ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ತಲಾಖ್ ತಲಾಖ್ ತಲಾಖ್

ಒಟ್ಟಾಗಿ ಸಂಬಂಧವಾಗುತ್ತೇವೆ. ಸಂಬಂಧದಿಂದ ಒಟ್ಟಾಗುತ್ತೇವೆ. ಎರಡೂ ಸಾಧ್ಯವಿದೆ. ಬಂಧ ಗಟ್ಟಿಗೊಳ್ಳುವುದಕ್ಕೆ ಬೈಡಿಫಾಲ್ಟ್‌ ಆದ ಏನೂ ಇರುವುದಿಲ್ಲ. ಮನೆ ಕಟ್ಟಿಕೊಳ್ಳುವಂತೆ ಮನಸೂ ಕಟ್ಟಿಕೊಳ್ಳುವಂಥದು. ಒಂದು ತಂತು ತಂತಾನೇ ಎಲ್ಲ ನೋಡಿಕೊಳ್ಳಲು ಸಾಧ್ಯವಿದ್ದರೆ ಪ್ರಜ್ಞಾಪೂರ್ವಕವಾದ ಪ್ರಯತ್ನಗಳ ಅಗತ್ಯವಿರುತ್ತಿರಲಿಲ್ಲ. ಯಾರೂ ಯಾರ ಬದುಕಿಗೆ ಸುಮ್ಮನೇ ಸೇರುವುದಿಲ್ಲ.  ಮನುಷ್ಯರ ನಡುವೆ ಫಲಾಪೇಕ್ಷೆಗಳ ಹಂಗಿಲ್ಲದ ಅಕಾರಣ ಸಂಬಂಧಗಳೂ ಇವೆ. ಆದರೆ ಮದುವೆ ಎನ್ನುವ ಖಾಸಗಿ ಸಂಬಂಧದಲ್ಲಿ ನಿರ್ದಿಷ್ಟ ನಿರೀಕ್ಷೆಗಳಿರುವುದರಿಂದ ಅದೊಂದು ಏರ್ಪಾಟು. ಇದನ್ನೇ ಕ್ರಮಬದ್ಧ ಶಿಸ್ತಿಗೊಳಪಡಿಸುವ ಜವಾಬುದಾರಿಯನ್ನು ಕುಲ, ಜಾತಿ, ಧರ್ಮಗಳು ಹೊತ್ತುಕೊಂಡು ಸಾಂಸ್ಥಿಕ ಸ್ವರೂಪದಲ್ಲಿ ನಿಯಂತ್ರಿಸುತ್ತಿವೆ. ನಾಗರಿಕತೆ ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಹುಟ್ಟಿಕೊಂಡ ಇಂಥ ವ್ಯವಸ್ಥೆಗಳು ಕಾಲಾಂತರದಲ್ಲೂ ಮುಂದುವರಿದಿವೆ.   ಬುಡಕಟ್ಟುಗಳಲ್ಲಿ ಹಂಚಿಹೋಗಿದ್ದ ಅರೇಬಿಯನ್ನರನ್ನು ಒಗ್ಗೂಡಿಸಿ ನಿರಾಕಾರವಾದ ಏಕದೇವೋಪಾಸನೆ ವ್ಯಾಪ್ತಿಗೆ ತಂದಿದ್ದು ಪ್ರವಾದಿ ಮುಹಮ್ಮದ್‌ ನೇತೃತ್ವದ ಇಸ್ಲಾಂ. ಅದು ಅಪರೂಪದ ಅಸ್ಮಿತೆಯಾಗಿ ಇಂಡಿಯಾದಲ್ಲೂ ಹಬ್ಬಿದೆ. ಏಕದೇವೋಪಾಸನೆಗೆ ಪೂರಕ ಐದು ಮುಖ್ಯ ನೇಮಗಳನ್ನು ಇಸ್ಲಾಂ ರೂಪಿಸಿಕೊಂಡಿತು. ಕಲ್ಮಾ, ರೋಜಾ, ನಮಾಜ್‌, ಜಕಾತ್‌ ಮತ್ತು ಹಜ್‌. ಇವಕ್ಕೆಲ್ಲ ಕರಾರುವಾಕ್ಕಾದ ನೀತಿ ಸಂಹಿತೆಗಳನ್ನು ಅದು ರೂಪಿಸಿತು. ಹಾಗೆಯೇ ಸಾಮಾಜ...

‘ಬಲ’ಗೊಳ್ಳುತ್ತಿರುವ ರಾಹುಲ್‌

ನೆಹರೂ ನೇತೃತ್ವದ ಕಾಂಗ್ರೆಸ್‌ ತೊರೆದ ಇಂದಿರಾ ಗಾಂಧಿ ಹೊಸ ಕಾಂಗ್ರೆಸ್‌ ಕಟ್ಟಿಕೊಂಡರು. ರಾಜೀವ್‌ ಅದನ್ನೇ ಮುಂದುವರಿಸಿದರು. ಇಬ್ಬರೂ ಕೊಲೆಯಾದರು. ಅಲ್ಲಿಯವರೆಗೂ ಭವ್ಯವಾಗಿದ್ದ ಕಾಂಗ್ರೆಸ್‌ ಎನ್ನುವ ಮಹಲಿಗೆ ಮುದಿ ರಾಜಕಾರಣಿಯೊಬ್ಬ ಹೊಕ್ಕುಬಿಟ್ಟ. ಧ್ವಂಸದ ಅಧ್ಯಾಯ ಆರಂಭಿಸಿ, ‘ಬಳು ಹೊಕ್ಕ ಮನೀ ಅಳು’ ಎನ್ನುವಂತೆ ಕಾಂಗ್ರೆಸ್‌ ಅವಸಾನಕ್ಕೆ ನಾಂದಿ ಹಾಡಿದ. ಅಲ್ಲಿಂದಾಚೆಗೆ ಕಾಂಗ್ರೆಸ್‌  ಶೈತಾನ್‌ ಹೊಕ್ಕ ಮಹಲ್‌ ಆಗಿತ್ತು. ಅಕ್ಷರಶಃ ಭೂತ ಬಂಗಲೆಯಾಗಿತ್ತು.  ತೀವ್ರ ಒತ್ತಡದಲ್ಲಿದ್ದ ಸೋನಿಯಾ ಅಳುಕುತ್ತಲೇ ಮಹಲು ಹೊಕ್ಕರು. ಗಾಂಧಿ ಮನೆತನದ ಸೊಸೆ, ಮೂಲ ಇಟಲಿಯ ಸಮಚಿತ್ತದ ಹೆಣ್ಣುಮಗಳು ಹಲ್ಲಿ, ಬಾವಲಿ, ಹಾವುಗಳಿಂದ ತುಂಬಿದ ಮಹಲನ್ನು ಸ್ವಚ್ಛಗೊಳಿಸಿ ಮತ್ತೆ ವಾಸ ಯೋಗ್ಯವಾಗಿಸಿಕೊಂಡರು. ಅಳಿದುಳಿದ ವಫಾದಾರ್‌ಗಳು ಕೋಠ್ರಿ ಹೊಕ್ಕರು. ಕೆಲವರು ಅಕ್ಷರಶಃ ಕಾವಲಾದರು. ಧ್ವಂಸದಲ್ಲಿ ಹೋದ ಮಹಲಿನ ಮಾನ ಉಳಿಸಿದರು. ರಾಜಕೀಯ ಮತ್ಸರಿಯರ ಮಸಲತ್ತುಗಳ ನಡುವೆಯೂ ಯಶಸ್ಸು ಕಾಲಬುಡಕ್ಕೇ ಬಂದಾಗ ಧಿಕ್ಕರಿಸಿ ಸರದಾರನೊಬ್ಬನಿಗೆ ದೇಶದ ಭವಿಷ್ಯ ಕಟ್ಟುವ ಕೆಲಸ ವಹಿಸಿ ಬೆನ್ನಿಗೆ ನಿಂತರು. ಮನೆಯ ಹಿರಿಯಕ್ಕನಂತೆ ನಿಂತು ಕುಸಿಯಲಿದ್ದ ಮಹಲನ್ನು ಹೆಗಲು ಕೊಟ್ಟು ತಡೆದರು.  ಹಗರಣದ ಆರೋಪ, ಪ್ರತ್ಯಾರೋಪಗಳ ಬೆಂಕಿಮಳೆಗೆ ಮಹಲು ಮತ್ತೆ ತುತ್ತಾಯಿತು.   ದೇಶದ ಒಂದು ಮೂಲೆಯಲ್ಲಿ ಕೋಮು ಗಲಭೆ, ಹಿಂಸೆ. ಪ್ರತಿಹಿಂಸೆ ಎಬ್ಬಿಸಿ ಅದರ ಕಾವನ್ನ...

