ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನೊಬೆಲ್ ಅಂಗಳದಲ್ಲಿ ನಾನು ಹಾಕಿ ಬಂದ ಕಪ್ಪು ರಂಗೋಲಿ...

ನಾರ್ವೆ ದೇಶದ ಒಸ್ಲೊ ಶಹರಿನಲ್ಲಿರುವ ನನ್ನ ತಂಗಿ ಮತ್ತು ಭಾವನ ಮನೆಗೆ ಸಮೀಪದಲ್ಲೇ ಇಬ್ಸನ್ ನ್ಯಾಷನಲ್ ಥಿಯೇಟರ್ ಇದೆ. ಸಮೀಪದಲ್ಲೇ ಅಕೇರ್ ಬ್ರಿಗೇ ಎನ್ನುವ ದೋಣಿಗಳ ತಂಗುದಾಣ. ಅದಕ್ಕೆ ಹೊಂದಿಕೊಂಡೇ ನೊಬೆಲ್ ಶಾಂತಿ ಧಾಮವಿದೆ. ‘ನೊಬೆಲ್ ಶಾಂತಿ’ ಪುರಸ್ಕೃತರ ದರ್ಶನ ಮಾಡಿಸುವ ಈ ಶಾಂತಿ ಧಾಮದಲ್ಲಿ ವಿಶ್ವಮಹಾಮಹಿಮರ ಬಗ್ಗೆ ಸಮಗ್ರ ವಿವರಗಳಿವೆ. ಅವರ ಪುಸ್ತಕಗಳಿವೆ. ಅವರ ಸಾಧನೆಯ ಹಾದಿ, ಹೆಜ್ಜೆಗಳು ಇಲ್ಲಿ ಸ್ಪಷ್ಟವಾಗೇ ಮೂಡಿವೆ. ಅದಕ್ಕೆ ಕೂಗಳತೆ ದೂರದಲ್ಲಿ ಸಿಟಿ ಹಾಲ್ ಇದೆ. ಇಲ್ಲಿಯೇ ನೊಬೆಲ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತದೆ.   ನಿತ್ಯದ ನನ್ನ ಸುತ್ತಾಟ ಮುಗಿಯುತ್ತಿದ್ದುದೇ ನೊಬೆಲ್ ಶಾಂತಿಧಾಮದ ಭೇಟಿಯೊಂದಿಗೆ. ಪ್ರಶಸ್ತಿ ಪ್ರದಾನ ಮಾಡುವ ಸಿಟಿ ಹಾಲ್ ಸಭಾಂಗಣಕ್ಕೂ ಭೇಟಿ ಇದ್ದೇ ಇರುತ್ತಿತ್ತು. ಸಭಾಂಗಣದ ಕಟ್ಟೆ ಮತ್ತು ವಿಶ್ವ ಗಣ್ಯರು ಆಸೀನರಾಗುವ ಜಾಗದಲ್ಲಿ ಸುಮ್ಮನೇ ಕೂತು ಬರುವುದು ನನಗೆ ತುಂಬ ಖುಷಿ ಮೂಡಿಸುತ್ತಿತ್ತು.  ನೊಬೆಲ್ ಶಾಂತಿಧಾಮಕ್ಕೆ ಭೇಟಿ ಕೊಟ್ಟವರೆಲ್ಲ ತಮ್ಮ ದೇಶದ ಮಹಾನ್ ವ್ಯಕ್ತಿಗಳನ್ನು ವೇದಿಕೆಯ ಮೇಲೆ ಕಲ್ಪಿಸಿಕೊಳ್ಳುತ್ತಾರೆ ಎನ್ನುವುದು ನನ್ನ ನಂಬಿಕೆ. ಇಲ್ಲಿ ಬಂದಾಗೆಲ್ಲ. ’ದಿಲ್ ಸೇ’ ಹೇಳುತ್ತೇನೆ. ನೊಬೆಲ್ ಶಾಂತಿ ಪ್ರಶಸ್ತಿ ನೆನಪಿಸಿಕೊಂಡಾಗೆಲ್ಲ ನನಗೆ ನೆನಪಾಗುತ್ತಿದ್ದ ಒಂದೇ ಒಂದು ಹೆಸರು. ಮಹಾದೇವ.  ಪ್ರಶಸ್ತಿಗೆ ನಿಮ್ಮ ನೆ...

