ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...

ಇಂಡಿಯಾದ ರಾಜಕೀಯ ಎದುರಿಸಲಿರುವ ಅಪಾಯದ ಮುನ್ಸೂಚನೆ

Theater Olympic 2018 Play: Gunamukha Enacted bu NSD bengaluru Direction: C Basavalingaiah C Basavalingaiah Basu       ಅ ರೆ ಅಲೆಮಾರಿಯ ಮಗನೊಬ್ಬನಿಗೆ ಅಧಿಕಾರ, ದೌಲತ್‌ ಸುಖದ ಕಲ್ಪನೆಯಷ್ಟೇ ಆಗಿರಲಿಲ್ಲ. ಅದು ಒಟ್ಟೊವಿಯನ್‌ ಸಾಮ್ರಾಜ್ಯದ ವೈಭವವನ್ನು ಮೀರಿಸುವಂತೆ ಬೆಳೆದು ನಿಲ್ಲುವ ಕನಸು, ಛಲವೂ ಆಗಿತ್ತು. ಸಾಧಾರಣ ಗ್ಯಾಂಗ್‌ ಕಟ್ಟಿಕೊಂಡು ತನ್ನ ಕಾಲದ ಅರಸು ಮನೆತನಗಳ ಮೇಲೆ ಕಣ್ಣಿಟ್ಟು ಸೈನ್ಯ ಸೇರುವ ಆತ ಅದರ ನಾಯಕನೂ ಆಗುತ್ತಾನೆ. ದೊರೆಯಾಗಿ ರಾಜಕೀಯ ಮಹತ್ವಾಕಾಂಕ್ಷೆ ಈಡೇರಿಸಿಕೊಂಡು ಪರ್ಷಿಯಾ ಸೇರಿದಂತೆ ಜಾರ್ಜಿಯಾ, ರಷ್ಯದ ಹಲವು ಭಾಗಗಳನ್ನು ಆಗಲೇ ಆಕ್ರಮಿಸಿಕೊಳ್ಳುತ್ತಾನೆ. ಅವನು ಧೈರ್ಯಶಾಲಿ ನಾದಿರ್‌ ಷಾ.   ಕೆಲ ಕಾಲ ಹಿಂದೂಸ್ತಾನದ ದೊರೆಯೂ ಆಗಿ ಮೆರೆದಿದ್ದು ಒಂದು ಆಕಸ್ಮಿಕ. ಪರ್ಷಿಯಾ ದೇಶಗಳ ಸಮೇತ ಆಪ್ಘನ್‌, ಲಾಹೋರ್‌ ಗೆಲ್ಲುತ್ತ ದೆಹಲಿಗೂ ಕಾಲಿಟ್ಟಾಗ ಇಲ್ಲಿದ್ದ ಮುಘಲ್‌ ಸೈನ್ಯ ದೈನೇಸಿ ಸ್ಥಿತಿಯಲ್ಲಿತ್ತು. ಸುಲ್ತಾನಗಿರಿಯೂ ಅವಸಾನದಂಚಿನಲ್ಲಿತ್ತು. ಮುಘಲ್‌ರನ್ನು ಮಣಿಸಿ ನಾದಿರ್‌ ಷಾ ದೆಹಲಿಯ ದೊರೆಯಾಗಿಬಿಡುತ್ತಾನೆ. ಮುಘಲ್‌ರನ್ನು ಸೋಲಿಸಬಹುದು ಎನ್ನುವ ಮೊದಲ ಸೂಚನೆಯನ್ನು ಈತ ಜಗತ್ತಿಗೆ ತೋರಿಸಿಕೊಡುತ್ತಾನೆ. ಹೀಗಾಗಿಯೇ ಫ್ರೆಂಚರು ಮತ್ತು ಬ್ರಿಟೀಷರಿಗೆ ಈತ ಹೀರೋ!   ಆನಂತರದಲ್ಲಿ ಸಾಮ್ರಾಜ್ಯಷಾಹಿಯಾಗಿ ಮೆರೆದ ನಾದಿರ್‌...

ದಿವ್ಯಾನುಭವ ನೀಡಿದ ಉಸಿರಿನಾಟ

Theatre Olympics 2018/Organised by: NSD Bengaluru Centre Play (Nob-verbal): Caesarean Section. Essays on Suicide/Enacted by: ZAR Theatre Polland Direction- Jarosław Fret ಬದುಕು ಸಾವನ್ನೇ ದಿಟ್ಟಿಸುತ್ತಲಿರುವುದಲ್ಲ. ಜೀವ ದೇಹದಿಂದ ಅನಂತದೆಡೆಗೆ ಹಾರುವ ಕ್ಷಣದತನಕ ಒಳಗೇ ಇರುವ ಅದಾವುದೋ ಶಕ್ತಿ ಅಥವಾ ಚೇತನ ಮನಸು, ದೇಹ, ಜೀವ, ಆತ್ಮದ ಜೊತೆ ನಿರಂತರ ಅನುಸಂಧಾನದಲ್ಲಿರುತ್ತದೇನೋ.. ಬದುಕಿನ ಯಾವುದೋ ಹಂತದಲ್ಲಿ ದುರ್ಬಲಗೊಳ್ಳುವ ಮನಸು ಸಾವಿನ ಧ್ಯಾನಕ್ಕೆ , ಆತ್ಮಹತ್ಯೆಯಂಥ ಪ್ರವೃತ್ತಿಗಿಳಿವುದೇ! ಆಸೆ, ಪಡೆವ. ಕಳಕೊಳ್ಳುವ ಹಂಬಲ, ತುಡಿತ ... ಎಲ್ಲದರಲ್ಲೂ ಸೋತು ನಿಂತಾಗ, ಇಷ್ಟು ವಿಶಾಲ ಟೈಂ ಅಂಡ್‌ ಸ್ಪೇಸ್‌ನಲ್ಲಿ ತನ್ನದೇ ಸ್ಪೇಸ್‌ಗಾಗಿ ತಡಕಾಡಿ ನಿರಾಶಗೊಂಡಾಗ ಎಲ್ಲವನ್ನು ಶಾಶ್ವತವಾಗಿ ಮರೆಯಲು ಅಂಥದೊಂದು ಪ್ರವೃತ್ತಿ ಶುರುವಾಗುತ್ತದೆ. ಸೋಲುಗಳನ್ನೋ, ಅವಮಾನಗಳನ್ನೋ, ಹತಾಶಗಳನ್ನೋ, ನೋವುಗಳನ್ನೋ, ಮುಜುಗರಗಳನ್ನೋ... ಅದೇನೇನನ್ನೋ ಕಾರಣಗಳ ಮಾಡಿಕೊಳ್ಳಬಹುದು ಆ ಪ್ರವೃತ್ತಿ ! ಆತ್ಮ ಹತ್ಯೆಯ ನಿರ್ಣಾಯಕ ಕ್ಷಣದಲ್ಲಿ ಅದಾವುದೋ ನಮ್ಮೊಳಗಿನ ಚೇತನ ಮತ್ತೆ ರಚ್ಚೆ ಹಿಡಿದು ಹಿಂದಕ್ಕೆಳೆಯುತ್ತದೆ. ತನಗೆ ಈ ಕ್ಷಣ ನೀನು ಬೇಕೇ ಬೇಕೆನ್ನುವ ಹಟಕ್ಕೆ ಬಿದ್ದ ಪುಟ್ಟ ಕಂದ, ಅಮ್ಮನ ಸೆರಗು ಹಿಡಿದು ನಿಲ್ಲುವ ಹಾಗೆ. ಸ್ವಲ್ಪ ನಿಂತು ಬಿಡೋ, ಕತ್ತಲಾವರಿಸುತ್ತಿದೆ, ಮಳೆ ಜೋರು, ಗಾಳಿಯೂ ಬಿರು ಬೀಸುತ್ತಲಿದೆ,...