‘ನ್ಯೂಟನ್‌’ ಇಂಡಿಯಾದ ವಾಸ್ತವಿಕ ಚಿತ್ರ

ವ್ಯವಸ್ಥೆ ಸರಿಪಡಿಸುವ ಕೆಲಸ ಎಲ್ಲಿಂದ ಶುರು ಮಾಡೋದು? ಹೇಗೆ ಶುರು ಮಾಡೋದು? ಉತ್ತರ ತುಂಬ ಸುಲಭ. ಎಲ್ಲಿಂದಾದರೂ ಶುರು ಮಾಡಿ, ಹೇಗಾದರೂ ಶುರು ಮಾಡಿ. ಆದರೆ ಇಚ್ಛಾಶಕ್ತಿ ಮತ್ತದಕ್ಕೆ ಚಾಲನೆ ನೀಡುವ ಬದ್ಧತೆ ಬೇಕು. ಅದಕ್ಕೆ ಮುಖ್ಯವಾಗಿ ಎದೆಗಾರಿಕೆ ಬೇಕು. ಅದಕ್ಕೂ ಮುಖ್ಯವಾಗಿ ಕಾಯಕ ಯಾವುದಾದರೂ ಇರಲಿ. ಕಾರ್ಯಕ್ಷಮತೆ ಬೇಕು. ಜೀವಪರ ನ್ಯಾಯ ಬೇಕು. ನಮ್ಮ ನೆಲೆಯಿಂದಲೇ ವ್ಯವಸ್ಥೆ ಬದಲಾವಣೆಗೆ ಆರಂಭ ನೀಡಬಹುದಲ್ಲ! ಒಂದು ಸೇಬು ಹಣ್ಣು ಮೇಲಕ್ಕೆ ಹಾರಿಸಿದರೆ ಅದು ಕೆಳಕ್ಕೇ ಬೀಳುತ್ತದೆ. ಮೇಲೆ ಎಸೆದ ಕಲ್ಲು ಗುಂಡು ಕೂಡ ಬೀಳುವುದು ಕೆಳಕ್ಕೇ. ಒಬ್ಬ ಚಹಾ ಮಾರುವವನು ಮತ್ತು ಅಂಬಾನಿಯಂಥ ಕರೋಡಪತಿ ಮೇಲಿನಿಂದ ನೆಗೆದರೆ ಇಬ್ಬರೂ ಬೀಳುವುದು ಕೇಳಕ್ಕೇ. ಗುರುತ್ವ ಶಕ್ತಿ ನೀಡಿದ ಮೊತ್ತ ಮೊದಲ ಸಮಾನತೆ ಸಂದೇಶ ಅದ್ಭುತ! ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಭೌತಿಕವಾಗಿ ಯಾವುದೂ ತಂತಾನೇ ಪರಿವರ್ತನೆ ಆಗುವುದಿಲ್ಲ ಎನ್ನುವುದು. ವಿಜ್ಞಾನಿ ಸರ್‌ ಐಸಾಕ್‌  ನ್ಯೂಟನ್‌ ಕಂಡುಕೊಂಡ ಈ ವೈಜ್ಞಾನಿಕ ಸತ್ಯವನ್ನು ಸಮಕಾಲೀನ ಸಾಮಾಜಿಕ, ರಾಜಕೀಯ ಸಂದರ್ಭಕ್ಕೂ ಸಮೀಕರಿಸಿದರೆ ಬದಲಾವಣೆ ಎನ್ನುವುದು ತಂತಾನೇ ಘಟಿಸುವುವಂಥದ್ದಲ್ಲ ಎನ್ನುವ ಸ್ಪಷ್ಟತೆ ಮೂಡುತ್ತದೆ. ಇಂಥ ವೈಜ್ಞಾನಿಕ ಮನೋ– ಧೋರಣೆ ಎಂಥ ಬದಲಾವಣೆಯನ್ನಾದರೂ ತರಬಲ್ಲುದು. ಅದಕ್ಕೆ ಕ್ರಿಯೆ ಅಥವಾ ಚಾಲನೆ ಮುಖ್ಯ ಅಷ್ಟೇ.  ‘ವಸ್ತುವಿಗೆ ತನ್ನದೇ ಸ್ಥಿರ ಸ್ಥಿತಿ (state of rest) ಇರುತ್ತದೆ. ಬಾಹ್ಯ...

ಪ್ರಭುತ್ವದ ಹಣಾಹಣಿ ಪ್ರಜೆಗಳಿಗೆ ಮೋಜು..

