ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೊದಲ ವಿದೇಶ ಪಯಣ ಆರಂಭದ ಕ್ಷಣಗಳು...

ನಾರ್ವೆ ದೇಶಕ್ಕೆ ಹೊರಡುವ ನನ್ನ ತಯಾರಿ ಏನ್ ಕೇಳ್ತಿರಾ... ಚಂದ್ರಲೋಕಕ್ಕೆ ರಾಕೇಶ್ ಶರ್ಮಾ ಹೊರಡುವಾಗಲೂ ಇಷ್ಟು ಚಡಪಡಿಕೆ, ಹಿಂಜರಿಕೆ ಅನುಭವಿಸಿರಲಿಕ್ಕಿಲ್ಲ! ಜತೆಯಲ್ಲಿ ಅಮ್ಮ ಮತ್ತು ನನ್ನ ತಂಗಿಯ ಅತ್ತೆ ಕೂಡ ಹೊರಡಲಿದ್ದರು. ಚಳಿಗಾಲದಲ್ಲಿ ಯುರೋಪ ಹೊರಟುನಿಂತ ನಮ್ಮ ಸಾಹಸಕ್ಕೆ ಗೆಳೆಯರೂ ಬೆಚ್ಚಿದ್ದರು. ಪಾಸಪೋರ್ಟ್ ತೆಗೆಯಿಸಿಕೊಳ್ಳುವುದಕ್ಕೂ ಹಿಂಜರಿದಿದ್ದ ನಾನು ವಿಸಾ, ಟಿಕೆಟ್ ಅಂತೆಲ್ಲಾ ಹೆಣಗಾಡುವುದನ್ನು ನೆನೆದರೆ ನನಗೇ ನಗು ಬರುತ್ತಿತ್ತು. ವಿಮಾನ ಹತ್ತುವ ಮುಂಚಿನ ಕೆಲ ಕ್ಷಣಗಳಿವು... ಎಷ್ಟೋ ವರ್ಷಗಳ ನಂತರ ನನ್ನ ಕೇಶರಾಶಿ ಅಂತೂ ಒಂದು ಸಲೂನಿನ ಕತ್ತರಿ ರುಚಿ ಕಂಡಿತು... ನವದೆಹಲಿಯಲ್ಲಿನ ನಾರ್ವೆ ಕಾನ್ಸುಲೇಟ್ ಆಫೀಸಿನಲ್ಲಿ ವೀಸಾ ಸ್ಟ್ಯಾಂಪ್ ಮಾಡಿಸಿಕೊಂಡು ಪಾಸಪೋರ್ಟ್ ಪಡೆದುಕೊಂಡ ಕ್ಷಣ... ಅಯ್ಯೋ ಅದೊಂದು ಅತ್ಯಂತ ಕಠಿಣ ಸಮಯ! ಯುರೋಪ ಚಳಿಗೆ ಇಲ್ಲಿಂದಲೇ ತಯಾರಿ! ಕನ್ನಡಿ ಮುಂದೆ ನನ್ನ ಮೇಲೆ ನಾನೇ ಜೋಕು ಮಾಡಿಕೊಂಡು ನಕ್ಕಿದ್ದೇ ನಕ್ಕಿದ್ದು. ವೈಯಕ್ತಿಕವಾಗಿ ನಾನೆಂದೂ ವಿದೇಶದ ಸೊಲ್ಲೆತ್ತಿದವನಲ್ಲ. ಈ ಹಿಂದೆ ಒಂದು ಸಾರಿ ಪ್ಯಾರಿಸ್ ಮತ್ತು ದುಬೈ ಹೋಗುವ ಬಗ್ಗೆ ಆಫೀಸಿನ ಮೇಲಧಿಕಾರಿಯಾಗಿದ್ದ ಆರ್ ಪಿ ಜಗದೀಶ್ ಆಹ್ವಾನ ನೀಡಿದಾಗ ಪಾಸಪೋರ್ಟ್ ಇಲ್ಲ ಎನ್ನುವ ನೆವ ಹೇಳಿ ಬಚಾವಾಗಿದ್ದೆ. ಹಾಗೂ ಬೈಸಿಕೊಂಡಿದ್ದೆ. ಈಗ ನಾನು ವಿದೇಶಕ್ಕೆ ತೆರಳಲೇಬೇಕಾದ ಪ್ರಸಂಗ ಬಂದೇಬಿಟ್ಟಿತು. ಜತೆಯಲ್ಲಿ ಹೋಗೋ...

ಜ್ಞಾನಪೀಠದ ಮೇಲೆ ಸಿರಿಸಂಪಿಗೆ!

ಸಿರಿಸಂಪಿಗೆ ನನ್ನ ಮೆಚ್ಚಿನ ನಾಟಕ. ಅದರ ದೀಪದಮೊಲ್ಲೆ ನನ್ನ ಮನಸಿನ ತುಂಬ ಕಾಡುವ ನಲ್ಲೆ! ನಾಟಕದ ಕರ್ತೃ ಮತ್ತು ಮಹಾಕವಿ ಕಂಬಾರರ ಜತೆ ಒಂದು ವಿಶೇಷ ಸಂದರ್ಭದಲ್ಲಿ ಅವರ ಹುಟ್ಟೂರಿಗೆ ಭೇಟಿ ಕೊಡುವ ಅವಕಾಶ ಒದಗಿಬಂದಿತ್ತು. ಅವರೊಂದಿಗೆ ಒಂದಿಡೀ ದಿನ ನಡೆಸಿದ ಮಾತುಕತೆ, ಅವರನ್ನು ಹತ್ತಿರದಿಂದ ಕಂಡ ರೀತಿ ಮತ್ತು ಅವರ ದೈವ ಪ್ರೀತಿಯ ಬಗ್ಗೆ ತುಂಬ ದಿನಗಳ ಹಿಂದೆ ಬರೆಯಬೇಕೆಂದುಕೊಂಡಿದ್ದೆ. ಆಗಲಿಲ್ಲ. ಅವರ ಹತ್ತಾರು ಚಿತ್ರಗಳನ್ನು ಸೆರೆಹಿಡಿದ ಮೊಬೈಲ್ ಕಳಕೊಂಡೆ ಹೀಗಾಗಿ ಅದನ್ನು ಇಲ್ಲಿ ದಾಖಲಿಸಲಾಗಲಿಲ್ಲ. ಅವರೊಂದಿಗಿನ ಸ್ವಾರಸ್ಯಕರ ಚರ್ಚೆಯೂ ಅದರಲ್ಲಿ ರೆಕಾರ್ಡ್ ಮಾಡಿದ್ದೆ. ತುಂಬ ಮುಖ್ಯವಾದ ದಾಖಲೆಯೇ ಕಾಣೆಯಾಗಿದ್ದು ನನ್ನಲ್ಲಿ ಮರೆಯದ ನೋವು. ಆ ಎರಡು ದಿನದಲ್ಲಿ ಅವರನ್ನು ಕಂಡ ಪರಿಯ ಬಗ್ಗೆ ಇಷ್ಟರಲ್ಲೇ ಇಲ್ಲಿ ಹಂಚಿಕೊಳ್ಳುತ್ತೇನೆ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಖುಷಿಯ ಸಂಗತಿ. ಕಂಬಾರರಿಗೆ ಅಭಿನಂದನೆಗಳು.

ಸ್ವಾತಂತ್ರ್ಯ... ಶ್ರಮ ಯಾರದೋ, ಸಿರಿ ಯಾರಿಗೋ!

ನಾವು ಕಂಡೇ ಕಾಣುತ್ತೇವೆ...