‘ಇಜಾಜತ್‘ ಒಂದು ಅದ್ಭುತ ಪ್ರೇಮ ಕಾವ್ಯ ಗುಲ್ಜಾರ್ ಗೆ ನನ್ನದೊಂದು ದಿಲ್ ಸೇ ಬಧಾಯೀ

ಅವನು ರೈಲಿನಿಂದ ಇಳಿದ. ಮಳೆ ಸುರಿಯುತ್ತಿದ್ದುದರಿಂದ ಸ್ಟೇಷನ್ ನ ವೇಟಿಂಗ್ ರೂಂ ಪ್ರವೇಶಿಸಿದ. ಆಕೆ ಅಲ್ಲಿ ಯಾರದೋ ನಿರೀಕ್ಷೆಯಲ್ಲಿದ್ದಂತೆ ಕೂತಿದ್ದಾಳೆ. ಅನಿರೀಕ್ಷಿತ ಭೇಟಿಯಿಂದ ಇಬ್ಬರಿಗೂ ಶಾಕ್. ಅರೇ ನೀನಿಲ್ಲಿ!, ಅಂತೂ ಸಿಕ್ಕೆಯಲ್ಲಾ, ಥ್ಯಾಂಕ್ ಗಾಡ್ ಎಟ್ ಲಾಸ್ಟ್ ವಿ ಆರ್ ಮೀಟಿಂಗ್ ನೌ... ಎನ್ನುವ ಭಾವಗಳು ಪೈಪೋಟಿಯಂತೆ ಮನದೊಳಗೆ ಪುಟಿದೇಳುತ್ತಿವೆ. ಇಬ್ಬರಲ್ಲೂ. ಆಕೆ ಮುಖ ಮುಚ್ಚಿಕೊಳ್ಳಲು ಯತ್ನಿಸಿ ಸ ೋಲುತ್ತಾಳೆ. ಅವನದು ಮತ್ತದೇ ಬ್ರಾಡ್ ಸೆನ್ಸ್. ಹೊರಗೆ ಮಳೆ, ಮಿಂಚು. ಇಬ್ಬರ ನಡುವೆ ಬಾಳಿ ಬದುಕಿದ ಪ್ರೇಮಕಾವ್ಯವೊಂದು ಬಿಚ್ಚಿಕೊಳ್ಳತೊಡಗುತ್ತದೆ. * * * ಇವನಿಗೆ ಫೊಟೊಗ್ರಫಿಯಲ್ಲಿ ಎಂಥದೋ ಒಂದು ಬಿಸಿನೆಸ್. ಅವನ ಪ್ರೀತಿಯ ತಾತ ಒಂದು ಹುಡುಗಿಯನ್ನು ಇವನಿಗೆಂದೇ ಗೊತ್ತು ಮಾಡಿ ಮದುವೆಗೂ ಸಿದ್ಧಗೊಳಿಸುತ್ತಾನೆ. ಇಂದು ನಾಳೆ ಎನ್ನುತ್ತ ಹೇಗೂ ಸಾಗಹಾಕಲೆತ್ನಿಸಿ ಸೋಲುವ ಇವನು ತಾನೊಂದು ಹುಡುಗಿಯನ್ನು ಪ್ರೀತಿಸಿದ ವಿಷಯ ಪ್ರಸ್ತಾಪಿಸಿಬಿಡುತ್ತಾನೆ. ಆಕೆ ಆಧುನಿಕ ಸ್ತ್ರೀ ಸಂವೇದನೆಯ ಹುಡುಗಿ. ಅಂಥದೇ ಹೆಣ್ಣೊಂದರ ಹಂಬಲದಲ್ಲಿದ್ದ ತನಗೆ ಅವಳೇ ತಕ್ಕವಳು ಎಂದೆಲ್ಲ ಹೇಳಿಬಿಡುತ್ತಾನೆ. ಅವಳೊಂದಿಗೆ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಾನೆ. ಆದರೆ ಅವಳೀಗ ನಾಪತ್ತೆ. ಪ್ರೇಮ ಕಾವ್ಯವೊಂದನ್ನು ಬರೆದಿಟ್ಟು ಮಾಯವಾಗಿದ್ದಾಳೆ.  ಕಡೆಗೆ ಅವನು ತಾತ ನೋಡಿದ ಹೆಣ್ಣನ್ನೇ ಮದುವೆಯಾಗುತ್ತಾನೆ. ಒಂದು ಸರಳ, ಸಹಜ ಮತ್ತು ...

ನನ್ನ ಜಿಲ್ಲೆ ನನ್ನ ಅಭಿಮತ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ವಾಸ್ತವ

ಹೊಸಪೇಟೆಯಿಂದ ಬಾಗಲಕೋಟೆ ಮತ್ತಲ್ಲಿಂದ ವಿಜಾಪುರ, ಸೊಲ್ಲಾಪುರ ಸಂಪರ್ಕದ ಆಲಮಟ್ಟಿ ಹೆದ್ದಾರಿ ಅಂತರರಾಷ್ಟ್ರೀಯ ಗುಣಮಟ್ಟದ್ದು ಎನ್ನುವಷ್ಟು ಅಚ್ಚರಿ ಮೂಡಿಸುತ್ತದೆ. ರಸ್ತೆ, ರಸ್ತೆಗುಂಟ ಕಟ್ಟಿದ ಬೇಲಿ, ಟನಲ್.. ಎಲ್ಲವೂ ಹೌಹಾರುವಂತಿವೆ. ಇಂಡಿಯಾದಲ್ಲಿದೀವಾ ಫಾರೀನ್‌ನಲ್ಲಿದಿವಾ ಅನ್ನುವಷ್ಟು.  ಬಾಗಲಕೋಟೆಯಿಂದ ಬೀಳಗಿ, ಮುಧೋಳ, ಜಮಖಂಡಿ, ವಿಜಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇಡೀ ಭಾಗವನ್ನು ಬೇರೆಯದೇ ನೆಲೆಯಲ್ಲಿ ನೋಡುವಂತೆ ಪ್ರೇರೇಪಿಸುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಕಬ್ಬು, ದ್ರಾಕ್ಷಿ, ದಾಳಿಂಬೆ ಮತ್ತು ಉಳ್ಳಾಗಡ್ಡಿ ಬೆಳೆ (ಈರುಳ್ಳಿ) ನಳನಳಿಸುತ್ತದೆ. ಜೋಳ, ಗೋಧಿಯ ನೆಲದಲ್ಲಿ ಈಗ ಕಮರ್ಷಿಯಲ್ ಕ್ರಾಪ್‌ಗಳದ್ದೇ ಕಾರುಬಾರು. ಮೇನ್ ರೋಡ್‌ನಿಂದ ಕೊಂಚ ದೂರದಲ್ಲೇ ಸಕ್ಕರೆ, ಸಿಮೆಂಟ್ ಕಾರ್ಖಾನೆಗಳು, ಗ್ರಾನೈಟ್ ಉದ್ಯಮ ಮತ್ತು ವೈನ್ ಪ್ಲ್ಯಾಂಟ್‌ಗಳು ಹೆಜ್ಜೆ ಹೆಜ್ಜೆಗೆ ಅನ್ನುವಷ್ಟಿವೆ. ರಸ್ತೆಗಳು ಮಿರಿ ಮಿರಿ ಮಿಂಚುವುದರ ಹಿಂದಿನ ಹಿಕ್ಮತ್ತು ಇಂಥ ಉದ್ಯಮಗಳದ್ದೇ.  ಬೆಳೆಹಾನಿ, ಬಂಪರ್ ಬೆಲೆ, ಸಬ್ಸಿಡಿ ದಂಧೆ, ಸಾಲ ಮನ್ನಾ ಇಂಥದ್ದರಲ್ಲೇ ಮಿಂದೇಳುವ ಕೆಲ ಮೇಲ್ವರ್ಗದ ಶ್ರೀಮಂತ ರೈತರ ಕಾರು, ಜೀಪು ಮತ್ತು ಬೈಕ್  ಭರಗುಟ್ಟಲು ರೂಪಿಸಿದಂತಿರುವ ರಸ್ತೆಗಳೇ ಅಭಿವೃದ್ಧಿ ಎನ್ನುವ ಭ್ರಮೆ ಹುಟ್ಟಿಸಿವೆ.  ಪುಟ್ಟ ಜಮೀನು ಹೊಂದಿದ ರೈತರ ಎತ್ತಿನ ಗಾಡಿ, ಅಸಂಖ್ಯ ಭೂರಹಿತರು, ಕೂಲಿ ಕಾರ್ಮಿಕರು ...