ಒಂದು ಟಿಪ್ಪಣಿ ಕರಾವಳಿಯಿಂದ ಖರಾಬು ಸುದ್ದಿಗಳೇ ಭೋರ್ಗರೆಯುತ್ತವೆ. ಧರ್ಮಾಂಧರ ಕೆಸರೆರೆಚಾಟದಲ್ಲಿ ರಾಜಕೀಯ ವೈಷಮ್ಯದ ಕೊಲೆಗಳು, ವಿದ್ಯಾರ್ಥಿನಿಯ ಸಾವು ಪ್ರಕರಣ, ಶಾಲಾ ವಿದ್ಯಾರ್ಥಿಗಳ ಬಾಯಿಂದಲೂ ಸರ್ಕಾರವನ್ನು ಉರುಳಿಸುವ ಮಾತು ಹೇಳಿಸುವ ರಾಜಕೀಯ ಹತಾಶೆಗಳು.. ಇತ್ಯಾದಿ. ಭಾಷಾ ರಾಜಕಾರಣ ಮತ್ತೆ ಮುಂಚೂಣಿಗೆ ಬಂದಿದೆ. ಹಿಂದಿ ಹೇರ ಹೊರಟ ಕೇಂದ್ರದ ಹುನ್ನಾರಕ್ಕೆ ಸೆಡ್ಡು ಹೊಡೆದ ರಾಜ್ಯ ಸರ್ಕಾರ ಅದನ್ನು ಚಿತ್‌ ಮಾಡಿದೆ. ನಾಡ ಜನ ಬೆಂಬಲಕ್ಕೆ ನಿಲ್ಲುವ ಮೂಲಕ ದಿಟ್ಟ ರಾಜಕೀಯ ನಡೆ ಪ್ರದರ್ಶಿಸಿದೆ. ಹಿಂದೂತ್ವದ ರಾಜಕೀಯ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ಹಿಡಿದ ಸಂದರ್ಭದಲ್ಲೇ ಲಕ್ಷಾಂತರ ಜನ ತಾವು ಹಿಂದೂ ಅಲ್ಲ, ತಮ್ಮದು ಲಿಂಗಾಯತ ಎನ್ನುವ ಸ್ವತಂತ್ರ ಧರ್ಮ ಎಂದು ಎದೆತಟ್ಟಿ ಘೋಷಿಸಿಕೊಂಡರು. ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮ ಬಯಸಿದವರ ನೆರವಿಗೆ ನಿಲ್ಲುವ ನಿಲುವು ತಾಳಿತು. ಇದು ದೇಶದ ಅಧಿಕಾರ ಹಿಡಿದ ಪಕ್ಷವೊಂದರ ಅಜೆಂಡಾಕ್ಕೆ ದೊಡ್ಡ್ ಚಾಲೆಂಜ್‌. ಗುಜರಾತಿನ ಪಳಗಿದ ರಾಜಕಾರಣಿ ಕಾಂಗ್ರೆಸ್‌ ನಾಯಕಿಯ ಬಲಗೈ ಭಂಟ ರಾಜ್ಯಸಭೆ ಸೇರುವ ಯತ್ನ ಅಕ್ಷರಶಃ ಜಂಗೀ ನಿಕಾಲಿ ಕುಸ್ತಿ ಪಂದ್ಯವಾಯಿತು. ಅದು ಕರ್ನಾಟಕದತನಕ ಸಾಗಿ ಬಂದಿತು. ರೆಸಾರ್ಟ್‌ ಅಂಗಳದಲ್ಲಿ  ಪಟುಗಳ ರಕ್ಷಿಸುವ ಅನಿವಾರ್ಯತೆ ಸೃಷ್ಟಿಸಿತು. ಉಸ್ತುವಾರಿ ನಾಡಿನ ಪವರ್‌(ಫುಲ್‌) ಮಿನಿಸ್ಟರ್‌ ಹೆಗಲಿಗೇರಿತು. ಪ್ರತೀಕಾರವಾಗಿ ಸೆಂಟ್ರಲ್‌ ಪವರ್‌ ಆಜ್ಞಾಪಾಲಕರಂತೆ ತನಿಖಾ ದಳ ನಾಡಿ...

MOM: ಹುಡುಗಿ ಅತ್ಯಾಚಾರ ಹಿಂಸೆಗೆ ತಾಯಿ ಪ್ರತಿಹಿಂಸೆ, ‘ಬಾಹ್ಯ ಪ್ರಚೋದನೆಗಳ’ ಮೇಲೆ ಆಕ್ರೋಶ

ತನ್ನ ಗಂಡನ ಮೊದಲ ಪತ್ನಿಯ ಮಗಳು ತನ್ನನ್ನು ಯಾವ ರೀತಿಯಲ್ಲೂ ತಾಯಿ ಎಂದು ಒಪ್ಪಿಕೊಳ್ಳದವಳು. ಅಂಥ ಮಗಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಾಗ ತಾಯಿ ಸ್ಥಾನದಲ್ಲಿರುವ ಹೆಣ್ಣೊಬ್ಬಳ ಸ್ಪಂದನೆ ಹೇಗಿರಬಹುದು!  ತುಂಬ ಕಾಡಬಲ್ಲ ಪ್ರಶ್ನೆ ಇದು. ಮನುಷ್ಯ ಹುಟ್ಟು ಅವನ ಒಟ್ಟು ಬದುಕಿನ ಫಿಲಾಸಫಿ ಗಮನಿಸಿದರೆ ಹೊಳೆವ ಸತ್ಯಗಳಲ್ಲಿ ಇಷ್ಟನ್ನು ಈ ಕ್ಷಣಕ್ಕೆ ಹೆಕ್ಕಿಕೊಳ್ಳಬಹುದು.– ಎಲ್ಲ ಸಂಬಂಧಗಳು ಜೈವಿಕ ಆಧಾರದಲ್ಲಷ್ಟೇ ಗಟ್ಟಿಗೊಳ್ಳುವುದಿಲ್ಲ. ತನಗೆ ಹುಟ್ಟಿದ, ತನ್ನ ಜೊತೆ ರಕ್ತ ಹಂಚಿಕೊಂಡ ಜೀವಗಳಷ್ಟೇ ಮನುಷ್ಯ ಜೀವ ಎಂದುಕೊಂಡರೆ ಈ ಜೀವಸಂಬಂಧಕ್ಕೆ ಅರ್ಥವೇನು?  ಒಂದು ಜೀವ ಅಪಾಯಕ್ಕೊಳಗಾದರೆ, ತೊಂದರೆಗೊಳಗಾದರೆ, ಹಲ್ಲೆಗೊಳಗಾದರೆ ಮತ್ತೊಂದು ಜೀವ ಅದಕ್ಕೆ ಸ್ಪಂದಿಸುವುದೇ ನಿಜದ ಮಾನವೀಯತೆ. ಸಹಮಾನವರ ಜೊತೆ ಸಹಾನುಭೂತಿ, ಸಹಿಷ್ಣುತೆ, ಸ್ಪಂದನೆಯೇ ನಿಜದ ಮಾನವ ಧರ್ಮ.  ದ್ವೇಷ, ಮೋಹ, ಮತ್ಸರಗಳೆಲ್ಲವೂ ಮನುಷ್ಯ ಸಹಜವೇ. ಆದರೆ ಅವು ವಿಕೃತಿಗಿಳಿದಾಗಲೇ ಸಂಘರ್ಷ. ಅದರಿಂದ ಹುಟ್ಟುವ ಅಸಹಿಷ್ಣುತೆ, ಅಮಾನವೀಯ ನಡೆಗಳಿಂದಾಗಿ ಅನಾಹುತಗಳು ಸಂಭವಿಸುತ್ತವೆ. ಇದು ಮನುಷ್ಯನೊಳಗಣ ಜಗತ್ತು. ಸಂಘರ್ಷ. ಬಾಹ್ಯಕ್ಕಿಂತ ಆಂತರಿಕ ಪ್ರಚೋದನೆಗಳೇ ಇವಕ್ಕೆ ಮೂಲ. ರವಿ ಉದ್ಯಾವರ ಎನ್ನುವ ಉದಯೋನ್ಮುಖನ ನಿರ್ದೇಶನದ ಮತ್ತು ಖ್ಯಾತ ನಟಿ ಶ್ರೀದೇವಿ ಅಭಿನಯದ ‘ಮಾಮ್‌’ (MOM) ಚಿತ್ರವನ್ನು ಗೆಳೆಯ ಇಟ್ನಾಳ್‌ ಜೊತೆ ನೋಡಿದೆ. ಚಿತ್ರದ ಕೆಲ ಸನ್ನಿವೇಶಗಳು ನ...