ಕಾಲದ ಅನಂತತೆಯ ಸ್ಲೇಟಿನ ಮೇಲೆ ಬರೆದ ಶಾಶ್ವತ ಸತ್ಯಶಾಸನ ನಿಜವಾಗುವುದ ನಾವು ಕಂಡೇ ಕಾಣುತ್ತೇವೆ... ನಿರಂಕುಶ ಪ್ರಭುತ್ವದ ಅಪರಿಮಿತ ಮಹಾಪರ್ವತ ರೌದಿಯಾಗಿ ಹಾರಾಡುವುದನ್ನು, ಪ್ರಭುಗಳ ನೆತ್ತಿ ಮೇಲೆ ಸಿಡಿಲು ಅಪ್ಪಳಿಸುವುದನ್ನು ನಾವು ಕಂಡೇ ಕಾಣುತ್ತೇವೆ... ಎಲ್ಲ ಕಿರೀಟಗಳು, ಮುಕುಟಮಣಿಗಳು ಕಿತ್ತೆಸೆಯಲ್ಪಡುವುದನ್ನು, ದರ್ಪದ ಸಿಂಹಾಸನಗಳೆಲ್ಲ ಸಮಾಧಿ ಸೇರುವುದನ್ನು ನಾವು ಕಂಡೇ ಕಾಣುತ್ತೇವೆ... ಸುಳ್ಳಾಡುವ ಮುಸುಡಿಗಳು ಮರೆಯಾಗಿ ನಮ್ಮಂಥ ನಿರ್ಲಕ್ಷಿತ ಜೀವಂತ ಮುಖಗಳು ನಿರಾಕರಿಸಲ್ಪಟ್ಟ ಗದ್ದುಗೆಗಳನೇರುವುದನ್ನು ನಾವು ಕಂಡೇ ಕಾಣುತ್ತೇವೆ... ನಾನೂ ಇರುವೆನಿಲ್ಲಿ, ನೀವೂ ಇರುವಿರಿ ಇದೆಲ್ಲ ನಿಜವಾಗುವುದನ್ನು ನಾವು ಕಂಡೇ ಕಾಣುತ್ತೇವೆ... ಮೂಲ: ಫೈಜ್ ಅಹ್ಮದ್ ಫೈಜ್ ಕನ್ನಡಕ್ಕೆ: ದಿಲ್

ಭಾರತದ ರಾಜಕೀಯದಲ್ಲಿ ಹೆಣ್ಣು!

ನಮ್ಮ ದೇಶದಲ್ಲಿ ಗಂಡಸರಂತೆ ವರ್ತಿಸುವ ಹೆಣ್ಣುಮಕ್ಕಳನ್ನು "ಗಂಡೆದೆ" ಎಂದು ಮೆಚ್ಚಿಕೊಳ್ಳುತ್ತಾರೆ. ಇಂದಿರಾಗಾಂಧಿಯನ್ನು "ಕಾಂಗ್ರೆಸ್ಸಿನಲ್ಲಿರುವ ಏಕೈಕ ಗಂಡಸು" ಎಂದೇ ಬಣ್ಣಿಸಲಾಗುತ್ತಿತ್ತು. ಸುಂದರಿಯೂ, ದಿಟ್ಟೆಯೂ ಆಗಿದ್ದ ಇಂದಿರಾ ಆ ಕಾಲದ ಬಹುತೇಕ ಕಾಂಗ್ರೆಸ್ಸಿಗರಿಗೆ "ಆತ್ಮೀಯ ಮೇಡಂ" ಆಗಿದ್ದರು. ಗಂಡ ಫಿರೋಜ್ ಸಾವಿನ ನಂತರ ವಿಧವೆ ಎನ್ನುವ ಹಿಂಜರಿಕೆಗಳಿಂದ ಮುಕ್ತವಾಗಿದ್ದ ಇಂದಿರಾ, ಅಪ್ಪ ನೆಹರೂ ಹಬ್ಬಿಸಿಟ್ಟಿದ್ದ ಪಾಲಿಟಿಕ್ಸ್ ನಲ್ಲಿ ಬೆಳೆಯುವುದಕ್ಕೆ ಸಾಕಷ್ಟು ಅವಕಾಶದ ಅಂಗಳ ತೆರಕೊಂಡೇ ಇತ್ತು. ಅದನ್ನು ಅಷ್ಟೂ ತುಂಬಿಕೊಂಡ ಇಂದಿರಾ ತುಳುಕಿದರು. ಆಲದ ಮರದಂತೆ ಹಬ್ಬಿಕೊಂಡರು. ಪಕ್ಕದಲ್ಲಿ ಯಾವ ಬಳ್ಳಿಯೂ ಚಿಗುರೊಡೆಯದಂತೆ ನೋಡಿಕೊಂಡರು. ಚಾಣಾಕ್ಷತೆ, ನೆಹರೂ ಮಗಳೆನ್ನುವ ಟ್ಯಾಗಲೈನ್ ಮತ್ತು ಗಾಂಧಿ ಎನ್ನುವ ಹೆಸರಿನ ವಜನ್ನು ಇಂದಿರಾಗೆ ಪಕ್ಷ ರಾಜಕಾರಣದಲ್ಲಿ ಜಾಗ ಗಟ್ಟಿಗೊಳಿಸಿತ್ತು. ಆ ಕಾಲದ ಜನಸಾಮಾನ್ಯರಲ್ಲಿ ಆಕೆ ಹೆಂಗಸು, ಅದರಲ್ಲೂ ವಿಧವೆ ಎನ್ನುವ ಅನುಕಂಪ ಮನೆ-ಮನದ ಮಾತಾಗಿತ್ತು. ಆ ಸ್ನಿಗ್ಧ ಸೌಂದರ್ಯ, ನಿಲುವು ಕೂಡ ಸೆಳೆದಿತ್ತು. ಪ್ರಧಾನಿ ಪಟ್ಟದಲ್ಲಿ ಆಕೆ ವಿರಾಜಿಸುತ್ತಿದ್ದುದು ಹೇಗೆ ನೋಡಿದರೂ ಚಂದವಾಗೇ ಕಾಣಿಸುತ್ತಿತ್ತು. ದೇಶ ವಿದೇಶದ ಪ್ರಧಾನಿ, ರಾಷ್ಟ್ರಪತಿ, ರಾಯಭಾರಿಗಳಿಗೆಲ್ಲ ಹಸ್ತಲಾಘವ ನೀಡುತ್ತ ನಕ್ಕಳೆಂದರೆ ಸಾಕು ಇಡೀ ಭಾರತದ ಹೆಂಗಸರು ಪುಳಕಗೊಳ್ಳುತ್ತಿದ್ದರು. ಮತಗಟ್ಟ...

ಇದು ಹಕ್ಕಿನ ಹಬ್ಬ...

