ ಕಾಣ್ತಾರೆ! ಅಂತ ನೋಡುವ ಏಕಮಾತ್ರ ಕುತೂಹಲದಿಂದ ಬಂದ ಪಾಲಕರು, ಪೋಷಕರು ಭಾಷಣ ಕೇಳುವ ತಾಳ್ಮೆಯನ್ನೆಲ್ಲಿ ಹೊತ್ತು ತಂದಿರ್ತಾರೆ?  ಉದ್ದುದ್ದ ಬೋರ್ ಹೊಡಿಸುವ ವಿಷಯಗಳನ್ನು ಚಚ್ಚುವ ಬಹುತೇಕ ಭಾಷಣಕಾರರು ಇಂಥ ಸಮಾರಂಭಗಳಲ್ಲಿ ಕಿರಿ ಕಿರಿ ಹುಟ್ಟಿಸಿ ಭಾಷಣಕಾರರ ಬಗ್ಗೆ  ಭಯ ಹುಟ್ಟಿಸಿಟ್ಟಿದ್ದಾರೆ. ಇನ್ನು ಕೆಲವರು ಜೋಕುಗಳ ಮೂಲಕ, ಚಾಣಾಕ್ಷ ಮಾತುಗಳ ಮೂಲಕ ಪ್ರೇಕ್ಷಕರಿಗೆ ಸರ್ಕಸ್ ಜೋಕರ್, ಪ್ರಾಣಿಗಳ ಕೌಶಲ್ಯದಂತೆ ಪ್ರತಿಭೆ ಮೆರೆದು ಟೈಂ ಪಾಸ್, ಎಂಟರ್ಟೇನ್ಮೆಂಟ್ ಮಟ್ಟಕ್ಕೆ ಭಾಷಣಗಳನ್ನು ಇಳಸಿಬಿಟ್ಟಿದ್ದಾರೆ. ಇನ್ನು ಕೆಲವರು ಬಿಟ್ಟಿ ಪ್ರವಚನ ಹೇಳಿ ದೇವಾಂಶ ಸಂಭೂತರಂಥ, ಡಿಪ್ಲೋಮೆಸಿಯಂಥ ಬರಿಯ ಸೋಗು ಮೆರೆದಿದ್ದಾರೆ.  ಹೀಗಾಗಿ ಇದೆಲ್ಲ ನೆನಪಿಸಿಕೊಂಡು ನನಗೂ ಭಾಷಣ ಎಂದರೆ ಒಂದು ರೀತಿಯ ಭಯ ಹುಟ್ಟಿಕೊಂಡಿದ್ದು...

ಇಡ್ಡಿ, ವಡೆ, ಕಾಫಿ ನುಂಗಲು ಬರ್ತಿದೆ ಅಮೆರಿಕನ್ ದರ್ಶಿನಿ!

ಅಮೆರಿಕದ ಬೂಟು, ಬಂದೂಕು ಬಂದ ಹಾಗೆ ಬ್ರೆಡ್, ಬಿಸ್ಕತ್ ಕೂಡ ಇಲ್ಲಿ ಬಂದಾಗಿದೆ. ಶ್ರೀಮಂತ ರಾಷ್ಟ್ರ, ಸೂಪರ್ ಪಾವರ್ ಧಿಮಾಕಿನಿಂದ ಕೊಂಚ ಕೆಳಕ್ಕಿಳಿಯುವಂಥ ಆರ್ಥಿಕ ಹೊಡೆತವನ್ನೂ ಅದು ಎದುರಿಸುತ್ತಿದೆ. ಇನ್ನದು ರಸ್ತೆ ವ್ಯಾಪಾರಕ್ಕೂ ಇಳಿಯುವ ದಿನಗಳು ದೂರವಿಲ್ಲ. ಆದರೂ ವ್ಯಾಪಾರದಲ್ಲಿ ನಮ್ಮ ಮಾರ್ವಾಡಿಗಳ ಮಾವನಂತಿರುವ ಅಮೆರಿಕನ್ನರು ಕಷ್ಟ ಬಂದಾಗ ಕತ್ತೆ ಕಾಲೂ ಹಿಡಿಯುವುದಕ್ಕೆ ಹೇಸುವುದಿಲ್ಲ. ಆ ಮಾತು ಹಾಗಿರಲಿ.  ನಮ್ಮ ಬೆಂಗಳೂರಿನ ಎಂ ಜಿ ರಸ್ತೆಯಲ್ಲಿರುವ ಸ್ಪೆನ್ಸರ್ ಸೂಪರ್ ಮಾರ್ಕೆಟ್ ನಲ್ಲಿ ಅಮೆರಿಕ ಕಂಪೆನಿಯೊಂದು ಹೊಟೆಲ್ ಆರಂಭಿಸಿದೆ. ಔ ಬಾನ್ ಪೇನ್ ಎನ್ನುವುದು ಹೊಟೇಲ್ ಹೆಸರು. ಇದೊಂದು ಥರ 'ಅಮ್ಯಾರಿಕನ್ ದರ್ಶಿನಿ'!  ಕಾಫಿ, ಟೀ, ಬ್ರೆಡ್ ಜತೆ ಒಂದು ಸಿಂಪಲ್ ಊಟ ಕೂಡ ಅದರ ಮೆನುವಿನಲ್ಲಿದೆ. ಪಾಶ್  ಎನಿಸುವ ಗಾಜಿನ  ಮನೆಯಲ್ಲಿ  ನಮ್ಮ ನ್ನು  ಕೂರಿಸುವ  ನೈಸ್  ಆಗಿ ಬೆಣ್ಣೆ ಹಚ್ಚಿದ ಬ್ರೆಡ್ ಟೇಬಲ್ಲಿಗಿಟ್ಟು ಅಷ್ಟೇ ನೈಸ್ ಆಗಿ ಜೇಬಿಗೆ ಕೈ ಹಾಕುವ ಈ ಹೊಟೇಲು ಅಷ್ಟು ದುಬಾರಿ ಏನಲ್ಲ.  ಆದರೆ,  ಇದರ ಡೌನ್ ಟು ಅರ್ತ್ ಮನೋಧರ್ಮ ನೋಡಿದರೆ ಇನ್ನಿದು ಬೆಂಗಳೂರಿನ ಎಲ್ಲೆಡೆ ದರ್ಶಿನಿಗಳಂತೆ ತನ್ನ ಬ್ರಾಂಚ್ ತೆರೆಯುವುದರಲ್ಲಿ ಸಂದೇಹವೇ ಇಲ್ಲ. ಪಕ್ಕಾ ಅಮೆರಿಕ, ಇಟ್ಯಾಲಿಯನ್, ಫ್ರೆಂಚ್ ಕುವರಿಯಂತೆ ಕಂಗೊಳಿಸುವ ಇ...