‘ಇಲ್ಲ.. ಅಂದರೆ.. ಇದೆ!’.. ಉತ್ತಮ ಪ್ರಯೋಗ

ಜೀನ್‌ ಬ್ಯಾಪ್ಟಿಸ್ಟ್‌ ಪೊಕ್ವೆಲಿನ್‌ ಅಲಿಯಾಸ್‌ ಮೊಲಿಯರ್‌ 18ನೇ ಶತಮಾನದ ಹೆಸರಾಂತ ಫ್ರೆಂಚ್‌ ನಾಟಕಕಾರ.  ಮೊಲಿಯರ್‌ ಎನ್ನುವುದು ಆತನ ರಂಗನಾಮ. ಕಾಮಿಡಿ ನಾಟಕಗಳಿಂದ ಹೆಸರಾದ ಈತ ಬದುಕಿನ ಸಣ್ಣ ಪುಟ್ಟ ಖುಷಿ ಕ್ಷಣಗಳು ಮತ್ತು ಹಾಸ್ಯದ ಪ್ರಸಂಗಗಳನ್ನೇ ಎತ್ತಿಕೊಂಡು ಇತರ ನಾಟಕೀಯ ಅಂಶಗಳೊಂದಿಗೆ  ಬದುಕಿನ ಬಹುದೊಡ್ಡ ವಿಷಣ್ಣತೆ. ವಿಷಾದವನ್ನು ನಾಟಕವಾಗಿ ಕಟ್ಟಿಕೊಟ್ಟಿದ್ದಾನೆ. ಆ ಮೂಲಕ ಬದುಕಿನ ಬಗ್ಗೆ ಚಿಂತನೆಗೆ ಹಚ್ಚಿದ್ದಾನೆ. ಪರಿಣಾಮಕಾರಿಯಾದ ಪ್ರಹಸನಗಳಿಂದಲೇ ಮೊಲಿಯರ್‌ ತುಂಬ ಖ್ಯಾತಿ ಗಳಿಸಿದ. ತಾರ್ತೂಫ್‌, ಬೂರ್ಜ್ವಾ ಜಂಟಲ್‌ಮನ್‌ ಮತ್ತಿತರ ನಾಟಕಗಳ ಮೂಲಕ ಅನನ್ಯ ರಂಗಾನುಭವಗಳನ್ನು ಪ್ರೇಕ್ಷಕರಿಗೆ ಕಟ್ಟಿಕೊಟ್ಟ ಮೊಲಿಯರ್‌, ನಮ್ಮ ನಡುವೆ ಮತ್ತು ಸಮಾಜದಲ್ಲಿ ಅಸಂಖ್ಯ ಪ್ರಹಸನಗಳು ನಡೆದಾಗೆಲ್ಲ ನೆನಪಾಗುತ್ತಾನೆ.  ಕಳೆದ ಶನಿವಾರ ಸಂಜೆ, ಕೆ.ಎಚ್‌. ಕಲಾಸೌಧದಲ್ಲಿ ‘ಸೈಡ್‌ ವಿಂಗ್‌’ ತಂಡ ಏರ್ಪಡಿಸಿದ್ದ ‘ಇಲ್ಲ.. ಅಂದರೆ.. ಇದೆ!’  ಎನ್ನುವ ಕಾಮಿಡಿ ನಾಟಕದ ಪ್ರಯೋಗಕ್ಕೆ ಜಿ.ಎನ್‌. ಮೋಹನ್‌ ಅವರ ಜೊತೆ ನಾನೂ ಸಾಕ್ಷಿಯಾದೆ. ಮೊಲಿಯೊರ್‌ ಯಾಕೋ ನೆನಪಾದ. ನಾವು ನಮ್ಮದೇ ಬದುಕಿನ ನಿಜದ ನೆಲೆಗಳ ಹುಡುಕಾಟಕ್ಕೆ ಇಳಿದಾಗ ವಾಸ್ತವಾಂಶಗಳು ಅನಾವರಣಗೊಳ್ಳುತ್ತವೆ. ಮನುಷ್ಯ ಸಂಬಂಧಗಳಲ್ಲಿ ಅಂದರೆ ಗಂಡು–ಹೆಣ್ಣು, ಸಮಾಜದ ಜೊತೆಗಿನ ಮನುಷ್ಯನ ಸಂಬಂಧಗಳು ಅಂದರೆ ಸಾಮಾಜಿಕ ಸಂಬಂಧ ಇದೆಲ್ಲದರ ಜೊತೆ ನಮ್ಮ ಸ್ಪಂದನೆ ಏನು? ಕಂಡುಕ...