ಇದು ಹಕ್ಕಿನ ಹಬ್ಬ... ಗಣರಾಜ್ಯೋತ್ಸವದ ಶುಭಾಶಯಗಳು

ನಾ ತುಕಾರಾಂ ಅಲ್ಲ: ಇಳಿಹೊತ್ತಿನಲ್ಲಿ ಕಳೆದುಹೋದ ಕಾಲದ ಮೆಲುಕು

ನಾ ತುಕಾರಾಂ ಅಲ್ಲ ಮೂಲ: ಹೆರ್ಬ್ ಗಾರ್ಡನರ್ ಅವರ   ಐ ಯಾಮ್ ನಾಟ್ ರಾಪಪೋರ್ಟ್ ಕನ್ನಡಕ್ಕೆ:   ಸುರೇಂದ್ರನಾಥ್ ನಾಟಕ ಅಂದರೆ ಕೇವಲ ಸಂಭಾಷಣೆಯೇ? ಅಭಿನಯ ಅನ್ನೋದು ಕೂತಲ್ಲಿಂದಲೇ ಬರಿಯ ಕಾಗೆ ಹಾರಿಸೋದಾ? ಇಲ್ಲಿ ಎರಡು ಪಾತ್ರಗಳು ಹೆಚ್ಚಾಗಿ ಮಾಡೋದು ಇದನ್ನೇ. ಇಬ್ಬರೂ ಪ್ರತಿಭಾನ್ವಿತರು. ಒಬ್ಬರಂತೂ ಅಭಿನಯ ಪಯಣದಲ್ಲಿ ಅನೇಕ ಮೇರು ಕೃತಿಗಳ ಪ್ರಮುಖ ಪಾತ್ರಗಳನ್ನು ತುಂಬ ಸೊಗಸಾಗಿ ಅಭಿನಯಿಸಿದವರು. ಸಾಮಾನ್ಯವಾಗಿ 'ನಾ ತುಕಾರಾಂ ಅಲ್ಲ' ತರಹದ ನಾಟಕಗಳಲ್ಲಿ ವಸ್ತುವಿನ ಭಾವಸಾಂದ್ರತೆಯ ಹರವು ಅಷ್ಟು ವ್ಯಾಪಕವಾಗಿರೋದಿಲ್ಲ. ಒಂದು ಭಾವುಕ ನೆಲೆಯಲ್ಲಿ ಪ್ರೇಕ್ಷಕನಿಗೆ ಏನನ್ನೋ ನೆನಪಿಸಿಕೊಡುವ, ತಲುಪಿಸುವ ಸಣ್ಣ ಹಟಕ್ಕೆ ಇಂಥ ನಾಟಕಗಳು ಬೀಳೋದೇ ಹೆಚ್ಚು. ನಮ್ಮ ನಿಜಜೀವನದ ಅಂದರೆ ನಿತ್ಯಬದುಕಿನ ಬವಣೆಯ ಒಂದಿಷ್ಟು ಪಾಕ ಬಳಸಿಕೊಂಡು, ರಂಗದ ಮೇಲೆ ಅದನ್ನೆಲ್ಲ ಪಾತ್ರಗಳ ಮೂಲಕ ಹರಿಯಬಿಟ್ಟು ಪ್ರೇಕ್ಷಕರ ಮೆಚ್ಚುಗೆ, ಒಂದಷ್ಟು ಕಂಬನಿ, ಮರುಕತನ, ಚಪ್ಪಾಳೆಯನ್ನಷ್ಟೇ ನಿರೀಕ್ಷಿಸುವ ಇಂಥ ನಾಟಕಗಳಿಂದ ಅರಿವಿನ ವಿಸ್ತಾರವಾಗಲಿ, ಭಾವಸಂಘರ್ಷವನ್ನಾಗಲಿ ಅತ್ಯಂತ ಆಳವಾಗಿ ಅಥವಾ ದಟ್ಟವಾಗಿ ಅನುಭವಿಸಲು ಸಾಧ್ಯವಾಗುವುದಿಲ್ಲ. ಮೇಲ್ಪದರದಲ್ಲಿಯೇ ವಸ್ತು ಕ್ಷಣ ಕಾಲ ಕಾಡಿ ಮತ್ತೆ ಮರೆವಿಗೆ ಸಂದಾಯವಾಗಿಬಿಡುತ್ತದೆ. ಅನುಭವದ ಜತೆಗಿನ ಅನುಸಂಧಾನ ಪ್ರೇಕ್ಷಕರಿಗೆ ಅಷ್ಟು ಸಾಧ್ಯವಾಗುವುದಿಲ್ಲ. ಟಿಕೆಟ್ ಕೊಟ್ಟು ಇಂಥ ನಾಟಕಗಳನ್ನು ನೋಡುವುದಾದರ...

ಹ್ಯಾಪಿ ಮೇರಿ ಕ್ರಿಸ್ಮಸ್..

ಕ್ರಿಸ್ ಮಸ್ ಅಂದರೆ ಪಶ್ಚಿಮದ ದೇಶಗಳಲ್ಲಿ ಕ್ರೈಸ್ತ ಜಗತ್ತು. ಇಂಡಿಯಾದಲ್ಲಿ ಅದೊಂದು ಧಾರ್ಮಿಕ ಆಚರಣೆ ಅಲ್ಲ. ಪ್ರೀತಿ, ಸ್ನೇಹ, ಸೌಹಾರ್ದತೆಯ ಸಂಭ್ರಮ. ಡಿಸೆಂಬರ್ 24ರಿಂದಲೇ ಕೇಕ್ ಸುಗ್ಗಿ ಶುರುವಾಗಿಬಿಡುತ್ತದೆ. ಬೆಂಗಳೂರಿನ ನೀಲಗಿರಿಸ್ ಕೇಕ್, ಕೇಕ್ ಶೋ.. ಕ್ರೈಸ್ತೇತರರೇ ಜಾಸ್ತಿ ಇರುವ ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ, ಬ್ರಿಗೇಡ್ ರೋಡ್, ಪ್ರತಿ ಶಾಪಿಂಗ್ ಮಾಲುಗಳಲ್ಲಿ ಕ್ರಿಸ್ ಮಸ್ ಕಳೆಕಟ್ಟುತ್ತದೆ. ಬೆಳಕಿನ ಭವ್ಯತೆ, ಬಣ್ಣ ಬಣ್ಣದ ಸ್ಟಾರ್, ಅಬ್ಬರದ ಸಂಗೀತ... ಥೇಟು ಗಣಪನ ಹಬ್ಬದಂಥ ವಾತಾವರಣ ಸೃಷ್ಟಿಯಾಗಿರುತ್ತದೆ. ಹೌದು ಅಷ್ಟಕ್ಕೂ ಇಂಡಿಯಾ ತುಂಬ ಕ್ರೈಸ್ತರೇ ತುಂಬಿಕೊಂಡಿದ್ದಾರಾ! ಎಂದು ಪಶ್ಚಿಮದ ಕ್ರೈಸ್ತರೂ ನಾಚುವಂಥ ಕ್ರಿಸ್ ಮಸ್ ಇಲ್ಲಿ ವಿಜೃಂಭಿಸುತ್ತದೆ. ಧಾರವಾಡದ ಕಿಟೆಲ್ ಸೈನ್ಸ್ ಕಾಲೇಜಿನಲ್ಲಿ ನಾನು ಪದವಿ ಓದುತ್ತಿದ್ದಾಗ ಕ್ರಿಸ್ ಮಸ್ ಬಂತೆಂದರೆ ನಮಗೆಲ್ಲ ಈವೆಂಟು, ರಜಾಕಾಲ. ನಾನೂ ಕಾಲೇಜಿನ ಗ್ರೂಪ್ ಸಾಂಗ್ ಟೀಂನಲ್ಲಿ ಹಾಡುಗಾರನಾಗುತ್ತಿದ್ದೆ. ಎಲ್ಲ ಚರ್ಚ್ ಸಂಗೀತದ ಧುನ್ ಗಳೇ. ಕೆಲ ಕ್ರೈಸ್ತ ಹುಡುಗರು ನನ್ನನ್ನು ಅದೆಷ್ಟು ಬಾರಿ ಪಿಯಾನೊ, ವಯೊಲಿನ್, ಗಿಟಾರ್ ಕಲಿಸ್ತೀನಿ ಬಾ ಎಂದು ಗೋಗರೆಯುತ್ತಿದ್ದರು. ಅದರಲ್ಲಿನ ಕೆಲ ಗೆಳೆಯರು ಈಗ ರಾಜ್ಯದ ವಿವಿಧ ಭಾಗಗಳಲ್ಲಿ ಪಾದ್ರಿಗಳಾಗಿದ್ದಾರೆ. ಮ್ಯಾಡ್ಸ್ MADS ಎನ್ನುವ ನಮ್ಮ ಗೆಳೆಯರ ಗುಂಪಿನ ಮೊದಲ  ಅಕ್ಷರ M ಅಂದರೆ ಮ್ಯಾಥ್ಯು ನಮ್ಮ ಅಕ್ಕರೆಯ ...