ತಾಯ್ತನದ ಸಂಭ್ರಮಕ್ಕೆ ತಿಪ್ಪಣ್ಣ ದಂಪತಿ ಕೊಟ್ಟ ಅರ್ಥಪೂರ್ಣ ಕಳೆ..

ಸಂಬಂಧಗಳಲ್ಲಿ ಮೂಲಭೂತ ಕ್ರಾಂತಿಯುಂಟಾದಾಗ ಎಲ್ಲೂ ಯುದ್ಧವಿರದು. ಮೊದಲು ನಮ್ಮೊಳಗೆ ನಾವೇ ರೂಪಿಸಿಕೊಂಡ ಬಿಂಬಗಳನ್ನು ಒಡೆದು ಹಾಕಬೇಕು. ನಾನು ಮುಸ್ಲಿಂ, ನಾನು ಹಿಂದೂ, ನಾನು ಕ್ರೈಸ್ತ, ನಾನು ಸಿಖ್, ನಾನು ಬೌದ್ಧ... ಎನ್ನುವ ನಮ್ಮ ಬಗ್ಗೆ ನಾವೇ ನಮ್ಮೊಳಗೆ ರೂಪಿಸಿಕೊಂಡ ಈ ಬಿಂಬಗಳನ್ನು ನಾಶಮಾಡಿಕೊಳ್ಳದೇ ನಮಗೆ ಶಾಂತಿ ಇಲ್ಲ... ಹೀಗೆ ಹೆಸರಾಂತ ಬುದ್ಧಿಜೀವಿ ಜೆ. ಕೃಷ್ಣಮೂರ್ತಿ ವಿಚಾರ ಲಹರಿ ಸಾಗುತ್ತದೆ. ಸಂಬಂಧವೆಂದರೇನು? ಸಂಬಂಧವಿರುವುದು ಎಂದರೇನು? ಸಂಬಂಧವೆಂದರೆ ಮತ್ತೊಬ್ಬ ಮನುಷ್ಯ ಜೀವಿಯೊಡನೆ ಸಂಪರ್ಕ. ಒಟ್ಟಾಗಿ ಇರುವುದು, ಅವನ ಎಲ್ಲ ಕಷ್ಟ, ಸಮಸ್ಯೆ, ಕಾರ್ಪಣ್ಯ, ಕಳವಳಗಳೊಡನೆ ಅವು ನಿಮ್ಮವೇ ಎಂಬಂತೆ ತತ್ ಕ್ಷಣ ಸಂಪರ್ಕ ಕಲ್ಪಿಸಿಕೊಳ್ಳೋದು. ಕೃಷ್ಣಮೂರ್ತಿ ಅವರಂತೆ ಅನೇಕರು ಇಂಥ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ನನಗೆ ಅನಿಸೋದು ಇಷ್ಟು. ಮನುಷ್ಯ ಇಂಡಿಪೆಂಡೆಂಟ್ ಅಲ್ಲವೇ ಅಲ್ಲ. ಆತ ಇಂಟರ್ ಡಿಪೆಂಡೆಂಟ್ ಎಂದು ಹೇಳಬಹುದು. ಹೌದು, ಆತನಿಗೆ ಇತರರ ಜತೆಗಿನ ಸಾಂಗತ್ಯ, ಒಡನಾಟ ಇಲ್ಲದಿದ್ದರೆ ಬದುಕೇ ಕಷ್ಟ. ಏಕಾಂಗಿಯಾಗಿರಲು ಸಾಧ್ಯವೇ ಇಲ್ಲ. ಕಡೆಪಕ್ಷ ತನ್ನ ಜತೆಗೆ ತಾನಾದರೂ ಮಾತಾಡಬೇಕು. ಅಂದರೆ ತನ್ನೊಳಗಿನ ಅವನು ಮತ್ತು ಅವನಿಂದ ಕಳಚಿಕೊಂಡು ಎಲ್ಲೊ ಅಲೆದಾಡುತ್ತಿರುವ ಇವನು ಪರಸ್ಪರ ಸ್ಪಂದಿಸಲೇಬೇಕು. ಮಾತಾಡಿಕೊಳ್ಳಲೇಬೇಕು. ಕಲ್ಪಿಸಿಕೊಂಡ ವ್ಯಕ್ತಿತ್ವ ಮತ್ತು ಒಳಗೇ ಇರುವ ಬೈ ಡಿಫಾಲ್ಟ್ ವ್ಯಕ್ತಿತ್ವಗಳೆರಡರ ನಡುವಿನ ತಿ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...