ವಿಪರೀತ ದೇಶಭಕ್ತಿ, ಧರ್ಮಮೋಹ ಅಟ್ಟಹಾಸದ ಕಾಲಘಟ್ಟದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ 2017

ಇಂಡಿಯನ್‌ ಥಿಯೇಟರ್‌ ಜಗತ್ತಿನಲ್ಲಿ ಸಿಜಿಕೆ (ಸಿ.ಜಿ. ಕೃಷ್ಣಸ್ವಾಮಿ) ಅವರದು ದೊಡ್ಡ ಹೆಸರು. ರಂಗ ಕಾಣ್ಕೆಯೂ ಮಹತ್ವದ್ದು. ತಮ್ಮ ಸಾಮಾಜಿಕ ಮತ್ತು ರಾಜಕೀಯ ಬದ್ಧತೆಗಳಿಂದ ಹೊರಹೊಮ್ಮಿದ ವೈಚಾರಿಕತೆಯನ್ನು ಪ್ರಯೋಗಕ್ಕೊಳಪಡಿಸಿ ಆಮೂಲಕ ರಂಗಕ್ಕೆ ವಿಶಿಷ್ಟ ನೆಲೆಗಟ್ಟನ್ನು ರೂಪಿಸುವಲ್ಲಿನ ಅವರ ಪಾತ್ರ ಹಿರಿದು. ಬರಿಯ ಮನರಂಜನಾ ಮಾಧ್ಯವನ್ನಾಗಿ ರಂಗವನ್ನು ದುಡಿಸಿಕೊಳ್ಳುವವರ ಮಧ್ಯೆ ಸಿಜಿಕೆ ಹೊಸ ಆಶಯಗಳು ಮತ್ತು ವೈಚಾರಿಕ ಹರಿತವನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಸಾಧ್ಯತೆಗಳನ್ನು ತೋರಿಸಿಕೊಟ್ಟವರು. ಬಹು ಹಿಂದೆಯೇ ‘ಇಪ್ಟಾ’ದಂಥ ರಾಷ್ಟ್ರೀಯ ವೇದಿಕೆ ಕೇವಲ ನೌಟಂಕಿಯಲ್ಲೇ ಉಳಿದುಬಿಡಬಹುದಾಗಿದ್ದ ರಂಗಭೂಮಿಗೆ ಸಾಮಾಜಿಕ ಬದ್ಧತೆ ಮತ್ತು ಮೌಲಿಕತೆಯನ್ನು ಎಡಪಂಥೀಯ ನೆಲೆಯಲ್ಲಿ ತುಂಬಿತ್ತು. ಆ ದಾರಿಯಲ್ಲೇ ಸಿಜಿಕೆ ರಂಗ ಬದುಕನ್ನು ಕಟ್ಟಿಕೊಂಡವರು. ಬಲಪಂಥೀಯ ನಡೆಯತ್ತ ವಾಲಿದ್ದೂ ಇದೆ. ಸರಿಪಡಿಸಿಕೊಂಡು ಜೀವಪರ ನಿಲುವಿಗೆ ಗಟ್ಟಿಯಾಗಿ ನಿಂತು ಗಾಂಧಿ ವಿಚಾರಧಾರೆಯನ್ನು ಬಿಂಬಿಸುವ ‘ದಂಡೆ’ ಮತ್ತು ಸಾಮಾಜಿಕ ನ್ಯಾಯ ಪರಿಕಲ್ಪನೆ ಕಟ್ಟಿಕೊಡುವ ‘ಅಂಬೇಡ್ಕರ್‌’ ಮತ್ತಿತರ ಮಹತ್ವದ ನಾಟಕಗಳನ್ನು ರಂಗಕ್ಕೆ ನೀಡಿದ್ದಿದೆ.  ಬಹುವರ್ಷಗಳ ಹಿಂದೆ ‘ಬೆಲ್ಚಿ’,‘ಒಡಲಾಳ’ದಂಥ ಸಾಮಾಜಿಕ ತಲ್ಲಣಗಳನ್ನು ರಂಗದ ಮೇಲೆ ಪರಿಣಾಮಕಾರಿಯಾಗಿ ಇಟ್ಟಿದ್ದು ಸಿಜಿಕೆ. ಅವರ ಗರಡಿಯಲ್ಲಿ ಪಳಗಿದವರಲ್ಲಿ ಸಂವೇ...