ವೈಯಕ್ತಿಕವಾದದ ರಾಜಕೀಯ ಇನ್ನೂ ಅನಿವಾರ್ಯವೇ?

ಲೋಕಸಭೆ, ವಿಧಾನಸಭೆಗೆ ನಡೆವ ಚುನಾವಣೆಗಳಲ್ಲಿ ವೈಯಕ್ತಿಕವಾದವೇ ವಿಜೃಂಭಿಸುತ್ತಿದೆ. ಇಡೀ ದೇಶ ಸೋನಿಯಾ, ರಾಹುಲ್, ಅಡ್ವಾಣಿ... ಎನ್ನುವ ಹೆಸರುಗಳ ಆಧಾರದಲ್ಲಿ ಒಂದು ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತಿದೆ. ಕಾಶ್ಮೀರದಲ್ಲಿ ಫಾರೂಕ್, ಓಮರ್ ಅಬ್ದುಲಾ. ಉತ್ತರ ಪ್ರದೇಶದಲ್ಲಿ ಮಾಯಾವತಿ, ಮುಲಾಯಂ. ಗುಜರಾತಿನಲ್ಲಿ ನರೇಂದ್ರ ಮೋದಿ. ಬಿಹಾರದಲ್ಲಿ ಲಾಲೂ ಯಾದವ್, ನಿತೀಶ್ ಕುಮಾರ್. ದಕ್ಷಿಣದ ತಮಿಳುನಾಡಿನಲ್ಲಿ ಕರುಣಾನಿಧಿ, ಜಯಲಲಿತಾ. ಆಂಧ್ರದಲ್ಲಿ ನಾಯ್ಡು, ಚಿರಂಜೀವಿ, ಜಗನ್ ಮತ್ತು ಕರ್ನಾಟಕದಲ್ಲಿ ಯಡಿಯೂರಪ್ಪ, ದೇವೇಗೌಡ, ಕುಮಾರಸ್ವಾಮಿ... ಮತ್ತಿತರರ ವೈಯಕ್ತಿಕ ಮಹತ್ವಾಕಾಂಕ್ಷೆ, ರಾಜಕೀಯ ಹಿತಾಸಕ್ತಿಗಳೇ ಈಗ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವುದನ್ನು ಪ್ರಾದೇಶಿಕ ಮಟ್ಟದಲ್ಲೂ ಕಾಣುತ್ತಿದ್ದೇವೆ. ವೈಯಕ್ತಿಕವಾದದ ಹಿತಾಸಕ್ತಿ ಕಾಪಾಡಲು ತಮ್ಮದೇ ಸಿದ್ಧಾಂತಗಳು, ಪಕ್ಷ ಮತ್ತು ಸಮೀಕರಣಗಳನ್ನು ಇವರು ರೂಪಿಸಿಕೊಳ್ಳುತ್ತಾರೆ. ಜಾತಿ, ಹಣ, ತೋಳ್ಬಲಗಳ ಬಳಕೆಯೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇದೆಲ್ಲ ಪ್ರಜಾಪ್ರಭುತ್ವ ಹೆಸರಲ್ಲಿ ತತ್ವರಹಿತ ರಾಜಕೀಯ. ಅರಸೊತ್ತಿಗೆಯ ಮತ್ತೊಂದು ರೂಪದಂತಿದೆ. * * * ಗುಜರಾತಿನಲ್ಲಿ ಮೋದಿಯಿಂದಾಗಿ ಬಿಜೆಪಿ ಉಳಿದುಕೊಂಡಿದೆ. ಬಿಹಾರದಲ್ಲಿ ನಿತೀಶ್ ಕುಮಾರನಿಂದಾಗಿ ಎನ್ ಡಿ ಎ ಬದುಕುಳಿಯುತ್ತಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿಯಿಂದಾಗೇ ಬಿಎಸ್ಪಿ ಉಸಿರಾಡುತ್ತಿದೆ. ತಮಿಳುನಾಡಿನಲ್ಲಿ ಡಿಎಂ...

ಸೀಜರ್- ಕ್ಲಿಯೊಪಾತ್ರಾ ಹುಟ್ಟಿ ಬಂದಿದ್ದಾರಾ?

ರೋಮನ್ ಸಾಮ್ರಾಜ್ಯ ಸ್ಥಾಪನೆಗೆ ಕಾರಣನಾದ ಪರಾಕ್ರಮಿ ಸೀಜರ್, ಮಹತ್ವಾಕಾಂಕ್ಷೆಯ ಹದಿಹರೆಯದ ಸುಂದರ ತರುಣಿ ಕ್ಲಿಯೊಪಾತ್ರಾಳಿಗಾಗಿ ಏನೆಲ್ಲ ಮಾಡುತ್ತಾನೆ. ಅವಳ ಗುಂಗಲ್ಲಿ ಯಾರ ಮಾತೂ ಕೇಳದೇ ಅಪಾಯಗಳನ್ನು ತಂದುಕೊಳ್ಳುತ್ತಾನೆ. ಕ್ಲಿಯೊಪಾತ್ರ ತನ್ನ ಮಹಾತ್ವಾಕಾಂಕ್ಷೆ ಈಡೇರಿಕೆಗೆ ಸೀಜರನನ್ನೇ ಬಳಸಿಕೊಳ್ಳುವಷ್ಟರಮಟ್ಟಿಗೆ ಬೆಳೆಯುತ್ತಾಳೆ!... ಬರ್ನಾರ್ಡ್ ಷಾ ನಾಟಕದ "ಸೀಜರ್ ಮತ್ತು ಕ್ಲಿಯೊಪಾತ್ರ" ನಮ್ಮ ನಾಡಿನಲ್ಲಿ ಮತ್ತೆ ಹುಟ್ಟಿ ಬಂದಿದ್ದಾರಾ? ಹೀಗೊಂದು ಯೋಚನೆ ನನಗೆ ಡಾ. ನಿಂಬರಗಿ ಅವರ ಅನುವಾದಿತ ಕೃತಿ "ಸೀಜರ್ ಮತ್ತು ಕ್ಲಿಯೊಪಾತ್ರ" ಓದಿದಾಗ ಅನಿಸಿತು. ಮುಂದಿನ ಪೋಸ್ಟ್ ನಲ್ಲಿ ಸುಂದರಿ ಕ್ಲಿಯೊಪಾತ್ರ ತೋರಿಸುತ್ತೇನೆ.
ಅಯ್ಯೋಧ್ಯಾಯಣ ಇನ್ನೇನು ತೀರ್ಪು ಹೊರಬೀಳತಾ ಇದೆ. ಇಡೀ ಬೆಂಗಳೂರಿನ ಅಂಗಡಿಗಳೆಲ್ಲ ಶೆಟರ್ ಎಳಕೊಂಡು ಮಲಗುತ್ತಿವೆ. ಜನಾ ಭರ್ರ ಅಂತ ಮನೆ ಕಡೆ ಧಾವಿಸುತ್ತಿದ್ದಾರೆ. ಕಳ್ಳರು, ಭಂಡರು, ಕಿರಾತಕರು ಕತ್ತಿ, ಲಾಂಗು ಮಸಿದಿಟ್ಟುಕೊಳ್ಳತೊಡಗಿದ್ದಾರೇನೊ. ಬಾಯಿಯಲ್ಲಿ ರಾಮ-ರಹೀಮ ಬಗಲಿನಲ್ಲಿ ಬಾಂಬು, ಬಂದೂಕು, ಚೂರಿ ಹಿಡಿದು ತಿರುಗುವವರೂ ಇರ್ತಾರೆ. ದೇವ, ದೈವದ ಹೆಸರಲ್ಲಿ ಇಂಥದೊಂದು ಭಯ ಉತ್ಪಾದನೆ (ಭಯೋತ್ಪಾದನೆ) ಸಾಧ್ಯವಾಗಿದ್ದು ಏನು ಸೂಚಿಸುತ್ತದೆ? ಶಾಂತಿ ಮಂತ್ರ ಹೇಳಿದ ಬುದ್ಧನ ನೆಲದಲ್ಲಿ ಎರಡೂ ಕೋಮುಗಳ ನಡುವೆ ಇದೇ ಮೊದಲ ಸಲ ಸೌಹಾರ್ದದ ಮಾತುಗಳು ಕೇಳಿಸುತ್ತಿವೆ. ಎಲ್ಲೆಡೆ ಶಾಂತಿ ಮನವಿಗಳ ಮಹಾಪೂರ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಏನೆಲ್ಲ ಕಟ್ಟೆಚ್ಚರ ವಹಿಸುತ್ತಿದೆ. ಅದರದೂ ಅಳಿವು-ಉಳಿವಿನ ಪ್ರಶ್ನೆಯೇ. ತೀರ್ಪು ಹೊರಕ್ಕೆ ಬೀಳುವ ಮುನ್ನವೇ ಅದೆಷ್ಟು ಮುನ್ನೆಚ್ಚರಿಕೆಗಳು! ತೀರ್ಪು ಏನೇ ಬರಲಿ. ಅಯ್ಯೋಧ್ಯಾ ಬಗ್ಗೆ ಈಗಲೇ ನೆಟ್ ಚತುರರು ಏನೆಲ್ಲ ಜೋಕುಗಳನ್ನು ಕಟ್ಟತೊಡಗಿದ್ದಾರೆ. ಕಾರ್ಟೂನ್ ಬಿಡಿಸತೊಡಗಿದ್ದಾರೆ ನೋಡೋಣ. ಒಂದು ಸ್ಯಾಂಪಲ್ ಇಲ್ಲಿದೆ ನೋಡಿ. ಇದು ಸೆನ್ಸ್ ಆಫ್ ಹ್ಯೂಮರ್ ದೃಷ್ಟಿಯಿಂದ. ಟವಿ ಸಂವಾದ ಕಾರ್ಯಕ್ರಮವೊಂದರಲ್ಲಿ ಉಭಯ ಕೋಮುಗಳ ನಾಯಕರನ್ನು ಸಂವಾದಕ್ಕೆಳೆಯುತ್ತ ಟಿವಿ ನಿರೂಪಕ ಕೇಳುತ್ತಾನೆ. ನಿರೂಪಕ: ಅಯ್ಯೋಧ್ಯಾ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಮ್ಮ ಉಡುಪಿಯ ಕಲ್ಮಾಡಿಯವರಿಗೆ...