ಮುಸ್ಲಿಂ ಸಮುದಾಯ ತಂತ್ರಗಾರಿಕೆ ಬದಲಾಯಿಸಿಕೊಳ್ಳುವುದು ಅನಿವಾರ್ಯ

ಎಂಟು ನೂರು ವರ್ಷಗಳ ಕಾಲ ಮುಸ್ಲಿಂ ದೊರೆಗಳು, ಇನ್ನೂರೈವತ್ತು ವರ್ಷಗಳ ಕಾಲ ಕ್ರೈಸ್ತರು ಅಧಿಕಾರದಲ್ಲಿದ್ದರು. ಪ್ರವಾದಿತನ ನಂಬಿಕೆಯ ಸಮುದಾಯಗಳಿವು. ಎರಡರ ನಡುವೆ ರಾಜಕೀಯ ಸಂಘರ್ಷವಿದೆ. ಇವುಗಳ ರಾಜಕೀಯ ನೀತಿ ಮತ್ತು ಸಂಸ್ಕೃತಿಗಳ ಪ್ರಭಾವದಿಂದ ಸಿಂಧೂ ನಾಗರಿಕತೆ ಮತ್ತು ದ್ರಾವಿಡರ ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆಗಳಾದವು. ಆಡಳಿತದ ಮಾದರಿಗಳಾಗಿದ್ದ ಈ ಸಮುದಾಯಗಳ ಅನುಯಾಯಿಗಳು ಅದೇ ನೆಲದಲ್ಲಿ ರಾಜಕೀಯ ನಿರ್ಲಕ್ಷ್ಯಕ್ಕೊಳಗಾಗಿ ಅಸುರಕ್ಷತಾ ಭಾವ ಎದುರಿಸುವಂತಾಗಿರುವುದು ಈ ಕ್ಷಣದ ವಾಸ್ತವ.  ನೆಹರೂ ಕಾಲದಲ್ಲಿ ವಿಭಜನೆಯ ಹಿಂಸೆ ಇನ್ನೂ ಇತ್ತು. ಭೌಗೋಳಿಕ ಕಾರಣಕ್ಕಾಗಿ ಇಂಡಿಯಾದಲ್ಲಿಯೇ ನೆಲೆ ನಿಂತ ಬಹು ನಂಬಿಕೆಗಳ ಜನರಿಗೆ ಘಾಸಿಯಾಗದಂತೆ ಎಚ್ಚರಿಕೆಯ ನಡೆ ರೂಪಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಅವರ ರಾಜಕೀಯ ಇತ್ತು. ಸೆಕ್ಯುಲರಿಸಂ ತತ್ವದಡಿ ಸಮಾಜವಾದಿ ಪ್ರಜಾಪ್ರಭುತ್ವ ನೆಲೆಗೊಳಿಸುವ ಯತ್ನ ನಡೆಯಿತು.  ಇಂದಿರಾಗಾಂಧಿ ಇದನ್ನೇ ಮುಂದುವರಿಸಿದರು. ಆಧುನಿಕ ಇಂಡಿಯಾದ ರಾಜಕೀಯ ಇತಿಹಾಸ ಕಣ್ಣಾಡಿಸಿದರೆ ದಕ್ಕುವ ಮುಖ್ಯ ಅಂಶವಿದು.  ಇಂದಿರಾ ಗಾಂಧಿ ‘ಗರೀಬಿ ಹಟಾವೋ’ ಘೋಷಣೆ ಮೊಳಗಿಸಿದರು. ಬ್ಯಾಂಕ್‌ ರಾಷ್ಟ್ರೀಕರಣ, ಭೂಸುಧಾರಣೆಯಂಥ ದಿಟ್ಟ ಕ್ರಮಗಳ ಜೊತೆ ಕುಟುಂಬ ಕಲ್ಯಾಣ ಜಾರಿಗೊಳಿಸಿದರು. ಜನಸಂಖ್ಯೆ ನಿಯಂತ್ರಣದಂಥ ಕ್ರಮಗಳು ಧರ್ಮ ವಿವೇಚನೆಯ (Divine reason) ನೆಲೆಯಲ್ಲಿ ಸಮುದಾಯವೊಂದರ ನಂಬುಗೆಗಳನ್ನು ಮುಜುಗರಕ್ಕೀಡುಮಾ...

ತಲಾಖ್ ತಲಾಖ್ ತಲಾಖ್

ಒಟ್ಟಾಗಿ ಸಂಬಂಧವಾಗುತ್ತೇವೆ. ಸಂಬಂಧದಿಂದ ಒಟ್ಟಾಗುತ್ತೇವೆ. ಎರಡೂ ಸಾಧ್ಯವಿದೆ. ಬಂಧ ಗಟ್ಟಿಗೊಳ್ಳುವುದಕ್ಕೆ ಬೈಡಿಫಾಲ್ಟ್‌ ಆದ ಏನೂ ಇರುವುದಿಲ್ಲ. ಮನೆ ಕಟ್ಟಿಕೊಳ್ಳುವಂತೆ ಮನಸೂ ಕಟ್ಟಿಕೊಳ್ಳುವಂಥದು. ಒಂದು ತಂತು ತಂತಾನೇ ಎಲ್ಲ ನೋಡಿಕೊಳ್ಳಲು ಸಾಧ್ಯವಿದ್ದರೆ ಪ್ರಜ್ಞಾಪೂರ್ವಕವಾದ ಪ್ರಯತ್ನಗಳ ಅಗತ್ಯವಿರುತ್ತಿರಲಿಲ್ಲ. ಯಾರೂ ಯಾರ ಬದುಕಿಗೆ ಸುಮ್ಮನೇ ಸೇರುವುದಿಲ್ಲ.  ಮನುಷ್ಯರ ನಡುವೆ ಫಲಾಪೇಕ್ಷೆಗಳ ಹಂಗಿಲ್ಲದ ಅಕಾರಣ ಸಂಬಂಧಗಳೂ ಇವೆ. ಆದರೆ ಮದುವೆ ಎನ್ನುವ ಖಾಸಗಿ ಸಂಬಂಧದಲ್ಲಿ ನಿರ್ದಿಷ್ಟ ನಿರೀಕ್ಷೆಗಳಿರುವುದರಿಂದ ಅದೊಂದು ಏರ್ಪಾಟು. ಇದನ್ನೇ ಕ್ರಮಬದ್ಧ ಶಿಸ್ತಿಗೊಳಪಡಿಸುವ ಜವಾಬುದಾರಿಯನ್ನು ಕುಲ, ಜಾತಿ, ಧರ್ಮಗಳು ಹೊತ್ತುಕೊಂಡು ಸಾಂಸ್ಥಿಕ ಸ್ವರೂಪದಲ್ಲಿ ನಿಯಂತ್ರಿಸುತ್ತಿವೆ. ನಾಗರಿಕತೆ ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಹುಟ್ಟಿಕೊಂಡ ಇಂಥ ವ್ಯವಸ್ಥೆಗಳು ಕಾಲಾಂತರದಲ್ಲೂ ಮುಂದುವರಿದಿವೆ.   ಬುಡಕಟ್ಟುಗಳಲ್ಲಿ ಹಂಚಿಹೋಗಿದ್ದ ಅರೇಬಿಯನ್ನರನ್ನು ಒಗ್ಗೂಡಿಸಿ ನಿರಾಕಾರವಾದ ಏಕದೇವೋಪಾಸನೆ ವ್ಯಾಪ್ತಿಗೆ ತಂದಿದ್ದು ಪ್ರವಾದಿ ಮುಹಮ್ಮದ್‌ ನೇತೃತ್ವದ ಇಸ್ಲಾಂ. ಅದು ಅಪರೂಪದ ಅಸ್ಮಿತೆಯಾಗಿ ಇಂಡಿಯಾದಲ್ಲೂ ಹಬ್ಬಿದೆ. ಏಕದೇವೋಪಾಸನೆಗೆ ಪೂರಕ ಐದು ಮುಖ್ಯ ನೇಮಗಳನ್ನು ಇಸ್ಲಾಂ ರೂಪಿಸಿಕೊಂಡಿತು. ಕಲ್ಮಾ, ರೋಜಾ, ನಮಾಜ್‌, ಜಕಾತ್‌ ಮತ್ತು ಹಜ್‌. ಇವಕ್ಕೆಲ್ಲ ಕರಾರುವಾಕ್ಕಾದ ನೀತಿ ಸಂಹಿತೆಗಳನ್ನು ಅದು ರೂಪಿಸಿತು. ಹಾಗೆಯೇ ಸಾಮಾಜ...

‘ಬಲ’ಗೊಳ್ಳುತ್ತಿರುವ ರಾಹುಲ್‌

ನೆಹರೂ ನೇತೃತ್ವದ ಕಾಂಗ್ರೆಸ್‌ ತೊರೆದ ಇಂದಿರಾ ಗಾಂಧಿ ಹೊಸ ಕಾಂಗ್ರೆಸ್‌ ಕಟ್ಟಿಕೊಂಡರು. ರಾಜೀವ್‌ ಅದನ್ನೇ ಮುಂದುವರಿಸಿದರು. ಇಬ್ಬರೂ ಕೊಲೆಯಾದರು. ಅಲ್ಲಿಯವರೆಗೂ ಭವ್ಯವಾಗಿದ್ದ ಕಾಂಗ್ರೆಸ್‌ ಎನ್ನುವ ಮಹಲಿಗೆ ಮುದಿ ರಾಜಕಾರಣಿಯೊಬ್ಬ ಹೊಕ್ಕುಬಿಟ್ಟ. ಧ್ವಂಸದ ಅಧ್ಯಾಯ ಆರಂಭಿಸಿ, ‘ಬಳು ಹೊಕ್ಕ ಮನೀ ಅಳು’ ಎನ್ನುವಂತೆ ಕಾಂಗ್ರೆಸ್‌ ಅವಸಾನಕ್ಕೆ ನಾಂದಿ ಹಾಡಿದ. ಅಲ್ಲಿಂದಾಚೆಗೆ ಕಾಂಗ್ರೆಸ್‌  ಶೈತಾನ್‌ ಹೊಕ್ಕ ಮಹಲ್‌ ಆಗಿತ್ತು. ಅಕ್ಷರಶಃ ಭೂತ ಬಂಗಲೆಯಾಗಿತ್ತು.  ತೀವ್ರ ಒತ್ತಡದಲ್ಲಿದ್ದ ಸೋನಿಯಾ ಅಳುಕುತ್ತಲೇ ಮಹಲು ಹೊಕ್ಕರು. ಗಾಂಧಿ ಮನೆತನದ ಸೊಸೆ, ಮೂಲ ಇಟಲಿಯ ಸಮಚಿತ್ತದ ಹೆಣ್ಣುಮಗಳು ಹಲ್ಲಿ, ಬಾವಲಿ, ಹಾವುಗಳಿಂದ ತುಂಬಿದ ಮಹಲನ್ನು ಸ್ವಚ್ಛಗೊಳಿಸಿ ಮತ್ತೆ ವಾಸ ಯೋಗ್ಯವಾಗಿಸಿಕೊಂಡರು. ಅಳಿದುಳಿದ ವಫಾದಾರ್‌ಗಳು ಕೋಠ್ರಿ ಹೊಕ್ಕರು. ಕೆಲವರು ಅಕ್ಷರಶಃ ಕಾವಲಾದರು. ಧ್ವಂಸದಲ್ಲಿ ಹೋದ ಮಹಲಿನ ಮಾನ ಉಳಿಸಿದರು. ರಾಜಕೀಯ ಮತ್ಸರಿಯರ ಮಸಲತ್ತುಗಳ ನಡುವೆಯೂ ಯಶಸ್ಸು ಕಾಲಬುಡಕ್ಕೇ ಬಂದಾಗ ಧಿಕ್ಕರಿಸಿ ಸರದಾರನೊಬ್ಬನಿಗೆ ದೇಶದ ಭವಿಷ್ಯ ಕಟ್ಟುವ ಕೆಲಸ ವಹಿಸಿ ಬೆನ್ನಿಗೆ ನಿಂತರು. ಮನೆಯ ಹಿರಿಯಕ್ಕನಂತೆ ನಿಂತು ಕುಸಿಯಲಿದ್ದ ಮಹಲನ್ನು ಹೆಗಲು ಕೊಟ್ಟು ತಡೆದರು.  ಹಗರಣದ ಆರೋಪ, ಪ್ರತ್ಯಾರೋಪಗಳ ಬೆಂಕಿಮಳೆಗೆ ಮಹಲು ಮತ್ತೆ ತುತ್ತಾಯಿತು.   ದೇಶದ ಒಂದು ಮೂಲೆಯಲ್ಲಿ ಕೋಮು ಗಲಭೆ, ಹಿಂಸೆ. ಪ್ರತಿಹಿಂಸೆ ಎಬ್ಬಿಸಿ ಅದರ ಕಾವನ್ನ...

‘ನ್ಯೂಟನ್‌’ ಇಂಡಿಯಾದ ವಾಸ್ತವಿಕ ಚಿತ್ರ

ವ್ಯವಸ್ಥೆ ಸರಿಪಡಿಸುವ ಕೆಲಸ ಎಲ್ಲಿಂದ ಶುರು ಮಾಡೋದು? ಹೇಗೆ ಶುರು ಮಾಡೋದು? ಉತ್ತರ ತುಂಬ ಸುಲಭ. ಎಲ್ಲಿಂದಾದರೂ ಶುರು ಮಾಡಿ, ಹೇಗಾದರೂ ಶುರು ಮಾಡಿ. ಆದರೆ ಇಚ್ಛಾಶಕ್ತಿ ಮತ್ತದಕ್ಕೆ ಚಾಲನೆ ನೀಡುವ ಬದ್ಧತೆ ಬೇಕು. ಅದಕ್ಕೆ ಮುಖ್ಯವಾಗಿ ಎದೆಗಾರಿಕೆ ಬೇಕು. ಅದಕ್ಕೂ ಮುಖ್ಯವಾಗಿ ಕಾಯಕ ಯಾವುದಾದರೂ ಇರಲಿ. ಕಾರ್ಯಕ್ಷಮತೆ ಬೇಕು. ಜೀವಪರ ನ್ಯಾಯ ಬೇಕು. ನಮ್ಮ ನೆಲೆಯಿಂದಲೇ ವ್ಯವಸ್ಥೆ ಬದಲಾವಣೆಗೆ ಆರಂಭ ನೀಡಬಹುದಲ್ಲ! ಒಂದು ಸೇಬು ಹಣ್ಣು ಮೇಲಕ್ಕೆ ಹಾರಿಸಿದರೆ ಅದು ಕೆಳಕ್ಕೇ ಬೀಳುತ್ತದೆ. ಮೇಲೆ ಎಸೆದ ಕಲ್ಲು ಗುಂಡು ಕೂಡ ಬೀಳುವುದು ಕೆಳಕ್ಕೇ. ಒಬ್ಬ ಚಹಾ ಮಾರುವವನು ಮತ್ತು ಅಂಬಾನಿಯಂಥ ಕರೋಡಪತಿ ಮೇಲಿನಿಂದ ನೆಗೆದರೆ ಇಬ್ಬರೂ ಬೀಳುವುದು ಕೇಳಕ್ಕೇ. ಗುರುತ್ವ ಶಕ್ತಿ ನೀಡಿದ ಮೊತ್ತ ಮೊದಲ ಸಮಾನತೆ ಸಂದೇಶ ಅದ್ಭುತ! ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಭೌತಿಕವಾಗಿ ಯಾವುದೂ ತಂತಾನೇ ಪರಿವರ್ತನೆ ಆಗುವುದಿಲ್ಲ ಎನ್ನುವುದು. ವಿಜ್ಞಾನಿ ಸರ್‌ ಐಸಾಕ್‌  ನ್ಯೂಟನ್‌ ಕಂಡುಕೊಂಡ ಈ ವೈಜ್ಞಾನಿಕ ಸತ್ಯವನ್ನು ಸಮಕಾಲೀನ ಸಾಮಾಜಿಕ, ರಾಜಕೀಯ ಸಂದರ್ಭಕ್ಕೂ ಸಮೀಕರಿಸಿದರೆ ಬದಲಾವಣೆ ಎನ್ನುವುದು ತಂತಾನೇ ಘಟಿಸುವುವಂಥದ್ದಲ್ಲ ಎನ್ನುವ ಸ್ಪಷ್ಟತೆ ಮೂಡುತ್ತದೆ. ಇಂಥ ವೈಜ್ಞಾನಿಕ ಮನೋ– ಧೋರಣೆ ಎಂಥ ಬದಲಾವಣೆಯನ್ನಾದರೂ ತರಬಲ್ಲುದು. ಅದಕ್ಕೆ ಕ್ರಿಯೆ ಅಥವಾ ಚಾಲನೆ ಮುಖ್ಯ ಅಷ್ಟೇ.  ‘ವಸ್ತುವಿಗೆ ತನ್ನದೇ ಸ್ಥಿರ ಸ್ಥಿತಿ (state of rest) ಇರುತ್ತದೆ. ಬಾಹ್ಯ...