ಮಹಿಳೆ, ಮಕ್ಕಳು ಮತ್ತು ನಾಡ ಕಾಳಜಿ

ತುಂಬ ವರ್ಷಗಳ ಹಿಂದಿನ ದುರಂತವಿದು. ನಾನಾಗ ಕಾಲೇಜು ಸೇರುವ ವಯಸ್ಸಿನ ಹುಡುಗ. ಅವತ್ತೊಂದಿನ ಸರಿ ರಾತ್ರಿಯಲ್ಲಿ ಹೆಣ್ಣುಮಗಳ ನರಳಾಟ. ಅಳು. ನೋಡಿದರೆ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದಳು. ಪರಿಸ್ಥಿತಿ ಗಂಭೀರವಾಗಿತ್ತು. ದವಾಖಾನೆಗೆ ಸಾಗಿಸಲು ಪರದಾಟ ನಡೆದಿತ್ತು.  ಅಂಬ್ಯುಲೆನ್ಸ್‌! ಅಯ್ಯೋ.. ಬಿಡಿ. ಆಟೊ, ಟ್ಯಾಕ್ಸಿಗಳು ಅಲ್ಲಿನ್ನೂ ಬಂದೇ ಇರಲಿಲ್ಲ. ಆ ಸರಿಹೊತ್ತಿನಲ್ಲಿ ಸಮೀಪದಲ್ಲೇ ನಿಲ್ಲಿಸಿದ್ದ ಹಮಾಲರ ಎತ್ತಿನ ಗಾಡಿಯಲ್ಲಿ ಗರ್ಭಿಣಿಯನ್ನು ಹಾಕಿಕೊಂಡು ನಾವೇ ಎತ್ತುಗಳಂತೆ ದರ ದರನೆ ಎಳೆದು ಆಸ್ಪತ್ರೆ ತಲುಪಿಸಿದ್ದೆವು. ಅದು ಸರ್ಕಾರಿ ದವಾಖಾನೆ! ಊರಿಗದೊಂದೇ ದೊಡ್ಡ ದವಾಖಾನೆ.  ತಗ್ಗು, ದಿಣ್ಣೆಯ ಅದ್ವಾನ ರಸ್ತೆ, ಪವರ್ ಬೇರೆ ಕಟ್‌ ಆಗಿತ್ತು. ಮಂದ ಬೆಳಕಿನಲ್ಲಿ ಸಾಗಿ ಆಸ್ಪತ್ರೆ ತಲುಪಿದರೆ ಅಲ್ಲಿ ಇದ್ದದ್ದು ನರ್ಸ್, ಕಂಪೌಂಡರ್. ವಿಚಾರಿಸಿದರೆ ಹೆರಿಗೆ ಹಾಸಿಗೆಗಳು ಖಾಲಿ ಇಲ್ಲ ಎನ್ನುವ ಜವಾಬು. ಎಮರ್ಜೆನ್ಸಿಗೆ ಅಂತ ಒಂದು ಬೆಡ್‌ ಇರುತ್ತಲ್ಲ ಅದು ಖಾಲಿ ಇತ್ತು. ಆದರೆ ಅದಕ್ಕೆ ‘ದೊಡ್ಡ ಬಾಯಾರ’ ಪರ್ಮಿಶನ್‌ ಬೇಕು. ದೊಡ್ಡ ಬಾಯಾರು ಅಂದರೆ ಡಾಕ್ಟರಮ್ಮ.  ಆಸ್ಪತ್ರೆಯ ಆವರಣದಲ್ಲೇ ಆಕೆಗೊಂದು ಸರ್ಕಾರಿ ಮನೆ. ಬಾಗಿಲು ಬಡಿದರೆ ಸದ್ದೇ ಇಲ್ಲ! ಒಂದೇ ಸಮ ಜೋರಾಗಿ ಕೂಗಿದಾಗ ಗಡಸು ದನಿಯೊಂದು ಕಿಟಕಿ ಬಳಿ ಬಂದು ‘ಯಾಕೆ ದನಕ್ಕೆ ಬಡಿದಹಾಗೆ ಬಾಗಿಲು ಬಡೀತಿದೀರಿ ದೊಡ್ಡ ಬಾಯಾರು ಊರಲ್ಲಿಲ್ಲ’ ಎನ್ನುವುದು ...

ದೃಶ್ಯಮಾಧ್ಯಮಕ್ಕೊಂದು ಅರ್ಥಪೂರ್ಣ ಮಾದರಿ ‘ಪೂರ್ವೋತ್ತರ ರಂಗೋತ್ಸವ’

ಬ ರಿಯ ಸಾಹಿತ್ಯಕ ಶಬ್ದ ಸೊಕ್ಕಿನ ಸಂಭಾಷಣೆಗಳಿಂದ ಸೊರಗುತ್ತಿರುವ ಕನ್ನಡ ರಂಗಭೂಮಿ ಮುಟ್ಟಿ ನೋಡಿಕೊಳ್ಳುವಂತೆ ‘ಪೂರ್ವೋತ್ತರ’ ರಂಗೋತ್ಸವದ ನಾಟಕಗಳ ಪ್ರಸ್ತುತಿ ಇತ್ತು. ರಂಗಭೂಮಿ ಅದ್ಭುತ ದೃಶ್ಯ ಮಾಧ್ಯಮ. ಮಾತುಗಳಿಗಿಂತ ದೃಶ್ಯಗಳ ಮೂಲಕ ವಸ್ತುವಿನ ಸಂವೇದನೆಗಳನ್ನು ರಂಗದ ಮೇಲೆ ಅಭಿವ್ಯಕ್ತಿಸುವ ವಿಶಿಷ್ಠ ಕಲಾಪ್ರಕಾರ. ಬಳಸಿದ ಪರಿಕರಗಳು, ಕಲಾತ್ಮಕ ಅಭಿವ್ಯಕ್ತಿಯ ಕಸಬುದಾರಿಕೆ ಏನೇ ಇರಲಿ. ನಾಟಕವೊಂದು ರಂಗಮುಖೇನ ಹೇಳಬೇಕಾದ್ದನ್ನು ದೃಶ್ಯಗಳಲ್ಲಿಯೇ ಹೇಳುವ ಸಾಧ್ಯತೆಗಳನ್ನು ರಂಗೋತ್ಸವ ಸ್ಪಷ್ಟಪಡಿಸಿತು. ಬರಿಯ ಸಂಭಾಷಣೆಗಳು, ಅದದೇ ರಂಗ ಸಂಗೀತದ ಸೋಗಲಾಡಿತನಗಳನ್ನು ನೋಡಿ, ಕೇಳಿ ಬೇಸತ್ತಿದ್ದ ಪ್ರೇಕ್ಷಕರಿಗೆ ದೃಶ್ಯದ ಅನನ್ಯ ಸ್ಪರ್ಶಾನುಭವ ನೀಡಿತು.  ‘ಲೈಫ್‌ ಕ್ಯಾನ್ವಾಸ್‌’ ರಚನೆ ಮತ್ತು ನಿರ್ದೇಶನ: ಅಸೀಮ ಕುಮಾರ್‌ ನಾಥ್‌ ತಂಡ: ಸರ್ಸಾ. ಅಸ್ಸಾಂ ಭಾಷೆ: ಅಸ್ಸಾಮಿ ಉತ್ಸವದಲ್ಲಿ ನನ್ನ ತುಂಬ ಸೆಳೆದ ನಾಟಕ ‘ಲೈಫ್‌ ಕ್ಯಾನ್ವಾಸ್‌’. ಮನುಷ್ಯನ ಅಂತರಂಗದಲ್ಲಿರುವ ಒಂದು ಸ್ಮಶಾನ ಕುರುಕ್ಷೇತ್ರದ ಚಿತ್ರಣ ಇಡೀ ನಾಟಕದ ಜೀವಾಳ. ಪ್ರೀತಿ, ಪ್ರೇಮ, ಕಾಮ ಮತ್ತಿತರ ಅಭಿಲಾಷೆಗಳಿಂದ ಒಳಗೇ ನಡೆಯುವ ಅಂತಃಯುದ್ಧದ ಚಿತ್ರಣ ಕಟ್ಟಿಕೊಟ್ಟ ಬಗೆಯಲ್ಲಿ ಹಲವು ಹೊಸ ಸಾಧ್ಯತೆಗಳಿದ್ದವು. ಭಿನ್ನ ಲೈಟಿಂಗ್‌ವಿನ್ಯಾಸ, ಪರಿಕರಗಳ ಜತೆ ವಾಸ್ತವಿಕತೆಯನ್ನು ಅದೆಷ್ಟು ಸಾಧ್ಯವೊ ಅಷ್ಟು ಸಾಕಾರಗೊಳಿಸಿ ನಾಟಕ ಕಟ್ಟಿಕೊಟ್ಟ ಬಗೆ ನಿಬ್ಬೆರಗುಗೊಳಿಸುವಂತಿತ್ತ...