ತಪಸ್ಸು! ಹೀಗೂ ಒಂದು ಬಂಡಾಯ

ಅಂಗೀ ತೆಗೆದು ಅಂಗಾತಾಗಿ ಮಲಗಿದ್ದ ಸಂಗಾತಿಯನ್ನು ಕಂಡು ಸಂಗೀತವಾದಳು ಅವಳು ಕಾಮ್ರೇಡ್, ಕಾಮ್ರೇಡ್ ಅನ್ನುತ್ತ... ಕಾಮಾಗಿ ರೇಡ್ ಮಾಡಿದಳು ಬಿಡುವಿನ ವೇಳೆ ಆಫೀಸಿನ ಲೈಬ್ರರಿಯಲ್ಲಿ ಒಂದು ಸಣ್ಣ ಸುತ್ತು ಹಾಕುತ್ತಿದ್ದೆ,  ಇಂಗ್ಲೀಷ್ ಪ್ರೊಫೆಸರ್ ಚಂಪಾ ಚಿತ್ರ ಹೊಂದಿದ ಕನ್ನಡದ ಪುಟ್ಟ ಪುಸ್ತಕ ಕಣ್ಣಿಗೆ ಬಿತ್ತು. ಅದು ಅವರದೇ ಹನಿಗವನಗಳ ಪುಟ್ಟ ಸಂಕಲನ. ಓದುತ್ತಾ ಒಂದಷ್ಟು ನಕ್ಕೆ. ಕೆಲ ಹನಿಗವನಗಳ 'ಹಣಿ'ಯುವ ಪರಿ ಸೆಳೆyiತು. ಈ ಮೇಲಿನ ಕವಿತೆ ಓದಿದ ಮೇಲೆ. ಡಾ. ಸಿದ್ಧನಗೌಡ ಪಾಟೀಲರು (ಸಿಪಿಐ ರಾಜ್ಯ ಕಾರ್ಯದರ್ಶಿ) ನೆನಪಾದರು. ಫೋನ್ ಮಾಡಿದೆ. 'ಬಾಗಲಕೋಟ್ಯಾಗ  ಇದೀನಿ' ಅಂದ್ರು.  ಕವಿತೆ ಓದಿ ಹೇಳಿದೆ. ಅವರೂ ನಕ್ಕರು. ಪ್ರತಿಯಾಗಿ ಒಂದಷ್ಟು ಕುಟುಕಿದರು. ಅದನ್ನಿಲ್ಲಿ ಹೇಳುವುದು ಅನಗತ್ಯ. ಅದು ಇದು ಮಾತನಾಡುತ್ತ ಬಂಡಾಯ ಸಂಘಟನೆಯ ಬಗ್ಗೆ ಪ್ರಸ್ತಾಪಿಸಿದರು. ಚಿತ್ರದುರ್ಗದ ಸಭೆ ಬಗ್ಗೆಯೂ ಹೇಳಿದರು. ಬೆಳಗಾವಿಗೆ ಕಾಮ್ರೆಡ್ ಒಬ್ಬರ ಅಂತಿಮ ದರ್ಶನ ಮಾಡಿಕೊಂಡು ಬರುವಾಗ ಧಾರವಾಡ-ಹಳಿಯಾಳ ರಸ್ತೆಯಲ್ಲಿ ಕಂಡ ಪ್ರಸಂಗವೊಂದನ್ನು ಹೀಗೆ ವಿವರಿಸಿದರು. -ಅಲ್ಲಿ ಜನಸಾಗರವಿತ್ತು. ರಸ್ತೆಯ ಪಕ್ಕದಲ್ಲಿ ಕಟೌಟ್ ಗಳ ಭರಾಟೆಯೂ ಕಾಣಿಸಿತು. ನೆರೆದವರನ್ನು ವಿಚಾರಿಸಿದರೆ, ರಸ್ತೆಗೆ ಹತ್ತಿರದ ಬೆಟ್ಟವೊಂದರ ಮೇಲೆ ಸ್ವಾಮಿಗಳೊಬ್ಬರು ಲೋಕಕಲ್ಯಾಣಕ್ಕೆಂದು ತ...