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ... ಭಾಗ 5

1968ರಲ್ಲಿ ರಫೀ ಕುಟುಂಬದ ಮೊತ್ತ ಮೊದಲ ಮದುವೆ ಸಮಾರಂಭ. ಮೊದಲ ಮಗಳು ಪರ್ವೀನ್ ಹಸೆಮಣೆ ಹತ್ತುವ ಸಂಭ್ರಮ. ಆ ಸಂದರ್ಭದಲ್ಲೇ ’ನೀಲ್ ಕಮಲ್’ ಚಿತ್ರದ  ’ಬಾಬುಲ್ ಕಿ ದುವಾಯ್ಞೆ ಲೇತಿ ಜಾ...’ ಹಾಡಿನ ರೆಕಾರ್ಡಿಂಗ್ ನಡೆಯಿತು.  ಹಸೆಮಣೆ ಏರಿದ ಮಗಳನ್ನು ತವರು ಮನೆಯಿಂದ ಬೀಳ್ಕೊಡುವ ಸಂದರ್ಭಕ್ಕೆಂದು ಬರೆದ ಹಾಡು ಅದಾಗಿತ್ತು. ಈ ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲೆಲ್ಲ ಅಬ್ಬಾ ಮಗಳ ಬಿದಾಯಿಯನ್ನೇ ನೆನಪಿಸಿಕೊಂಡು ತುಂಬ ಭಾವುಕರಾಗುತ್ತಿದ್ದರು. ಹಾಡಿನ ಪ್ರತಿಯೊಂದು ಪದ ತಂದೆಯೊಬ್ಬನ  ಬಾವತೀವ್ರತೆಯನ್ನು ಧ್ವನಿಸುತ್ತಿತ್ತು.  ಇವತ್ತಿಗೂ ಈ ಹಾಡು ಕೇಳಿದಾಗೆಲ್ಲ ನನ್ನ ಕಣ್ಣುಗಳು ತೇವವಾಗುತ್ತವೆ. ಹಾಡಿನ ರೆಕಾರ್ಡಿಂಗ್ ಕ್ಷಣಗಳನ್ನು ಮೆಲುಕು ಹಾಕುವಾಗಲೆಲ್ಲ ಅಬ್ಬಾ ದನಿ ತಡವರಿಸುತ್ತಿತ್ತು. ಅದರಲ್ಲಿ ತಂದೆಯೊಬ್ಬನ ಮಗಳ ಬಗೆಗಿನ ಕಕ್ಕುಲಾತಿ ಭಾವನೆ ಮಿಡಿಯುತ್ತಿತ್ತು. 1968ರಲ್ಲಿ ಅಬ್ಬಾಗೆ ಇದೇ ಹಾಡಿಗಾಗಿ ನ್ಯಾಷನಲ್ ಅವಾರ್ಡ್ ಅರಸಿ ಬಂತು. ’ಹಮ್ ಕಿಸೀಸೆ ಕಮ್ ನಹೀ’ ಚಿತ್ರದ  ’ಕ್ಯಾ ಹುವಾ ತೇರಾ ವಾದಾ...’ ಎನ್ನುವ ಅದ್ಭುತ ಹಾಡಿಗೆ 1977ರಲ್ಲಿ ಮತ್ತೊಂದು ನ್ಯಾಷನಲ್ ಅವಾರ್ಡ್ ಅಬ್ಬಾ ಮುಡಿಗೇರಿತು. ರಫೀ ಸಾಹೇಬರ ಮಾತೃಭಾಷೆ ಪಂಜಾಬಿ. ಉರ್ದು  ಮಾತನಾಡುವಾಗಲೂ ಅದರಲ್ಲಿ ಪಂಜಾಬಿ ಸೊಗಡೇ ಧ್ವನಿಸುತ್ತಿತ್ತು. ಮನೆಯಲ್ಲಿ ಮಕ್ಕಳ ಜತೆ ಅಬ್ಬಾ ಉರ್ದುವಿನಲ್ಲೇ ಮಾತನಾಡುತ್ತಿದ್ದರು. ಕಾರಣ ಇಷ್ಟೇ,...

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ.... ಭಾಗ 4

1944. ಆಗ ಅಬ್ಬಾಗೆ ಇಪ್ಪತ್ತರ ಹರೆಯ. ಸಿರಾಜುದ್ದೀನ್ ಅಹ್ಮದ್ ಸಾಹೇಬ್ ಮತ್ತು ತಾಲೀಮುನ್ನೀಸಾ ಅವರ ಮಗಳು ಬಿಲ್ಖೀಸ್ ಅವರನ್ನು ಅಬ್ಬಾ (ಮೊಹಮ್ಮದ್ ರಫೀ) ವಿವಾಹವಾದರು. ನನಗಿದ್ದ ಮಾಹಿತಿಯಂತೆ ಸಿರಾಜುದ್ದೀನ್ ಅವರಿಗೆ ನಾಲ್ವರು ಹೆಂಡತಿಯರು ಮತ್ತು ಒಂಭತ್ತು ಮಕ್ಕಳು. ಹೆಂಡತಿಯರ ಪೈಕಿ ಮೂವರು ಒಬ್ಬರ ನಂತರ ಒಬ್ಬರಂತೆ ಅತ್ಯಂತ ಕಡಿಮೆ ಅಂತರದ ಅವಧಿಯಲ್ಲೇ ನಿಧನರಾಗಿದ್ದರು. ನಾಲ್ಕನೇ ಹೆಂಡತಿಯೇ ತಾಲೀಮುನ್ನೀಸಾ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಮೂವರು ಗಂಡುಮಕ್ಕಳು. ಅವರಲ್ಲಿ ಬಿಲ್ಖೀಸ್ ಕೂಡ ಒಬ್ಬರು. ಅಮ್ಮಾಗೆ (ಬಿಲ್ಖೀಸ್) ಆಗ ಕೇವಲ ಹದಿಮೂರರ ವಯಸ್ಸು. ಮದುವೆ ಬಗ್ಗೆ ಏನೂ ತಿಳಿಯದ ವಯಸ್ಸು. 'ಒಂದು ದಿನ ನಾನು ಶಾಲೆಯಿಂದ ವಾಪಸ್ ಬಂದೆ. ಅದೇ ದಿನ ನನಗೆ ಮದುವೆ ಅಂತ ಹೇಳಿದರು. ಮದುವೆ ಗಂಡು ಈ ನಿನ್ನ ಅಬ್ಬಾ. ನಾನಾಗ ನಿನ್ನ ಅಬ್ಬಾನನ್ನು ಭಾಯ್ ಎಂದು ಕರೆಯುತ್ತಿದ್ದೆ' ಎಂದು ಅವರು ಆಗಾಗ ನನ್ನ ಬಳಿ ನೆನಪಿಸಿಕೊಳ್ಳುತ್ತಿದ್ದರು.. ಹಮೀದ್ ಭಾಯ್ ಅಬ್ಬಾ ಅವರ  ಎಲ್ಲಾ ವೃತ್ತೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಹಮೀದ್ ಭಾಯ್ ಕೂಡ ಸಿರಾಜುದ್ದೀನರ ಮಗಳು ಮೆಹರುನ್ನೀಸಾಳನ್ನು ಮದುವೆಯಾದರು. ಈಕೆ ಸಿರಾಜುದ್ದೀನ್ ಅವರ ಮೊದಲ ಪತ್ನಿಯ ಮಗಳು. ಹಮೀದ್ ಭಾಯ್ ಅಬ್ಬಾ ಜತೆ 1950ರವರೆಗೂ ಇದ್ದರು. ಆನಂತರದಲ್ಲಿ ಅವರು ತಮ್ಮ ಪರಿವಾರ ಸಮೇತ ಬೆಂಗಳೂರಿಗೆ ಸ್ಥಳಾಂತರಗೊಂಡರು. ಆಗ ಅಬ್ಬಾ ವ್ಯವಹಾರಗಳನ್ನೆಲ್ಲಾ ಅಮ್ಮಾ ಸಹೋದರ ಜ...