ಡಿಯರ್‌ ಜಿಂದಗೀ... ನವಿರು ಭಾವನೆಯ ಆತ್ಮಶೋಧ ಯತ್ನ

Directed by Gauri Shinde Starring Alia Bhatt Shah Rukh Khan Cinematography Laxman Utekar  ಸಂಭಾಷಣೆಗಳಿಂದ ಉಪದೇಶ ಅನಿಸಿದರೂ, ನಿರೂಪಣೆಯಲ್ಲಿ ವಸ್ತುವನ್ನು ಮನದಟ್ಟು ಮಾಡುವ ಸೊಗಸುಗಾರಿಕೆ ಇದೆ. ಸಮಕಾಲೀನ ಯುವ ಸಮಸ್ಯೆಯೊಂದನ್ನು ನೇರವಾಗಿ ಮತ್ತು ಅಷ್ಟೇ ನವಿರಾಗಿ ಬಿಚ್ಚಿಟ್ಟು ಪರಿಹಾರವನ್ನೂ ಸೂಚಿಸುವ ಯತ್ನವಿದೆ. ಹೀಗಾಗಿ ಇಡೀ ಚಿತ್ರ ಟಚೀ ಅನಿಸುತ್ತದೆ.  ಆಲಿಯಾ ಭಟ್‌  ಸಮಕಾಲೀನ ಹೆಣ್ಣುಗಳ ಚಿತ್ರಣವನ್ನು ಅಭಿನಯದಲ್ಲಿ ಸಮರ್ಥವಾಗಿ ಕಟ್ಟಿಕೊಡುತ್ತಾರೆ. ಶಾರುಕ್‌ ಖಾನ್‌ ಹೀರೋಯಿಸಂನಿಂದ ಹೊರಬಂದು ಒಂದು ಪಾತ್ರವಾಗಿ ಗುಡ್‌ ಹ್ಯುಮನ್‌ ಬೀಯಿಂಗ್‌ ತರಹ ಕಾಣಿಸಿಕೊಂಡ ಪರಿ ಸೊಗಸಾಗಿದೆ.  ಯಾವ ಹಮ್ಮು ಬಿಮ್ಮು ಇಲ್ಲದ ಒಬ್ಬ ಮನೋವೈದ್ಯನ ಪಾತ್ರವನ್ನು ಆಪ್ತವೆನಿಸುವಂತೆ ಕಟ್ಟಿಕೊಟ್ಟಿದ್ದು ಖುಷಿ ಕೊಡುವಂಥದು.   ಚಿತ್ರದ ಆಶಯ ಪ್ರೀತಿ, ಪ್ರೇಮ ಸಂಬಂಧಗಳು, ಕೆರಿಯರ್‌, ನಿರೀಕ್ಷೆಗಳು ಅಸಹಿಷ್ಣುತೆಯಿಂದ ನರಳಿ ಎಲ್ಲ ಒಂದಕ್ಕೊಂದು ಭಿನ್ನ ದಿಕ್ಕಿಗೆಳೆಯುತ್ತ ಸಮಕಾಲೀನ ಜನ ಬದುಕೇ ಸೂತ್ರವಿಲ್ಲದ ಗಾಳಿಪಟದಂತಾಗಿದೆ. ತಪ್ಪಿದ ತಾಳವನ್ನು ಸರಿಪಡಿಸಿಕೊಳ್ಳಲಾಗದು ಎನ್ನುವ ಮೌಢ್ಯವೂ ಜೊತೆ ಸೇರಿಕೊಂಡಿದೆ. ಇಂಥದೊಂದು ಸಾಮಾಜಿಕ ಸಂಕೀರ್ಣ ಸ್ಥಿತಿಗೆ ತಲುಪಿದ ಹೆಣ್ಣೊಂದರ ಕೇಸ್‌ ಸ್ಟಡಿಯಂಥ ವಸ್ತುವನ್ನಿಟ್ಟುಕೊಂಡು ಪರಿಹಾರಗಳನ್ನು ಕಂಡುಕೊಳ್ಳುವ ಆಶಯ ಈ ಚಿತ್ರದ್ದು.  ಮಾಡಿದ ...

ವೆಡ್ಡಿಂಗ್‌ ಹೆರಲ್ಡ್‌ : ಪ್ರಾಂಜಲ ಮನದ ಚಿತ್ತ–ಭಿತ್ತಿ

ಜಗದ ಅಚ್ಚರಿ, ಸಂಭ್ರಮ ಮತ್ತು ಇತರ ವಿದ್ಯಮಾನಗಳನ್ನು ದಾಖಲಿಸುವ ಮಾಧ್ಯಮ ಲೋಕ ತನ್ನದೇ ಪಾರಿವಾರಿಕ ಸಾಧನೆ, ಸಂಭ್ರಮಗಳನ್ನು ಅಷ್ಟಾಗಿ ದಾಖಲಿಸಿಕೊಳ್ಳುವುದಿಲ್ಲ.  ಇದು ಒಂದರ್ಥದಲ್ಲಿ ಮಾಧ್ಯಮ  ಬದುಕಿನ ಅಘೋಷಿತ ಮೌಲ್ಯ ಕೂಡ. ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕುಟುಂಬ ವರ್ಗ ಕಳೆದ ಮೂರು ದಶಕಗಳ ನಂತರದಲ್ಲಿ ಒಂದು ಕೌಟುಂಬಿಕ ಸಂಭ್ರಮವನ್ನು (ನವೆಂಬರ್‌ 6, 2016  ಭಾನುವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿತ್ತು. ಸೆಲೆಬ್ರಿಟಿ ಕುಟುಂಬದ ಮದುವೆ ಸಮಾರಂಭ ಎಂದಾಗ ಏನೆಲ್ಲ ವೈಭವ, ಆಡಂಬರ ಕಲ್ಪನೆಗೆ ಬರುತ್ತದೆ! ಆದರೆ ಟಿಪಿಎಂಎಲ್‌ ಸಂಸ್ಥೆಯ  ಪ್ರಜಾವಾಣಿ ಪತ್ರಿಕೆ ಸಂಪಾದಕ ಕೆ.ಎನ್‌. ಶಾಂತಕುಮಾರ್ ಅವರ ಪುತ್ರ ನಿಖಿಲ್‌  ವಿವಾಹ ಸಮಾರಂಭ ಸರಳ, ಸಹಜ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿತ್ತು. ಭಿನ್ನ ಮತ್ತು ಅರ್ಥಪೂರ್ಣ ಅನ್ನಿಸಿದ್ದು ಸಹಜತೆಯ ಕಾರಣಕ್ಕೆ. ಮಾನವೀಯ ಸ್ಪಂದನೆ ಇಡೀ ಸಮಾರಂಭದ  ಜೀವಕಳೆಯಾಗಿದ್ದು ಅನುಭವಕ್ಕೆ ದಕ್ಕಿದ್ದರಿಂದ.   ಮಾಧ್ಯಮ ಲೋಕದ ದಿಗ್ಗಜ ಕೆ.ಎನ್‌. ಹರಿಕುಮಾರ್‌ ಸರ್‌ (ಕೆ.ಎನ್‌. ಶಾಂತಕುಮಾರ್ ಅವರ ಹಿರಿಯಣ್ಣ) ಸಂಪಾದಕರಾಗಿದ್ದ ಅವಧಿಯಲ್ಲಿ ಅವರ ಜೊತೆ ಸಂದರ್ಶನದ ಸಂದರ್ಭ ಕೆಲ ನಿಮಿಷ ಮಾತನಾಡಿದ್ದು ಬಿಟ್ಟರೆ ಮತ್ತೆ ಯಾವತ್ತೂ ಅಂಥ ಅವಕಾಶವೇ ಬರಲಿಲ್ಲ.  ನಿಖಿಲ್‌ ಮದುವೆ ಸಮಾರಂಭದಲ್ಲಿ ಒಂದೆಡೆ...