ಪಾವಿತ್ರ್ಯ ಮತ್ತು ನಿಷೇಧ

ಇಡೀ ಪ್ರಕೃತಿ ದೇವತೆ. ಗೋಮಾತೆಯಂತೆ, ನೆಲವೂ ದೇವತೆ. ಗೋಹತ್ಯೆ ನಿಷೇಧಿಸುವುದಾದರೆ, ಗಣಿಗಾರಿಕೆಯನ್ನೂ ನಿಷೇಧಿಸಲೇಬೇಕು. ಗೋವು ಪವಿತ್ರವಾದರೆ ಅದರ ಹಾಲೂ ಪವಿತ್ರ. ಗೋ'ಮಾತೆ' ಕೆಚ್ಚಿಲಿಗೆ ಕೈಹಾಕಿ ಹಿಸುಕಿ ಹಿಸುಕಿ ಹಾಲು ಕರೆಯುವುದು ಅದರ ಜತೆಗೆ ನಡೆಸುವ ಚೆಲ್ಲಾಟವೂ ಆಗುತ್ತದೆ. ಹಾಲಿನ ತಣ್ಣಗಿನ ಭಾವಕ್ಕೆ ಅಗ್ನಿ ಸ್ಪರ್ಶ ಮಾಡಿ ಕಾಯಿಸಿ, ಆರಿಸಿ, ಮಥಿಸಿ ಮೊಸರು, ಮಜ್ಜಿಗೆ, ಬೆಣ್ಣೆ ಮಾಡುವುದು  ನಂತರ ಬೆಣ್ಣೆಯ ಅತ್ಯಂತ ಮೃದು ಭಾವಕ್ಕೆ ಮತ್ತೆ ಅಗ್ನಿ ಕಾವು ಕೊಟ್ಟು ತುಪ್ಪವಾಗಿಸಿ, ಕಡೆಗೆ ಅದನ್ನು ಹೋಮದ ಅಗ್ನಿಕುಂಡಕ್ಕೆ ಎಸೆದೆಸೆದು ಧಗ ಧಗಿಸುವಂತೆ ಸುಡುವುದೂ ಹಿಂಸೆ ಅಷ್ಟೇ ಅಲ್ಲ ಚಿತ್ರಹಿಂಸೆಯಾಗುತ್ತದೆ. ಹೀಗಾಗಿ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಮಾಡುವುದರ ಮೇಲೂ ನಿಷೇಧ ಹೇರಬೇಕು. ಗೋವು ಪವಿತ್ರ. ಅದರ ಉಚ್ಚೆಯೂ ಪವಿತ್ರವೇ. ಪವಿತ್ರವಾದ್ದನ್ನು ತಿಪ್ಪೆಗೆಸೆಯುವುದೇ? ಸೆಗಣಿಯೂ ಪವಿತ್ರವೇ. ಮನೆ ಮುಂದೆ ಚಂದಕ್ಕೆ ರಂಗೋಲಿಗೆಂದು ಸೆಗಣಿಯನ್ನು ನೀರಲ್ಲಿ ಮನಸೋ ಇಚ್ಛೆ ಕಿವುಚಿ ನೆಲಕ್ಕೆ ಸಾರಿಸುವುದು, ತಟ್ಟಿ ಬಿಸಿಲಿಗೆ ಒಣಗಿಸಿ ಕುಳ್ಳಾಗಿಸಿ ಒಲೆಗಿಟ್ಟು ಧಗ ಧಗಿಸುವಂತೆ ಮಾಡುವುದೂ ಹಿಂಸೆಯೇ. ಸೆಗಣಿ ಬಳಕೆ ಕೂಡ ನಿಷೇಧಿಸಬೇಕು. ಹಂದಿ, ಕೋಳಿ, ಕುರಿ, ಮೇಕೆಗಳಂತೆ ಜೀವವಿರುವ ಎಲ್ಲವೂ ಪವಿತ್ರ ಜೀವಗಳೇ. ಅವುಗಳ ವಧೆಯನ್ನೂ ನಿಷೇಧಿಸಬೇಕು! ಸಸ್ಯಕ್ಕೂ ಜೀವ ಇದೆ, ಅವೂ ಉಸಿರಾಡುತ್ತವೆ ಎಂದು ಭಾರ...

DILSE: ಕೀ.ರಂ ನೆನಪಿನ ತೇರು...

DILSE: ಕೀ.ರಂ ನೆನಪಿನ ತೇರು... : "ಅದನಾ ಹೋ ಯಾ ಆಲಾ ಹೋ ಸಬ್ ಕೋ ಲೌಟ್ ಜಾನಾ ಹೈ ಮುಫಲಿಸೋ ತವಂಗರಕಾ ಕಬ್ರ್ ಹೀ ಠಿಕಾನಾ ಹೈ... ರಾತ್ರಿ 11ರ (ಆಗಸ್ಟ್ 7, 2010) ಸುಮಾರಿಗೆ ಗೆಳೆಯ ವಿಷ್ಣುಕುಮಾರ್ ಫೋನ್ ಮ..."

ಕೀ.ರಂ ನೆನಪಿನ ತೇರು...

ಅದನಾ ಹೋ ಯಾ ಆಲಾ ಹೋ ಸಬ್ ಕೋ ಲೌಟ್ ಜಾನಾ ಹೈ ಮುಫಲಿಸೋ ತವಂಗರಕಾ ಕಬ್ರ್ ಹೀ ಠಿಕಾನಾ ಹೈ... ರಾತ್ರಿ 11ರ (ಆಗಸ್ಟ್ 7, 2010)  ಸುಮಾರಿಗೆ ಗೆಳೆಯ ವಿಷ್ಣುಕುಮಾರ್ ಫೋನ್ ಮಾಡಿ ಕಿ.ರಂ ಹೋಗಿಬಿಟ್ರು ಎಂದ. ನಂಬೋಕಾಗಲಿಲ್ಲ. ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದ ಕಟ್ಟೆ ಮೇಲೆ 'ನೀಗಿಕೊಂಡ ಸಂಸ' ಬರೆದ ನಾಟಕಕಾರ, ವಿಮರ್ಶಕ ಸುಮ್ಮನೇ ಮಲಗಿದಂತೆ ಕಾಣಿಸಿದ. ಒಂದಷ್ಟು ಕ್ಷಣ ಮುಂದೆ ನಿಂತು ಮನದಲ್ಲೇ ಆಖರೀ ಸಲಾಂ ಹೇಳಿ ಅಲ್ಲೇ ಇದ್ದ ಗೆಳೆಯರ ಗುಂಪಿಗೆ ಸೇರಿದೆ. ನಾಗತಿಹಳ್ಳಿ ರಮೇಶ್ ವ್ಯಾನ್ ನಲ್ಲಿ ಕ್ರಮೇಷನ್ ಗೆ ಹೋಗೋಣ ನಡೆಯಿರಿ ಎಂದು ತಮ್ಮ ಪಟಾಲಂ ಸೇರಿಸಿದ. ನನ್ನನ್ನೂ ಕರೆದೊಯ್ದರು. 'ಎಂದೂ ಎಲ್ಲೂ ನಿಲ್ಲದ, ಮಾತೇ ಮಾಣಿಕ್ಯ ಎಂದು ನಂಬಿದಂಥ, ದಾರಿಯುದ್ದಕ್ಕೂ ಆಶಯಗಳ ಸಾರುತ್ತ ಹೊರಟ ಸಾರೋ ಐನಾರನ ಹಾಗೆ, ಮೆಚ್ಚಿದ್ದನ್ನು, ಮೆಚ್ಚದೇ ಇದ್ದದ್ದನ್ನು ಏಕತಾರಿ ನಾದದಲ್ಲಿ ಹಾಡುತ್ತ ಹೊರಟ ಫಕೀರ, ದರವೇಶಿಯಂಥ.. ತನ್ನದೇ ಜ್ಞಾನದ ಧುನ್ ನಲ್ಲಿ ಮುಳುಗಿಹೋದ ಸೂಫಿಯಂಥ ಮನುಷ್ಯ ಹೊರಟು ಹೋದನಲ್ಲ...' ಎಂದೆಲ್ಲ ವ್ಯಾಖ್ಯಾನಿಸಲೆತ್ನಿಸಿದೆ. ಹುಟ್ಟು-ಸಾವಿನ ನಿರಂತರ ಪ್ರಕ್ರಿಯೆಯ ಸತ್ಯದೆದುರು, ಒಬ್ಬ ಮನುಷ್ಯ ಇನ್ನಿಲ್ಲ ಎನ್ನುವ ಹೊತ್ತಲ್ಲಿ ಏನು ಹೇಳಿದರೂ ಏನು ಬಂತು!?  ಆ ಎಲೆಕ್ಟ್ರಿಕ್ ಶವಾಗಾರಕ್ಕೆ ನಾನು ಹೋಗಿದ್ದು ಮೊದಲ ಸಲ. ಕಿ.ರಂ ಶರೀರದ ಮುಂದೆ ಬ್...