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ...- ಭಾಗ 3

ಅಬ್ಬಾಗೆ ಒಂದು ಕಡೆ ತಾನು ಹುಟ್ಟಿ ಬೆಳೆದ ನಾಡು ಮತ್ತು ಬಂಧು ಬಳಗವನ್ನೆಲ್ಲ ತೊರೆದು ಬಂದ ಹಳವಂಡ. ಮತ್ತೊಂದೆಡೆ ಅಂದುಕೊಂಡಂತೆ ಮುಂಬೈ ಎಂಬ ಮಾಯಾನಗರಿಗೆ ಬಂದ ಖುಷಿ. ಮುಂಬೈ ಒಂಥರ ತುಂಬ ಕುತೂಹಲಕರವಾದ ನಗರ. ಅಬ್ಬಾ ಮತ್ತು ಹಮೀದ್ ಭಾಯ್ ಗೆ ಹೊಸ ವಾತಾವರಣಕ್ಕೆ ತೆರಕೊಳ್ಳುವ ಮತ್ತು ಇರುವುದಕ್ಕೊಂದು ಸೂರು ಹುಡುಕಿಕೊಳ್ಳುವ ಧಾವಂತ. ಅದರಲ್ಲೂ ಕಡಿಮೆ ಬೆಲೆಗೆ ಬಾಡಿಗೆ ಮನೆ ಹುಡುಕುವ ಅನಿವಾರ್ಯತೆ. ಅಬ್ಬಾಗೆ ಅದೃಷ್ಭದ ಮೇಲೆ ನಂಬಿಕೆ ಇತ್ತು. ಏನಾದರೊಂದು ವ್ಯವಸ್ಥೆ ಆದೀತೆಂಬ ವಿಶ್ವಾಸ ಬಲವಾಗಿತ್ತು. ಅಂತೂ ಮೊಹಮ್ಮದ್ ಅಲಿ ರಸ್ತೆಯ ಪ್ರಿನ್ಸೆಸ್ ಬಿಲ್ಡಿಂಗ್ ನಲ್ಲಿ ಇರುವುದಕ್ಕೆ ಒಂದು ನೆಲೆ ದಕ್ಕಿತು. ಸಿರಾಜುದ್ದೀನ್ ಅಹಮದ್ ಬಾರಿ ಎನ್ನುವವರು ಈ ಬಿಲ್ಡಿಂಗ್ ಒಡೆಯ. ಮೇಲ್ಮಹಡಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಅಬ್ಬಾ ಅಂದುಕೊಂಡಂತೆ ಅತ್ಯಂತ ಕಡಿಮೆ ಬೆಲೆಗೆ ಬಾಡಿಗೆಯ ಕೋಣೆಯ ವ್ಯವಸ್ಥೆ ಆಯ್ತು.  ರಫೀ ಎದುರಿಸುತ್ತಿದ್ದ ಬಲು ಕಷ್ಟದ ಸಮಯ ಇದಾಗಿತ್ತು. ಅಪರಿಚಿತ ನಗರ, ಮೇಲೆ ಜೇಬಿನಲ್ಲಿ ಕಿಲುಬು ಕಾಸಿಲ್ಲ.. ಸ್ಟುಡಿಯೋ ಮತ್ತು ಮನೆಗೆ ಮೈಲುಗಟ್ಟಲೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ. ರೆಕಾರ್ಡಿಂಗ್, ಪೈಲಟ್ ಸಿಂಗಿಂಗ್, ರಿಹರ್ಸಲ್ ಹೀಗೆ ಎಲ್ಲದಕ್ಕೂ ದೂರದ ಸ್ಟೂಡಿಯೋಗೆ ನಡೆದುಕೊಂಡೇ ಹೋಗಬೇಕಿತ್ತು. ವಾಪಸ್ ನಡೆದೇ ಮನೆ ಸೇರಬೇಕಿತ್ತು. ಎಷ್ಟೋ ಸಾರಿ ನಡೆದು ಸುಸ್ತಾಗಿ ಸ್ಟುಡಿಯೋ ತಲುಪಿ, ಒಳಕ್ಕೆ ಕಾಲಿಡುತ್ತಿದ್ದ...