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...

‘ಡಿಗ್ರೇಡ್‌’: ಒಂದು ಅದ್ಭುತ ರಾಜಕೀಯ ಲೇವಡಿ

ಚಿತ್ರ: ಡಿಗ್ರೇಡ್‌ Directed by- Arab and Tarzan ಚಿತ್ರದ ನಿರ್ದೇಶಕರು ಅವಳಿ ಸಹೋದರರು. ಸಮಾಜ ಅಥವಾ ಸಮುದಾಯಗಳೊಳಗಿನ ಸೊಕ್ಕು, ಸಹಜತೆ ಮತ್ತು ಆಸಕ್ತಿಗಳೇ ದೇಶದ್ದೂ ಆಗಿರುತ್ತದೆ. ಹಾಗೆಯೇ ದೇಶವೊಂದರ ಹಿಂಸೆ, ಅತಿರೇಕಗಳು ಅಲ್ಲಿನ ಸಮಾಜದ ಒಳಗಿನ ಹಿಂಸೆಯ ಲಕ್ಷಣಗಳನ್ನೇ ಹೋಲುತ್ತವೆ. ಇಂಥ ಲಾಕ್ಷಣಿಕ ಚಿತ್ರಣವನ್ನು ಅತ್ಯಂತ ಕಾಮಿಡಿಯಾಗಿ ಕಟ್ಟಿಕೊಡುವ ಚಿತ್ರ ‘ಡಿಗ್ರೇಡ್‌’. ದೇಶ, ಧರ್ಮ ಭಕ್ತಿಗಳ ಅತಿರೇಕ ಮತ್ತು ಪುಂಡುಗಾರಿಕೆಯನ್ನು ಮೆಲುದನಿಯಲ್ಲೇ ಲೇವಡಿಗೊಳಪಡಿಸುತ್ತದೆ. ನಿರೂಪಣೆ ಚಿತ್ರದ ಹೈಲೈಟ್‌. ಸಹಜ ಚಿತ್ರಣಗಳಿಂದ ತೆರಕೊಳ್ಳುವ ‘ಡಿಗ್ರೇಡ್‌’ ಕ್ರಮೇಣ ಒಂದು ಪ್ರದೇಶದ ಸಮಾಜೋ-ರಾಜಕೀಯ ಕಾರ್ಟೂನ್‌ ಕಟ್ಟಿಕೊಡುತ್ತದೆ. ಫಲಿಸ್ತಾನದ (ಪೆಲಿಸ್ಟೀನ್‌) ಗಾಝಾ ಪಟ್ಟಿಯಲ್ಲಿ ಅದೊಂದು ಬೇಸಿಗೆ ಕಾಲ, ಬ್ಯೂಟಿ ಪಾರ್ಲರ್‌ನಲ್ಲಿ ಹದಿಮೂರು ಹೆಣ್ಣು ಮಕ್ಕಳು ಸಿಂಗಾರಕ್ಕೆಂದು ಸೇರಿಕೊಂಡ ಸಂದರ್ಭವನ್ನಿಟ್ಟುಕೊಂಡು ಚಿತ್ರ ಶುರುವಾಗುತ್ತದೆ. ಮಧುಮಗಳಿಗೆ ಮೇಕ್‌ಅಪ್‌, ಆಂಟೀಗೆ ಬ್ಯೂಟಿ ಟಚ್‌ ಅಪ್‌, ಮಧ್ಯವಯಸ್ಸಿನ ಹೆಂಗಸಿಗೆ ಫೇಸಿಯಲ್‌.. ಇಲ್ಲಿ ಒಬ್ಬೊಬ್ಬರದು ಒಂದೊಂದು ಬ್ಯೂಟಿ ಕಾನ್ಸಿಯಸ್‌. ಈ ಗಿರಾಕಿಗಳನ್ನು ನಿಭಾಯಿಸಲು ಹೆಣಗುವ ಸಲೂನಿನ ಒಡತಿ ರಷ್ಯನ್‌ ಹೆಂಗಸು ವಿಕ್ಟೋರಿಯಾಗೆ ಬೇಗ ಸಲೂನ್‌ ಮುಚ್ಚಿ ಗಂಡನ ತೆಕ್ಕೆ ಸೇರುವ ಕಾತರ. ಮಂದಗತಿಯ ಅವಳ ಸಹಾಯಕಿ ಕ್ರಿಸ್ಟಿನಾಗೆ ಕೆಲಸದ ಮೇಲೆ ಗಮನವಿಲ್ಲ. ಸದಾ ತನ್ನ ಹುಚ್ಚುತನದ ಪ್ರಿ...

ಹರೆಯ ಬಯಸುವುದು ತಾಜಾ ತಾಜಾ ಹವಾ..