ಯಾವುದು ಮುಖ್ಯ?

ಸಾಮೂಹಿಕ ವಿವಾಹ, ಸುಷ್ಮಾರಿಂದ ವರಮಹಾಲಕ್ಷ್ಮಿ ವೃತ, ವರಸಿದ್ಧಿ ವಿನಾಯಕ ಪೂಜೆ, ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆ ಉದ್ಘಾಟನೆ... ಇವನ್ನೇ ಅಭಿವೃದ್ಧಿ ಅನ್ನುವವರಿಗೆ ಏನು ಹೇಳಬೇಕು? 'ಬಳ್ಳಾರಿ ಕೆ ಶೋಲೆ' ಬರಹಕ್ಕೆ ಬಂದ ಒಂದು ಪ್ರತಿಕ್ರಿಯೆ ನೋಡಿದೆ. ಅದರಲ್ಲಿ ಮೇಲಿನ ಮೂರ್ನಾಲ್ಕು ಕಾರ್ಯಗಳನ್ನು ಅಭಿವೃದ್ಧಿ ಎಂದು ಗ್ರಹಿಸಿ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತು ಸಿದ್ದರಾಮಯ್ಯ ನಡೆಸಿದ ನಾಡರಕ್ಷಣೆ ನಡಿಗೆಯಲ್ಲಿ ಸೇರಿದ ಜನತೆಯನ್ನು 'ಬಾಡಿಗೆ ಜನಸಂಪತ್ತು' ಎಂದೆಲ್ಲ ಅರ್ಥೈಸಿದ್ದಾರೆ... ಬಳ್ಳಾರಿ ಜನಕ್ಕೆ ಸುಷ್ಮಾ  ಮುಖ್ಯವೋ, ಸಿದ್ದರಾಮಯ್ಯ ಬಾಡಿಗೆ ಜನಸಂಪತ್ತು ಪ್ರದರ್ಶನ ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ... ತುಂಬ ಹತಾಶ ಮನೋಭಾವನೆ ಇದು. ಸಹಮಾನವರನ್ನು ತಾರತಮ್ಯದಿಂದ ಕಾಣುವವರೆಲ್ಲ ದೈವದ ಮುಂದೆ ಕೂರುವ ಅರ್ಹತೆ ನಮಗಷ್ಟೇ ಎನ್ನುವಂತೆ ಕೂತು ಭಜನೆ, ಪೂಜೆ ಮಾಡುವುದು ದೊಡ್ಡ ಭಕ್ತಿ ಏನಲ್ಲ. ಅದು ಸಾಮೂಹಿಕ ಭಕ್ತಿ ಮಾರ್ಗವೂ ಅಲ್ಲ. ಹಿಂದೆ ಗಾಂಧೀಜಿ ಮಾಡುತ್ತಿದ್ದ ರಘುಪತಿ ರಾಘವ ರಾಜಾರಾಂ... ಭಜನೆಗೂ ಅವರಿಗಿಂತ ಭಿನ್ನ ಮಾರ್ಗದಲ್ಲಿ ಸ್ವಾತಂತ್ರ್ಯ ಚಳವಳಿ ಕಟ್ಟಬೇಕೆಂದುಕೊಂಡಿದ್ದವರು 'ಬರಿಯ ಭಜನೆಯಿಂದ ದೇಶ ಕಟ್ಟೋದಕ್ಕಾಗಲ್ಲ...' ಎಂದು ಟೀಕಿಸುತ್ತಿದ್ದರೆನ್ನುವ ವಿಷಯ  ನೆನಪಾಗುತ್ತಿದೆ. ದೇಶಪ್ರೇಮ/ಭಕ್ತಿ ಎಂದರೆ ಭಜನೆ ಅಲ್ಲ... (ಪುರೋಹಿತಷಾಹಿಗಳು ಎಲ್ಲದ...

ಹೀಗೊಂದು ಸೌಹಾರ್ದತೆ!

ಅಡಿಗಡಿಗೆ ಭಾಷೆ-ಗಡಿ ಸಮಸ್ಯೆ ಭುಗಿಲೇಳಲೇಬೇಕು! ಮಹಾರಾಷ್ಟ್ರ ಗಡಿ ಸಮಸ್ಯೆಗಂತೂ ಚಾಲನೆ ದಕ್ಕುತ್ತಲೇ ಇರುತ್ತದೆ. ರಾಜಕೀಯದ ಜತೆ ಸಾಹಿತ್ಯಿಕ-ಸಾಂಸ್ಕೃತಿಕ ಲಾಭಕ್ಕೂ! ವಿಪರ್ಯಾಸವಲ್ಲವೇ? ಮತ್ತು ಸೌಹಾರ್ದತೆಯ ಘೋಷವೂ ಮೊಳಗಬೇಕಲ್ಲ! ರಾಜಧಾನಿಯಲ್ಲಿಂದು ಭಾಷಾ ಸೌಹಾರ್ದತಾ ಸಮಾವೇಶ ನಡೆಯಿತು. ಅದಕ್ಕೆಂದು ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೇಶದ ವಿವಿಧ ಭಾಷೆಯ ಹಾಗೂ ವಿಶೇಷವಾಗಿ ರಾಜ್ಯದ ಬಹುತೇಕ ಜಿಲ್ಲೆ ಮತ್ತು ಗಡಿ ಸಾಹಿತಿಮಣಿಗಳನ್ನು ರಾಜಧಾನಿಗೆ ಆಹ್ವಾನಿಸಿತ್ತು. ಆಹ್ವಾನಕ್ಕೆ ಓಗೊಟ್ಟು, ಸಾಹಿತಿಗಳು ತಮ್ಮ ಎಲ್ಲಾ ಬದುಕಿನ ಬಹುಮುಖ್ಯ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು "ದೇಶ-ಭಾಷೆ-ನಾಡ ರಕ್ಷಣೆ" ಮತ್ತು "ಗಡಿ- ಸೌಹಾರ್ದತೆ" ಬಗ್ಗೆ ಒಟ್ಟೊಟ್ಟಿಗೆ ಕಾಳಜಿ ವ್ಯಕ್ತಪಡಿಸಲು, ಸಲಹೆಯನ್ನಿತ್ತಲು ರಾಜಧಾನಿಗೆ ಧಾವಿಸಿದ್ದರು.   ಹಾಗೆ ಸಮಾರಂಭ/ಸೌಹಾರ್ದತೆ ಸಮಾವೇಶಕ್ಕೆಂದೇ ಬಂದ ಗಡಿ ಭಾಗದ ಸಾಹಿತಿ ಮಿತ್ರರೊಬ್ಬರನ್ನು ನಾನು ಬೆಳ್ಳಂ ಬೆಳಿಗ್ಗೆ ಕಾಣಬೇಕಾಗಿ ಬಂದಿತ್ತು. ಇಳಿದುಕೊಳ್ಳಲು ಅವರಿಗೆಂದೇ ಗೊತ್ತು ಮಾಡಿದ್ದ ಲಾಡ್ಜ್ ನ ಒಂದು ರೂಮಿಗೆ ನಾವು ಒಟ್ಟಿಗೇ ಕಾಲಿಟ್ಟೆವು. ಅಲ್ಲಿ  ಅದೇ ಭಾಗದ ಮತ್ತೋರ್ವ ಸಾಹಿತಿ ಆಗಲೇ ವಿರಾಜಮಾನರಾಗಿದ್ದರು. ಥೇಟು 'ಶಿವಾಜಿ ಮಹಾರಾಜ'ರ ಹಾಗೆ! (ಇಬ್ಬರೂ ಮರಾಠಿಯಿಂದ ಕನ್ನಡಕ್ಕೆ ಸಾಕಷ್ಟು ಸಾಹಿತ್ಯ ಕೊಟ್ಟವರು) ಅವರೊಂದು ಪ್ರಸಂಗ ಹೇಳಿದರು. ಬೆಳಿಗ್ಗೆ ಅ...