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ-2

ಕೆಎಲ್ ನುಡಿದ ಭವಿಷ್ಯ ನಿಜವಾಗಲು ಹೆಚ್ಚೆನೂ ಸಮಯ ಹಿಡಿಯಲಿಲ್ಲ. ಗಾಯನ ಮತ್ತು ಸಂಗೀತ ಅಬ್ಬಾ ಬದುಕಿನ  ಉಸಿರೇ ಆಗಿ ಹೋಗಿತ್ತು.  ಹಿಂದಿರುಗಿ ನೋಡುವ ಪ್ರಶ್ನೆಯೇ ಇರಲಿಲ್ಲ. ಅವಕಾಶಗಳು ಅವರನ್ನು ಅರಸಿ ಬರತೊಡಗಿದವು. ಲಾಹೋರಿನ ಆಲ್ ಇಂಡಿಯಾ ರೇಡಿಯೋದಲ್ಲಿ ಹಾಡುವ ಅವಕಾಶ ಒದಗಿ ಬಂದಿತು. 'ಜನ ನನ್ನ ಬಗ್ಗೆ ಏನೇನೋ ಕೇಳುತ್ತಿರುತ್ತಾರೆ. ನಾನವರಿಗೆ ಏನು ಹೇಳಲಿ? ಬಾಲ್ಯದಿಂದಲೇ ಸಂಗೀತ ನನ್ನನ್ನಾವರಿಸಿಕೊಂಡಿತ್ತು. ನನ್ನ ಮನಸು ಸಂಗೀತಕ್ಕೆ ಮಾತ್ರ ಹಾತೊರೆಯುತ್ತಿತ್ತು ಎಂದಷ್ಟೇ ಹೇಳಿ ಸುಮ್ಮನಾಗಿಬಿಡುತ್ತೇನೆ. ನಾನೀ ಹಂತಕ್ಕೆ ಬರಲು ತುಂಬ ಶ್ರಮ ಪಟ್ಟಿದ್ದೇನೆ. ಈ ಶ್ರಮದ ಗುರಿಯನ್ನು ನಾನು ಮುಟ್ಟಲೇಬೇಕು. ಎಲ್ಲವೂ ಅಲ್ಲಾಹುವಿನ ಕೃಪೆ. ನಾನು ಸರಿಯಾದ ವ್ಯಕ್ತಿಗಳನ್ನು ಸರಿಯಾದ ಸಮಯದಲ್ಲಿ ಭೇಟಿ ಮಾಡಿದೆ. ಎಲ್ಲವೂ ಸುಸೂತ್ರವಾಗಿ ಸಾಗಿತು..’ ಅಬ್ಬಾ ಆಗಾಗ ಹೇಳುತ್ತಿದ್ದ ಈ ಮಾತು ನನಗೀಗಲೂ ನೆನಪಿದೆ.  ಹಲವಾರು ಕಷ್ಟ, ಸಂಕಷ್ಟಗಳ ನಡುವೆಯೂ ಹಗಲು ರಾತ್ರಿ ಅವರಲ್ಲಿ ಒಂದೇ ತುಡಿತ. ಅದು ಸಂಗೀತ. ರಫೀ ತಮ್ಮ ಹದಿಮೂರನೇ ವಯಸ್ಸಿನಲ್ಲಿ ಸಂಬಂಧಿ ಬಶೀರನ್ ಬೇಗಂ (ತಂದೆಯ ಸಹೋದರನ ಮಗಳು) ಅವರನ್ನು ಮದುವೆಯಾಗಬೇಕಾಗಿ ಬಂದಿತು. ಅವರ ಹಿರಿಯ ಮಗ ಸಯೀದ್ ಈ ಸಂಬಂಧದಿಂದ ಹುಟ್ಟಿದ್ದು. ಈ ಮದುವೆ ತುಂಬ ಕಾಲ ಬಾಳಲಿಲ್ಲ. ಅಬ್ಬಾ ಬೇಗ ವಿವಾಹ ವಿಚ್ಛೇದನ ಪಡೆದುಕೊಂಡರು. ಅಬ್ಬಾ ಮೊದಲ ಮದುವೆಯ ವಿಷಯ ಮನೆಯ ಎಲ್ಲರಿಗೂ ಗೊತ್ತಿದ...

ಸಾವು...

ಕವಿ ಜಿ.ಎಸ್. ಶಿವರುದ್ರಪ್ಪ ಕಾವ್ಯ ಕಟ್ಟಿದರು. ಅದನ್ನು ಎದೆ ತುಂಬಿ ಹಾಡಿದವರೆಷ್ಟೋ. ಅವರು ಪ್ರೇಮ, ಪ್ರೀತಿಯ ಮಾತು ಹೇಳಿದರು. ಅದೆಷ್ಟೋ ಮಾನವ ಪ್ರೇಮಿಗಳು ಎದೆಗಿಳಿಸಿಕೊಂಡರು. ಕಾವ್ಯ, ಹಾಡು, ಪ್ರೇಮ ... ನಿರಂತರ.   ಇವು ಎಂದೂ ನಿಲ್ಲದ ಧಾರೆಗಳು. ಕವಿತೆಗೆ ಸಾವಿಲ್ಲ, ಕವಿಗೂ... * * *  ಬದುಕಿನೊಟ್ಟಿಗಿನ ಸಂಬಂಧವನ್ನು ಪದ್ಯ, ಗದ್ಯಗಳಲ್ಲಿ ಹಿಡಿದಿಡುವ ಯತ್ನ ಮನುಷ್ಯ ಸೂಕ್ಷ್ಮದ ಸಹಜ ನಡೆ. ಅವನಿಟ್ಟ ಹೆಜ್ಜೆ, ಆಡಿದ ನುಡಿ, ಕನಸಿದ ಭಾವ  ಎಲ್ಲದರ ಪಡಿನೆರಳನ್ನು ಪದ ಪದಗಳಲ್ಲೂ ವಿಸ್ಮಯದಂತೆ ಮೂಡಿಸುವುದು ಕಾವ್ಯಕ್ಕೆ ಸಾಧ್ಯವಿದೆ. ಸಾಲು, ಸಾಲುಗಳ ನಡುವಿನುಸಿರು, ಪಸೆ ಮತ್ತು ಎಲ್ಲ ಎಲ್ಲದರ ಗುಟ್ಟನ್ನು ಒಡಲಲ್ಲಿಟ್ಟುಕೊಂಡ ಕುತೂಹಲ ಧಾರೆಯಂತೆ ಹರಿದು ನಮ್ಮೊಳಗೂ ಇಳಿದಾಗ ಆಗುವ ಅನುಭೂತಿ ... ಭಾವುಕ ಜಗತ್ತನ್ನು ಕಲಾತ್ಮಕಗೊಳಿಸಿದ ಕವಿ ಜಿಎಸ್ಎಸ್ ಜೀವಪ್ರೀತಿಯನ್ನೇ ನೆಚ್ಚಿಕೊಂಡಿದ್ದರು. ಅಂತಃಕರಣ, ಸಹಜತೆ, ಸರಳತೆ ಮತ್ತು ಮುಗ್ಧತೆಯನ್ನು ಕಾವ್ಯಕ್ಕಿಳಿಸಿ ಮಾನವ ಪ್ರೇಮದ ಹೊನಲಾಗಿಸಿದರು. ಕಾವ್ಯ ಒಳಗಿನದೆಲ್ಲವನು ಬಟಾಬಯಲುಗೊಳಿಸಿಕೊಳ್ಳುವ ಕ್ರಿಯೆಯೂ ಹೌದು. ತಮ್ಮ ಮನದಾಳದ ಮಾನವ ಪ್ರೇಮವನ್ನು ಅವರೆಂದೂ ಬಚ್ಚಿಟ್ಟುಕೊಂಡವರಲ್ಲ. ಧಾರೆ ಎರೆದವರು. 'ಪ್ರೀತಿ ಇಲ್ಲದ ಮೇಲೆ...' ಇಲ್ಲಾವುದೂ, ಏನೂ ಇಲ್ಲ  ಎನ್ನುವುದರಲ್ಲಿ ದೊಡ್ಡ ನಂಬಿಕೆ ಇಟ್ಟುಕೊಂಡೇ ಮೊನ್ನೆ ಹೊರಟು ಹೋದರು. ಕಾಣದ ಕಡಲಿನತ್ತ... * * * ವಿ...

ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ...

ಉಪಖಂಡದ ಮಹಾನ್ ಗಾಯಕನ ಬಗ್ಗೆ ಅವರ ಸೊಸೆ ಬರೆದ ಪುಸ್ತಕ ಓದಿದೆ.  ಅಬ್ಬಾ (ತಂದೆ ಎಂದರ್ಥ. ಸೊಸೆಗೆ ಮಾವ, ತಂದೆಯಾಗೋದು ಎಂಥ ಅದ್ಭುತ ಭಾವನೆ..) ಎಂದೇ  ಆ ಗಾಯಕನನ್ನು ಗೌರವಿಸುವ ಸೊಸೆಯ ಅಭಿಮಾನ, ಅಂತಃಕರಣದ ಮಾನವೀಯ ಪರಿ ನನಗಂತೂ ಖುಷಿಕೊಟ್ಟಿತು. ಇಡೀ ಪುಸ್ತಕದ ತುಂಬ ಅಬ್ಬಾ ನಸುನಕ್ಕಿದ್ದಾರೆ. ಹೆಮ್ಮೆಯ ಭಾವದಲ್ಲಿ ಕಾಣುತ್ತಾರೆ. ನನ್ನ ಅಮ್ಮೀಗೂ ಈ ಗಾಯಕನ ಹಾಡುಗಳೆಂದರೆ ಪ್ರಾಣ. ಆಕೆಯ ಬಾಯಿಂದ ಹಲವು ಹಾಡುಗಳನ್ನು ಕೇಳಿಸಿಕೊಂಡಿದ್ದೇನೆ. ಕಲಿತಿದ್ದೇನೆ. ನನ್ನ ದೊಡ್ಡ ಮಾಮ (ಮಾಸ್ಟರ್ ಮೊಹಮ್ಮದ್ ಅಲೀ ಮುದ್ನಾಳ್) ಇವರನ್ನು ಹತ್ತಿರದಿಂದ ಕಂಡಿದ್ದರ ಬಗ್ಗೆ ಕೇಳಿ ರೋಮಾಂಚಿತಗೊಂಡಿದ್ದೆ.  ಆ ಅಪ್ರತಿಮ ಗಾಯಕನ ಹಳೆಯ ಹಾಡು ಹಾಡುತ್ತ, ಅನುವಾದ ಮಾಡುತ್ತ ಅಂತೂ ಆತನ ಒಂದಿಡೀ ಚರಿತ್ರೆಯನ್ನು ಕಣ್ಮುಂದೆ ಕಂಡೆ. ಆನಂದಿಸಿದೆ. ಅವಾಕ್ಕಾದೆ. ಅಭಿಮಾನಪಟ್ಟೆ. ಅದನ್ನು ಹೀಗೆ ಬರೆದು ಬಿಟ್ಟೆ. ಇಡೀ ಪುಸ್ತಕದ ಅನುವಾದ ಮಾಡುತ್ತಿದ್ದೇನೆ. ಅದರ ಆಯ್ದ ಭಾಗಗಳನ್ನು ಇಲ್ಲಿ ನೀಡುತ್ತಿದ್ದೇನೆ. ಇಂದು ಗಾಯಕನ ಜನ್ಮದಿನ (ಡಿಸೆಂಬರ್ 24). ಅಬ್ಬಾ... ದೇಶ ವಿಭಜನೆಗೂ ಮುನ್ನ ಅಬ್ಬಾ ಕುಟುಂಬ ಲಾಹೋರಿನಲ್ಲಿತ್ತು. ಸ್ಥಿತಿವಂತ ಮತ್ತು ಧಾರ್ಮಿಕ ಸಂಪ್ರದಾಯಸ್ಥ ಕುಟುಂಬ ಅವರದ್ದಾಗಿತ್ತು. ಅಬ್ಬಾ ಹೊಂದಿದ್ದ ಲೈಫ್ ಸ್ಟೈಲ್ ಮತ್ತು ಗತ್ತು ಇದಕ್ಕೆ ಸಾಕ್ಷಿಯಂತೇ ಇತ್ತು. ತಂದೆ ಹಾಜಿ ಮೊಹಮ್ಮದ್ ಅಲೀ ಮತ್ತು ತಾಯಿ ಅಲ್ಲಾರಖೀ. ಈ ದಂ...

ಮುಸ್ಸಂಜೆಯ ಮುಲುಕು...