ಪ್ರಭುತ್ವದ ಹಣಾಹಣಿ ಪ್ರಜೆಗಳಿಗೆ ಮೋಜು..

ಒಂದು ಟಿಪ್ಪಣಿ ಕರಾವಳಿಯಿಂದ ಖರಾಬು ಸುದ್ದಿಗಳೇ ಭೋರ್ಗರೆಯುತ್ತವೆ. ಧರ್ಮಾಂಧರ ಕೆಸರೆರೆಚಾಟದಲ್ಲಿ ರಾಜಕೀಯ ವೈಷಮ್ಯದ ಕೊಲೆಗಳು, ವಿದ್ಯಾರ್ಥಿನಿಯ ಸಾವು ಪ್ರಕರಣ, ಶಾಲಾ ವಿದ್ಯಾರ್ಥಿಗಳ ಬಾಯಿಂದಲೂ ಸರ್ಕಾರವನ್ನು ಉರುಳಿಸುವ ಮಾತು ಹೇಳಿಸುವ ರಾಜಕೀಯ ಹತಾಶೆಗಳು.. ಇತ್ಯಾದಿ. ಭಾಷಾ ರಾಜಕಾರಣ ಮತ್ತೆ ಮುಂಚೂಣಿಗೆ ಬಂದಿದೆ. ಹಿಂದಿ ಹೇರ ಹೊರಟ ಕೇಂದ್ರದ ಹುನ್ನಾರಕ್ಕೆ ಸೆಡ್ಡು ಹೊಡೆದ ರಾಜ್ಯ ಸರ್ಕಾರ ಅದನ್ನು ಚಿತ್‌ ಮಾಡಿದೆ. ನಾಡ ಜನ ಬೆಂಬಲಕ್ಕೆ ನಿಲ್ಲುವ ಮೂಲಕ ದಿಟ್ಟ ರಾಜಕೀಯ ನಡೆ ಪ್ರದರ್ಶಿಸಿದೆ. ಹಿಂದೂತ್ವದ ರಾಜಕೀಯ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ಹಿಡಿದ ಸಂದರ್ಭದಲ್ಲೇ ಲಕ್ಷಾಂತರ ಜನ ತಾವು ಹಿಂದೂ ಅಲ್ಲ, ತಮ್ಮದು ಲಿಂಗಾಯತ ಎನ್ನುವ ಸ್ವತಂತ್ರ ಧರ್ಮ ಎಂದು ಎದೆತಟ್ಟಿ ಘೋಷಿಸಿಕೊಂಡರು. ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮ ಬಯಸಿದವರ ನೆರವಿಗೆ ನಿಲ್ಲುವ ನಿಲುವು ತಾಳಿತು. ಇದು ದೇಶದ ಅಧಿಕಾರ ಹಿಡಿದ ಪಕ್ಷವೊಂದರ ಅಜೆಂಡಾಕ್ಕೆ ದೊಡ್ಡ್ ಚಾಲೆಂಜ್‌. ಗುಜರಾತಿನ ಪಳಗಿದ ರಾಜಕಾರಣಿ ಕಾಂಗ್ರೆಸ್‌ ನಾಯಕಿಯ ಬಲಗೈ ಭಂಟ ರಾಜ್ಯಸಭೆ ಸೇರುವ ಯತ್ನ ಅಕ್ಷರಶಃ ಜಂಗೀ ನಿಕಾಲಿ ಕುಸ್ತಿ ಪಂದ್ಯವಾಯಿತು. ಅದು ಕರ್ನಾಟಕದತನಕ ಸಾಗಿ ಬಂದಿತು. ರೆಸಾರ್ಟ್‌ ಅಂಗಳದಲ್ಲಿ  ಪಟುಗಳ ರಕ್ಷಿಸುವ ಅನಿವಾರ್ಯತೆ ಸೃಷ್ಟಿಸಿತು. ಉಸ್ತುವಾರಿ ನಾಡಿನ ಪವರ್‌(ಫುಲ್‌) ಮಿನಿಸ್ಟರ್‌ ಹೆಗಲಿಗೇರಿತು. ಪ್ರತೀಕಾರವಾಗಿ ಸೆಂಟ್ರಲ್‌ ಪವರ್‌ ಆಜ್ಞಾಪಾಲಕರಂತೆ ತನಿಖಾ ದಳ ನಾಡಿ...

MOM: ಹುಡುಗಿ ಅತ್ಯಾಚಾರ ಹಿಂಸೆಗೆ ತಾಯಿ ಪ್ರತಿಹಿಂಸೆ, ‘ಬಾಹ್ಯ ಪ್ರಚೋದನೆಗಳ’ ಮೇಲೆ ಆಕ್ರೋಶ

ತನ್ನ ಗಂಡನ ಮೊದಲ ಪತ್ನಿಯ ಮಗಳು ತನ್ನನ್ನು ಯಾವ ರೀತಿಯಲ್ಲೂ ತಾಯಿ ಎಂದು ಒಪ್ಪಿಕೊಳ್ಳದವಳು. ಅಂಥ ಮಗಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಾಗ ತಾಯಿ ಸ್ಥಾನದಲ್ಲಿರುವ ಹೆಣ್ಣೊಬ್ಬಳ ಸ್ಪಂದನೆ ಹೇಗಿರಬಹುದು!  ತುಂಬ ಕಾಡಬಲ್ಲ ಪ್ರಶ್ನೆ ಇದು. ಮನುಷ್ಯ ಹುಟ್ಟು ಅವನ ಒಟ್ಟು ಬದುಕಿನ ಫಿಲಾಸಫಿ ಗಮನಿಸಿದರೆ ಹೊಳೆವ ಸತ್ಯಗಳಲ್ಲಿ ಇಷ್ಟನ್ನು ಈ ಕ್ಷಣಕ್ಕೆ ಹೆಕ್ಕಿಕೊಳ್ಳಬಹುದು.– ಎಲ್ಲ ಸಂಬಂಧಗಳು ಜೈವಿಕ ಆಧಾರದಲ್ಲಷ್ಟೇ ಗಟ್ಟಿಗೊಳ್ಳುವುದಿಲ್ಲ. ತನಗೆ ಹುಟ್ಟಿದ, ತನ್ನ ಜೊತೆ ರಕ್ತ ಹಂಚಿಕೊಂಡ ಜೀವಗಳಷ್ಟೇ ಮನುಷ್ಯ ಜೀವ ಎಂದುಕೊಂಡರೆ ಈ ಜೀವಸಂಬಂಧಕ್ಕೆ ಅರ್ಥವೇನು?  ಒಂದು ಜೀವ ಅಪಾಯಕ್ಕೊಳಗಾದರೆ, ತೊಂದರೆಗೊಳಗಾದರೆ, ಹಲ್ಲೆಗೊಳಗಾದರೆ ಮತ್ತೊಂದು ಜೀವ ಅದಕ್ಕೆ ಸ್ಪಂದಿಸುವುದೇ ನಿಜದ ಮಾನವೀಯತೆ. ಸಹಮಾನವರ ಜೊತೆ ಸಹಾನುಭೂತಿ, ಸಹಿಷ್ಣುತೆ, ಸ್ಪಂದನೆಯೇ ನಿಜದ ಮಾನವ ಧರ್ಮ.  ದ್ವೇಷ, ಮೋಹ, ಮತ್ಸರಗಳೆಲ್ಲವೂ ಮನುಷ್ಯ ಸಹಜವೇ. ಆದರೆ ಅವು ವಿಕೃತಿಗಿಳಿದಾಗಲೇ ಸಂಘರ್ಷ. ಅದರಿಂದ ಹುಟ್ಟುವ ಅಸಹಿಷ್ಣುತೆ, ಅಮಾನವೀಯ ನಡೆಗಳಿಂದಾಗಿ ಅನಾಹುತಗಳು ಸಂಭವಿಸುತ್ತವೆ. ಇದು ಮನುಷ್ಯನೊಳಗಣ ಜಗತ್ತು. ಸಂಘರ್ಷ. ಬಾಹ್ಯಕ್ಕಿಂತ ಆಂತರಿಕ ಪ್ರಚೋದನೆಗಳೇ ಇವಕ್ಕೆ ಮೂಲ. ರವಿ ಉದ್ಯಾವರ ಎನ್ನುವ ಉದಯೋನ್ಮುಖನ ನಿರ್ದೇಶನದ ಮತ್ತು ಖ್ಯಾತ ನಟಿ ಶ್ರೀದೇವಿ ಅಭಿನಯದ ‘ಮಾಮ್‌’ (MOM) ಚಿತ್ರವನ್ನು ಗೆಳೆಯ ಇಟ್ನಾಳ್‌ ಜೊತೆ ನೋಡಿದೆ. ಚಿತ್ರದ ಕೆಲ ಸನ್ನಿವೇಶಗಳು ನ...

ವಿಪರೀತ ದೇಶಭಕ್ತಿ, ಧರ್ಮಮೋಹ ಅಟ್ಟಹಾಸದ ಕಾಲಘಟ್ಟದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ 2017

ಇಂಡಿಯನ್‌ ಥಿಯೇಟರ್‌ ಜಗತ್ತಿನಲ್ಲಿ ಸಿಜಿಕೆ (ಸಿ.ಜಿ. ಕೃಷ್ಣಸ್ವಾಮಿ) ಅವರದು ದೊಡ್ಡ ಹೆಸರು. ರಂಗ ಕಾಣ್ಕೆಯೂ ಮಹತ್ವದ್ದು. ತಮ್ಮ ಸಾಮಾಜಿಕ ಮತ್ತು ರಾಜಕೀಯ ಬದ್ಧತೆಗಳಿಂದ ಹೊರಹೊಮ್ಮಿದ ವೈಚಾರಿಕತೆಯನ್ನು ಪ್ರಯೋಗಕ್ಕೊಳಪಡಿಸಿ ಆಮೂಲಕ ರಂಗಕ್ಕೆ ವಿಶಿಷ್ಟ ನೆಲೆಗಟ್ಟನ್ನು ರೂಪಿಸುವಲ್ಲಿನ ಅವರ ಪಾತ್ರ ಹಿರಿದು. ಬರಿಯ ಮನರಂಜನಾ ಮಾಧ್ಯವನ್ನಾಗಿ ರಂಗವನ್ನು ದುಡಿಸಿಕೊಳ್ಳುವವರ ಮಧ್ಯೆ ಸಿಜಿಕೆ ಹೊಸ ಆಶಯಗಳು ಮತ್ತು ವೈಚಾರಿಕ ಹರಿತವನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಸಾಧ್ಯತೆಗಳನ್ನು ತೋರಿಸಿಕೊಟ್ಟವರು. ಬಹು ಹಿಂದೆಯೇ ‘ಇಪ್ಟಾ’ದಂಥ ರಾಷ್ಟ್ರೀಯ ವೇದಿಕೆ ಕೇವಲ ನೌಟಂಕಿಯಲ್ಲೇ ಉಳಿದುಬಿಡಬಹುದಾಗಿದ್ದ ರಂಗಭೂಮಿಗೆ ಸಾಮಾಜಿಕ ಬದ್ಧತೆ ಮತ್ತು ಮೌಲಿಕತೆಯನ್ನು ಎಡಪಂಥೀಯ ನೆಲೆಯಲ್ಲಿ ತುಂಬಿತ್ತು. ಆ ದಾರಿಯಲ್ಲೇ ಸಿಜಿಕೆ ರಂಗ ಬದುಕನ್ನು ಕಟ್ಟಿಕೊಂಡವರು. ಬಲಪಂಥೀಯ ನಡೆಯತ್ತ ವಾಲಿದ್ದೂ ಇದೆ. ಸರಿಪಡಿಸಿಕೊಂಡು ಜೀವಪರ ನಿಲುವಿಗೆ ಗಟ್ಟಿಯಾಗಿ ನಿಂತು ಗಾಂಧಿ ವಿಚಾರಧಾರೆಯನ್ನು ಬಿಂಬಿಸುವ ‘ದಂಡೆ’ ಮತ್ತು ಸಾಮಾಜಿಕ ನ್ಯಾಯ ಪರಿಕಲ್ಪನೆ ಕಟ್ಟಿಕೊಡುವ ‘ಅಂಬೇಡ್ಕರ್‌’ ಮತ್ತಿತರ ಮಹತ್ವದ ನಾಟಕಗಳನ್ನು ರಂಗಕ್ಕೆ ನೀಡಿದ್ದಿದೆ.  ಬಹುವರ್ಷಗಳ ಹಿಂದೆ ‘ಬೆಲ್ಚಿ’,‘ಒಡಲಾಳ’ದಂಥ ಸಾಮಾಜಿಕ ತಲ್ಲಣಗಳನ್ನು ರಂಗದ ಮೇಲೆ ಪರಿಣಾಮಕಾರಿಯಾಗಿ ಇಟ್ಟಿದ್ದು ಸಿಜಿಕೆ. ಅವರ ಗರಡಿಯಲ್ಲಿ ಪಳಗಿದವರಲ್ಲಿ ಸಂವೇ...