ಟರ್ಕಿ ಪರಿಪೂರ್ಣ ಇಸ್ಲಾಮಿಕ್‌ ರಾಷ್ಟ್ರವಾಗುಳಿದಿಲ್ಲ. ಸಂಪೂರ್ಣ ಆಧುನಿಕವೂ ಅಲ್ಲ. ಅದರ ಒಂದು ಕಾಲು ಪೂರ್ವ ಯುರೋಪ್‌ನಲ್ಲಿದ್ದರೆ ಮತ್ತೊಂದು ಪಶ್ಚಿಮ ಏಷ್ಯದಲ್ಲಿದೆ. ಐತಿಹಾಸಿಕವಾಗಿ ಅತ್ಯಂತ ಭಿನ್ನ ಮತ್ತು ಹಲವು ಸಂಸ್ಕೃತಿಗಳಿಗೆ ತೆರಕೊಂಡುದದರ ಜೊತೆಗೆ ಸಂಘರ್ಷಗಳಿಗೂ, ಆಕ್ರಮಣಗಳಿಗೂ ಒಳಗಾದ ದೇಶ. ಜೂಲಿಯಸ್‌ ಸೀಜರ್‌ ಅಮಾಸ್ಯದ ಬಳಿ ಆಕ್ರಮಣ ಮಾಡಿದ. ಬೈಜಂಟೈನ್‌ ಕ್ರೈಸ್ತರು ಚರ್ಚ್‌ಗಳನ್ನು ಕಟ್ಟಿದರು. ಒಟ್ಟೊಮನ್‌ ಸುಲ್ತಾನರಂತೂ ಇಸ್ತಾನಬುಲ್‌ನಲ್ಲಿ ಟಾಪ್‌ಕ್ಯಾಪ್‌ ಅರಮನೆಗಳನ್ನು ಕಟ್ಟಿಸಿ ವೈಭವದ ರಾಜ್ಯಭಾರ ನಡೆಸಿದರು (ಅವರ ಸಾಮ್ರಾಜ್ಯ ಬುಡಾಪೆಸ್ಟ್‌ನಿಂದ ಕಾಬೂಲಿನವರೆಗೂ ವ್ಯಾಪಿಸಿತ್ತು). ರೋಮನ್‌ರ ಅಟ್ಟಹಾಸಕ್ಕೆ ಕಡಿವಾಣ ಬಿದ್ದದ್ದು ಇಲ್ಲಿಯೇ. ಮಧ್ಯಯುಗೀನ ಅರ್ಮೇನಿಯನ್ನರು ಚರ್ಚ್‌ಗಳನ್ನು ಕಟ್ಟಿದ್ದು, ಅನುಭಾವ ಪರಪಂಚದ ಸೂಫಿಗಳು ಬಹುಕಾಲ ನೆಲೆ ಕಂಡುಕೊಂಡಿದ್ದು ಇಲ್ಲೇ. ಪ್ರಾಚೀನ ಗ್ರೀಕ್‌ ಸಂಸ್ಕೃತಿಯಿಂದ ಹಿಡಿದು, ಪರ್ಷಿಯನ್‌, ರೋಮ್‌, ಬೈಜಂಟೈನ್‌ ಮತ್ತು ಒಟ್ಟೊಮನ್‌ ಸಾಮ್ರಾಜ್ಯ... ಹೀಗೆ ಒಟ್ಟು ಎಲ್ಲದರಿಂದ ಒಂದೊಂದಷ್ಟು ಪಡಕೊಂಡ ಟರ್ಕಿ ಸಂಸ್ಕೃತಿ ಮಿಸಳ್‌ ಭಾಜೀಯಂತೆ. ಇಸ್ತಾನಬುಲ್‌ ಈಗಂತೂ ಅತ್ಯಂತ ಕಾಸ್ಮೊಪಾಲಿಟನ್‌. ಕ್ರೈಸ್ತರ ಚರ್ಚ್‌, ಇಸ್ಲಾಂನ ನೀಲಿ ಮಸೀದಿಗಳು ಇಲ್ಲಿನ ಭವ್ಯ ಮತ್ತು ದಿವ್ಯ ತಾಣಗಳು. ‘ಒಂದು ಲೋಟ ಕಾಫೀ ಒಂದರಿಂದ ನಲವತ್ತು ವರ್ಷದ ಸ್ನೇಹಕ್ಕೆ ಅಣಿಗೊಳಿಸಿಬಿಡುತ್ತದೆ’ ಎನ್ನುವುದು ಇಲ್ಲಿನ ...

‘ನಮೋ..’ ರಾಜಕೀಯ ಸಂಸ್ಕೃತಿಯ ಕ್ಯಾರಿಕೇಚರ್

ಒಂದು ದೇಶೀಯ ಜಾನಪದ ಕಥೆಯ ಪ್ಯಾಲಿ ಯಂಕಟೇಸಾ ಒಂದೇ ಏಟಿಗೆ ಐದು ನೊಣಗಳನ್ನು ತನ್ನ ಮುಷ್ಠಿಯಲ್ಲಿ ಹಿಡಿದಾಗ ಏನೋ ದೊಡ್ಡ ಪವಾಡವನ್ನೇ ಸಾಧಿಸಿದಂತೆ ಸಂಭ್ರಮಪಡುತ್ತಾನೆ. ಜನ ಕೂಡ ಪವಾಡಕ್ಕೆ ತಲೆದೂಗುತ್ತಾರೆ.ಮುಂದೆ ನೊಣಗೇಶನಾಗಿ ಆಕಸ್ಮಿಕವಾಗಿ ನಡೆಯುವ ಘಟನೆಗಳನ್ನೇ ಪವಾಡ ಎನ್ನುವಂಥ ಭ್ರಮೆಯನ್ನಾಗಿಸಿ  ಜನರನ್ನು ಹುಚಪ್ಯಾಲಿ ಮಾಡುವ ಕಾಯಕಕ್ಕೆ ಇಳಿದುಬಿಡುತ್ತಾನೆ. ತಾನು ಮದುವೆಯಾಗಿದ್ದ ಹೆಣ್ಣನ್ನು ನೋಡಲು ಅತ್ತೆ ಮನೆಗೆ ಹೋದಾಗ ಈತನ ಪವಾಡ ದೊಡ್ಡ ಹರವನ್ನೇ ಪಡೆದುಕೊಳ್ಳುತ್ತದೆ. ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಕಡೆಗೆ ಅವಳನ್ನು ಮರೆತೇ ಹೋಗುವ ಈತ ವೆಂಕಟೇಶನಾಗಿ ಅವತಾರಿ ಪುರುಷನೇ ಆಗಿ ‘ನಮೋ ವೆಂಕಟೇಶ’ನಾಗುತ್ತಾನೆ. ನಾಡ ಅರಸನಿಗೂ ಪವಾಡದ ಮಂಕು  ಬೂದಿ ಎರಚಿ ರಾಜಕುಮಾರಿಯನ್ನೇ  ವರಿಸುತ್ತಾನೆ. ಅಂದರೆ ಅಧಿಕಾರ ಎನ್ನುವ ಮೋಹಿನಿಯನ್ನು ವರಸಿ ರಾಜನೇ ಆಗುತ್ತಾನೆ. ಆ ಕ್ಷಣದಿಂದ ಈತನ ಪವಾಡ ಮೇಲ್ದರ್ಜೆಗೇರುತ್ತಲೇ ಸಾಗುತ್ತದೆ. ಜನರನ್ನು ಹುಚಪ್ಯಾಲಿ ಮಾಡುವುದಕ್ಕೆ ಅಧಿಕೃತ ಲೈಸನ್ಸದಾರನಂತೆ ವಿಜೃಂಭಿಸ ತೊಡಗುತ್ತಾನೆ. ಇದು ರಾಜಸ್ಥಾನೀ ಜಾನಪದೀಯ ಕಥೆ.  ಇದನ್ನು ಸಮಕಾಲೀನ ಸಮಾಜೋ-ರಾಜಕೀಯ ಮತ್ತು ಧಾರ್ಮಿಕ ಪರಿಸ್ಥಿತಿಗಳ ಸಂದರ್ಭಕ್ಕೆ ಹೋಲಿಸಿ ನೋಡಿದರೆ ನಮ್ಮ ನಡುವೆಯೂ ಇಂಥ ಒಬ್ಬ ‘ನಮೋ’ ಸೃಷ್ಟಿಯಾಗಿದ್ದಾನೆ ಮತ್ತು ಇಂಥದೇ ಪವಾಡದ ಪುಡಿ, ಹುಡಿ ಚೆಲ್ಲಿ ಗೆಲುವಿನ ನಗೆ ಬೀರುತ್ತಿದ್ದಾನೆ,.. ಒಟ್...