ರವೀಂದ್ರ ಕಲಾಕ್ಷೇತ್ರ-50, ಸುವರ್ಣ ಸಂಭ್ರಮ ನಾಟಕೋತ್ಸವ ಸೋಮವಾರ, 2 ಡಿಸೆಂಬರ್ 2013, ಸಂಜೆ 7.00 ನಾಟಕ: ಮುಸ್ಸಂಜೆ ಕಥಾಪ್ರಸಂಗ (ಪಿ. ಲಂಕೇಶ್ ಕೃತಿ ಆಧಾರಿತ)  ಟಿಕೆಟ್: ರೂ. 50 ರಂಗರೂಪ: ಬಸವರಾಜ್ ಸೂಳೇರಿಪಾಳ್ಯ ಅಭಿನಯ: ರೂಪಾಂತರ ತಂಡ, ಬೆಂಗಳೂರು ನಿರ್ದೇಶನ: ಕೆ.ಎಸ್.ಡಿ.ಎಲ್ ಚಂದ್ರು ಬರ್ತೊಲ್ಟ ಬ್ರೆಕ್ಟನ 'ಎ ಗುಡ್ ವುಮನ್ ಆಫ್ ಶೇಜುವಾನ್', 'ಮದರ್ ಕರೇಜ್' ಹಾಗೂ ಮೆಕ್ಸಿಂ ಗೋರ್ಕಿಯ 'ತಾಯಿ'... ಈ ಎಲ್ಲ ಕೃತಿಗಳ ತಾಯಿ ಜೀವವನ್ನು ನೆನಪಿಸುವ "ಮುಸ್ಸಂಜೆಯ ಕಥಾಪ್ರಸಂಗ" ಪಿ.ಲಂಕೇಶ್ ಅವರ ಅದ್ಭುತ ಕೃತಿ. ಅದು ರಂಗದ ಮೇಲೆ ಪಾತ್ರಗಳಾಗಿ ಹರಡಿಕೊಂಡಾಗ ಒಂದರೆಕ್ಷಣ ಮನಸು ವಾವ್ ಅಂದಿತು. . * * * ಕೃತಿಯ ಪ್ಲಾಟ್ ನಲ್ಲಿ ಬಹುಮುಖ್ಯವಾಗಿ ಧ್ವನಿಸುವ ಬ್ಯಾಡರ ಹುಡುಗ ಮಂಜ, ಲಿಂಗಾಯತರ ಹುಡುಗಿಯ ಪ್ರೇಮ ಪ್ರಕರಣ, ಸಮುದಾಯವನ್ನು ರೊಚ್ಚಿಗೆಬ್ಬಿಸುವುದು ಇಂಡಿಯನ್ ಸೋಶಿಯಲ್ ಪರಿಸ್ಥಿತಿಯಲ್ಲಿ ಸಹಜ. ಹುಂಬತನದ ಕ್ರಾಂತಿಯಿಂದ ಇದನ್ನು ಎದುರಿಸುವುದು ಅನಗತ್ಯ ಹಿಂಸೆಗೆ ಇಂಬುಕೊಟ್ಟಂತಾಗುತ್ತದೆ. ಬದಲಾಗಿ ಜೀವಪರ ಆಶಯಕ್ಕೆಆರೋಗ್ಯಕರ ಭವಿಷ್ಯ ಕಟ್ಟಿಕೊಡಲು ಕ್ರಾಂತಿಕಾರಕ ಪ್ರಜ್ಞೆಯಿಂದ ದಿಟ್ಟ ಹೆಜ್ಜೆ ಇಡಬೇಕಾಗುತ್ತದೆ. ನಿರ್ಣಾಯಕ ಹಂತದಲ್ಲಿ ಜೀವಪರ ನಿಲುವನ್ನು ತಾಳಬೇಕಾಗುತ್ತದೆ. ಸಾಮುದಾಯಿಕ ಜವಾಬ್ದಾರಿಯಿರುವುದು ಇಂಥ ಮನುಷ್ಯ ಸಹಜ ಪ್ರೇಮ ನಡೆಯಲ್ಲಿ. ಧ...

ಬನ್ಸಾಲಿಯ ಬದ್‌ಬೂ ಗುಜರಾತ್ ಕೀ...

ಚಿತ್ರ: ಗೋಲಿಯೋಂಕಾ ರಾಸಲೀಲಾ: ರಾಮ್-ಲೀಲಾ ನಿರ್ದೇಶನ: ಸಂಜಯಲೀಲಾ ಬನ್ಸಾಲಿ. ಶೇಕ್ಸ್‌ಪಿಯರ್‌ನ ರೋಮಿಯೋ ಜ್ಯೂಲಿಯಟ್ ನಾಟಕದ ಅಡಾಪ್ಟೇಷನ್ ಸಿನಿಮಾ ಇತಿಹಾಸದಲ್ಲಿ  ಮುಗಿಯದ ಅಧ್ಯಾಯ. ರಾಮಲೀಲಾ ಎನ್ನುವ ನಾಟಕ ನಾರ್ತ್ ಇಂಡಿಯಾದಲ್ಲಿ ಜನಜನಿತ. ಇದು ಪಶ್ಚಿಮೀ ಕ್ಲಾಸಿಕ್ ಪ್ರಜ್ಞೆ ಮತ್ತು ರಾಮಾಯಣ ’ಮಹಾಕಾವ್ಯ’ವನ್ನು ಜನಮಾನಸದಲ್ಲಿ ಶಾಶ್ವತ ಬೀಜವಾಗಿ ಬಿತ್ತುವ ವ್ಯವಸ್ಥಿತ ಸಾಂಸ್ಕೃತಿಕ ರಾಜಕಾರಣದ ಒಂದು ಭಾಗ. ಸಂಜಯಲೀಲಾ ಬನ್ಸಾಲಿ ನಿರ್ದೇಶನದ ‘ಗೋಲಿಯೊಂಕಾ ರಾಸಲೀಲಾ: ರಾಮಲೀಲಾ‘ ಸಿನಿಮಾ ಈ ಎರಡೂ ರಾಜಕೀಯ ನಾಟಕಗಳ ಸಮ್ಮಿಶ್ರಣವನ್ನು ಬೇರೆಯದೇ ನೆಲೆಯಲ್ಲಿ ಕಾಣಲೆತ್ನಿಸಿದೆ. ನನ್ನ ಅಭಿಪ್ರಾಯದಲ್ಲಿ ಇದು ಇಂಡಿಯಾದ ಸಮಾಜೋ-ರಾಜಕೀಯ ಸಂದರ್ಭದಲ್ಲಿ ಬಹುಮುಖ್ಯವಾದ ಪ್ರತಿಕ್ರಿಯಾತ್ಮಕ ಧೋರಣೆಯ  ಸಿನಿಮಾ.  ಅಭಿನಂದನೆಗಳು ಬನ್ಸಾಲಿ.  ಗುಜರಾತ್ ನೆಲಸಂಸ್ಕೃತಿಯೊಳಗಿನ ಅಸಹಿಷ್ಣುತೆ, ವೈಷಮ್ಯ ಮತ್ತು  ಮನುಷ್ಯ ಮತ್ಸರದ ಭಯಾನಕ ಚಿತ್ರಣದೊಂದಿಗೆ ಆರಂಭಗೊಳ್ಳುವ ಸಿನಿಮಾ ಕುತೂಹಲಕಾರಿ. ಗುಜರಾತಿನ ಕೆಲ ಪ್ರದೇಶ, ಮುಖ್ಯವಾಗಿ ಅಲ್ಲಿನ ಕರಾವಳಿಯ ವೈಬ್ರೆನ್ಸಿ ಅಸಹಿಷ್ಣುತೆಯಿಂದ ಕೂಡಿರುವುದರ ಸಂಕೇತದಂತೆ ಚಿತ್ರದಲ್ಲಿ ಧ್ವನಿಸಿದೆ. ಬಂದೂಕು, ಬುಲ್ಲೆಟ್‌ ಎನ್ನುವ ಕೊಲ್ಲುವ ವಸ್ತುಗಳ ವ್ಯಾಪಾರ ನಡೆಸುವ ಅಲ್ಲಿನ ಮಾರುಕಟ್ಟೆ ಸಂಸ್ಕೃತಿ ಮತ್ತು ರಾಜಕೀಯ ಚಿಂತನೆ ಚಿತ್ರದ ವಸ್ತುವಿಗೆ ವಿಶಾಲ ತಳಹದಿಯ ಸಮಾಜೋ-ಆರ್ಥಿಕ ಅಡಿಪಾಯವ...