ಬಳ್ಳಾರಿ ಕೆ ಶೋಲೆ!

ರೆಡ್ಡಿ/ಶ್ರೀರಾಮುಲು ಫೈಲ್: ಖಾಸಗಿ ಫೈನಾನ್ಸ್ (Ennoble Savings and Investment India Pvt. Ltd) ಕಂಪೆನಿ ತೆಗೆದು ಬಳ್ಳಾರಿ ತುಂಬ ರೆಡ್ಡಿ (ಗಾಲಿ ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ) ಶ್ರೀಮಂತಿಕೆಯ ಧೂಳು ಎಬ್ಬಿಸಿದ್ದರು. 200 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿ ಇಕ್ಕಟ್ಟಿಗೂ ಸಿಕ್ಕಿತ್ತು. ಈಗದು ಇತಿಹಾಸ. ಯಾವಾಗ ಚೀನಾಗೆ ಬಳ್ಳಾರಿಯ ಅದಿರು ಸಾಗತೊಡಗಿತೋ ಇವರ ನಸೀಬೇ ಚೇಂಜ್ ಆಯ್ತು. ಬಿಸಿಲು ನಾಡಿನ ರಸ್ತೆಯ ಮೇಲೇಳುತ್ತಿದ್ದ ಧೂಳು ಆಕಾಶಕ್ಕೆ ಟ್ರಾನ್ಸಫರ್ ಆಯ್ತು. ಅಕ್ರಮ ಅದಿರು ಸಾಗಾಣಿಕೆಯ ಆರೋಪದ ಹಿನ್ನೆಲೆಯಲ್ಲಿ ಇವರನ್ನು 'ಅದಿರುಗಳ್ಳರು' ಎಂದು ಟೀಕಿಸಲಾಗುತ್ತಿದೆ. * * * ಶ್ರೀರಾಮುಲು: ಬಳ್ಳಾರಿ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರನ್ನು ಪೊಲೀಸರು ಎರಡು ಬಾರಿ ಬಂಧಿಸಿದ್ದರು. ಪ್ರಕರಣಗಳು: 1 ಕಾಂಗ್ರೆಸ್ ಅಭ್ಯರ್ಥಿ ಲಾಡ್ ಕಾರುಗಳನ್ನು ಸುಟ್ಟು ಹಾಕಿದ್ದು. 2 ಕಾಂಗ್ರೆಸ್ ಕಾರ್ಯಕರ್ತನನ್ನು ಪ್ರಜ್ಞೆತಪ್ಪುವಂಥ ಸ್ಥಿತಿಗೆ ಬರುವ ಹಾಗೆ ಥಳಿಸಿದ್ದು. ಇವೆರಡೂ ಪ್ರಕರಣಗಳಲ್ಲಿ ಗಾಲಿ ಜನಾರ್ಧನ ರೆಡ್ಡಿ , ಶ್ರೀರಾಮುಲು ಬೆನ್ನಿಗೆ ನಿಂತುಕೊಂಡರು. ಗಣಿ ವ್ಯವಹಾರದಲ್ಲೂ ಇಬ್ಬರೂ ಸಾಥಿ. ಶ್ರೀರಾಮುಲು ಹಿಂದುಳಿದ ವರ್ಗಕ್ಕೆ ಸೇರಿದವರು. ರೆಡ್ಡಿ ಪ್ರಬಲ ಕೋಮಿನವರು. ಒಂದೇ ಪರಿವಾರದ ಸದಸ್ಯರಂತಿದ್ದಾರೆ. "ಶೋಲೆ" ಸಿನಿಮಾದ ಧರ್ಮೆಂದ್ರ ಮತ್ತು ಅಮಿತಾಬ್ ಜೋಡಿಯಂ...

DILSE: ಸೋರುತಿಹುದು ಮನೆಯ ಮಾಳಿಗಿ...

DILSE: ಸೋರುತಿಹುದು ಮನೆಯ ಮಾಳಿಗಿ... : "HOME Directed By: Yann Arthus-Bertrand Plot: With aerial footage from 54 countries, Home is a depiction of how the Earth's problem..."

ಸೋರುತಿಹುದು ಮನೆಯ ಮಾಳಿಗಿ...

HOME Directed By: Yann Arthus-Bertrand Plot: With aerial footage from 54 countries, Home is a depiction of how the Earth's          problems are all interlinked. Genre(s): Documentary Released: June, 2009 Running Time: 1 Hour, 35 Minutes HOME has been made for you : share it! And act for the planet." ಸೋರುತಿಹುದು ಮನೆಯ ಮಾಳಿಗಿ... ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ... ಷರೀಫರು ಶತಮಾನದ ಹಿಂದೆಯೇ  ಈ ದೇಹವೆನ್ನುವ ಮತ್ತು ಒಟ್ಟಾರೆ ವಿಶ್ವವೆನ್ನುವ ಮನೆಯ ಬಗ್ಗೆ  ತುಂಬ ಸ್ಪಷ್ಟವಾಗಿ ಗ್ರಹಿಸಿದರು! ಕಲ್ಲಿಂದ, ಮಣ್ಣಿಂದ ಕಟ್ಟಿಕೊಂಡ ನಾವಿರುವ ಮನೆಯೇ ಎಷ್ಟೊಂದು ತೂತುಗಳಿಂದ ತುಂಬಿಕೊಂಡಿರುತ್ತದೆ ಅಲ್ವಾ? (ತೂತು ತುಂಬಿಕೊಳ್ಳಲು ಸಾಮಾನ್ಯರಿಗೆ ಅವಕಾಶವಿದೆಯೇ? ಕಲ್ಲು, ಮಣ್ಣಿಗೆ ಕೈ ಹಚ್ಚುವ ಸ್ಥಿತಿಯಲ್ಲೂ ಅವರಿಲ್ಲ! ಅದೆಲ್ಲದರ ಮೇಲೆ ಪಾಟೀಲರು, ಶೆಟ್ಟರು, ಗೌಡರು, ರೆಡ್ಡಿ, ಲಾಡ್, ಘೋರ್ಪಡೆ, ಜೆ.ಕೆ. ಸಿಂಘಾನಿಯಾ... ಅಂಥವರದಷ್ಟೇ ಲೈಸನ್ಸ್ ಇದೆ, ಅಧಿಕಾರವಿದೆ! ಆ ಮಾತು ಬೇರೆ.) ಮನೆಯಲ್ಲಿ ಆಹಾರಕ್ಕಾಗಿ ಒಲೆ ಹೊತ್ತಿ ಉರಿಯುತ್ತದೆ. ಹೊಗೆ ಜಾಸ್ತಿಯಾದಾಗ, ಉಸಿರುಗಟ್ಟುವ ಸ್ಥಿತಿ ಬಂದಾಗ ಒಲೆಯನ್ನು ಆರಿಸುವ ಬದಲು ಕಿಟಕಿ, ಬಾಗಿಲು, ಹೊಗೆ ಮಾಳಿಗೆ ಮಾತ್ರ ತೆರೆದಿಟ್...