ಮಹಿಳೆ, ಮಕ್ಕಳು ಮತ್ತು ನಾಡ ಕಾಳಜಿ

ತುಂಬ ವರ್ಷಗಳ ಹಿಂದಿನ ದುರಂತವಿದು. ನಾನಾಗ ಕಾಲೇಜು ಸೇರುವ ವಯಸ್ಸಿನ ಹುಡುಗ. ಅವತ್ತೊಂದಿನ ಸರಿ ರಾತ್ರಿಯಲ್ಲಿ ಹೆಣ್ಣುಮಗಳ ನರಳಾಟ. ಅಳು. ನೋಡಿದರೆ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದಳು. ಪರಿಸ್ಥಿತಿ ಗಂಭೀರವಾಗಿತ್ತು. ದವಾಖಾನೆಗೆ ಸಾಗಿಸಲು ಪರದಾಟ ನಡೆದಿತ್ತು.  ಅಂಬ್ಯುಲೆನ್ಸ್‌! ಅಯ್ಯೋ.. ಬಿಡಿ. ಆಟೊ, ಟ್ಯಾಕ್ಸಿಗಳು ಅಲ್ಲಿನ್ನೂ ಬಂದೇ ಇರಲಿಲ್ಲ. ಆ ಸರಿಹೊತ್ತಿನಲ್ಲಿ ಸಮೀಪದಲ್ಲೇ ನಿಲ್ಲಿಸಿದ್ದ ಹಮಾಲರ ಎತ್ತಿನ ಗಾಡಿಯಲ್ಲಿ ಗರ್ಭಿಣಿಯನ್ನು ಹಾಕಿಕೊಂಡು ನಾವೇ ಎತ್ತುಗಳಂತೆ ದರ ದರನೆ ಎಳೆದು ಆಸ್ಪತ್ರೆ ತಲುಪಿಸಿದ್ದೆವು. ಅದು ಸರ್ಕಾರಿ ದವಾಖಾನೆ! ಊರಿಗದೊಂದೇ ದೊಡ್ಡ ದವಾಖಾನೆ.  ತಗ್ಗು, ದಿಣ್ಣೆಯ ಅದ್ವಾನ ರಸ್ತೆ, ಪವರ್ ಬೇರೆ ಕಟ್‌ ಆಗಿತ್ತು. ಮಂದ ಬೆಳಕಿನಲ್ಲಿ ಸಾಗಿ ಆಸ್ಪತ್ರೆ ತಲುಪಿದರೆ ಅಲ್ಲಿ ಇದ್ದದ್ದು ನರ್ಸ್, ಕಂಪೌಂಡರ್. ವಿಚಾರಿಸಿದರೆ ಹೆರಿಗೆ ಹಾಸಿಗೆಗಳು ಖಾಲಿ ಇಲ್ಲ ಎನ್ನುವ ಜವಾಬು. ಎಮರ್ಜೆನ್ಸಿಗೆ ಅಂತ ಒಂದು ಬೆಡ್‌ ಇರುತ್ತಲ್ಲ ಅದು ಖಾಲಿ ಇತ್ತು. ಆದರೆ ಅದಕ್ಕೆ ‘ದೊಡ್ಡ ಬಾಯಾರ’ ಪರ್ಮಿಶನ್‌ ಬೇಕು. ದೊಡ್ಡ ಬಾಯಾರು ಅಂದರೆ ಡಾಕ್ಟರಮ್ಮ.  ಆಸ್ಪತ್ರೆಯ ಆವರಣದಲ್ಲೇ ಆಕೆಗೊಂದು ಸರ್ಕಾರಿ ಮನೆ. ಬಾಗಿಲು ಬಡಿದರೆ ಸದ್ದೇ ಇಲ್ಲ! ಒಂದೇ ಸಮ ಜೋರಾಗಿ ಕೂಗಿದಾಗ ಗಡಸು ದನಿಯೊಂದು ಕಿಟಕಿ ಬಳಿ ಬಂದು ‘ಯಾಕೆ ದನಕ್ಕೆ ಬಡಿದಹಾಗೆ ಬಾಗಿಲು ಬಡೀತಿದೀರಿ ದೊಡ್ಡ ಬಾಯಾರು ಊರಲ್ಲಿಲ್ಲ’ ಎನ್ನುವುದು ...

ದೃಶ್ಯಮಾಧ್ಯಮಕ್ಕೊಂದು ಅರ್ಥಪೂರ್ಣ ಮಾದರಿ ‘ಪೂರ್ವೋತ್ತರ ರಂಗೋತ್ಸವ’

ಬ ರಿಯ ಸಾಹಿತ್ಯಕ ಶಬ್ದ ಸೊಕ್ಕಿನ ಸಂಭಾಷಣೆಗಳಿಂದ ಸೊರಗುತ್ತಿರುವ ಕನ್ನಡ ರಂಗಭೂಮಿ ಮುಟ್ಟಿ ನೋಡಿಕೊಳ್ಳುವಂತೆ ‘ಪೂರ್ವೋತ್ತರ’ ರಂಗೋತ್ಸವದ ನಾಟಕಗಳ ಪ್ರಸ್ತುತಿ ಇತ್ತು. ರಂಗಭೂಮಿ ಅದ್ಭುತ ದೃಶ್ಯ ಮಾಧ್ಯಮ. ಮಾತುಗಳಿಗಿಂತ ದೃಶ್ಯಗಳ ಮೂಲಕ ವಸ್ತುವಿನ ಸಂವೇದನೆಗಳನ್ನು ರಂಗದ ಮೇಲೆ ಅಭಿವ್ಯಕ್ತಿಸುವ ವಿಶಿಷ್ಠ ಕಲಾಪ್ರಕಾರ. ಬಳಸಿದ ಪರಿಕರಗಳು, ಕಲಾತ್ಮಕ ಅಭಿವ್ಯಕ್ತಿಯ ಕಸಬುದಾರಿಕೆ ಏನೇ ಇರಲಿ. ನಾಟಕವೊಂದು ರಂಗಮುಖೇನ ಹೇಳಬೇಕಾದ್ದನ್ನು ದೃಶ್ಯಗಳಲ್ಲಿಯೇ ಹೇಳುವ ಸಾಧ್ಯತೆಗಳನ್ನು ರಂಗೋತ್ಸವ ಸ್ಪಷ್ಟಪಡಿಸಿತು. ಬರಿಯ ಸಂಭಾಷಣೆಗಳು, ಅದದೇ ರಂಗ ಸಂಗೀತದ ಸೋಗಲಾಡಿತನಗಳನ್ನು ನೋಡಿ, ಕೇಳಿ ಬೇಸತ್ತಿದ್ದ ಪ್ರೇಕ್ಷಕರಿಗೆ ದೃಶ್ಯದ ಅನನ್ಯ ಸ್ಪರ್ಶಾನುಭವ ನೀಡಿತು.  ‘ಲೈಫ್‌ ಕ್ಯಾನ್ವಾಸ್‌’ ರಚನೆ ಮತ್ತು ನಿರ್ದೇಶನ: ಅಸೀಮ ಕುಮಾರ್‌ ನಾಥ್‌ ತಂಡ: ಸರ್ಸಾ. ಅಸ್ಸಾಂ ಭಾಷೆ: ಅಸ್ಸಾಮಿ ಉತ್ಸವದಲ್ಲಿ ನನ್ನ ತುಂಬ ಸೆಳೆದ ನಾಟಕ ‘ಲೈಫ್‌ ಕ್ಯಾನ್ವಾಸ್‌’. ಮನುಷ್ಯನ ಅಂತರಂಗದಲ್ಲಿರುವ ಒಂದು ಸ್ಮಶಾನ ಕುರುಕ್ಷೇತ್ರದ ಚಿತ್ರಣ ಇಡೀ ನಾಟಕದ ಜೀವಾಳ. ಪ್ರೀತಿ, ಪ್ರೇಮ, ಕಾಮ ಮತ್ತಿತರ ಅಭಿಲಾಷೆಗಳಿಂದ ಒಳಗೇ ನಡೆಯುವ ಅಂತಃಯುದ್ಧದ ಚಿತ್ರಣ ಕಟ್ಟಿಕೊಟ್ಟ ಬಗೆಯಲ್ಲಿ ಹಲವು ಹೊಸ ಸಾಧ್ಯತೆಗಳಿದ್ದವು. ಭಿನ್ನ ಲೈಟಿಂಗ್‌ವಿನ್ಯಾಸ, ಪರಿಕರಗಳ ಜತೆ ವಾಸ್ತವಿಕತೆಯನ್ನು ಅದೆಷ್ಟು ಸಾಧ್ಯವೊ ಅಷ್ಟು ಸಾಕಾರಗೊಳಿಸಿ ನಾಟಕ ಕಟ್ಟಿಕೊಟ್ಟ ಬಗೆ ನಿಬ್ಬೆರಗುಗೊಳಿಸುವಂತಿತ್ತ...

ಡಿಯರ್‌ ಜಿಂದಗೀ... ನವಿರು ಭಾವನೆಯ ಆತ್ಮಶೋಧ ಯತ್ನ

Directed by Gauri Shinde Starring Alia Bhatt Shah Rukh Khan Cinematography Laxman Utekar  ಸಂಭಾಷಣೆಗಳಿಂದ ಉಪದೇಶ ಅನಿಸಿದರೂ, ನಿರೂಪಣೆಯಲ್ಲಿ ವಸ್ತುವನ್ನು ಮನದಟ್ಟು ಮಾಡುವ ಸೊಗಸುಗಾರಿಕೆ ಇದೆ. ಸಮಕಾಲೀನ ಯುವ ಸಮಸ್ಯೆಯೊಂದನ್ನು ನೇರವಾಗಿ ಮತ್ತು ಅಷ್ಟೇ ನವಿರಾಗಿ ಬಿಚ್ಚಿಟ್ಟು ಪರಿಹಾರವನ್ನೂ ಸೂಚಿಸುವ ಯತ್ನವಿದೆ. ಹೀಗಾಗಿ ಇಡೀ ಚಿತ್ರ ಟಚೀ ಅನಿಸುತ್ತದೆ.  ಆಲಿಯಾ ಭಟ್‌  ಸಮಕಾಲೀನ ಹೆಣ್ಣುಗಳ ಚಿತ್ರಣವನ್ನು ಅಭಿನಯದಲ್ಲಿ ಸಮರ್ಥವಾಗಿ ಕಟ್ಟಿಕೊಡುತ್ತಾರೆ. ಶಾರುಕ್‌ ಖಾನ್‌ ಹೀರೋಯಿಸಂನಿಂದ ಹೊರಬಂದು ಒಂದು ಪಾತ್ರವಾಗಿ ಗುಡ್‌ ಹ್ಯುಮನ್‌ ಬೀಯಿಂಗ್‌ ತರಹ ಕಾಣಿಸಿಕೊಂಡ ಪರಿ ಸೊಗಸಾಗಿದೆ.  ಯಾವ ಹಮ್ಮು ಬಿಮ್ಮು ಇಲ್ಲದ ಒಬ್ಬ ಮನೋವೈದ್ಯನ ಪಾತ್ರವನ್ನು ಆಪ್ತವೆನಿಸುವಂತೆ ಕಟ್ಟಿಕೊಟ್ಟಿದ್ದು ಖುಷಿ ಕೊಡುವಂಥದು.   ಚಿತ್ರದ ಆಶಯ ಪ್ರೀತಿ, ಪ್ರೇಮ ಸಂಬಂಧಗಳು, ಕೆರಿಯರ್‌, ನಿರೀಕ್ಷೆಗಳು ಅಸಹಿಷ್ಣುತೆಯಿಂದ ನರಳಿ ಎಲ್ಲ ಒಂದಕ್ಕೊಂದು ಭಿನ್ನ ದಿಕ್ಕಿಗೆಳೆಯುತ್ತ ಸಮಕಾಲೀನ ಜನ ಬದುಕೇ ಸೂತ್ರವಿಲ್ಲದ ಗಾಳಿಪಟದಂತಾಗಿದೆ. ತಪ್ಪಿದ ತಾಳವನ್ನು ಸರಿಪಡಿಸಿಕೊಳ್ಳಲಾಗದು ಎನ್ನುವ ಮೌಢ್ಯವೂ ಜೊತೆ ಸೇರಿಕೊಂಡಿದೆ. ಇಂಥದೊಂದು ಸಾಮಾಜಿಕ ಸಂಕೀರ್ಣ ಸ್ಥಿತಿಗೆ ತಲುಪಿದ ಹೆಣ್ಣೊಂದರ ಕೇಸ್‌ ಸ್ಟಡಿಯಂಥ ವಸ್ತುವನ್ನಿಟ್ಟುಕೊಂಡು ಪರಿಹಾರಗಳನ್ನು ಕಂಡುಕೊಳ್ಳುವ ಆಶಯ ಈ ಚಿತ್ರದ್ದು.  ಮಾಡಿದ ...