ಬಂದ್ ದರವಾಜಾ

ಸೂರ್ಯ ಕ್ಷಿತಿಜದ ಬಗಲಿನಿಂದ ಬಿಡಿಸಿಕೊಂಡ. ಮಗುವಿನ ಲಾಲನೆ ಪಾಲನೆ, ಆಹಾ... ಅದೊಂದು ಸ್ನಿಗ್ಧತೆ, ಲಾಲಿ, ಒಂದರ್ಥದ ಅಮಲು ಮತ್ತು ಬೆಳಕು. ನಾನು ಮುಖಮಂಟಪದಲ್ಲಿ ವಿರಾಜಮಾನನಾಗಿದ್ದೆ. ಮಗು ಬಾಗಿಲಿನಿಂದ ಇಣುಕಿತು.  ಮುಗುಳ್ನಕ್ಕು ಬಾ ಎಂದು ಸನ್ನೆ ಮಾಡಿದೆ. ಬಳಿ ಬಂದ ಮಗು ತೊಡೆಯೇರಿ ಕುಳಿತುಕೊಂಡಿತು. ಜೇಬಿನಿಂದ ಪೆನ್ನು ಜಗ್ಗೋದು, ಕಾಗದಕ್ಕೆ ಕೈಹಾಕೋದು.. ಹೀಗೆ ಅದರ ತಮಾಷೆಗಳು ಗರಿಗೆದರತೊಡಗಿದವು. ಮಗುವನ್ನು ಕೆಳಕ್ಕಿಳಿಸಿಬಿಟ್ಟೆ. ಪಾಪ ಅದು ಮೇಜಿನ ಒಂದು ಕಾಲು ಹಿಡಿದುಕೊಂಡು ನನ್ನನ್ನೇ ದಿಟ್ಟಿಸುತ್ತ ನಿಂತುಕೊಂಡಿತು. ಮನೆಯೊಳಕ್ಕೆ ಹೋಗಲಿಲ್ಲ. ಬಾಗಿಲು ತೆರೆದೇ ಇತ್ತು!... ಚಿಂವ್ ಚಿಂವ್ ಎನ್ನುತ್ತಾ ಗುಬ್ಬಿಯೊಂದು ಎದುರಿನ ಕಿಟಕಿ ಸರಳಿಗೆ ಹಾರಿ ಬಂತು. ಮಗುವಿಗೆ ಮನರಂಜನೆಯ ಹೊಸ ಆಟಿಗೆಯೊಂದು ಬಂದಂತೆ. ಖುಷಿಗೊಂಡ ಮಗು ಗುಬ್ಬಚ್ಚಿಯತ್ತ ಜೋರಾಗಿ ಕೈಬೀಸಿತು. ಗುಬ್ಬಚ್ಚಿ ಕೊಂಚವೂ ವಿಚಲಿತಗೊಳ್ಳಲಿಲ್ಲ. ಆಹಾ... ಗರಿಯಂಥ ಈ ಆಟಿಕೆ ವಸ್ತು ಇನ್ನು ನನ್ನ ಕೈಸೇರಿದಂತೆಯೇ ಎಂದುಕೊಂಡಿತು ಮಗು. ತನ್ನೆರಡೂ ಕೈಗಳನ್ನೆತ್ತಿ ಬ್ಬಾ ಬ್ಭಾ ಎಂದು ಗುಬ್ಬಚ್ಚಿಯನ್ನು ಹತ್ತಿರಕ್ಕೆ ಕರೆಯಲೆತ್ನಿಸಿತು. ಗುಬ್ಬಚ್ಚಿ ಚಿಂವ್ ಗುಟ್ಟುತ್ತ ಪುರ್ ಎಂದು ಹಾರಿ ಹೋಯಿತು. ನಿರಾಶಗೊಂಡ ಮಗು ಅಳತೊಡಗಿತು. ಬಾಗಿಲಿನತ್ತ ತಿರುಗಿಯೂ ನೋಡಲಿಲ್ಲ. ಬಾಗಿಲು ತೆರೆದೇ ಇತ್ತು!... * * * ಹಲ್ವಾದ ತಾಜಾ ತಾಜಾ ಸಿಹಿಗಾಳಿ ತೇಲಿ ಬಂತು. ಮಗುವಿನ ಮುಖ ಅರಳತೊಡ...

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ...